Bengaluru Gangrape: ಗ್ಯಾಂಗ್​ರೇಪ್​ ಸಂತ್ರಸ್ತೆಯನ್ನು ಇಂದು ಕೋರ್ಟ್​ ಮುಂದೆ ಹಾಜರುಪಡಿಸಲಿರುವ ಪೊಲೀಸರು

ಆರೋಪಿಗಳ ಸಂಪರ್ಕದಲ್ಲಿದ್ದ ಕೆಲ ಯುವಕ-ಯುವತಿಯರನ್ನು ಪೊಲೀಸರು ಇಂದೂ ಸಹ ವಿಚಾರಣೆಗೆ ಕರೆದಿದ್ದಾರೆ. ಪ್ರಮುಖ ಆರೋಪಿತೆಗಾಗಿ ರಾಮಮೂರ್ತಿನಗರ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು(ಮೇ 31): ಬಾಂಗ್ಲಾದೇಶ ಯುವತಿ ಮೇಲಿನ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಸಂತ್ರಸ್ತೆಯನ್ನು ಕೋರ್ಟ್ ಮುಂದೆ​​  ಹಾಜರುಪಡಿಸಲಿದ್ದಾರೆ. ಸಿಆರ್​ಪಿಸಿ 164 ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಸಂತ್ರಸ್ತೆ ಈಗಾಗಲೇ ತನಿಖಾಧಿಕಾರಿಯ ಮುಂದೆ ಸಿಆರ್​ಪಿಸಿ 161 ಅಡಿ ಹೇಳಿಕೆಗಳನ್ನು ನೀಡಿದ್ದಾಳೆ. ಜೊತೆಗೆ ಆರೋಪಿಗಳನ್ನು ಗುರುತಿಸಿ ಘಟನೆಗೆ ಕಾರಣವಾದ ಮಾಹಿತಿಯನ್ನು ತನಿಖಾಧಿಕಾರಿಯ ಮುಂದೆ ವಿವರಿಸಿದ್ದಾಳೆ. ಪೊಲೀಸರು ಈಗಾಗಲೇ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಿದ್ದಾರೆ.

  ಹಣಕಾಸಿನ ವಿಚಾರಕ್ಕಾಗಿಯೇ ದೌರ್ಜನ್ಯ ಮಾಡಲಾಗಿದೆ ಎಂದು ಸಂತ್ರಸ್ತ ಯುವತಿ(28 ವರ್ಷ) ನಿನ್ನೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಘಟನೆ ನಡೆದ ಸಂದರ್ಭದಲ್ಲಿ ಓರ್ವ ಯುವತಿ ಸಹ ಇದ್ದಳು ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾಳೆ. ಸಂತ್ರಸ್ತೆಯ ಹೇಳಿಕೆ ಪಡೆದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿಯ ಹುಡುಕಾಟ ನಡೆಸುತ್ತಿದ್ದಾರೆ. ಜೊತೆಗೆ ಸಂಪರ್ಕದಲ್ಲಿದ್ದ ಸ್ನೇಹಿತರ ತೀವ್ರ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

  ಆರೋಪಿಗಳ ಸಂಪರ್ಕದಲ್ಲಿದ್ದ ಕೆಲ ಯುವಕ-ಯುವತಿಯರನ್ನು ಪೊಲೀಸರು ಇಂದೂ ಸಹ ವಿಚಾರಣೆಗೆ ಕರೆದಿದ್ದಾರೆ. ಪ್ರಮುಖ ಆರೋಪಿತೆಗಾಗಿ ರಾಮಮೂರ್ತಿನಗರ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

  ಇದನ್ನೂ ಓದಿ:Astrology: ಕನ್ಯಾರಾಶಿಯವರಿಗೆ ಇಂದು ಶುಭದಿನ; ಇಲ್ಲಿದೆ ಈ ದಿನದ ದ್ವಾದಶ ರಾಶಿ ಭವಿಷ್ಯ..!

  ಘಟನೆ ನಡೆದ ಬಳಿಕ ಯುವತಿ ತನ್ನ ಬಾಯ್​ಫ್ರೆಂಡ್​ ಜೊತೆ ಎಲ್ಲವನ್ನೂ ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಆಗ ಆತ ನೀನು ಬೆಂಗಳೂರಿನಲ್ಲಿರುವುದು ಬೇಡ, ಕೇರಳಕ್ಕೆ ಬಾ ಎಂದು ಹೇಳಿದ್ದನು. ಹೀಗಾಗಿ ಘಟನೆ ನಡೆದ ಮರುದಿನವೇ ಯುವತಿ ಕೇರಳಕ್ಕೆ ತೆರಳಿದ್ದಳು. ಬಳಿಕ ಪೊಲೀಸರು ಯುವತಿಯನ್ನು ಪತ್ತೆಹಚ್ಚಿ ಕೇರಳದಿಂದ ಬೆಂಗಳೂರಿಗೆ ಕರೆತಂದಿದ್ದರು.

  ಯುವತಿ ತನಗೆ ಕುಟುಂಬಸ್ಥರಿಲ್ಲ, ಪೋಷಕರಿಲ್ಲ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಈ ಹಿಂದೆ ದುಬೈನಲ್ಲಿ ಕೆಲಸ ಮಾಡ್ತಿದ್ದು, ಡ್ಯಾನ್ಸರ್ ಸಹ ಆಗಿದ್ದೆ ಎಂದು ಹೇಳಿದ್ದಾಳೆ. ಆ ಬಳಿಕ ಆರೋಪಿಗಳ ಸಂಪರ್ಕ ಬೆಳೆದು ಢಾಕಾದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಬಗ್ಗೆ ಯುವತಿ ಸ್ಪಷ್ಟನೆ ನೀಡಿದ್ದಾಳೆ.

  ಇದನ್ನೂ ಓದಿ:Lockdown: ಕರ್ನಾಟಕ ಸೇರಿ ಯಾವ ರಾಜ್ಯಗಳಲ್ಲಿ ಲಾಕ್​ಡೌನ್ ಜಾರಿಯಲ್ಲಿದೆ?; ಇಲ್ಲಿದೆ ಪೂರ್ತಿ ಮಾಹಿತಿ

  ಆರೋಪಿಗಳು ಯುವತಿ ಮೇಲಿನ ದ್ವೇಷಕ್ಕೆ ಆಕೆಯ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಚಿತ್ರೀಕರಿಸಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಅಸ್ಸಾಂ ರಾಜ್ಯದ ಪೊಲೀಸರಿಂದಲೂ ವಿಡಿಯೋ ಕುರಿತಾಗಿ ತನಿಖೆ ನಡೆದಿತ್ತು. ಕೃತ್ಯದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಭಾಗಿಯಾರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಬಾಂಗ್ಲಾ ದೇಶದ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ಥೆ ಕುಟುಂಬದ ಸದಸ್ಯರನ್ನು ಪತ್ತೆಮಾಡಿದ್ದರು. ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ಬಾಂಗ್ಲಾ ಪೊಲೀಸರು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ ಗೆ ಮಾಹಿತಿ ನೀಡಿದ್ದರು.

  ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಮೂರ್ತಿ ನಗರ ಪೊಲೀಸರು ಈಗಾಗಲೇ ಐವರನ್ನು ಬಂಧಿಸಿದ್ದಾರೆ. ಶುಕ್ರವಾರ ಮೂವರು ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಬಾಂಗ್ಲಾದ ಓರ್ವ ಯುವತಿ, ಸಾಗರ್, ರಿದಾಯ್ ಬಾಬು, ಮೊಹಮ್ಮದ್ ಬಾಬಾಶೇಕ್, ಹೈದರಾಬಾದ್‌ನ ಹಕೀಲ್ ಬಂಧಿತ ಆರೋಪಿಗಳು.

  ಬಂಧಿತ ಬಾಂಗ್ಲಾ ಆರೋಪಿಗಳ ಬಳಿ ಯಾವುದೇ ದಾಖಲೆ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಪಾಸ್ ಪೋರ್ಟ್, ಐಡಿ ಕಾರ್ಡ್ ಆಗಲಿ ಏನು ಪತ್ತೆಯಾಗಿಲ್ಲ. ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ನುಸುಳಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ವಿಚಾರಣೆ ವೇಳೆ ಪಾಸ್ ಪೋರ್ಟ್ ಸೇರಿದಂತೆ ಯಾವುದೇ ದಾಖಲೆ ಬಗ್ಗೆ ಆರೋಪಿಗಳು ಬಾಯಿ ಬಿಡಲಿಲ್ಲ. ಆರೋಪಿಗಳು ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಆರೋಪಿ ಮೊಹಮ್ಮದ್‌ ಬಾಬು ಶೇಕ್, ತಾನು ಬಡಗಿ ಕೆಲಸ ಮಾಡುತ್ತಿರುವ ಮಾಹಿತಿ ನೀಡಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದ ಎನ್ನಲಾಗಿದೆ.

  ರಿದಯ್ ಬಾಬು ಯೂಟ್ಯೂಬರ್ ಆಗಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಹೈದರಾಬಾದ್ ಮೂಲದ ಹಕೀಲ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನಂತೆ . ಆರೋಪಿಗಳು ಅಕ್ರಮ ವಲಸೆ ಬಂದು ಬೆಂಗಳೂರು ನಗರದಲ್ಲಿ ನೆಲೆಸಿದ್ದರು. ಫಾರಿನರ್ಸ್ ಆಕ್ಟ್ ಅಡಿಯಲ್ಲಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
  Published by:Latha CG
  First published: