Bengaluru: ರಾಜಧಾನಿಯಲ್ಲಿ ಎದುರಾಗಿದೆ ವ್ಯಾಕ್ಸಿನ್​ ಕೊರತೆ; ದಿನೇ ದಿನೇ ಇಳಿಮುಖವಾಗ್ತಿದೆ ಲಸಿಕೆ ವಿತರಣೆ

ಬಿಬಿಎಂಪಿ  ಪ್ರತಿನಿತ್ಯ ಒಂದು ಲಕ್ಷ ಲಸಿಕೆ ಹಾಕುವ ಗುರಿ‌ ಹೊಂದಿದೆ. ಆದರೆ ಆ.12ರಂದು ಅತ್ಯಂತ ಕಡಿಮೆ ಅಂದರೆ 28,906 ಲಸಿಕೆಯನ್ನು ವಿತರಣೆ ಮಾಡಲಾಗಿದೆ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
ಬೆಂಗಳೂರು(ಆ.17): ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿಯೂ ಕೊರೋನಾ ಕೇಸ್​​ಗಳು ಕಡಿಮೆಯಾಗುತ್ತಿವೆ. ಆದರೆ ರಾಜಧಾನಿಯಲ್ಲಿ ಲಸಿಕೆ ವಿತರಣೆಯಲ್ಲಿ ಏರಿಕೆಯಾಗಿಲ್ಲ. ಬದಲಿಗೆ ಲಸಿಕೆ ಕೊರತೆ ಎದುರಾಗಿದೆ. ಹೌದು, ಕಳೆದ 10 ದಿನಗಳಲ್ಲಿ ಲಸಿಕೆ ವಿತರಣೆಯಲ್ಲಿ ಇಳಿಮುಖವಾಗಿದೆ. ಹೀಗಾಗಿ ಬಿಬಿಎಂಪಿ ಲಸಿಕೆ ಕೊರತೆಯನ್ನು ಎದುರಿಸುತ್ತಿದೆ. 

ಬಿಬಿಎಂಪಿ  ಪ್ರತಿನಿತ್ಯ ಒಂದು ಲಕ್ಷ ಲಸಿಕೆ ಹಾಕುವ ಗುರಿ‌ ಹೊಂದಿದೆ. ಆದರೆ ಆ.12ರಂದು ಅತ್ಯಂತ ಕಡಿಮೆ ಅಂದರೆ 28,906 ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಆ.7ರಂದು  88,385 ಲಸಿಕೆ ಹಾಕಲಾಗಿದ್ದು, ಇದೇ ಅತಿ ಹೆಚ್ಚು ಎಂದು ತಿಳಿದು ಬಂದಿದೆ.  ಉಳಿದ 9 ದಿನಗಳಲ್ಲಿ ಸರಾಸರಿ 40-50 ಸಾವಿರ ಲಸಿಕೆ‌ ಹಾಕಲಾಗಿದೆ.

ಇದನ್ನೂ ಓದಿ:Neeraj Chopra: ಚಿನ್ನದ ಹುಡುಗ ನೀರಜ್​ ಚೋಪ್ರಾಗೆ ಚೂರ್ಮಾ ಉಣಬಡಿಸಿದ ಪ್ರಧಾನಿ ಮೋದಿ

ಬೆಂಗಳೂರಿನಲ್ಲಿ ಲಸಿಕೆ‌ ವಿತರಣೆಯ ವಿವರ

 • ಆ.‌ 6ರಂದು 44,470

 • ಆ.7ರಂದು 88,385

 • ಆ.8ರಂದು 47,899

 • ಆ.9ರಂದು 44,972

 • ಆ.10ರಂದು 29,381

 • ಆ. 11ರಂದು 52,886

 • ಆ. 12ರಂದು 28,906

 • ಆ. 13ರಂದು 58,366

 • ಆ. 14ರಂದು 66,966

 • ಆ. 15ರಂದು 39,046
ಮೊದಲ ಕೊರೊನಾ ಲಸಿಕೆ ಹಾಕಿಸಿಕೊಂಡವರು

 • 60+ ಹಿರಿಯರಿಗೆ ಶೇ. 14.82 ಲಸಿಕೆ ವಿತರಣೆ

 • 45-59 ವಯೋಮಾನ ಶೇ. 23.68ರಷ್ಟು ಲಸಿಕೆ

 • 18-44 ವಯೋಮಾನ ಶೇ.61.50 ಲಸಿಕೆ


ಎರಡನೇ ಕೊರೊನಾ ಲಸಿಕೆ ಹಾಕಿಸಿಕೊಂಡವರು

 • 60+ ಹಿರಿಯರಿಗೆ ಶೇ. 33.24 ಲಸಿಕೆ ವಿತರಣೆ

 • 45-59 ವಯೋಮಾನ ಶೇ. 38.90ರಷ್ಟು ಲಸಿಕೆ

 • 18-44 ವಯೋಮಾನ ಶೇ.27.87 ಲಸಿಕೆ


ಇದನ್ನೂ ಓದಿ:Afghanistan Crisis: ತಾಲಿಬಾನ್‌ ವಶಕ್ಕೆ ಪಡೆದ ಒಂದು ದಿನದ ನಂತರ ದೆವ್ವದ ನಗರವಾದ ಕಾಬೂಲ್..!

ಸೋಮವಾರ ‘ವೈದ್ಯರ ನಡೆ ಮನೆ ಬಾಗಿಲಿನ ಕಡೆ‘ ಅಭಿಯಾನಕ್ಕೆ ಕಂದಾಯ ಸಚಿವ ಆರ್​.ಅಶೋಕ್​​ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲಿಕೆ ಆಡಳಿತಾಧಿಕಾರಿ ರಾಕೇಶ್​​ ಸಿಂಗ್, ಮುಖ್ಯ ಆಯುಕ್ತ ಗೌರವ್​ ಗುಪ್ತಾ, ವಿಶೇಷ ಆಯುಕ್ತ ರಂದೀಪ್​ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದು ಬಿಬಿಎಂಪಿ ‌ವತಿಯಿಂದ ನಡೆಯುತ್ತಿರುವ ಅಭಿಯಾನವಾಗಿದ್ದು, ಕೊರೋನಾ ಕಂಟ್ರೋಲ್​ ಮಾಡಲು ಪಣ ತೊಟ್ಟಿದೆ. ಬಿಬಿಎಂಪಿ ಇದರ ಭಾಗವಾಗಿ ವೈದ್ಯರ ನಡೆ ಮನೆ ಬಾಗಿಲಿನ ಕಡೆ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ವೈದ್ಯರು ಮನೆ ಬಾಗಿಲಿಗೆ ಹೋಗಿ ಕೊರೋನಾ ಟೆಸ್ಟ್ ಮಾಡಲಿದ್ದಾರೆ.

ಇದಕ್ಕಾಗಿ ತಂಡಗಳನ್ನು ರಚನೆ ಮಾಡಿರುವ ಬಿಬಿಎಂಪಿ, ಪ್ರತಿ ವಾರ್ಡ್​​ನಲ್ಲಿಯೂ ವೈದ್ಯರು ರೌಂಡ್ಸ್​​ ನಡೆಸಲಿದ್ದಾರೆ. ಒಂದು ತಂಡ ಕನಿಷ್ಠ ಅಂದರೂ 50 ಮನೆಗಳಿಗೆ ಭೇಟಿ ಕೊಡಬೇಕು. ಕೊರೋನಾ ರೋಗ ಲಕ್ಷಣ ಇರುವ ಮನೆ ಜನರ ಕೋವಿಡ್​​ ಟೆಸ್ಟ್ ಮತ್ತು ವ್ಯಾಕ್ಸಿನ್​​​​​ ಬಗ್ಗೆಯೂ ತಂಡ ಮಾಹಿತಿ ಪಡೆಯಲಿದೆ.

ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ 300 ಹಾಗೂ 400 ಕೊರೋನಾ ಕೇಸ್​​ಗಳು ಪತ್ತೆಯಾಗುತ್ತಿವೆ. ಅದೊಂದು ರೀತಿ ಬಿಪಿ, ಶುಗರ್ ನಾರ್ಮಲ್ ಲೈನ್ ಇದ್ದ ಹಾಗೆ. ಇದೊಂದು ಗೆರೆಯನ್ನು ದಾಟಿದ್ರೆ ಟಫ್ ರೂಲ್ಸ್ ಗಳ ಬಗ್ಗೆ ತಜ್ಞರೊಂದಿಗೆ ಚರ್ಚಿಸಲಾಗುವುದು. ವೀಕೆಂಡ್​​​ ಕರ್ಫ್ಯೂ, ನೈಟ್ ಕರ್ಫ್ಯೂ ಅವಧಿ ವಿಸ್ತರಣೆ ವಿಚಾರವಾಗಿ ‌ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್​. ಅಶೋಕ್ ಹೇಳಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: