ಬೆಂಗಳೂರು IISc ಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು 105 ಕೋಟಿ ದೇಣಿಗೆ ನೀಡಿದ ಉದಾರ ಹೃದಯಿ!

ಭಾರತವು ವಿಶ್ವ ದರ್ಜೆಯ ಕೇಂದ್ರವನ್ನು ಹೊಂದುವ ತೀವ್ರ ಅವಶ್ಯಕತೆಯಿದೆ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ರಕ್ಷಣೆಯ ಗುರಿಯನ್ನು ಒದಗಿಸಬೇಕಿದೆ.

ದೇಣಿಗೆ ನೀಡಿದ ಉದಾರ ಹೃದಯಿಗಳು

ದೇಣಿಗೆ ನೀಡಿದ ಉದಾರ ಹೃದಯಿಗಳು

  • Share this:
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc Bengaluru) ಸಾರ್ವಜನಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಸಿಬ್ಬಂದಿ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಯಾದ ಕ್ವೆಸ್ ಕಾರ್ಪ್ (Quess Corp) ಸಂಸ್ಥಾಪಕ ಅಜಿತ್ ಇಸಾಕ್ ಮತ್ತು ಅವರ ಪತ್ನಿ ಸಾರಾ ಐಸಾಕ್ 105 ಕೋಟಿ ದೇಣಿಗೆ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭವಿಷ್ಯದಲ್ಲಿ ಸ್ಥಾಪನೆಯಾಗಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ (Centre for Public Health)  ಅಜಿತ್ ಮತ್ತು ಸಾರಾ ಐಸಾಕ್ ಸೆಂಟರ್ ಫಾರ್ ಪಬ್ಲಿಕ್ ಹೆಲ್ತ್ (ICPH) ಎಂದು ಹೆಸರಿಸಲಾಗುವುದು ಎಂದು IISc ಮಾರ್ಚ್ 17 ರಂದು ಘೋಷಿಸಿದೆ.

ಸಾರ್ವಜನಿಕ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಲು ಮೈಂಡ್‌ಟ್ರೀ ಸಹ ಸ್ಥಾಪಕರು 425 ಕೋಟಿ ದೇಣಿಗೆ ನೀಡಿದ ಒಂದು ತಿಂಗಳ ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಇನ್ನೋರ್ವ ಮಹಾದಾನಿಯೋರ್ವರು ದೇಣಿಗೆ ನೀಡಿದ್ದಾರೆ. ಈಮುನ್ನ ಮೈಂಡ್‌ಟ್ರೀ ಸಹ ಸಂಸ್ಥಾಪಕರಾದ ಸುಬ್ರೊತೋ ಬಾಗ್ಚಿ ಮತ್ತು ಎನ್.ಎಸ್. ಪಾರ್ಥಸಾರಥಿ ಸ್ನಾತಕೋತ್ತರ ವೈದ್ಯಕೀಯ ಶಾಲೆಯ ಜೊತೆಗೆ 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು IISc ಗೆ ರೂ.425 ಕೋಟಿ ದೇಣಿಗೆ ನೀಡಿದ್ದರು.‘

2024 ರಲ್ಲಿ ಆರಂಭ!
ಸಾರ್ವಜನಿಕ ಆರೋಗ್ಯ ಕೇಂದ್ರವು 2024 ರ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಅಲ್ಲದೇ ಈ ಕೇಂದ್ರವು ಹೊಸ ಚಿಕಿತ್ಸಾ ಪದ್ಧತಿ ಮತ್ತು ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕ್ಲಿನಿಕಲ್ ಸಂಶೋಧನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಆಕಾಂಕ್ಷಿಗಳನ್ನು ಪ್ರೋತ್ಸಾಹಿಸುವ ನಿರೀಕ್ಷೆಯಿದೆ.

ಹೊಸ ಕೇಂದ್ರವು ಶೀಘ್ರದಲ್ಲೇ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾಗುವ ಸ್ನಾತಕೋತ್ತರ ವೈದ್ಯಕೀಯ ಶಾಲೆಯ ಭಾಗವಾಗಲಿದೆ ಎಂದು ವರದಿಯಾಗಿದೆ. ಭಾರತವು ವಿಶ್ವ ದರ್ಜೆಯ ಕೇಂದ್ರವನ್ನು ಹೊಂದುವ ತೀವ್ರ ಅವಶ್ಯಕತೆಯಿದೆ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ರಕ್ಷಣೆಯ ಗುರಿಯನ್ನು ಒದಗಿಸಬೇಕಿದೆ.

ಪರಸ್ಪರ ಸಂವಹನ
ಈ ನಿಟ್ಟಿನಲ್ಲಿ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸಾಧ್ಯವಾಗುವಂತೆ ಸಾರ್ವಜನಿಕ ಆರೋಗ್ಯದಲ್ಲಿ ಕ್ಲಿನಿಕಲ್ ಮತ್ತು ಶೈಕ್ಷಣಿಕ ಸಂಶೋಧನೆಗಾಗಿ ಉದ್ದೇಶಿತ ಕೇಂದ್ರವನ್ನು ರೂಪಿಸಲಾಗುವುದು.

IISc ವೈದ್ಯಕೀಯ ಶಾಲೆಯ ಎಲ್ಲಾ ವಿಭಾಗಗಳ ನಡುವೆ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಇತರ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಗಳ ನಡುವೆ ಸಾರ್ವಜನಿಕ ಆರೋಗ್ಯ ಸಂಶೋಧನೆಯ ಸಂದರ್ಭದಲ್ಲಿ ಈ ಕೇಂದ್ರವು ಪರಸ್ಪರ ಸಂವಹನ ಸಾಧಿಸಲಿದೆ ಎಂದು IISc ನಿರ್ದೇಶಕ ಗೋವಿಂದನ್ ರಂಗರಾಜನ್ ಹೇಳಿದ್ದಾರೆ.

ಇದನ್ನೂ ಓದಿ:  ಬೆಂಗಳೂರಲ್ಲಿ 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು IIScಗೆ 425 ಕೋಟಿ ದೇಣಿಗೆ

ಕೇಂದ್ರವು MPH-PhD ಮತ್ತು MPH-MTech ನಂತಹ (ಸಂಶೋಧನೆ) ಉಭಯ ಪದವಿಗಳನ್ನು ಒದಗಿಸಲಿದೆ. ಬಯೋ ಸರ್ವೈವಲೆನ್ಸ್, ಡಿಜಿಟಲ್ ಆರೋಗ್ಯ ಮತ್ತು ಮೊಬೈಲ್ ಆಧಾರಿತ ಡಯಾಗ್ನೋಸ್ಟಿಕ್ಸ್ ಸೇರಿದಂತೆ ಸಾರ್ವಜನಿಕ ಆರೋಗ್ಯದಲ್ಲಿ ಪರಿಣಾಮಕಾರಿ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲು ಈ ಆರೋಗ್ಯ ಕೇಂದ್ರ ಹಣಕಾಸಿನ ಸಹಕಾರ ಒದಗಿಸಲಿದೆ.

ದತ್ತಾಂಶ ವಿಜ್ಞಾನ ಮತ್ತು ವಿಶ್ಲೇಷಣೆ
IISc ನಲ್ಲಿ ಅಸ್ತಿತ್ವದಲ್ಲಿರುವ ವಿಶ್ವ ದರ್ಜೆಯ ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಸೈನ್ಸ್ ವಿಭಾಗಗಳೊಂದಿಗೆ ನಿಕಟ ಸಹಯೋಗದ ಮೂಲಕ ಹೊಸ ಆರೋಗ್ಯ ಕೇಂದ್ರವು ಆರೋಗ್ಯ ದತ್ತಾಂಶ ವಿಜ್ಞಾನ ಮತ್ತು ವಿಶ್ಲೇಷಣೆ ನಡೆಸಲಿದೆ.

ಇದನ್ನೂ ಓದಿ: Drone ಖರೀದಿಗೆ ಕೇಂದ್ರ ಸರ್ಕಾರದಿಂದ 5 ಲಕ್ಷದವರೆಗೂ ಆರ್ಥಿಕ ನೆರವು! ವಿವರ ತಿಳಿಯಿರಿ

ಉದಾರ ದೇಣಿಗೆ ನೀಡಿದ ಅಜಿತ್ ಇಸಾಕ್ ಮತ್ತು ಅವರ ಪತ್ನಿ ಸಾರಾ ಐಸಾಕ್ ಅವರಂತಹ ಪರೋಪಕಾರಿ ನಾಯಕರ ಕೊಡುಗೆಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ಅವರ ಆಕಾಂಕ್ಷೆಗಳು ನಮ್ಮ ಗುರಿಗಳು ಜೊತೆಯಾಗಿ ಯಶಸ್ಸಿನತ್ತ ಹೆಜ್ಜೆ ಇಡುತ್ತವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಕ್ತಾರರೊಬ್ಬರು ಧನ್ಯವಾದ ಅರ್ಪಿಸಿದ್ದಾರೆ.
Published by:guruganesh bhat
First published: