Ice Cream Stick Idli: ಐಸ್​ ಕ್ರೀಂ ಕಡ್ಡಿಯಲ್ಲಿ ಇಡ್ಲಿ ತಿಂದಿದ್ದೀರಾ? ಬೆಂಗಳೂರಿನ ಹೋಟೆಲ್​ವೊಂದರ ವಿನೂತನ ಪ್ರಯೋಗ.. ಫೋಟೋ ವೈರಲ್​!

Viral News: ಟ್ವಿಟರ್ ಬಳಕೆದಾರರಾದ BrotherToGod ಎನ್ನುವವರು ಈ  ವಿಲಕ್ಷಣ  ಇಡ್ಲಿಯ ತಟ್ಟೆಯ ಫೋಟೋವನ್ನು  ತಮ್ಮ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಕಡ್ಡಿಗಳ ಮೇಲೆ ಮೂರು ಇಡ್ಲಿಗಳನ್ನು ತಟ್ಟೆಯಲ್ಲಿ ನೀಡಲಾಗಿದೆ.

ಐಸ್​ ಕ್ರೀಂ ಸ್ಟಿಕ್ ಇಡ್ಲಿ

ಐಸ್​ ಕ್ರೀಂ ಸ್ಟಿಕ್ ಇಡ್ಲಿ

  • Share this:
ಆಹಾರ (Food)ಪದಾರ್ಥಗಳನ್ನು ವಿಭಿನ್ನವಾಗಿ ನೀಡಿದಾಗ ಜನರು ಇಷ್ಟಪಡುವುದು ಸಾಮಾನ್ಯ. ಇದೇ ಕಾರಣಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ಮಾಡುವ ಅಡುಗೆಯನ್ನು ಹೋಟೆಲ್​ಗಳಲ್ಲಿ(Hotel) ವಿಚಿತ್ರವಾಗಿ ನೀಡುತ್ತಾರೆ. ಆಹಾರ ಪ್ರಪಂಚದಲ್ಲಿ  ಹೊಸತನ ಬಹಳ  ಮುಂದುವರೆದಿದೆ ಎಂದರೆ ತಪ್ಪಾಗಲಾರದು. ಇದರ ನಡುವೆ ಕೆಲವು ವಿಲಕ್ಷಣ ಆಹಾರ ಪ್ರಯತ್ನಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲ ನೆಟ್ಟಿಗರ ಕೋಪಕ್ಕೂ ಗುರಿಯಾಗಿದೆ. ಒಂದು ವಿಭಿನ್ನ ವಿಚಾರ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುವುದು ಸಹಜ. ಹಾಗೆಯೆ ಇಡ್ಲಿಯನ್ನು ಐಸ್ ಕ್ರೀಂ ಕಡ್ಡಿಯಲ್ಲಿ(Ice Cream Stick Idli) ನೀಡುತ್ತಿರುವ ಬೆಂಗಳೂರಿನ ರೆಸ್ಟೋರೆಂಟ್​ನ ಈ ಪ್ರಯತ್ನ ಕೂಡ ಇದೀಗ ಸುದ್ದಿಯಲ್ಲಿದೆ. 

ಟ್ವಿಟರ್ ಬಳಕೆದಾರರಾದ BrotherToGod ಎನ್ನುವವರು ಈ  ವಿಲಕ್ಷಣ  ಇಡ್ಲಿಯ ತಟ್ಟೆಯ ಫೋಟೋವನ್ನು  ತಮ್ಮ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಕಡ್ಡಿಗಳ ಮೇಲೆ ಮೂರು ಇಡ್ಲಿಗಳನ್ನು ತಟ್ಟೆಯಲ್ಲಿ ನೀಡಲಾಗಿದ್ದು,  ಇನ್ನೊಂದು ಇಡ್ಲಿಯನ್ನು ಸಾಂಬಾರ್  ಬಟ್ಟಲಿನಲ್ಲಿ ಅದ್ದಿಡಲಾಗುತ್ತದೆ. ಪಕ್ಕದಲ್ಲಿ ಸಾಮಾನ್ಯ ತೆಂಗಿನ ಚಟ್ನಿ ಕೂಡ ನೀಡಲಾಗಿದೆ.

ಈ ಐಸ್ ಕ್ರೀಂ ಕಡ್ಡಿಯ ಇಡ್ಲಿಯು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನರ ಗಮನ ಸೆಳೆದಿದ್ದು ಮಾತ್ರವಲ್ಲದೇ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಈ ಕಲ್ಪನೆಯನ್ನು ಇಷ್ಟಪಟ್ಟರೆ ಇನ್ನು ಕೆಲವರು ಈ ಪ್ರಯೋಗದ ವಿರುದ್ಧ ಕಿಡಿಕಾರಿದ್ದಾರೆ.  ಈ ಫೋಟೋಗೆ ಕಾಮೆಂಟ್ ಮಾಡಿರುವ ಕೆಲವರು ಕ್ರಿಯೆಟಿವಿಟಿ ಚನ್ನಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ಇದನ್ನು ಶೇರ್ ಮಾಡಿಕೊಂಡಿದ್ದು, ಈ ಪ್ರಯತ್ನದ ವಿರುದ್ಧ ಕಿಡಿ ಕಾರಿದ್ದಾರೆ.

ಒಬ್ಬರು ದೇಶದಲ್ಲಿ ಮರಗಳನ್ನು ಉಳಿಸಲು ಒಂದೆಡೆ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಐಸ್​ ಕ್ರೀಂ ಕಡ್ಡಿಗಳನ್ನು ಬಳಸುವ ಮೂಲಕ ಪರಿಸರಕ್ಕೆ ಹೆಚ್ಚು ಹಾನಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಮತ್ತೊಬ್ಬರು ದೋಸೆಯನ್ನು ಹೀಗೆ ಪ್ರಯೋಗಗಳ ಮೂಲಕ ಹಾಳು ಮಾಡಲಾಗಿದೆ, ಇದೀಗ ಇಡ್ಲಿಯನ್ನು ಸಹ ಹಾಳು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.ಆಗಸ್ಟ್‌ನಲ್ಲಿ  ಒಂದು ಹೋಟೆಲ್​ನಲ್ಲಿ  ಫಾಂಟಾ ಪಾನೀಯವನ್ನು ಸೇರಿಸಿ  ಆಮ್ಲೆಟ್ ಮಾಡುವ ವಿಡಿಯೋವನ್ನು ಟ್ವಿಟರ್‌ನಲ್ಲಿ  ಹಾಕಿದ್ದರು, ಇದು ನಿಜಕ್ಕೂ ನೆಟ್ಟಿಗರ ಕೋಪಕ್ಕೆ ಗುರಿಯಾಗಿತ್ತು. @Agabaai ಹೆಸರಿನ ಬಳಕೆದಾರರು ಗುಜರಾತ್‌ನ ಸೂರತ್‌ನಲ್ಲಿರುವ ಒಂದು  ಹೋಟೆಲ್​ನಲ್ಲಿ ಫಾಂಟಾ ಆಮ್ಲೆಟ್ ಎಂಬ ವಿಶೇಷ ಮೊಟ್ಟೆಯ ಖಾದ್ಯವನ್ನು ತಯಾರಿಸುವ  ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಭಾರತದ ಈಟ್ ಮಾಮಾ ಲಾಂಛನದೊಂದಿಗೆ  ಇದನ್ನು ಸ್ಟ್ಯಾಂಪ್ ಮಾಡಲಾಗಿದ್ದು, ಅಡುಗೆಯವರು  ಈ ಆಹಾರ ಪದಾರ್ಥವನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

ಎರಡೂವರೆ ನಿಮಿಷದ ವಿಡಿಯೋಗೆ ನೆಟ್ಟಿಗರು ವಿಭಿನ್ನ ರೀತಿಯ ಕಾಮೆಂಟ್ ಮಾಡುವ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ವಿಡಿಯೋವನ್ನು 1 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದು, 2000 ಕ್ಕಿಂತಲೂ ಹೆಚ್ಚು ಲೈಕ್‌ಗಳು ಮತ್ತು ನೂರಾರು ಕಾಮೆಂಟ್‌ಗಳು ಬಂದಿವೆ.
Published by:Sandhya M
First published: