Good News: ಹೆಬ್ಬಾಳ ಜಂಕ್ಷನ್‌ನಲ್ಲಿ Traffic ಕಡಿಮೆ ಮಾಡಲು ಸಿದ್ಧವಾಗ್ತಿದೆ ಹೊಸ Plan‌

ಬೆಂಗಳೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆಯ ಪಶ್ಚಿಮಕ್ಕೆ 4 ಪಥದ ಮೇಲ್ಸೇತುವೆ ಹಾಗು ಈ ಪಥದ 3 ಮೇಲ್ಸೇತುವೆಗಳು ವಿಮಾನ ನಿಲ್ದಾಣದ ಕಡೆಗೆ ಮುಂದುವರಿಯುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (Bangalore) ಇಂದು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ನಗರವಾಗಿದ್ದು, ಅದಕ್ಕೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದು ನಮ್ಮ ಸರ್ಕಾರದ (State Government) ಆದ್ಯತೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ ಅದು ಟ್ರಾಫಿಕ್(Traffic). ಹೆಬ್ಬಾಳ ಜಂಕ್ಷನ್, ಸಿಲ್ಕ್ ಬೋರ್ಡ್ ಸೇರಿ ಇನ್ನು ಹಲವೆಡೆ ವಾಹನ ದಟ್ಟಣೆ ಸಮಸ್ಯೆ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ. ಸಿಲ್ಕ್ ಬೋರ್ಡ್‌ನಲ್ಲಿ ಕೊಂಚ ಟ್ರಾಫಿಕ್ ಫ್ರೀ ಆಗಿದ್ದು, ಈಗ ಹೆಬ್ಬಾಳ ಜಂಕ್ಷನ್‌ನಲ್ಲಿ (Hebbal Junction) ಸಂಚಾರ ದಟ್ಟಣೆ ತಪ್ಪಿಸಲು ರಾಜ್ಯ ಸರ್ಕಾರ ವಿಶೇಷ ಯೋಜನೆ ಹಾಕಿಕೊಂಡಿದೆ. ಹೆಬ್ಬಾಳ ಜಂಕ್ಷನ್ ಸೇರಿ ಒಟ್ಟಾರೆ ನಗರ ಅಭಿವೃದ್ಧಿಗೆ ಬಿಬಿಎಂಪಿಗೆ 6,000 ಕೋಟಿ ರೂ. ಅನುದಾನ ನೀಡುವ ಬಗ್ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ವಿಶೇಷ ಅನುದಾನದ ಮೂಲಕ ಅಭಿವೃದ್ಧಿ ಕಾರ್ಯ
ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಬೃಹತ ಬೆಂಗಳೂರು ಮಹಾನಗರ ಪಾಲಿಕೆಗೆ 6000 ಕೋಟಿ ರೂ. ಅನುದಾನವನ್ನು ಮಂಜೂರು ಮಾಡುವ ಪ್ರಸ್ತಾಪಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮುಂದಿನ 3 ವರ್ಷಗಳ ಅವಧಿಯಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಪ್ರತಿ ವರ್ಷ ಬಿಬಿಎಂಪಿಗೆ ತಲಾ 2000 ಕೋಟಿ ರೂ. ವಿಶೇಷ ಅನುದಾನ ಒದಗಿಸಲಾಗುವುದು ಎಂದಿದ್ದಾರೆ. ಈ ವಿಶೇಷ ಅನುದಾನದ ಮೂಲಕ ಬಿಬಿಎಂಪಿ ಬೆಂಗಳೂರು ನಗರ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ: Karwar: ಫ್ಲೈ ಓವರ್ ಕಾಮಗಾರಿ: ಸುರಕ್ಷತಾ ಸಾಧನಗಳನ್ನ ಧರಿಸದೇ ಕಾರ್ಮಿಕರ ಕೆಲಸ

ಅತಿಯಾದ ಸಂಚಾರ ದಟ್ಟಣೆ ಹೊಂದಿರುವ ಹೆಬ್ಬಾಳ ಜಂಕ್ಷನ್ ಸುಧಾರಣೆ ಮತ್ತು ರೈಲು ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಜಾರಿಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಯೋಜನೆಯ ಮೊದಲ ಹಂತದ ವಿನ್ಯಾಸವನ್ನು ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದ್ದು ವಿಸ್ಕೃತ ಯೋಜನಾ ವರದಿ ಸಿದ್ಧಪಡಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಸಮಸ್ಯೆ
ಹೆಬ್ಬಾಳ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಮೀತಿಮೀರಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ. ಸಂಚಾರ ದಟ್ಟಣೆಯಿಂದ ಮುಕ್ತಿ ಪಡೆಯಲು ಸರ್ಕಾರ ಪ್ಲಾನ್ ರೂಪಿಸಿದೆ. ಕೆ.ಆರ್ ಪುರಂ ಮತ್ತು ತುಮಕೂರು ರಸ್ತೆಗಳಲ್ಲಿ ಸಿಗ್ನಲ್ ಇರುವುದರಿಂದ ಅಲ್ಲಿಯೂ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಅಲ್ಲದೆ ಹೆಬ್ಬಾಳ ಜಂಕ್ಷನ್ ತುಂಬಾ ಜನನಿಬಿಡ ಸ್ಥಳ. ಸಂಚಾರ ದಟ್ಟಣೆಯಿಂದಾಗಿ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳು ಮತ್ತು ಹಿಂದಿರುಗಲು ಕೂಡ ವಿಳಂಬವಾಗುತ್ತಿದೆ. ಹೀಗಾಗಿ ಸಂಚಾರ ಸುಗಮಗೊಳಿಸಲು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ದೂರದೃಷ್ಟಿ ಯೋಜನೆಯನ್ನು ಸರ್ಕಾರ ರೂಪಿಸಿದೆ.

ವೀಲಿನಗೊಂಡು ಚತುಷ್ಟ ಪಥ
ಬೆಂಗಳೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆಯ ಪಶ್ಚಿಮಕ್ಕೆ 4 ಪಥದ ಮೇಲ್ಸೇತುವೆ ಹಾಗು ಈ ಪಥದ 3 ಮೇಲ್ಸೇತುವೆಗಳು ವಿಮಾನ ನಿಲ್ದಾಣದ ಕಡೆಗೆ ಮುಂದುವರಿಯುತ್ತವೆ. 2 ಪಥಗಳು ತುಮಕೂರು ಕಡೆಗೆ ಹೋಗಲಿದೆ. ತುಮಕೂರಿನಿಂದ ಕೆ.ಆರ್. ಪುರಂಗೆ ಹೊಸ 3 ಪಥದ ಕೆಳಸೇತುವೆ, ಕೆ.ಆರ್. ಪುರಂನಿಂದ ನಗರಕ್ಕೆ ಹೊಸ 2 ಪಥದ ಮೇಲ್ಸೇತುವೆ ಹೀಗೆ ಇನ್ನು ಕೆಲವು ಮೇಲ್ಸೇತುವೆ ಹೊಸ ಪ್ಲೈಓವರ್‌ನಲ್ಲಿ ವೀಲಿನಗೊಂಡು ಚತುಷ್ಟ ಪಥ ಆಗಲಿದೆ.

ಇದನ್ನೂ ಓದಿ: Namma Metro: ಫ್ಲೈಓವರ್ ಬಂದ್‌ ಆಗಿದ್ದಕ್ಕೆ ಪ್ರಯಾಣಿಕರಿಗಾಗಿ ನಾಗಸಂದ್ರ ಮೆಟ್ರೋ ‘ಬಿ’ ಎಂಟ್ರಿ ಓಪನ್

ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ, ಬಿಎಂಟಿಸಿ, ಬೆಸ್ಕಾಂ, ಬೆಂಗಳೂರು ಜಲ ಮಂಡಳಿ ಮತ್ತು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿಗಳು ಒಟ್ಟಿಗೆ ಚರ್ಚಿಸಿ ಯೋಜನೆ ರೂಪಿಸಿವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
Published by:vanithasanjevani vanithasanjevani
First published: