Shocking: ನಿಮ್ಮ ಮನೆಗೆ ಬರೋ ಕಾವೇರಿ ನೀರಿನಲ್ಲಿ ಪ್ಲಾಸ್ಟಿಕ್ ಇದೆ! ಅಧ್ಯಯನದಲ್ಲಿ ಬಹಿರಂಗ

ಕೃಷ್ಣರಾಜಸಾಗರ [ಕೆಆರ್‌ಎಸ್] ಅಣೆಕಟ್ಟಿನ ನೀರಿನಲ್ಲಿ ಹಲವು ವರ್ಷಗಳಿಂದ ಮೀನು ಹಿಡಿಯುತ್ತಿದ್ದವರು ಸಹ ಇತ್ತೀಚಿನ ದಿನಗಳಲ್ಲಿ ಮೀನುಗಳಲ್ಲಿ ಉಂಟಾದ ದೈಹಿಕ ವಿರೂಪತೆಯನ್ನು ಗಮನಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಾವೇರಿ ನದಿಯಲ್ಲಿ (Kaveri River) ಸೇರಿರುವ ಮೈಕ್ರೋಪ್ಲಾಸ್ಟಿಕ್‌ನಂತಹ (Micro Plastic) ಮಾಲಿನ್ಯಕಾರಕಗಳು ಮೀನುಗಳ (Fish) ಬೆಳವಣಿಗೆ ಸೇರಿದಂತೆ ಜಲಚರಗಳಿಗೆ ವಿವಿಧ ರೀತಿಯ ಸಮಸ್ಯೆ ತಂದೊಡ್ಡಬಹುದು ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೇ ನೆದರ್ಲೆಂಡ್ಸ್‌ನಲ್ಲಿ ಕೈಗೊಳ್ಳಲಾದ ಇತ್ತೀಚಿನ ಅಧ್ಯಯನವು ಮೈಕ್ರೋಪ್ಲಾಸ್ಟಿಕ್‌ಗಳು ಮಾನವರ ರಕ್ತಕ್ಕೂ (Human Blood) ಪ್ರವೇಶಿಸಬಹುದು ಎಂದು ತೋರಿಸಿದೆ. ಹಾಗಾದರೆ ಕಾವೇರಿ ನೀರನ್ನು (Kaveri Water) ಬಳಸುವ ಬೆಂಗಳೂರು ನಗರದ ಲಕ್ಷಾಂತರ ಜನರ ಆರೋಗ್ಯ (Health Condition) ಕಥೆಯೇನು? ಎಂಬ ಆತಂಕ ಸೃಷ್ಟಿಯಾಗಿದೆ.  ತಕ್ಷಣಕ್ಕೆ ಆರೋಗ್ಯದ ಮೇಲೆ ಪರಿಣಾಮ ಬೀರದೇ ಇದ್ದರೂ ದೀರ್ಘಾಕಾಲದಲ್ಲಿ ಆರೋಗ್ಯದ ಹಾಳಾಗುವುದ ಅಪಾಯವಿದೆ ಎಂದು ಈ ವರದಿ ತಿಳಿಸಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ಯಲ್ಲಿನ ಆಣ್ವಿಕ ಸಂತಾನೋತ್ಪತ್ತಿ, ಅಭಿವೃದ್ಧಿ ಮತ್ತು ಜೆನೆಟಿಕ್ಸ್ (MRDG) ವಿಭಾಗದ ಪ್ರಾಧ್ಯಾಪಕ ಉಪೇಂದ್ರ ನೊಂಗ್‌ತೊಂಬಾ ಅವರ ನೇತೃತ್ವದ   ತಂಡವು ಈ ಸಂಶೋಧನೆ ಮಾಡಿದೆ. ಈ ಅಧ್ಯಯನ ವರದಿಯು ಇಕೋಟಾಕ್ಸಿಕಾಲಜಿ ಮತ್ತು ಎನ್ವಿರಾನ್ಮೆಂಟಲ್ ಸೇಫ್ಟಿ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಕೆಆರ್​ಎಸ್​ನಲ್ಲಿ ಮೀನು ಹಿಡಿಯುವವರು ಗಮನಿಸಿದ ಅಪಾಯ!
ಕೃಷ್ಣರಾಜಸಾಗರ [ಕೆಆರ್‌ಎಸ್] ಅಣೆಕಟ್ಟಿನ ನೀರಿನಲ್ಲಿ ಹಲವು ವರ್ಷಗಳಿಂದ ಮೀನು ಹಿಡಿಯುತ್ತಿದ್ದವರು ಸಹ ಇತ್ತೀಚಿನ ದಿನಗಳಲ್ಲಿ ಮೀನುಗಳಲ್ಲಿ ಉಂಟಾದ ದೈಹಿಕ ವಿರೂಪತೆಯನ್ನು ಗಮನಿಸಿದ್ದಾರೆ.

ಅಧ್ಯಯನ ನಡೆಸಲು ಕಾರಣ ಮೀನು!
ಕಾವೇರಿ ನದಿಯಲ್ಲಿ ಮೀನು ಹಿಡಿದು ದಡದಲ್ಲಿ ಕುಳಿತು ಮೀನು ತಿನ್ನುವುದನ್ನು ಇಷ್ಟಪಟ್ಟವರಲ್ಲಿ ಈ ಅಧ್ಯಯನ ಕೈಗೊಂಡ ಉಪೇಂದ್ರ ನೊಂಗ್‌ತೊಂಬಾ ಅವರೂ ಒಬ್ಬರು. ಜಲಚರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಉಂಟಾದ ಬದಲಾವಣೆಯು ಅವರನ್ನು ಈ ಸಂಶೋಧನೆ ಮಾಡಲು ಪ್ರೇರೇಪಿಸಿತು.

ನೀರಿನ ಗುಣಮಟ್ಟಕ್ಕೂ ಮೀನುಗಳ ದೈಹಿಕ ವಿಕಾರ ಬದಲಾವಣೆಗೂ ಏನಾದರೂ ಸಂಬಂಧವಿದೆಯೇ ಎಂದು ಅವರು ಮೊದಲು ಅನುಮಾನಿಸಿದರು. ನಂತರ ಇದೇ ವಿಷಯವನ್ನು ಮುಂದಿಟ್ಟುಕೊಂಡು ಅಧ್ಯಯನ ಆರಂಭಿಸಿದರು.

ನೀರೇ ಕಲುಷಿತಗೊಂಡರೆ?
ಪ್ರಾಣಿಗಳು ಮತ್ತು ಸಸ್ಯಗಳು ಸೇರಿದಂತೆ ಪ್ರತಿಯೊಬ್ಬರಿಗೂ ನೀರು ಅತ್ಯಗತ್ಯ. ಆದರೆ ನೀರೇ ಕಲುಷಿತಗೊಂಡರೆ ಕ್ಯಾನ್ಸರ್ ಸೇರಿದಂತೆ ರೋಗಗಳು ಬರುವ ಅಪಾಯವಿದೆ ಎಂದು ನೊಂಗ್‌ತೊಂಬಾದ ಲ್ಯಾಬ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿ ಮತ್ತು ಅಧ್ಯಯನ ವರದಿ ತಯಾರಿಸಿದ ಮೊದಲ ಲೇಖಕ ಅಬಾಸ್ ಟೋಬಾ ಅನಿಫೊವೊಶೆ ಹೇಳುತ್ತಾರೆ.

ಮೂರು ಸ್ಥಳಗಳಲ್ಲಿ ನೀರಿನ ಮಾದರಿ ಸಂಗ್ರಹ
ಕೆಆರ್‌ಎಸ್ ಅಣೆಕಟ್ಟಿನಲ್ಲಿ ಮಾಲಿನ್ಯ ಮತ್ತು ಮೀನುಗಳ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನವನ್ನು ನಡೆಸಲಾಯಿತು. ನೀರಿನ ವೇಗವು ಮಾಲಿನ್ಯಕಾರಕಗಳ ಸಾಂದ್ರತೆಯ ಮೇಲೆ ಪರಿಣಾಮ ಬೀರುತ್ತದೆ. ವೇಗವಾಗಿ ಹರಿಯುವ, ನಿಧಾನವಾಗಿ ಹರಿಯುವ ಮತ್ತು ನಿಶ್ಚಲವಾಗಿರುವ – ಮೂರು ರೀತಿಯ ನೀರಿನ ಹರಿವಿನ ವಿಭಿನ್ನ ವೇಗಗಳೊಂದಿಗೆ ಅವರು ಮೂರು ವಿಭಿನ್ನ ಸ್ಥಳಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ಕೈಗೊಳ್ಳಲಾಗಿದೆ.

ಈ ಅಂಶಗಳಿದ್ದರೆ ನೀರಿನ ಮಾಲಿನ್ಯ ಆಗ್ತಿರೋದು ಪಕ್ಕಾ!
ಅಪವಾದವೆಂದರೆ ಕರಗಿದ ಆಮ್ಲಜನಕದ (DO) ಮಟ್ಟ   ನಿಧಾನವಾಗಿ ಹರಿಯುವ ಮತ್ತು ನಿಶ್ಚಲವಾದ ಸೈಟ್‌ಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ಇರುವುದಕ್ಕಿಂತ ಕಡಿಮೆಯಾಗಿದೆ. ಈ ಸ್ಥಳಗಳ ನೀರು ಸಹ ಸೈಕ್ಲೋಪ್ಸ್, ಡ್ಯಾಫ್ನಿಯಾ, ಸ್ಪೈರೋಗೈರಾ, ಸ್ಪೈರೋಚೆಟಾ ಮತ್ತು ಇ.ಕೋಲಿಯಂತಹ ಸೂಕ್ಷ್ಮಜೀವಿಗಳನ್ನು ಹೊಂದಿತ್ತು. ಇವು ನೀರಿನ ಮಾಲಿನ್ಯವಾಗುತ್ತಿರುವುದನ್ನು ಸೂಚಿಸುವ ಪ್ರಸಿದ್ಧ ಜೈವಿಕ ಅಂಶಗಳಾಗಿವೆ.

ಇದನ್ನೂ ಓದಿ: Health Tips: ನೀವ್ ತಿನ್ನೋ ಈ ತರಕಾರಿ, ಹಣ್ಣುಗಳಲ್ಲಿ ಕೀಟನಾಶಕಗಳು ಹೆಚ್ಚಿರುತ್ತಂತೆ ಎಚ್ಚರ

ರಾಮನ್ ಸ್ಪೆಕ್ಟ್ರೋಸ್ಕೋಪಿ ಎಂಬ ತಂತ್ರವನ್ನು ಬಳಸಿಕೊಂಡು ನೀರಿನಲ್ಲಿ ಬೆರೆತಿರುವ ಮೈಕ್ರೋಪ್ಲಾಸ್ಟಿಕ್‌ಗಳನ್ನು ಪತ್ತೆಹಚ್ಚಲಾಯಿತು. ಮೈಕ್ರೋ ಪ್ಲಾಸ್ಟಿಕ್‌ನ ತುಣುಕುಗಳು ಬರಿಗಣ್ಣಿಗೆ ಸಾಮಾನ್ಯವಾಗಿ ಗೋಚರಿಸುವುದಿಲ್ಲ. ಮೈಕ್ರೋಪ್ಲಾಸ್ಟಿಕ್‌ಗಳು ಮನೆ ಮತ್ತು ಕೈಗಾರಿಕೆಗಳಲ್ಲಿ ಬಳಸುವ ಉತ್ಪನ್ನಗಳಲ್ಲಿ ಬಳಕೆಯಾಗುತ್ತವೆ. ಸೈಕ್ಲೋಹೆಕ್ಸಿಲ್ ಐಸೊಸೈನೇಟ್‌ನಂತಹ ಸೈಕ್ಲೋಹೆಕ್ಸಿಲ್ ಗುಂಪನ್ನು ಹೊಂದಿರುವ ರಾಸಾಯನಿಕಗಳನ್ನು ಸಾಮಾನ್ಯವಾಗಿ ಕೃಷಿ ಮತ್ತು ಔಷಧೀಯ ಉದ್ಯಮದಲ್ಲಿ ಬಳಸಲಾಗುತ್ತದೆ.

ಮೀನುಗಳ ಮರಣ ಪ್ರಮಾವೂ ಹೆಚ್ಚಳ
ಅಧ್ಯಯನದ ಎರಡನೇ ಭಾಗದಲ್ಲಿ ನೊಂಗ್ತೊಂಬಾ ಅವರ ತಂಡವು ನೀರಿನಲ್ಲಿನ ಮಾಲಿನ್ಯಕಾರಕಗಳು ಸಹಜ ನೀರಿನಲ್ಲಿ ಬದುಕುವ ಮೀನುಗಳಲ್ಲಿ ಕಂಡುಬರುವ ಬೆಳವಣಿಗೆಯ ವೈಪರೀತ್ಯಗಳಿಗೆ ಕಾರಣವಾಗಬಹುದೇ ಎಂದು ತನಿಖೆ ಮಾಡಿದೆ. ಅವರು ಮೂರು ಸ್ಥಳಗಳಿಂದ ಸಂಗ್ರಹಿಸಿದ ನೀರಿನ ಮಾದರಿಗಳಲ್ಲಿನ ಮೀನುಗಳಲ್ಲಿ ಅಸ್ಥಿಪಂಜರದ ವಿಕಾರತೆ, ಡಿಎನ್‌ಎ ಹಾನಿ, ಆರಂಭಿಕ ಜೀವಕೋಶದ ಸಾವು, ಹೃದಯಕ್ಕೆ ಸಂಬಂಧಿಸಿ ಹಾನಿಯಾಗಿರುವುದನ್ನು ಕಂಡುಹಿಡಿದರು. ಅಲ್ಲದೇ ಈ ಮೀನುಗಳ ಮರಣ ಪ್ರಮಾಣವೂ ಹೆಚ್ಚಿತ್ತು.

ಇದನ್ನೂ ಓದಿ: Food: ಈ 6 ಆಹಾರಗಳಿಗೆ ಎಕ್ಸ್​ಪೆರಿ ಡೇಟ್ ಇರಲ್ವಂತೆ, ಯಾವಾಗ ಬೇಕಿದ್ರು ಬಳಸಬಹುದು..!

ಅಸಹಜವಾಗಿ ಅಭಿವೃದ್ಧಿ ಹೊಂದಿದ ಮೀನಿನ ಜೀವಕೋಶಗಳಲ್ಲಿ ROS (ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದ) ಎಂಬ ಅಸ್ಥಿರ ಅಣುಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ROS ಬಿಲ್ಡ್-ಅಪ್ ಡಿಎನ್‌ಎಗೆ ಹಾನಿ ಮಾಡುತ್ತದೆ. ಸೈಕ್ಲೋಹೆಕ್ಸಿಲ್ ಗುಂಪಿನೊಂದಿಗೆ ಮೈಕ್ರೊಪ್ಲಾಸ್ಟಿಕ್‌ಗಳು ಮತ್ತು ರಾಸಾಯನಿಕಗಳು DO ಕಡಿಮೆಯಾಗಲು ಕಾರಣವಾಗುತ್ತವೆ ಎಂದು ಇತರ ಅಧ್ಯಯನಗಳು ತೋರಿಸಿವೆ, ಇದು ಮೀನುಗಳಂತಹ ಪ್ರಾಣಿಗಳಲ್ಲಿ ROS ಶೇಖರಣೆಯನ್ನು ಪ್ರಚೋದಿಸುತ್ತದೆ.
Published by:guruganesh bhat
First published: