ರಸ್ತೆಗಳು ಖಾಲಿ ಇದ್ದಾಗಲೇ ಅಪಘಾತಗಳು ಹೆಚ್ಚು; Bengaluru Accidents ಹಿಂದಿನ ಕಾರಣ ನಿಜಕ್ಕೂ ದುಃಖಕರ

ನಗರದಲ್ಲಿ ಹೆಚ್ಚಿನ ಅಪಘಾತಗಳು ಯಲಹಂಕ, ಚಿಕ್ಕಜಾಲ, ಕೆಆರ್ ಪುರಂ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಸಿಆರ್‌ಬಿ (NCRB) ಅಂಕಿಅಂಶಗಳ ಪ್ರಕಾರ, 596 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, 2650 ಜನರು ಅತಿಯಾದ ವೇಗದಿಂದ ಗಾಯಗೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿ (NCRB-National Crime Record Bureau) ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿರುವ 89 ಪ್ರಮುಖ ನಗರಗಳಲ್ಲಿ ಅತಿ ವೇಗದ ಚಾಲನೆಯಿಂದ ಉಂಟಾಗಿರುವ ಅಪಘಾತ (Accidents) ಪ್ರಕರಣಗಳಲ್ಲಿ ಬೆಂಗಳೂರು (Bengaluru) ನಗರ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ ಎಂದು ತಿಳಿಸಿದೆ. NCRB ಉಲ್ಲೇಖಿಸಿರುವ ಅಂಕಿ ಅಂಶಗಳ ಪ್ರಕಾರ, ಅತಿವೇಗದಿಂದ ಸರಿಸುಮಾರು 2993 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ. ಸಾಂಕ್ರಾಮಿಕ ಹಾಗೂ ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗಳ (pandemic and nationwide lockdown) ಪರಿಣಾಮದಿಂದ ಹೆಚ್ಚಿನ ಪ್ರಯಾಣಿಕರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. 2018ರ ಅಂಕಿ ಅಂಶಗಳನ್ನು ನೋಡುವುದಾದರೆ ನಗರದಲ್ಲಿ 4289 ಅಪಘಾತ ಪ್ರಕರಣಗಳು ದಾಖಲಾಗಿದ್ದು 2019ರಲ್ಲಿ ಈ ಸಂಖ್ಯೆ 4134 ಎಂಬುದಾಗಿ ವರದಿಯಾಗಿದೆ ಎಂದು NCRB ಡೇಟಾ ಬಹಿರಂಗಪಡಿಸಿದೆ.

  ಅತಿವೇಗವೇ ಹೆಚ್ಚಿನ ಅಪಘಾತಗಳಿಗೆ ಕಾರಣ 

  ನಗರದಲ್ಲಿ ಹೆಚ್ಚಿನ ಅಪಘಾತಗಳು ಯಲಹಂಕ, ಚಿಕ್ಕಜಾಲ, ಕೆಆರ್ ಪುರಂ ಮತ್ತು ಎಲೆಕ್ಟ್ರಾನಿಕ್ ಸಿಟಿಯಿಂದ ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಸಿಆರ್‌ಬಿ (NCRB) ಅಂಕಿಅಂಶಗಳ ಪ್ರಕಾರ, 596 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದರೆ, 2650 ಜನರು ಅತಿಯಾದ ವೇಗದಿಂದ ಗಾಯಗೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಭಾರತದಲ್ಲಿರುವ ಅತ್ಯಂತ ಹೆಚ್ಚಿನ ದಟ್ಟಣೆ (ಟ್ರಾಫಿಕ್) ನಗರಗಳಲ್ಲಿ ಒಂದೆನಿಸಿರುವ ಬೆಂಗಳೂರಿನಲ್ಲಿ ಕಚೇರಿ ಸಮಯಗಳಲ್ಲಿ ವಾಹನಗಳ ಚಾಲನೆಯ ವೇಗ ಗಂಟೆಗೆ 10 ಕಿಮೀಗಿಂತ ಕಡಿಮೆಯಿರುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

  ಟ್ರಾಫಿಕ್​ ಕಡಿಮೆ ಇರುವಾಗಲೇ ಅಪಘಾತ ಹೆಚ್ಚು

  ತಜ್ಞರು ನೀಡಿರುವ ಮಾಹಿತಿಗಳ ಪ್ರಕಾರ ನಗರದಲ್ಲಿ ಹೆಚ್ಚಿನ ಅಪಘಾತಗಳು ಟ್ರಾಫಿಕ್ ಕಡಿಮೆ ಇರುವ ಸಮಯಗಳಲ್ಲಿ ಅಂದರೆ ಮುಂಜಾನೆ ಅಥವಾ ತಡರಾತ್ರಿಯಲ್ಲಿಯೇ ಹೆಚ್ಚಾಗಿ ಸಂಭವಿಸುತ್ತವೆ. ಈ ಸಮಯದಲ್ಲಿ ಜನರು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ ಹಾಗೂ ಚಾಲನೆ ನಡೆಸುವಾಗ ತಪ್ಪುಗಳನ್ನು ಎಸಗುತ್ತಾರೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: Bengaluru Accident: ಚಲಿಸುತ್ತಿದ್ದ ವೋಲ್ವೋ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು: ಓರ್ವ ಸಾವು

  ಇತರೆ ನಗರಗಳ ಅಪಘಾತ ಪ್ರಮಾಣ 

  ಅತಿವೇಗದ ಚಾಲನೆಗಳ ಅಪಘಾತ ಪ್ರಕರಣಗಳಲ್ಲಿ ಹೈದ್ರಾಬಾದ್ ಕೂಡ 1785 ಪ್ರಕರಣಗಳನ್ನು ವರದಿ ಮಾಡಿದ್ದು ದೆಹಲಿಯಲ್ಲಿ ಈ ಸಂಖ್ಯೆ 1493 ಎಂದು NCRB ಅಂಕಿ ಅಂಶಗಳು ತೋರಿಸಿವೆ. ಮಧ್ಯಪ್ರದೇಶದ ಜಬಲ್‌ಪುರ್ ಹಾಗೂ ಕೇರಳದ ಕೊಲ್ಲಂ ಮತ್ತು ತ್ರಿಶೂರ್ ಎರಡನೇ ಹಂತದ ನಗರಗಳಾಗಿದ್ದು ಇಲ್ಲಿ ದಾಖಲಾಗಿರುವ ಅಪಘಾತ ಪ್ರಕರಣಗಳ ಅಂಕಿಅಂಶಗಳನ್ನು NCRB ವರದಿ ಉಲ್ಲೇಖಿಸಿದೆ. ಅತಿವೇಗದ ಚಾಲನೆಯಿಂದ ಈ ನಗರಗಳಲ್ಲಿ 1000ಕ್ಕೂ ಹೆಚ್ಚಿನ ಅಪಘಾತಗಳು ಸಂಭವಿಸಿವೆ ಎಂದು ವರದಿ ತಿಳಿಸಿದೆ.

  ನಿಧಾನ ಬೆಂಗಳೂರಿಗರೇ.. 

  2020ರಲ್ಲಿ ಕರ್ನಾಟಕವು ಅತಿವೇಗದ ಚಾಲನೆಯ ಕಾರಣದಿಂದ 27,000ಕ್ಕೂ ಹೆಚ್ಚಿನ ಅಪಘಾತ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳಲ್ಲಿ 7,809 ಮಂದಿ ಪ್ರಾಣ ಕಳೆದುಕೊಂಡಿದ್ದು 31,190 ಮಂದಿ ಗಾಯಗೊಂಡಿದ್ದಾರೆ. ಇನ್ನು ಹೆಚ್ಚುತ್ತಿರುವ ಅಪಘಾತಗಳು ಹಾಗೂ ಅತಿವೇಗದ ಚಾಲನೆಯ ಕುರಿತಂತೆ ಟ್ರಾಫಿಕ್ ತಜ್ಞ ಹಾಗೂ ಸರಕಾರದ ಮಾಹಿತಿ ಸಲಹೆಗಾರ ಎಮ್‌ಎನ್ ಶ್ರೀಹರಿ ಸುದ್ದಿಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಯುವಕರು ಅತಿವೇಗದ ಚಾಲನೆ ಮಾಡಿ ಅಪಘಾತಗಳನ್ನುಂಟು ಮಾಡುತ್ತಿದ್ದಾರೆ ಹಾಗೂ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದೇ ಇರುವುದು ಹಾಗೂ ಚಾಲನೆಯ ನಿರ್ದೇಶನಗಳನ್ನು ಪಾಲಿಸದೇ ಇರುವುದರಿಂದ ಮರಣ ಹಾಗೂ ಗಾಯಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.
  Published by:Kavya V
  First published: