ಬೆಂಗಳೂರಿನಲ್ಲಿ ಕೊರೊನಾ (Bangalore) ಮಹಾಮಾರಿಯ ಅಬ್ಬರ ಜೋರಾಗಿಯೇ ಇದೆ. ಆದ್ರೆ ಕೊರೊನಾ ಮೂರನೇ ಅಲೆ ಸೌಮ್ಯ ಸ್ವರೂಪದ್ದಾಗಿದ್ದು,ಸ್ಥಿತಿ ಬಿಗಡಾಯಿಸಿ ಆಸ್ಪತ್ರೆ (Hospital) ಸೇರುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಇದೆ. ಕೊರೊನಾ ಬಂದು ಏನಾಗಿ ಬಿಡುತ್ತೊ ಅಂತ ಜನರು ಆಸ್ಪತ್ರೆಗಳತ್ತ ಓಡಿಬರ್ತಿಲ್ಲ. ಹಲವು ಮಂದಿ ಮನೆಯಲ್ಲೇ ಪ್ರತ್ಯೇಕವಾಗಿ ಇದ್ದುಕೊಂಡೆ ಕೋವಿಡ್ 19 (Covid-19) ನಿಂದ ಗುಣಮುಖರಾಗ್ತಿದ್ದಾರೆ. ಶೇಕಡಾ 63%ರಷ್ಟು ಮಂದಿ ಹೋಮ್ ಐಸೋಲೇಷನ್ನಲ್ಲಿ (Home Isolation) ಚಿಕಿತ್ಸೆ ಪಡೆದುಕೊಳ್ತಿದ್ದಾರೆ ಎಂದು ಆರೋಗ್ಯ ಇಲಾಖೆ (Health Department) ಮಾಹಿತಿ ನೀಡಿದೆ. ರಾಜ್ಯದಲ್ಲಿ1,52,456 ಮಂದಿ ಕೊರೊನಾ ಪೆಷೆಂಟ್ಗಳು ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. ಅದರಲ್ಲೂ ಹೆಚ್ಚಾಗಿ ಬೆಂಗಳೂರಿನ ಜನರೇ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೀತಿದ್ದಾರೆ.
ನಿತ್ಯ ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗ್ತಿವೆ. ಅದರಲ್ಲೂ ಬೆಂಗಳೂರು ಜಿಲ್ಲೆಯಲ್ಲೇ ಅತ್ಯಧಿಕ ಪ್ರಕರಣಗಳು ದಾಖಲಾಗ್ತಿರೋದು ಜನರನ್ನ ಬೆಚ್ಚಿಬೀಳಸ್ತಿದೆ. ಬೆಂಗಳೂರಿನಲ್ಲಿ ಒಟ್ಟು 93,559 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 63% ಜನರು ಮನೆಯಲ್ಲೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಮನೆಯಲ್ಲೇ ಇರೋರಿಗೆ ಐಸೋಲೇಷನ್ ಕಿಟ್ ನೀಡಿಲು ರಾಜ್ಯ ಸರ್ಕಾರ ಮುಂದಾಗಿದೆ.
ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?
ಹಾಸನ ಜಿಲ್ಲೆಯಲ್ಲಿ 8,000ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 5,559 ಕೊರೊನಾ ಕೇಸ್ ಹೋಮ್ ಐಸೋಲೇಷನ್ ಪ್ರಕರಣಗಳಾಗಿ ವರದಿಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 64.59ರಷ್ಟು ಹೋಮ್ ಐಸೋಲೇಷನ್ ಪ್ರಕರಣ ದಾಖಲಾಗಿದೆ.
ಮೈಸೂರಲ್ಲೂ ಹೆಚ್ಚಾಗಿದೆ ಹೋಮ್ ಐಸೋಲೇಷನ್
ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಹೋಮ್ ಐಸೋಲೇಷನ್ನಲ್ಲಿದ್ದಾರೆ. ಮೈಸೂರಿನಲ್ಲಿ ಇದುವರೆಗೆ 11,000 ಸಕ್ರಿಯ ಪ್ರಕರಣಗಳಿವೆ. 6,727 ಮಂದಿ ಹೋಮ್ ಐಸೋಲೇಷನ್ ಆಗಿದ್ದಾರೆ. ಶೇಕಡವಾರು 60.52ರಷ್ಟಿದೆ.
ಇದನ್ನೂ ಓದಿ : Explained: ಕೋವಿಡ್ ಸಂದರ್ಭದ ಸಂಜೀವಿನಿ Dolo650 ವಿಶೇಷತೆ ಏನು? ಡೀಟೆಲ್ಸ್
ಇತ್ತ ತುಮಕೂರಿನಲ್ಲೂ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಲೇ ಇದೆ. ಈವರೆಗೆ 10,905ಕ್ಕೂ ಹೆಚ್ಚು ಸಕ್ರಿಯ ಕೇಸ್ಗಳು ದಾಖಲಾಗಿವೆ. ಅದರಲ್ಲಿ6,596 ಮಂದಿ ಹೋಮ್ ಐಸೋನೇಷನ್ನಲ್ಲೇ ಚಿಕಿತ್ಸೆ ಪಡೆದುಕೊಳ್ತಿದ್ದಾರೆ. ಒಟ್ಟು ಶೇಕಡಾ 60.48ರಷ್ಟು ಹೋಮ್ ಐಸೋನೇಷನ್ ದಾಖಲಾಗಿದೆ.
ಇನ್ನು ಧಾರವಾಡದಲ್ಲೂ 5000ಕ್ಕೂ ಹೆಚ್ಚು ಸಕ್ರಿಯ ಕೊರೊನಾ ಕೇಸ್ಗಳು ದಾಖಲಾಗಿವೆ. 3,117 ಮಂದಿ ಹೋಮ್ ಐಸೋಲೇಷನ್ನಲ್ಲಿದ್ದಾರೆ. ಇದು ಒಟ್ಟು ಪ್ರಕರಣಗಳಲ್ಲಿ 62.34 ಪ್ರತಿಶತವಾಗಿದೆ.
ಶೀಘ್ರವೇ ಸ್ವಯಂ ಪರೀಕ್ಷಾ ಕಿಟ್ ವಿತರಣೆ
ರಾಜ್ಯದಲ್ಲಿ ಹೋಮ್ ಐಸೋಲೇಷನ್ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ ಡಿ. ಪ್ರತಿಕ್ರಿಯಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗ್ತಿರೋ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆ ಇದೆ. ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ನಾವು ಸ್ವಯಂ ಪರೀಕ್ಷಾ ಕಿಟ್ಗಳನ್ನು ನೀಡುತ್ತೇವೆ ಎಂದು ರಂದೀಪ್ ಹೇಳಿದ್ದಾರೆ.
ಇನ್ನು ಇಲ್ಲಿಯವರೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಸೌಮ್ಯವಾಗಿದೆ. ಜೊತೆಗೆ ಅನೇಕರು ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಕೊರೊನಾದಿಂದ ಗುಣಮುಖರಾಗ್ತಿದ್ದಾರೆ. ಬೆಂಗಳೂರಲ್ಲಿರೋ ಹೋಮ್ ಐಸೋಲೇಷನ್ ಆಗಿರೋ ರೋಗಿಗಳಿಗೆ ಶೀಘ್ರವೇ ಕಿಟ್ಗಳನ್ನು ವಿತರಣೆ ಮಾಡುತ್ತೇವೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನಸಾಮಾನ್ಯರು ಎಲ್ಲಾ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದನ್ನು ಮುಂದುವರಿಸಬೇಕು.
ಇದನ್ನೂ ಓದಿ : B.C.Nagesh: ರಾಜ್ಯದಲ್ಲಿ ಶಾಲೆ ಆರಂಭ ಯಾವಾಗ? ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವರ ಮಾಹಿತಿ
ಇನ್ನು ರಾಜ್ಯಾದ್ಯಂತ 112 ಮಂದಿ ಕೊರೊನಾ ರೋಗಿಗಳು ಐಸಿಯು ವೆಂಟಿಲೇಟರ್ನಲ್ಲಿದ್ದಾರೆ. 297 ಮಂದಿ ಐಸಿಯು ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 935 ಮಂದಿ ಕೊರೊನಾ ರೋಗಿಗಳು ಆಕ್ಸಿಜನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಜನರಲ್ ವಾರ್ಡ್ಗಳಲ್ಲಿ 3,451 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಾಗಿದೆ ಆನ್ಲೈನ್ ಕನ್ಸಲ್ಟೇಷನ್!
ಖಾಸಗಿ ವೈದ್ಯರಿಗೆ ಫೋನ್ ಮೂಲಕ ಸಲಹೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕ್ತಿರೋ ಕೊರೊನಾ ರೋಗಿಗಳು ಮನೆಯಲ್ಲಿದ್ದುಕೊಂಡೆ ವೈದ್ಯರ ಸಲಹೆ ಪಡೆದು ಸಂಪೂರ್ಣವಾಗಿ ಗುಣಮುಖರಾಗ್ತಿರೋದು ಖುಷಿ ವಿಚಾರವೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ