• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Namma Metro: ನಾಳೆಯಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಶುರು.. ಇನ್ಮುಂದೆ ಕೆಂಗೇರಿ ಪ್ರಯಾಣ ಸುಲಭ

Namma Metro: ನಾಳೆಯಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಶುರು.. ಇನ್ಮುಂದೆ ಕೆಂಗೇರಿ ಪ್ರಯಾಣ ಸುಲಭ

 ನಮ್ಮ ಮೆಟ್ರೋ

ನಮ್ಮ ಮೆಟ್ರೋ

7.5 ಕೀಮಿ ಉದ್ಧದ,  ನಾಯಂಡಹಳ್ಳಿ‌ಯಿಂದ ಕೆಂಗೇರಿ ಬಸ್ ಟರ್ಮಿನಲ್ ವರೆಗಿನ ನೇರಳೆ ಮೆಟ್ರೋ ಮಾರ್ಗ ನಾಳೆ ಬೆಳಿಗ್ಗೆ 10:30 ಕ್ಕೆ ಉದ್ಘಾಟನೆಯಾಗುತ್ತಿದೆ.

  • Share this:

ಬೆಂಗಳೂರು: ಸಾಮಾನ್ಯಾವಾಗಿ ಬೆಂಗಳೂರು ಹೃದಯ ಭಾಗದಿಂದ ಕೆಂಗೇರಿ ತಲುಪಬೇಕು ಅಂದ್ರೆ, ಟ್ರಾಫಿಕ್ ಮಧ್ಯೆ ಬೇಸತ್ತು ಸುಸ್ತಾಗುವ ಜೊತೆಗೆ ತುಂಬ ಸಮಯ ಹಿಡಿಯುತ್ತಿತ್ತು. ಇದೀಗ 10 ನಿಮಿಷಗಳಲ್ಲಿ ತಲುಪಬಹುದಾಗಿದೆ. ನೇರಳೆ ಮಾರ್ಗದ ನಾಯಂಡಹಳ್ಳಿ - ಕೆಂಗೇರಿ ಮೆಟ್ರೋ ರೈಲು ಮಾರ್ಗ ನಾಳೆ‌ ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿದೆ. ನಾಳೆಯಿಂದ ಸಂಚಾರ ಶುರುವಾಗಲಿದ್ದು, ಈ ಭಾಗದ ಪ್ರಯಾಣಿಕರ ಮೊಗದಲ್ಲಿ ಸಂತಸ ಮೂಡಿದೆ. 


ನಾಳೆ ಕೆಂಗೇರಿ-ನಾಯಂಡಳ್ಳಿ‌ ಮೆಟ್ರೋ ಮಾರ್ಗಕ್ಕೆ ಚಾಲನೆ 


ಕೆಂಗೇರಿ ಹಾಗೂ ನಾಯಾಂಡಳ್ಳಿ ಮಾರ್ಗಕ್ಕೆ ಮೆಟ್ರೋ‌ ಮಾರ್ಗ ಕಲ್ಪಿಸಿಕೊಡಬೇಕು ಎನ್ನುವುದು ಎಷ್ಟೋ ಜನರ ಕನಸ್ಸಾಗಿತ್ತು. ಸಧ್ಯ ಆ ಕನಸ್ಸು ನೆರವೇರಿತ್ತಿದ್ದು, ನಾಳೆ ಸಿಎಂ‌ ಬಸವರಾಜ್ ಬೊಮ್ಮಾಯಿ ಅವರಿಂದ  ಉದ್ಘಾಟನೆಗೊಳ್ಳುತ್ತಿದೆ. ಹೌದು,  7.5 ಕೀಮಿ ಉದ್ಧದ,  ನಾಯಂಡಹಳ್ಳಿ‌ಯಿಂದ ಕೆಂಗೇರಿ ಬಸ್ ಟರ್ಮಿನಲ್ ವರೆಗಿನ ನೇರಳೆ ಮೆಟ್ರೋ ಮಾರ್ಗ ನಾಳೆ ಬೆಳಿಗ್ಗೆ 10:30 ಕ್ಕೆ ಉದ್ಘಾಟನೆಯಾಗುತ್ತಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗುತ್ತಿದ್ದಾರೆ.


ನಮ್ಮ‌ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಪರಿಶೀಲನೆ 


ಈ ಹಿನ್ನೆಲೆ ನಿನ್ನೆ ನಮ್ಮ ಮೆಟ್ರೋ ನಿರ್ವಾಹಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾತಾನಾಡಿ, ಜನರ ಉಪಯೋಗಕ್ಕೆ ಮೆಟ್ರೋ‌ ನಿಲ್ದಾಣ ಸಜ್ಜಾಗಿದ್ದು, ಭಾನುವಾರ ಸಿಎಂ ಅವರಿಂದ ಉದ್ಘಾಟನೆಗೊಂಡು ಅಧಿಕೃತವಾಗಿ ಸೋಮವಾರ ಬೆಳ್ಳಗ್ಗೆ 7 ಗಂಟೆಯಿಂದ‌ ಮೆಟ್ರೋ ಹಳಿಗೆ ಬರಲಿದೆ. ಪ್ರತಿ 10 ನಿಮಿಷಕ್ಕೆ ಒಮ್ಮೆ ಮೆಟ್ರೋ ಸಂಚರಿಸಲಿದ್ದು, 75 ಸಾವಿರ ಜನರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಇನ್ನು ಕೆಂಗೇರಿಯಿಂದ ಬೈಯ್ಯಪ್ಪನಹಳ್ಳಿಯವರೆಗೆ ಈ ಮೆಟ್ರೋ ಮಾರ್ಗಕ್ಕೆ 56 ರೂಪಾಯಿ ಹಣವನ್ನ ನಿಗದಿಮಾಡಲಾಗಿದೆ. ಒಂದು ವೇಳೆ ವೈಟ್ ಫೀಲ್ಡ್ ನಿಂದ ಕೆಂಗೇರಿ ನಿಲ್ದಾಣಕ್ಕೆ ಬಂದ್ರೆ 60 ರೂಪಾಯಿ ತಗುಲಲಿದೆ. ಅಂದಹಾಗೆ, ಕಳೆದ ಐದು ವರ್ಷಗಳಿಂದ ನಮ್ಮ ಮೆಟ್ರೋ ನೇರಳೆ ಮಾರ್ಗದ ಕೆಂಗೇರಿ ಮಾರ್ಗವನ್ನು ನಿರ್ಮಾಣ ಮಾಡುತ್ತಿತ್ತು.


6 ಸ್ಟೇಷನ್.. 7.5 km ದೂರ.. 1,560 ಕೋಟಿ ವೆಚ್ಚ


ಒಟ್ಟು ಆರು ನಿಲ್ದಾಣ ಹೊಂದಿರುವ ಈ ಮಾರ್ಗದ ನಿರ್ಮಾಣಕ್ಕೆ ನಮ್ಮ ಮೆಟ್ರೋ 1,560 ಕೋಟಿ ಖರ್ಚು ಮಾಡಿದೆ. ಅಲ್ಲದೆ ಈ ಮಾರ್ಗ ಒಟ್ಟು‌ 7.5 ಕೀಮಿ ದೂರ ಇದೆ. ಈ‌ ಮೆಟ್ರೋ ಮಾರ್ಗದಿಂದ ಜನಸಾಮಾನ್ಯರಿಗೆ ಸಾಕಷ್ಟು ಉಪಯೋಗವಾಗುತ್ತಿದ್ದು, ಟ್ರಾಫಿಕ್ ಕಿರಿಕಿರಿಯಿಂದ ಬಳಲುತ್ತಿದ್ದ ಜನರು ಇದೀಗಾ ಕೇವಲ‌ 10 ನಿಮಿಷದಲ್ಲಿ ನಗರದ ಮುಖ್ಯ ಭಾಗಕ್ಕೆ ಬರಬಹುದಾಗಿದೆ. ಇನ್ನು ಮೈಸೂರಿನಿಂದ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಿಂದ ಕೆಂಗೇರಿ ಬಸ್ ನಿಲ್ದಾಣದಲ್ಲಿ ಪ್ರವೇಶವನ್ನ ಕಲ್ಪಿಸಲಾಗಿದೆ. ಓಟ್ಟಾರೆಯಾಗಿ 5 ವರ್ಷದಿಂದ ಕುಂಟುತ್ತ ಸಾಗುತ್ತಿದ್ದ ಮೆಟ್ರೋ ಕಾಮಗಾರಿ ಸದ್ಯ ಪೂರ್ಣಗೊಂಡಿದ್ದು, ನಾಳೆ ಅದ್ದೂರಿಯಾಗಿ ಉದ್ಘಾಟನೆಗೊಳ್ಳುತ್ತಿರುವುದು ಸಂತೋಷದ ಸಂಗತಿಯೇ ಹೌದು.


ಇದನ್ನೂ ಓದಿ:Section 110- ಬೆಂಗಳೂರು ಪೊಲೀಸರ ಕೈಯಲ್ಲಿ ಸೆಕ್ಷನ್ 110; ಥರಗುಟ್ಟುತ್ತಿರುವ ರೌಡಿಗಳು; ಏನಿದು ಈ ಸೆಕ್ಷನ್?


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: