Alcohol: ಬೆಂಗಳೂರಿನಲ್ಲಿ 2 ದಿನ ಮದ್ಯ ಮಾರಾಟ ನಿಷೇಧ; ಯಾವ ಏರಿಯಾ ತಿಳಿದುಕೊಳ್ಳಿ

ಏಪ್ರಿಲ್ 13 ಹಾಗೂ 14 ರಂದು ಮದ್ಯ ಮಾರಾಟ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ

ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ (ಸಾಂದರ್ಭಿಕ ಚಿತ್ರ)

ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ (ಸಾಂದರ್ಭಿಕ ಚಿತ್ರ)

  • Share this:
ಬೆಂಗಳೂರಿನ ವಿವಿಧ ಭಾಗಗಳಲ್ಲಿ (Bengaluru Liquor Ban) 2 ದಿನ ಮದ್ಯ ಮಾರಾಟ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಕಮಿಶನರ್ ಕಮಲ್ ಪಂತ್ (Kamal Panth) ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಈ ಆದೇಶ ಜಾರಿಗೆ ಬರಲಿದ್ದು ಎರದು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ.  ಹಲಸೂರು ಕೋದಂಡರಾಮಸ್ವಾಮಿ ಪಲ್ಲಕ್ಕಿ ಉತ್ಸವ ಹಿನ್ನೆಲೆಯಲ್ಲಿ ಹಲಸೂರು ಠಾಣಾ ವ್ಯಾಪ್ತಿಯಲ್ಲಿ 2 ದಿನ ಮದ್ಯ ಮಾರಾಟ ನಿಷೇಧ (Liquor Selling Ban) ಮಾಡಲಾಗಿದೆ. ಹಲಸೂರು ಭಾಗದಲ್ಲಿ ಏಪ್ರಿಲ್ 11 ಹಾಗೂ 12ರಂದು ಮದ್ಯ ಮಾರಾಟ ನಿಷೇಧಿಸಿ ಕಮೀಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. 

ಭಾರತೀನಗರ ಠಾಣಾ ವ್ಯಾಪ್ತಿಯಲ್ಲಿಯೂ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ.   ಭಾರತೀನಗರ ಠಾಣಾ ವ್ಯಾಪ್ತಿಯ ಮುತ್ಯಾಲಮ್ಮ ದೇವಿ ರಥೋತ್ಸವ ಹಿನ್ನೆಲೆಯಲ್ಲಿ ಏಪ್ರಿಲ್ 13 ಹಾಗೂ 14ರಂದು ಮದ್ಯ ಮಾರಾಟ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಪೂರ್ವ ವಿಭಾಗದ ಭಾರತೀನಗರ, ಕಮರ್ಷಿಯಲ್ ಸ್ಟ್ರೀಟ್, ಪುಲಿಕೇಶಿನಗರ, ಶಿವಾಜಿನಗರ, ಡಿಜೆ ಹಳ್ಳಿ ಭಾಗಗಳಲ್ಲಿ, ಉತ್ತರ ವಿಭಾಗದ ಜೆಸಿ ನಗರ ಠಾಣಾ ವ್ಯಾಪ್ತಿಯಲ್ಲಿಯೂ ಏಪ್ರಿಲ್ 13 ಹಾಗೂ 14 ರಂದು ಮದ್ಯ ಮಾರಾಟ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

Bengaluru to Tumkur ನಡುವೆ ಆರಂಭಗೊಂಡ ಎಲೆಕ್ಟ್ರಿಕ್ ರೈಲು! ಬಹುದಿನಗಳ ಕನಸು ಕೊನೆಗೂ ನನಸು
ಬೆಂಗಳೂರು-ತುಮಕೂರು (Bengaluru-Tumkur) ರೈಲು (Railway) ಮಾರ್ಗದ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡಿದ್ದು, ಎಲೆಕ್ಟ್ರಿಕ್ ರೈಲುಗಳು (Electric Rail) ಶುಕ್ರವಾರದಿಂದ ಕಾರ್ಯಾಚರಣೆ ಪ್ರಾರಂಭಿಸಿವೆ.


ತುಮಕೂರು ನಗರದ ರೈಲು ನಿಲ್ದಾಣದಿಂದ ಪ್ರತಿನಿತ್ಯ ತುಮಕೂರು ನಡುವೆ ಸಂಚರಿಸುವ ಮೆಮು ವಿಶೇಷ ರೈಲು ಸಂಚಾರಕ್ಕೆ ಸಂಸದ ಜಿ.ಎಸ್‌.ಬಸವರಾಜು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆ ಈ ದಿನ ಈಡೇರಿದಂತಾಗಿದೆ. ತುಮಕೂರು ಮತ್ತು ಬೆಂಗಳೂರಿನ ಕೆಎಸ್‌ಆರ್‌ ರೈಲು ನಿಲ್ದಾಣದ ನಡುವೆ ಸಂಚರಿಸುವ ಈ ವಿದ್ಯುತ್‌ಚಾಲಿತ ರೈಲು ಸೇವೆಯಿಂದ ಮುಖ್ಯವಾಗಿ ಕಾರ್ಮಿಕರು, ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Harsha Murder: ಹರ್ಷನ ಕನಸಿನಂತೆ ಬಡ ಮಕ್ಕಳಿಗೆ ನೆರವು, ಗೋಶಾಲೆ ನಿರ್ಮಾಣ, ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ

ಇದರಿಂದ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಿದೆ. ವಾಣಿಜ್ಯ ಮತ್ತು ಅನುಕೂಲದ ಅನೇಕ ಕಾರಣಗಳಿಗಾಗಿ ರಾಜಧಾನಿಗೆ (Capital) ಸಾವಯವವಾಗಿ ಸಂಪರ್ಕ ಹೊಂದಿದ ನಗರ ಎಂದರೆ ತುಮಕೂರು. ಪ್ರತಿ ದಿನ ಬೆಂಗಳೂರಿಗೆ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಹೀಗೆ ದೈನಂದಿನ ಪ್ರಯಾಣಿಕರಿಗೆ (Passengers) ಅನುಕೂಲವಾಗುವಂತೆ ಪರಿಣಾಮಕಾರಿ ಮತ್ತು ಹಸಿರು ಚಲನಶೀಲತೆಯ ಪರಿಹಾರವನ್ನು ಒದಗಿಸುವುದರಿಂದ ಎಲೆಕ್ಟ್ರಿಕ್ ರೈಲುಗಳ ಪ್ರಯಾಣಿಕರಿಗೆ ಗೇಮ್-ಚೇಂಜರ್ (Game Changer) ಆಗಲಿವೆ.

ಈ ರೈಲಿನ ವಿಶೇಷತೆ ಏನು?
ಸೌತ್ ವೆಸ್ಟರ್ನ್ ರೈಲ್ವೇ (SWR) ಎರಡು ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (DEMU) ರೇಕ್‍ಗಳನ್ನು ಎಲೆಕ್ಟ್ರಿಕ್ ರೈಲುಗಳಾಗಿ ಪರಿವರ್ತಿಸಲು ಸೂಚನೆ ನೀಡಿದೆ.

ಇದನ್ನೂ ಓದಿ: Hijab ಧರಿಸಿ​ ಬಂದ್ರೆ ದ್ವಿತೀಯ ಪಿಯು ಪರೀಕ್ಷೆ ನೋ ಎಂಟ್ರಿ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು (ಎಸ್ಬಿಸಿ) ಮತ್ತು ಅರಸೀಕೆರೆ (06273/4) ನಡುವಿನ ಡಿಇಎಂಯು ವಿಶೇಷ ರೈಲಿನ ರೇಕ್ ಅನ್ನು 17 ಕೋಚ್ಗಳ ಎಲೆಕ್ಟ್ರಿಕ್ ರೈಲಿಗೆ ಬದಲಾಯಿಸಲಾಗುವುದು, ಇದು 15 ಜನರಲ್ ಸೀಟ್ ಮತ್ತು ಎರಡು ಆಸನ ಮತ್ತು ಲಗೇಜ್ ಕೋಚ್‍ಗಳನ್ನು ಹೊಂದಿರುತ್ತದೆ.
Published by:guruganesh bhat
First published: