Bengaluru Karaga: ನಾಳೆಯಿಂದ ಬೆಂಗಳೂರು ಕರಗ ಮಹೋತ್ಸವದ ಸಂಭ್ರಮ, ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ

ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆ ದಿನದಂದು ಕರಗ ಉತ್ಸವ ನಡೆಯುತ್ತದೆ. ಬೆಂಗಳೂರು ಮಧ್ಯಭಾಗದಲ್ಲಿರುವ ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನದಲ್ಲಿ ದ್ರೌಪದಿ ಕರಗ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ

ಕರಗ ಮಹೋತ್ಸವ (ಫೈಲ್​ ಫೋಟೋ)

ಕರಗ ಮಹೋತ್ಸವ (ಫೈಲ್​ ಫೋಟೋ)

  • Share this:
ಬೆಂಗಳೂರು (ಏ.7): ವಿಶ್ವವಿಖ್ಯಾತ ಬೆಂಗಳೂರು ಕರಗ (Bengaluru Karaga) ಮಹೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ. ಸದ್ಯ ಕೋವಿಡ್​​ (Covi19) ಮೂರನೇ ಅಲೆಯಲ್ಲಿ ತೀವ್ರತೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕರಗ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 9 ದಿನಗಳ ಕಾಲ ನಡೆಯೋ ಈ ಅದ್ಧೂರಿ ಉತ್ಸವದಲ್ಲಿ (Greatest Festival) ನಿತ್ಯ ಹಲವು ಧಾರ್ಮಿಕ ಕಾರ್ಯಕ್ರಮಗಳು (Religious Programs) ನಡೆಯಲಿದೆ. ಏಪ್ರಿಲ್ 16ರ ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ಜರುಗಲಿದ್ದು, ರಾಜಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ಇರಲಿದೆ.

ಬೆಂಗಳೂರಿನ ಅದ್ಧೂರಿ ಹಬ್ಬ

ಬೆಂಗಳೂರಿನ ಕಲ್ಯಾಣ ಹಾಗೂ ಜನಜೀವನ ಸಮೃದ್ಧಿಯಾಗಿ ಇರಲು ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆ ದಿನದಂದು ಕರಗ ಉತ್ಸವ ನಡೆಯುತ್ತದೆ. ಬೆಂಗಳೂರು ಮಧ್ಯಭಾಗದಲ್ಲಿರುವ ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನದಲ್ಲಿ ದ್ರೌಪದಿ ಕರಗ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 9 ದಿನಗಳ ಉತ್ಸವಕ್ಕೆ ಸಕಲ ತಯಾರಿ ನಡೆಯುತ್ತಿದ್ದು, ಈ ಸಾಲಿನ ಕರಗ ಪೂಜಾರಿ ಎ. ಜ್ಞಾನೇಂದ್ರ ಅವರು ಹೊರಲಿದ್ದಾರೆ‌.‌

ಶ್ರೀ ದ್ರೌಪದಿದೇವಿ ಕರಗ ಶಕ್ತ್ಯೋತ್ಸವ

ಕಲ್ಯಾಣಪುರಿ ಎಂಬ ಪ್ರತಿನಾಮಧೇಯದಿಂದ ಪ್ರಖ್ಯಾತವಾಗಿರುವ ಬೆಂಗಳೂರು ಮಹಾನಗರ ತಿಗಳರಪೇಟೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕರಗ ಮಹೋತ್ಸವ ಬಹಳ ಪ್ರಸಿದ್ಧಿ ಪಡೆದಿದೆ. ಶ್ರೀ ದ್ರೌಪದಿದೇವಿ ಕರಗ ಶಕ್ತ್ಯೋತ್ಸವ ಹಾಗೂ ಶ್ರೀ ಧರ್ಮರಾಯಸ್ವಾಮಿ ಮಹಾ ರಥೋತ್ಸವವು ಸ್ವಸ್ತಿಶ್ರೀ ಶುಭಕೃತು ನಾಮ ಸಂವತ್ಸರದ ಚೈತ್ರ ಶುದ್ಧ ಸಪ್ತಮಿ ಶುಕ್ರವಾರ ಏಪ್ರಿಲ್​ 8 ರಿಂದ ಚೈತ್ರ ಬಹುಳ ಬಿದಿಗೆ ಸೋಮವಾರ 18ರ ವರೆಗೆ ದೇವರ ಸೇವಾ ಕೈಂಕರ್ಯ ನಿಶ್ಚಿಯಿಸಲಾಗಿದೆ.

ಇದನ್ನೂ ಓದಿ: Bengaluru Karaga: ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ ಬೆಂಗಳೂರು ಕರಗ ಮಹೋತ್ಸವ

ಕರಗ ಮಹೋತ್ಸವದ ಕಾರ್ಯಕ್ರಮದ ಪಟ್ಟಿ ಹೀಗಿದೆ

ಏಪ್ರಿಲ್ 8ರ ಶುಕ್ರವಾರ ಸಪ್ತಮಿಯಂದು ರಥೋತ್ಸವ ಧ್ವಜಾರೋಹಣ ರಾತ್ರಿ 10 ರಿಂದ ಮುಂಜಾನೆ 3 ಗಂಟೆಯ ತನಕ ನಡೆಯಲಿದೆ.

ಏಪ್ರಿಲ್ 9ರ ಶನಿವಾರದಿಂದ ಏಪ್ರಿಲ್ 12ರ ತನಕ ಪ್ರತಿ ದಿನ ವಿಶೇಷ ಪೂಜೆಗಳು ಮತ್ತು ಮಹಾಮಂಗಳಾರತಿ ರಾತ್ರಿ 7.30ರ ತನಕ ನಡೆಯಲಿದೆ.

ಏಪ್ರಿಲ್ 13ರ ಬುಧವಾರ ದ್ವಾದಶಿ ದಿನ ಆರತಿ ದೀಪಗಳು ರಾತ್ರಿ 3 ಗಂಟೆಗೆ ನಡೆಯಲಿವೆ. ಏಪ್ರಿಲ್ 14ರ ಗುರುವಾರ ತ್ರಯೋದಶಿ ದಿನ ಹಸೀ ಕರಗ (ಸಂಪಂಗಿಕೆರೆ ಅಂಗಳದ ಶಕ್ತಿ ಪೀಠದಲ್ಲಿ) ರಾತ್ರಿ 3 ಗಂಟೆಗೆ ನಡೆಯಲಿದೆ.

ಏಪ್ರಿಲ್‌ 16ರ ಶನಿವಾರ ಚೈತ್ರ ಪೂರ್ಣಿಮಾ ದಿನ ಕರಗ ಶಕ್ತ್ಯೋತ್ಸವ ಮತ್ತು ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ರಾತ್ರಿ 12.30 ಗಂಟೆಗೆ ನಡೆಯಲಿದೆ.

ಏಪ್ರಿಲ್ 17ರ ಪಾಡ್ಯಮಿ ಪುರಾಣ ಪ್ರವಚನ (ಶಕ್ತಿಸ್ಥಳ ಏಳು ಸುತ್ತಿನ ಕೋಟೆ) ದೇವಸ್ಥಾನದಲ್ಲಿ ಗಾವು ಶಾಂತಿ ರಾತ್ರಿ 2 ಗಂಟೆಗೆ ಮುಂಜಾನೆ 4 ಗಂಟೆ ತನಕ ನಡೆಯಲಿದೆ.

ಏಪ್ರಿಲ್ 18ರ ಸೋಮವಾರ ಬಿದಿಗೆಯಂದು ವಸಂತೋತ್ಸವ ಧ್ವಜಾರೋಹಣ ಸಂಜೆ 4 ಗಂಟೆಗೆ ಮತ್ತು ರಾತ್ರಿ 12 ಗಂಟೆಗೆ ನಡೆಯಲಿದೆ.

ಬೆಂಗಳೂರು ಕರಗ ಸಂಭ್ರಮ

9 ದಿನಗಳ ಕರಗವನ್ನು ಅನ್ವೇಷಿಸಿ, ತಿಗಳರು ಎಂಬ ತಮಿಳು ಮಾತನಾಡುವ ತೋಟಗಾರರ  ಸಮುದಾಯವು ಪ್ರಾರಂಭಿಸಿದ ಮತ್ತು ಉಳಿಸಿಕೊಂಡ ಸಂಪ್ರದಾಯ. ಕರಗ ಉತ್ಸವವನ್ನು ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ನಡೆಸಲಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ನಡುವಿನ ಕರಗದ ದಿನದಂದು ಮುಸ್ಸಂಜೆಯ ನಂತರ, ಸ್ತ್ರೀ ಉಡುಪನ್ನು ಧರಿಸಿದ ಪೂಜಾರಿಯೊಬ್ಬರು ಹಲವಾರು ಧೋತಿಯುಟ್ಟ, ಬರಿಯ ಎದೆಯ ತಿಗಳರುಗಳಿಂದ ಬೆರಗುಗೊಳಿಸುವ ಕತ್ತಿ ಆಟದ ಪಕ್ಕವಾದ್ಯದಲ್ಲಿ ಅದ್ಭುತ ಮೆರವಣಿಗೆಯನ್ನು ಮುನ್ನಡೆಸುತ್ತಾರೆ. ಕರಗದ ಒಂದು ವಿಶಿಷ್ಟ ಲಕ್ಷಣವೆಂದರೆ 18 ನೇ ಶತಮಾನದ ಮುಸ್ಲಿಂ ಸಂತನ ಸಮಾಧಿಗೆ ಭೇಟಿ ನೀಡುವ ಮುರಿಯಲಾಗದ ಸಂಪ್ರದಾಯ

ಇದನ್ನೂ ಓದಿ: Bengaluru Karaga: ಈ ಬಾರಿ ಅದ್ದೂರಿ ಕರಗ ಆಚರಣೆಗೆ ಪಾಲಿಕೆ ಸಿದ್ಧತೆ

ಇತಿಹಾಸ:

ಮಹಾಭಾರತದ ಸಮಯದಲ್ಲಿ, ಪಂಚ ಪಾಂಡವರ ಪತ್ನಿ ದ್ರೌಪದಿ ಕಿರು ಸೈನ್ಯವನ್ನು ರಚಿಸಲು ಮತ್ತು ರಾಕ್ಷಸ ತಿಮಿರಾಸುರನನ್ನು ಸೋಲಿಸಲು ಹಲವಾರು ವೀರ ಕುಮಾರರನ್ನು ಸೃಷ್ಟಿಸಿದಳು. ಆಕೆಯ ಸಾವಿನ ಸಮಯದಲ್ಲಿ, ಈ ವೀರ ಕುಮಾರರು ದ್ರೌಪದಿಗೆ ಅವರನ್ನು ಬಿಟ್ಟು ಹೋಗದಂತೆ ಬೇಡಿಕೊಂಡರು. ದ್ರೌಪದಿ ಬದಲಿಗೆ ಪ್ರತಿ ವರ್ಷ ಚೈತ್ರ ಮಾಸ (ತಿಂಗಳು) ಹುಣ್ಣಿಮೆಯ ದಿನದಂದು ಹಿಂದಿರುಗುವ ಭರವಸೆ ನೀಡಿದಳು. ಆದಿಶಕ್ತಿ ರೂಪದಲ್ಲಿ ದ್ರೌಪದಿ ಮರಳಿದ್ದನ್ನು ಗುರುತಿಸಲು ಪ್ರತಿ ವರ್ಷ ಕರಗ ಹಬ್ಬವನ್ನು ಆಚರಿಸಲಾಗುತ್ತದೆ.
Published by:Pavana HS
First published: