Bengaluru: ರಾಜ್ಯದಲ್ಲಿ ಅಪರಾಧ ಕೃತ್ಯ ಪರಿಶೀಲನೆಗೆ ಹೊಸ ಹುದ್ದೆ ಸೃಷ್ಟಿ; 206 ಅಧಿಕಾರಿಗಳ ನೇಮಕ ಮಾಡಲು ನಿರ್ಧಾರ

ಘಟನಾ ಸ್ಥಳದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಸಾಕ್ಷ್ಯಾಧಾರಗಳನ್ನ ಸಂಗ್ರಹಣೆ ಮಾಡುವುದು. ಅಪರಾಧ ಪತ್ತೆ ಮಾಡಲು ನುರಿತ ಹಾಗೂ ಪರಿಣಿತರ ತಂಡ ನೇಮಿಸಲು ಇಲಾಖೆ ಮುಂದಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು(ಜು.13): ರಾಜ್ಯದಲ್ಲಿ ಅಪರಾಧ ಕೃತ್ಯಗಳ ಪತ್ತೆ ಮತ್ತು ತನಿಖೆಗಾಗಿ ವಿಶೇಷ ಹುದ್ದೆಯನ್ನ ಸೃಷ್ಟಿಸಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮುಂದಾಗಿದೆ. ಅಪರಾಧ ಕೃತ್ಯ ನಡೆಯುವ ಸ್ಥಳದಲ್ಲಿ ಪರಿಶೀಲನೆ ನಡೆಸಿ ತ್ವರಿತವಾಗಿ ಸಾಕ್ಷ್ಯಾಧಾರಗಳ ಸಂಗ್ರಹ ಮಾಡುವ ಉದ್ದೇಶದಿಂದ ಈ ಹುದ್ದೆಯನ್ನ ಸೃಷ್ಟಿಸಲಾಗುತ್ತಿದ್ದು, ಈ ಹುದ್ದೆಗೆ ನೇಮಕವಾದ ಅಧಿಕಾರಿಗಳಿಗೆ ಎಫ್ಎಸ್ಎಲ್ ತಜ್ಞರಂತೆ ತರಬೇತಿ ನೀಡಲಾಗುತ್ತದೆ ಎನ್ನಲಾಗಿದೆ.

ಅಂದ ಹಾಗೆ ಪೊಲೀಸ್ ಇಲಾಖೆ ಸೃಷ್ಟಿಸಿರುವ ಈ ಹೊಸ ಹುದ್ದೆ ಹೆಸರು 'ಅಪರಾಧ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ' ಎಂದು ಹೆಸರಿಸಲಾಗಿದೆ‌. ಈ ತಂಡವು ಅಪರಾಧ ಕೃತ್ಯ ನಡೆದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸುವುದು. ಘಟನಾ ಸ್ಥಳದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಸಾಕ್ಷ್ಯಾಧಾರಗಳನ್ನ ಸಂಗ್ರಹಣೆ ಮಾಡುವುದು. ಅಪರಾಧ ಪತ್ತೆ ಮಾಡಲು ನುರಿತ ಹಾಗೂ ಪರಿಣಿತರ ತಂಡ ನೇಮಿಸಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ:Tungabhadra: ಜುಲೈ 18 ರಿಂದ ತುಂಗಾಭದ್ರಾ ನಾಲೆಗೆ ನೀರು ಬಿಡಲು ನಿರ್ಧಾರ; ರೈತರ ಮೊಗದಲ್ಲಿ ಸಂತಸ

ದೇಶದಲ್ಲಿ ಇದೇ ಮೊದಲ ಬಾರಿಗೆ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ ಹುದ್ದೆಯನ್ನ ಸೃಷ್ಟಿಸಲಾಗಿದೆಯಂತೆ. ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹೊಸ ಅಪರಾಧ ಕೃತ್ಯಗಳ ತ್ವರಿತ ತನಿಖೆ ಸಲುವಾಗಿ ಹೊಸ ಮೈಲುಗಲ್ಲು ಇಡಲು ಮುಂದಾಗಿದ್ದಾರೆ. ಹೊಸ ಹುದ್ದೆಗೆ 206 ಅಧಿಕಾರಿಗಳನ್ನ ನೇಮಕ ಮಾಡಲು ಸಿದ್ದತೆ ನಡೆಸಲಾಗಿದ್ದು, ಹೊಸ ಹುದ್ದೆ ಸೃಷ್ಟಿ ಸಂಬಂಧ ಇಂದು ಸಿಎಂ ಯಡಿಯೂರಪ್ಪ ಆದೇಶ ಪತ್ರ ನೀಡಲಿದ್ದಾರೆ.

ಇನ್ನೂ ಹೊಸ ಹುದ್ದೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಎಫ್ಎಸ್ಎಲ್ ಅಧಿಕಾರಿಗಳಿಗೆ ನೀಡಿದ ತರಬೇತಿಯಂತೆ ಇವರಿಗೆ ತರಬೇತಿ ನೀಡಲು ಇಲಾಖೆ ಮುಂದಾಗಿದೆ. ಗುಜರಾತ್ ನ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಹೈದರಾಬಾದ್ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಒಂದು ವರ್ಷಗಳ ಕಾಲ ತರಬೇತಿ ನೀಡಿ ಬಳಿಕ ಕೆಲಸಕ್ಕೆ ನಿಯೋಜನೆ ಮಾಡಲು ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ:Zika Virus: ಏನಿದು ಜಿಕಾ ವೈರಸ್? ಹೇಗೆ ಹರಡುತ್ತೆ? ಇದಕ್ಕೆ ಚಿಕಿತ್ಸೆ ಇದೆಯಾ? ಮಾಹಿತಿ ಇಲ್ಲಿದೆ..!

ತರಬೇತಿ ಪೂರ್ಣಗೊಂಡ ಬಳಿಕ ರಾಜ್ಯದ ಪ್ರತಿ ಜಿಲ್ಲೆಗೂ ಈ ಅಧಿಕಾರಿಗಳನ್ನ ನಿಯೋಜನೆ ಮಾಡಲು ಇಲಾಖೆ ತೀರ್ಮಾನಿಸಿದೆ. ಜಿಲ್ಲೆಯಲ್ಲಿ ಎಫ್ಎಸ್ಎಲ್ ರೀತಿಯಲ್ಲಿ ಒಂದು ಮಿನಿ ಮೊಬೈಲ್ ಪ್ರಯೋಗಾಲಯ ನಿಯೋಜನೆ ಮಾಡಿ ಆ ಮೂಲಕ ಈ ತಂಡ ಕಾರ್ಯಾಚರಣೆ ನಡೆಸಲಿದೆ. ಅಲ್ಲದೆ ಮೊದಲ ಹಂತದಲ್ಲಿ 206 ಅಧಿಕಾರಿಗಳ ನೇಮಕವಾಗುತ್ತಿದ್ದು ಪ್ರತಿ ಜಿಲ್ಲೆಗೆ 3-4 ಅಧಿಕಾರಿಗಳ ನೇಮಕ ಮಾಡುವ ಸಾಧ್ಯತೆ ಇದೆ. ಹಾಗೂ ಬೆಂಗಳೂರು ನಗರದಲ್ಲಿ ಸುಮಾರು 20 ಕ್ಕು ಹೆಚ್ಚು ಸಿಬ್ಬಂದಿ ನಿಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅಪರಾಧ ನಡೆದ ಸ್ಥಳಕ್ಕೆ ಮೊದಲಿಗೆ ದೌಡಾಯಿಸೋ ಈ ತಂಡ ಸ್ಥಳದಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಕೃತ್ಯಕ್ಕೆ ಸಂಬಂಧಿಸಿದ ವೈಜ್ಞಾನಿಕ ಸಾಕ್ಷ್ಯಗಳನ್ನ ಸಂಗ್ರಹಣೆ ಮಾಡಿ ತನಿಖಾಧಿಕಾರಿಗಳಿಗೆ ನೆರವು ನೀಡಬೇಕಿದೆ.

ಸದ್ಯ ಅಪರಾಧ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿಗಳಿಗೆ ನುರಿತ ತರಬೇತಿ ನೀಡಿದ ಬಳಿಕ ಅಪರಾಧ ಕೃತ್ಯಗಳ ಪತ್ತೆ ಮತ್ತು ಸಾಕ್ಷ್ಯಗಳ ಸಂಗ್ರಹ ಮಾಡಲು ಕರ್ತವ್ಯಕ್ಕೆ ನಿಯೋಜನೆ ಮಾಡಲು ಇಲಾಖೆ ಮುಂದಾಗಿದೆ.
Published by:Latha CG
First published: