Bengaluru Suicide Case: ಮನೆಯಲ್ಲಿ ಡೆತ್​ ನೋಟ್ ಪತ್ತೆ, ಸಾಯುವ ಮುನ್ನ ಹೆಣ್ಣುಮಕ್ಕಳು ಬರೆದಿದ್ದೇನು?

ಸುಮಾರು 3-4 ಪುಟಗಳ ಸುದೀರ್ಘ ಡೆತ್​ನೋಟ್ ಅದಾಗಿದೆ. ಡೆತ್​ನೋಟ್​ನಲ್ಲಿ ತಮ್ಮ ತಂದೆಯ ವಿರುದ್ಧವೇ ಆರೋಪ ಮಾಡಿದ್ದಾರೆ. ಪರೋಕ್ಷವಾಗಿ ತಂದೆಯೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

ಶಂಕರ್​ (ಬಿಳಿ ಶರ್ಟ್​​) ಹಾಗೂ ಮಗು ಪ್ರೇಕ್ಷಾ ಹೊರತುಪಡಿಸಿ ಚಿತ್ರದಲ್ಲಿರುವ ಎಲ್ಲರೂ ಸಾವನ್ನಪ್ಪಿದ್ದಾರೆ

ಶಂಕರ್​ (ಬಿಳಿ ಶರ್ಟ್​​) ಹಾಗೂ ಮಗು ಪ್ರೇಕ್ಷಾ ಹೊರತುಪಡಿಸಿ ಚಿತ್ರದಲ್ಲಿರುವ ಎಲ್ಲರೂ ಸಾವನ್ನಪ್ಪಿದ್ದಾರೆ

  • Share this:
    ಬೆಂಗಳೂರು(ಸೆ.19): ಒಂದೇ ಕುಟುಂಬದ ಐವರು ಸಾವನ್ನಪ್ಪಿದ(Bengaluru mass Suicide) ಪ್ರಕರಣ ಸಂಬಂಧ ಇಂದು ಬ್ಯಾಡರಹಳ್ಳಿ ಪೊಲೀಸರು(Byadarahalli police) ಸ್ಥಳ ಮಹಜರು ನಡೆಸಿದರು.  ಮಹಜರು ವೇಳೆ ಪೊಲೀಸರಿಗೆ ಮನೆಯಲ್ಲಿ ಬಹುಮುಖ್ಯ ಸಾಕ್ಷಿಗಳು ದೊರೆತಿವೆ.  ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ದೃಷ್ಟಿಯಿಂದ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಪೊಲೀಸರು ಮನೆಗೆ ಬೀಗ ಹಾಕಿದ್ದರು. ನಿನ್ನೆ ಮರಣೋತ್ತರ ಪರೀಕ್ಷೆಯ ನಂತರ ಮೃತರ ಅಂತ್ಯಕ್ರಿಯೆ ಮುಗಿದಿದೆ. ಇಂದು ಪೊಲೀಸರು ಮನೆಯ ಯಜಮಾನ ಶಂಕರ್ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

    ಸ್ಥಳ ಮಹಜರು ನಂತರ ನಾಲ್ಕು ಫೋನ್, 3 ಲ್ಯಾಪ್ ಟಾಪ್ ಹಾಗೂ ಕೆಲ ದಾಖಲೆಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇಬ್ಬರು ಹೆಣ್ಮಕ್ಕಳು ಬರೆದಿರುವ ಡೆತ್​ನೋಡ್ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಗಂಡನ ಮನೆ ತೊರೆದು ತವರು ಸೇರಿದ್ದ ಸಿಂಚನಾ ಮತ್ತು ಸಿಂಧೂರಾಣಿ ಇಬ್ಬರೂ ಸಹ ಸಾಯುವ ಮುನ್ನ ಡೆತ್​ ನೋಟ್ ಬರೆದಿದ್ದಾರೆ. ಆ ಡೆತ್​ನೋಟ್​​ನಲ್ಲಿ ತಮ್ಮ ತಂದೆ ಶಂಕರ್ ವಿರುದ್ಧ ಆರೋಪ ಮಾಡಿದ್ದಾರೆ. ಜೊತೆಗೆ ಇನ್ನೂ ಕೆಲವು ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ.

    ‘‘ತವರು ಮನೆಯಲ್ಲಿ ನಮ್ಮನ್ನು ನಮ್ಮ ತಂದೆ ಸರಿಯಾಗಿ ನೋಡಿಕೊಳ್ಳಲಿಲ್ಲ. ಯಾವಾಗಲೂ ಗಂಡನ ಮನೆಗೆ ಹೋಗಿ ಎಂದು ಒತ್ತಾಯಿಸುತ್ತಿದ್ದರು. ಆದರೆ ನಮಗೆ ಗಂಡನ ಮನೆಯಲ್ಲೂ ಸರಿಯಾಗಿ ನೆಮ್ಮದಿ ಇರಲಿಲ್ಲ. ಈ ಕಡೆ ತವರು ಮನೆಯಲ್ಲೂ ನೆಮ್ಮದಿ ಇರಲಿಲ್ಲ, ಆ ಕಡೆ ಗಂಡನ ಮನೆಯಲ್ಲೂ ನೆಮ್ಮದಿ ಇರಲಿಲ್ಲ. ಹೀಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ‘‘ ಎಂದು ಡೆತ್​ನೋಟ್​ನಲ್ಲಿ ಬರೆದಿದ್ದಾರೆ.

    ಇದನ್ನೂ ಓದಿ:Bengaluru Mass Suicide Case: ಇಂದು ಮನೆ ಮಹಜರು ಪ್ರಕ್ರಿಯೆ; ಮೃತರ ಮೊಬೈಲ್ ಚೆಕ್, ವಾಟ್ಸ್ಯಾಪ್​​ ಚಾಟ್ ಕೂಡ ಪರಿಶೀಲನೆ

    ಸುಮಾರು 3-4 ಪುಟಗಳ ಸುದೀರ್ಘ ಡೆತ್​ನೋಟ್ ಅದಾಗಿದೆ. ಡೆತ್​ನೋಟ್​ನಲ್ಲಿ ತಮ್ಮ ತಂದೆಯ ವಿರುದ್ಧವೇ ಆರೋಪ ಮಾಡಿದ್ದಾರೆ. ಪರೋಕ್ಷವಾಗಿ ತಂದೆಯೇ ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಆ ಇಬ್ಬರು ಹೆಣ್ಣುಮಕ್ಕಳು ತಮ್ಮ ಗಂಡಂದಿರ ಬಗ್ಗೆಯೂ ಆರೋಪ ಮಾಡಿದ್ದಾರೆ.

    ಇನ್ನು, ಶಂಕರ್ ಮಗ ಮಧುಸಾಗರ್  ಕೂಡ ತನ್ನ ತಂದೆಯ ಬಗ್ಗೆಯೇ ಹೆಚ್ಚು ಅಂಶಗಳನ್ನು ಬರೆದಿದ್ದಾನೆ. ಹೀಗಾಗಿ ಮನೆಯ ಯಜಮಾನ ಶಂಕರ್ ವಿರುದ್ಧವೇ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಐಪಿಸಿ ಸೆಕ್ಷನ್ 306 ಅಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಪೊಲೀಸರು ಕೇಸ್ ದಾಖಲಿಸುವ ಸಾಧ್ಯತೆ ಹೆಚ್ಚಾಗಿದೆ.

    ಮಹಜರು ವೇಳೆ ಮನೆಯಲ್ಲಿ ಸುಮಾರು ಒಂದು ಕೆ.ಜಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. 10-12 ಲಕ್ಷ ನಗದು ಕೂಡ ಸಿಕ್ಕಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಸ್ಥಳ ಮಹಜರು ಮೂಲಕ ಹಲವು ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ.

    ನಿನ್ನೆ ಯಜಮಾನ ಶಂಕರ್​ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಅಂತ್ಯಕ್ರಿಯೆ ವೇಳೆ, ಶಂಕರ್ ಹೆಂಡತಿಯ ಹಠದಿಂದಾಗಿ ಇಡೀ ಕುಟುಂಬವೇ ನಾಶವಾಯಿತು ಎಂದು ಕಣ್ಣೀರಿಟ್ಟಿದ್ದರು. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು. ಹೀಗಾಗಿ ಬ್ಯಾಡರಹಳ್ಳಿ ಠಾಣೆಯ ಇನ್ಸ್​​ಪೆಕ್ಟರ್ ರಾಜೀವ್​ ಮತ್ತು ಸಿಬ್ಬಂದಿ ಸ್ಥಳ ಮಹಜರು ಮಾಡಿದ್ದಾರೆ.

    ಸದ್ಯ ಪೊಲೀಸರು ವಿಚಾರಣೆ ಮುಂದುವರೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಇಂದು ಮನೆ ಮಹಜರು ನಡೆದ ಬಳಿಕ ಪೊಲೀಸರಿಗೆ ಮತ್ತಷ್ಟು ವಿಷಯಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದ್ದಾರೆ.

    ಇದನ್ನೂ ಓದಿ:Crime News: ಬೆಂಗಳೂರಿನಲ್ಲಿ ಐವರ ಆತ್ಮಹತ್ಯೆ ಪ್ರಕರಣ; ಸಾವಿಗೆ ಕಾರಣ ಇದೇನಾ? 3 ವರ್ಷದ ಮಗು ಬದುಕುಳಿದಿದ್ದು ಹೇಗೆ?

    ಆತ್ಮಹತ್ಯೆ ಮಾಡಿಕೊಂಡವರು

    ಮೃತರನ್ನು ಭಾರತಿ (50), ಸಿಂಚನ (33), ಸಿಂಧೂರಾಣಿ (30), ಮಧುಸಾಗರ್​ (26) ಮತ್ತು ಒಂಭತ್ತು ತಿಂಗಳ ಮಗು ಎಂದು ಗುರುತಿಸಲಾಗಿದೆ. ಮನೆಯ ಹಾಲ್​ನಲ್ಲಿ ತಾಯಿ ಭಾರತಿ, ರೂಮಿನಲ್ಲಿ ಮಗಳು ಸಿಂಧೂರಾಣಿ ನೇಣು ಹಾಕಿಕೊಂಡಿದ್ದರು. ಘಟನೆ ನಡೆದಾಗ ಗಂಡ ಶಂಕರ್​ ಮನೆಯಲ್ಲಿ ಇರಲಿಲ್ಲ. ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಎಂದು ಹೇಳಲಾಗಿದೆ.
    Published by:Latha CG
    First published: