ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು (Bangalore) ನಗರದಲ್ಲಿ ಟ್ರಾಫಿಕ್ ಸಮಸ್ಯೆ ಯಂತೂ (Ttraffic problem) ಹೇಳತೀರದು. ಆದರೆ, ಮೆಟ್ರೋ (Metro arrived) ಬಂದಾಗಿನಿಂದ ಸಾಕಷ್ಟು ಜನರು ನಿಟ್ಟುಸಿರು ಬಿಡುವಂತಾಗಿದ್ದು ಸುಳ್ಳಲ್ಲ. ಏಕೆಂದರೆ ಪ್ರಯಾಣದ ಅವಧಿಯನ್ನು ಮೆಟ್ರೋ ಸಾಕಷ್ಟು ಪ್ರಮಾಣದಲ್ಲಿ(Sufficiently) ತಗ್ಗಿಸುರುವುದೇ ಇದಕ್ಕೆ ಕಾರಣ. ಆದರೂ, ಮೆಟ್ರೋ ಕಾರ್ಡುಗಳ ಆನ್ಲೈನ್ ರೀಚಾರ್ಜ್ಗೆ (Recharge of Metro cards) ಸಂಬಂಧಿಸಿದಂತೆ ಇತ್ತೀಚೆಗೆ ಪ್ರಯಾಣಿಕರಿಂದ ಸಾಕಷ್ಟು ದೂರುಗಳು (complaints) ಬಂದಿದ್ದವು.
ಆನ್ ಲೈನ್ನಲ್ಲಿ ಕಾರ್ಡ್ ರಿಚಾರ್ಜ್
ಬಿಎಂಆರ್ಸಿಎಲ್ ವೆಬ್ಸೈಟ್, ಫೋನ್ಪೇ (Phone pay), ಪೇಟಿಎಂ (Paytm) ಮುಂತಾದವುಗಳ ಮೂಲಕ ಆನ್+ ಲೈನ್ನಲ್ಲಿ ಮೆಟ್ರೋ ರೈಲು ಕಾರ್ಡ್ ರಿಚಾರ್ಜ್ ಮಾಡಿದ ಒಂದು ಗಂಟೆಯ ನಂತರ ಪ್ರಯಾಣಿಕರು ಮಾಡಿದ್ದ ರೀಚಾರ್ಜ್ ಹಣ ಕಾರ್ಡಿನಲ್ಲಿ ಪ್ರತಿಬಿಂಬಿಸುತ್ತಿತ್ತು. ಇದರಿಂದಾಗಿ ಪ್ರಯಾಣಿಕರು ಆನ್ಲೈನ್ ರೀಚಾರ್ಜ್ ಮಾಡಿ ಒಂದು ಗಂಟೆಯ ಮುಂಚೆಯೇ ಮೆಟ್ರೋ ಪ್ರಯಾಣ ತೆಗೆದುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಅದಕ್ಕೊಂದು ಪರಿಹಾರ ಸೂತ್ರ ಕಲ್ಪಿಸಲು ಮುಂದಾಗಿದೆ.
ಈ ಸಮಸ್ಯೆಯನ್ನು ಹೋಗಲಾಡಿಸಲು ಬಿಎಂಆರ್ಸಿಎಲ್ (BMRCL) ಇನ್ನು ಮುಂದೆ "ಕಾರ್ಡ್ ಟಾಪಪ್ ಟರ್ಮಿನಲ್ಸ್"ಗಳನ್ನು ಸ್ಥಾಪಿಸಲಿದ್ದು ಈ ಮೂಲಕ ಕಾರ್ಡ್ ರೀಚಾರ್ಜ್ ಮಾಡಿದಾಗ ತ್ವರಿತವಾಗಿ ರೀಚಾರ್ಜ್ ಹಣ ಕಾರ್ಡಿನಲ್ಲಿ ಸಂದಾಯವಾಗಿ ಪ್ರಯಾಣಿಕರಿಗೆ ಸೂಚಿಸಲಿದೆ. ಈ ಕುರಿತಂತೆ ಬಿಎಂಆರ್ಸಿಎಲ್ಗೆ ಈ ಹಿಂದೆ ಸಾಕಷ್ಟು ದೂರುಗಳು ಬರುತ್ತಿದ್ದವು.
ಥಟ್ಟನೆ ಮೆಟ್ರೋ ಹಿಡಿಯಬಹುದು
ಮೆಟ್ರೋ ನಿಲ್ದಾಣದ ಬಳಿಯೇ ಕೆಲಸದ ಕಚೇರಿ ಹೊಂದಿರುವ ಸಾಕಷ್ಟು ಜನರು ಆನ್ಲೈನ್ ರೀಚಾರ್ಜ್ ಮಾಡಿ ಥಟ್ಟನೆ ಮೆಟ್ರೋ ಹಿಡಿದು ಮನೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆನ್ಲೈನ್ನಲ್ಲಿ ರೀಚಾರ್ಜ್ ಮಾಡಿ ಅವರು ಕನಿಷ್ಠ 1 ಗಂಟೆಯವರೆಗೆ ಅನವಶ್ಯಕವಾಗಿ ಕಾಯಬೇಕಾದ ಪರಿಸ್ಥಿತಿ ಬಂದಿತ್ತು. ಈಗ ಮೆಟ್ರೋ ನಿಗಮವು ಆ ಸಮಸ್ಯೆಯನ್ನು ಹೋಗಲಾಡಿಸಿದಂತಾಗಿದೆ.
ಕ್ಲೈಮ್ ಆನ್ಲೈನ್ ಟಾಪಪ್
ಈ ಕುರಿತಂತೆ ಬಿಎಂಆರ್ಸಿಎಲ್ ಪ್ರಕಟಣೆಯೊಂದನ್ನು ಹೊರಡಿಸಿದ್ದು ಅದರಲ್ಲಿ, ಆನ್ಲೈನ್ನಲ್ಲಿ ಕಾರ್ಡ್ ರೀಚಾರ್ಜ್ ಮಾಡಿಸುವ ಪ್ರಯಾಣಿಕರು ಇನ್ನು ಮುಂದೆ ಕಾರ್ಡ್ ಟಾಪಪ್ ಟರ್ಮಿನಲ್ಗಳಲ್ಲಿ ತಮ್ಮ ಕಾರ್ಡುಗಳನ್ನು ಬಳಸಿ ಅಲ್ಲಿರುವ ಆಯ್ಕೆಗಳಲ್ಲಿ "ಕ್ಲೈಮ್ ಆನ್ಲೈನ್ ಟಾಪಪ್" ಆಯ್ಕೆ ಮಾಡಿದರೆ ಸಾಕು, ತಕ್ಷಣ ಅವರ ಕಾರ್ಡಿನಲ್ಲಿ ಹಣ ತೋರಿಸಲ್ಪಡುವುದು ಎಂದು ತಿಳಿಸಿದೆ.
ಆದರೆ, ಈ ರೀತಿ ಆನ್ಲೈನ್ನಲ್ಲಿ ಕಾರ್ಡ್ ರೀಚಾರ್ಜ್ ಮಾಡುವ ಪ್ರಯಾಣಿಕರು ಅದನ್ನು ಕ್ಲೈಮ್ ಮಾಡಲು 60 ದಿನಗಳವರೆಗೆ ಮಾತ್ರ ಅವಕಾಶವಿರುತ್ತದೆ. ಈ ಸೇವೆಯು ಇಂಗ್ಲೀಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲೂ ಲಭ್ಯವಿರುತ್ತದೆ ಹಾಗೂ ಈ ಟರ್ಮಿನಲ್ಗಳನ್ನು ಕಾರ್ಡುಗಳಲ್ಲಿರುವ ಬ್ಯಾಲೆನ್ಸ್ ನೋಡಲೂ ಬಳಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿಎಂಟಿಸಿ ಫೀಡರ್ ಬಸ್ಸು
ಈ ಮುಂಚೆ, ಬಿಎಂಆರ್ಸಿಎಲ್ ನವೆಂಬರ್ 17ರಂದು ನಗರದಲ್ಲಿ ಮೆಟ್ರೋ ಸೇವೆಯ ಅವಧಿ ಹೆಚ್ಚಿಸುವುದಾಗಿ ತಿಳಿಸಿತ್ತು. ಸೋಮವಾರದಿಂದ ಶನಿವಾರದವರೆಗೆ ಮೆಟ್ರೋ ರೈಲುಗಳು ಬೆಳಗ್ಗೆ 6 ರಿಂದ ರಾತ್ರಿ 11:30ರವರೆಗೆ ಕಾರ್ಯನಿರ್ವಹಿಸಲಿದ್ದು ರವಿವಾರದಂದು ಬೆಳಗ್ಗೆ 7 ರಿಂದ ರಾತ್ರಿ 11:30ವರೆಗೆ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆ ಹೊರಡಿಸಿತ್ತು. ಈ ಪ್ರಕಟಣೆ ಹೊರಡುತ್ತಿದ್ದಂತೆಯೇ ಮರುದಿನ ಇದಕ್ಕೆ ಸ್ಪಂದಿಸುತ್ತ ಬಿಎಂಟಿಸಿ ಸಹ ತನ್ನ ಫೀಡರ್ ಬಸ್ಸುಗಳ ಸೇವೆಯನ್ನು ಆಯ್ದ ಮೆಟ್ರೋ ನಿಲ್ದಾಣಗಳಿಗಾಗಿ ಹೆಚ್ಚಿಸುತ್ತಿರುವುದಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.