• Home
  • »
  • News
  • »
  • state
  • »
  • Pratap Reddy: ‘ಪ್ರತಾಪ' ತೋರಿಸಿದ್ರೆ ಹುಷಾರ್! ರೌಡಿಗಳಿಗೆ ನೂತನ ಪೊಲೀಸ್ ಕಮಿಷ್‌ನರ್ ವಾರ್ನಿಂಗ್

Pratap Reddy: ‘ಪ್ರತಾಪ' ತೋರಿಸಿದ್ರೆ ಹುಷಾರ್! ರೌಡಿಗಳಿಗೆ ನೂತನ ಪೊಲೀಸ್ ಕಮಿಷ್‌ನರ್ ವಾರ್ನಿಂಗ್

ಗೃಹ ಸಚಿವರನ್ನು ಭೇಟಿಯಾದ ಬೆಂಗಳೂರು ನೂತನ ಪೊಲೀಸ್ ಆಯುಕ್ತ

ಗೃಹ ಸಚಿವರನ್ನು ಭೇಟಿಯಾದ ಬೆಂಗಳೂರು ನೂತನ ಪೊಲೀಸ್ ಆಯುಕ್ತ

ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕರಿಸಿದರು. ಹಿಂದಿನ ಪೊಲೀಸ್ ಕಮಿಷನರ್ ಕಮಲ್ ಪಂತ್ ಅಧಿಕಾರ ಹಸ್ತಾಂತರಿಸಿ, ನಿರ್ಗಮಿಸಿದರು. ಈ ವೇಳೆ ಮಾತನಾಡಿದ ಪ್ರತಾಪ್ ರೆಡ್ಡಿ, ನಗರದ ರೌಡಿಗಳಿಗೆ, ಅಪರಾಧ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದ (Bengaluru City) ನೂತನ ಪೊಲೀಸ್ ಆಯುಕ್ತರಾಗಿ (New Police Commissioner) ಹಿರಿಯ ಐಪಿಎಸ್ ಅಧಿಕಾರಿ (IPS Officer) ಪ್ರತಾಪ್ ರೆಡ್ಡಿ (Pratap Reddy) ಅಧಿಕಾರ ಸ್ವೀಕರಿಸಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ (Commissioner Office) ನಡೆದ ಸಮಾರಂಭದಲ್ಲಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕರಿಸಿದರು. ಹಿಂದಿನ ಪೊಲೀಸ್ ಕಮಿಷನರ್ ಕಮಲ್ ಪಂತ್ (Kamal Panth) ಅಧಿಕಾರ ಹಸ್ತಾಂತರಿಸಿ, ನಿರ್ಗಮಿಸಿದರು. ಈ ವೇಳೆ ಮಾತನಾಡಿದ ಪ್ರತಾಪ್ ರೆಡ್ಡಿ, ನಗರದ ರೌಡಿಗಳಿಗೆ (Rowdy), ಅಪರಾಧ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವವರಿಗೆ ಖಡಕ್ ಎಚ್ಚರಿಕೆ (Warning) ನೀಡಿದ್ದಾರೆ.


“ಕಮಲ್ ಪಂತ್ ಮಾಡಿರುವ ಕಾರ್ಯ ಮುಂದುವರೆಯಲಿದೆ”


ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸದ ಬಳಿಕ ಪ್ರತಾಪ್ ರೆಡ್ಡಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಮಲ್ ಪಂತ್ ನನ್ನ ಆಪ್ತ ಮಿತ್ರರು, ಹಿರಿಯ ಸಹೋದರರಾಗಿದ್ರು. ಆಪ್ತಮಿತ್ರ ಕಮಲ್‌ಪಂತ್ ರಿಂದ ಅಧಿಕಾರ ಸ್ವೀಕಾರ ಮಾಡಿದ್ದೀನಿ ಇದರಿಂದ ನನಗೆ ಸಂತಸವಾಗುತ್ತಿದೆ. ಅವರಿಗೂ ಹಾಗೂ ಸರ್ಕಾರಕ್ಕೂ ನಾನು ಧನ್ಯವಾದ ಹೇಳ್ತೀನಿ ಎಂದ್ರು. ಬೆಂಗಳೂರು ನಗರದಲ್ಲಿ ಎಲ್ಲಾ ಒಳ್ಳೆ ಕೆಲಸಗಳನ್ನು ಕಮಲ್ ಪಂತ್ ಮಾಡಿದ್ದಾರೆ. ಅವರು ಮಾಡಿರುವ ಒಳ್ಳೆಯ ಕೆಲಸಗಳು ಈಗಲೂ  ಮುಂದುವರೆಯುತ್ತೆ. ಅವರು ಮಾಡಿದ ಒಳ್ಳೆಯ ಕೆಲಸಗಳು ಚೇಂಜ್ ಇಲ್ಲದೆ ಮುಂದುವರೆಯುತ್ತೆ ಅಂತ ಹೇಳಿದ್ರು.


ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಪ್ರತಾಪ್ ರೆಡ್ಡಿ


ಬೆಂಗಳೂರು ಗ್ಲೋಬಲ್ ಸಿಟಿಯಾಗಿದೆ, ಇಲ್ಲಿ ಏನೇ ಅದರೂ ಜನ ಗುರುತಿಸುತ್ತಾರೆ’ ಹೀಗಾಗಿ ರೌಡಿಸಂ, ಗ್ಯಾಂಬ್ಲಿಂಗ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಠಾಣಾ ಸಿಬ್ಬಂದಿಯಿಂದ ಇಂತಹ ವಿಚಾರದಲ್ಲಿ ಲೋಪ ಅದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.


ಇದನ್ನೂ ಓದಿ: Viral Audio: 200 ಕೋಟಿ ಮಾತು, 5 ನಿಮಿಷದ ಸಂಭಾಷಣೆ! ಏನಿದು ರಹಸ್ಯ? ವೈರಲ್ ಆಗಿರೋ ಆಡಿಯೋ ಯಾರದ್ದು?


ಮಹಿಳೆಯರ ಸುರಕ್ಷತೆಗೆ ಕ್ರಮ


ಮಹಿಳೆಯ ಸರಕ್ಷೆತೆಗೆ ಮುಖ್ಯವಾಗಿ ಗಮನ ಕೊಡ್ತೀವಿ ಅಂತ ಪ್ರತಾಪ್ ರೆಡ್ಡಿ ಭರವಸೆ ನೀಡಿದ್ದಾರೆ. ಮೊನ್ನೆ ಮೊನ್ನೆ ನಡೆದ ಆಸಿಡ್ ಕೇಸ್ ತನಿಖೆ ಆಗುತ್ತೆ, ಆದಷ್ಟು ಬೇಗ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತೆ ಅಂತ ಹೇಳಿದ್ದಾರೆ. ನಗರದಲ್ಲಿ ಮೇಜರ್ ಕ್ರೈಮ್ ಬಗ್ಗೆ ಪೋಕಸ್ ಮಾಡಲು ಸೂಚನೆ ನೀಡಲಾಗಿದ್ದು, ತನಿಖೆ ನಡೆಸಿ ವೈಜ್ಞಾನಿಕವಾಗಿ ಚಾರ್ಜ್ ಶೀಟ್ ಮಾಡಬೇಕು ಅಂತ ಸೂಚನೆ ನೀಡುತ್ತೇನೆ. ಪ್ರತಿ ವಿಭಾಗದಲ್ಲಿ ಮೇಜರ್ ಕ್ರೈಮ್ ಪರಿಶೀಲನೆ ನಡೆಸಲು ಸೂಚನೆ ನೀಡುತ್ತೇನೆ ಎಂದಿದ್ದಾರೆ.


“ಅಪರಾಧಿಗಳು ಮಿಸ್ ಆಗಲೇಬಾರದು”


ನಗರದಲ್ಲಿ ಮೇಜರ್ ಕ್ರೈಂ‌ ಆಗುತ್ತೆ. ಅದ್ರಲ್ಲಿ ಯಾವುದೇ ಕಾರಣಕ್ಕೂ ಸಾಕ್ಷ್ಯಾಧಾರಗಳು ಮಿಸ್ ಆಗಬಾರದು, ಹಾಗೆ ಮಿಸ್ ಆದ್ರೆ ಆರೋಪಿಗಳು ತಪ್ಪಿಸಿಕೊಳ್ಳುತ್ತಾರೆ, ಹೀಗಾಗಿ ತುಂಬಾ ಸ್ಜ್ರಿಕ್ಟ್ ಆಗಿ ಅಧಿಕಾರಿಗಳಿಗೆ ಹೇಳಿದ್ದೇನೆ, ಯಾವುದೇ ಕಾರಣಕ್ಕೂ ಆರೋಪಿ ತಪ್ಪಿಸಿಕೊಳ್ಳಬಾರದು ಅಂತ ಎಚ್ಚರಿಸಿದ್ದೇನೆ ಅಂತ ಹೇಳಿದ್ರು.


“ಸಾರ್ವಜನಿಕರ ಸಹಕಾರವೂ ಮುಖ್ಯ”


ಎರಡು ವರ್ಷ ನಗರದಲ್ಲಿ ತಾಳ್ಮೆಯಿಂದ ಇತ್ತು. ಕೊವೀಡ್ ಮುಗಿದ ನಂತರ ಟ್ರಾಫಿಕ್ ದಟ್ಟಣೆ ಇದೆ. ಹೀಗಾಗಿ ಟ್ರಾಫಿಕ್ ನಿರ್ವಹಣೆಗೆ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. ಸೈಬರ್ ಕ್ರೈಂ ಹೆಚ್ಚಳವಾಗ್ತಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತೀನಿ, ಅದರ ಬಗ್ಗೆಯೂ ನನಗೆ ಮಾಹಿತಿ ಇದೆ, ಆದರೆ ಪೊಲೀಸರಿಗೆ ಸಾರ್ವಜನಿಕರೂ ಸಹಕಾರ ಕೊಡಬೇಕು ಎಂದಿದ್ದಾರೆ.


ಪ್ರತಿ ಠಾಣೆಗಳಲ್ಲೂ ಸಿಸಿಟಿವಿ ಕಣ್ಗಾವಲು


ಇನ್ನು ಯಾವ ಯಾವ ರೀತಿ ತಂತ್ರಜ್ಞಾನ ಬಳಸಿ ಸುಧಾರಿಸಬೇಕೋ‌ ಹಾಗೆ ಮಾಡಲಾಗುತ್ತೆ. ಪ್ರತಿ ಠಾಣೆಯಲ್ಲಿ 4 ಸಿಸಿ ಕ್ಯಾಮರಾಗಳನ್ನು ಹಾಕಲೇಬೇಕು ಅಂತ ಹೇಳಿದ್ದೇನೆ ಅಂತ ನೂತನ ಕಮಿಷನರ್ ಹೇಳಿದ್ದಾರೆ.


ಇದನ್ನೂ ಓದಿ: Actress Death: ಗೀತಾ, ದೊರೆಸಾನಿ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ದುರ್ಮರಣ! ಫ್ಯಾಟ್ ಸರ್ಜರಿ ವೇಳೆ ಚೇತನಾ ರಾಜ್ ಸಾವು


ಇನ್ನು ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ಧನ್ಯವಾದ ಅರ್ಪಿಸಿದ್ರು.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು