Bengaluru Crime News: ಹಣದೊಂದಿಗೆ ನೌಕರ ಎಸ್ಕೇಪ್, ತಂದೆಯಿಂದ ಮಗನ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್, ಗೋಣಿ ಚೀಲ ಸುತ್ಕೊಂಡು ಬಂದ ಯುವಕ ಸಾವು
ಇತ್ತ ಸಿ ಎ ಅರ್ಧಕ್ಕೆ ನಿಲ್ಲಿಸಿದ್ದನು. ಅತ್ತ ವ್ಯವಹಾರ ನೋಡಿಕೊಳ್ಳಲು ಸೇರಿಸಿಕೊಂಡಿದ್ದೆ. ಅಲ್ಲಿಯೂ ಸರಿಯಾಗಿ ಕೆಲಸ ಮಾಡಲಿಲ್ಲ. ಬದಲಾಗಿ ಹಣಕಾಸು ಎಲ್ಲದ್ರಲ್ಲು ಸರಿಯಾದ ಲೆಕ್ಕಾಚಾರ ಇರಲಿಲ್ಲ ಎಂದು ತಂದೆ ಸುರೇಂದ್ರ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾನೆ.
ಹೋಟೆಲ್ ಮಾಲೀಕ(Hotel Owner)ನಿಗೆ ಮ್ಯಾನೇಜರ್ (Manager) ಪಂಗನಾಮ ಹಾಕಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಜಯನಗರದ (Jayanagara, Bengaluru) ಮೊರ್ನಾಕ್ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳಿಂದ ಅಸ್ಸಾಂ ಮೂಲದ ಜಬೀರ್ ಹುಸೇನ್ ಎಂಬಾತ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದನು. ಇದೀಗ 2.4 ಲಕ್ಷ ರೂ. ಹಣದಿಂದ ಜಬೀರ್ ಕಾಲ್ಕಿತ್ತಿದ್ದಾನೆ. ಹೋಟೆಲ್ ಗೆ ಬರುತ್ತಿದ್ದ ಗ್ರಾಹಕರಿಗೆ (Customers) ಹೋಟೆಲ್ ಬ್ಯಾಂಕ್ ಖಾತೆ ಕೊಡುವುದು ಬಿಟ್ಟು, ತನ್ನ ಬ್ಯಾಂಕ್ ಮಾಹಿತಿ (Bank Details) ನೀಡಿ ಹಣ ಹಾಕಿಸಿಕೊಳ್ಳುತ್ತಿದ್ದನು. ಏಪ್ರಿಲ್ 3ರಂದು ಟೀ ಕುಡಿದು ಬರೋದಾಗಿ ಹೇಳಿ ಹೋಗಿದ್ದ ಜಬೀರ್ ನಾಪತ್ತೆಯಾಗಿದ್ದಾನೆ. ಕರೆ ಮಾಡಿದಾಗ ಜಬೀರ್ ಫೋನ್ ಸ್ವಿಚ್ಛ್ ಆಫ್ ಆಗಿದೆ. 2.4 ಲಕ್ಷ ಹಣದೊಂದಿಗೆ ಪರಾರಿಯಾಗಿರುವ ಜಬೀರ್ ವಿರುದ್ಧ ಹೋಟೆಲ್ ಮಾಲೀಕ ಹರೀಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಂದೆಯಿಂದಲೇ ಮಗನ ಕೊಲೆ: ಅಸಲಿ ಸತ್ಯ ರಿವೀಲ್
ಆಜಾದ್ ನಗರದಲ್ಲಿ ತಂದೆಯಿಂದ ಪುತ್ರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಲಿ ಸತ್ಯ ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಮಗ ಅರ್ಪಿತ್ ಜೀವನದಲ್ಲಿ ಏನನ್ನು ಸರಿ ಮಾಡಲಿಲ್ಲ. ಇತ್ತ ಸಿ ಎ ಅರ್ಧಕ್ಕೆ ನಿಲ್ಲಿಸಿದ್ದನು. ಅತ್ತ ವ್ಯವಹಾರ ನೋಡಿಕೊಳ್ಳಲು ಸೇರಿಸಿಕೊಂಡಿದ್ದೆ. ಅಲ್ಲಿಯೂ ಸರಿಯಾಗಿ ಕೆಲಸ ಮಾಡಲಿಲ್ಲ. ಬದಲಾಗಿ ಹಣಕಾಸು ಎಲ್ಲದ್ರಲ್ಲು ಸರಿಯಾದ ಲೆಕ್ಕಾಚಾರ ಇರಲಿಲ್ಲ ಎಂದು ತಂದೆ ಸುರೇಂದ್ರ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾನೆ.
ಮಗ ಹಾಳಾಗಿ ಹೋಗಿ ಮನೆಯನ್ನು ಹಾಳು ಮಾಡ್ತಾನೆ ಎಂದು ಕೋಪಗೊಂಡಿದ್ದೆ..ಕೋಪಗೊಂಡು ಬುದ್ದಿ ಕಲಿಸಲು ಅಲ್ಲೆ ಇದ್ದ ಥಿನ್ನರ್ ಹಾಕಿದ್ದೆ. ಮೊದಲಸಲ ಕಡ್ಡಿ ಗೀರಿದಾಗ ಅವನು ಅಲುಗಾಡಲಿಲ್ಲ. ಆಗ ಮತ್ತೊಮ್ಮೆ ಕೋಪದಿಂದ ಕಡ್ಡಿ ಗೀರಿದ್ದೆ. ಕೊಲೆ ಮಾಡುವ ಉದ್ದೇಶ ಇರಲಿಲ್ಲ ಅಂತ ಸುರೇಂದ್ರ ಹೇಳಿಕೆ ನೀಡಿರುವ ಮಾಹಿತಿ ಲಭ್ಯವಾಗಿದೆ.
ಗೋಣಿ ಚೀಲ ಸುತ್ಕೊಂಡು ಬಂದಿದ್ದ ಯುವಕನ ಅನುಮಾನಾಸ್ಪದ ಸಾವು
22 ವರ್ಷದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಮರಾಜನಗರ ಮೂಲದ ವೆಂಕಟೇಶ್ ಮೃತದುರ್ದೈವಿ. ಬೆಂಗಳೂರಲ್ಲಿ ಬಿಲ್ಡಿಂಗ್ ಡೆಮಾಲಿಷನ್ ಮಾಡುವ ಕೆಲಸ ಮಾಡ್ಕೊಂಡಿದ್ದ ವೆಂಕಟೇಶ್, ಭಾನುವಾರ ಮಧ್ಯರಾತ್ರಿ ರಾತ್ರಿ ಅರೆಬೆತ್ತಲಾಗಿ ಓಡಾಡ್ತಿದ್ದನಂತೆ . ಬೆಳಗ್ಗೆ 6 ಗಂಟೆಗೆ ಗೋಣಿ ಚೀಲ ಸುತ್ತಿಕೊಂಡು ಮನೆಗೆ ಬಂದಿದ್ದನು. ಬಂದವನು ಅರೆಪ್ರಜ್ಙಾ ಸ್ಥಿತಿಗೆ ಹೋಗಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲಿ ವೆಂಕಟೇಶ್ ಸಾವನ್ನಪ್ಪಿದ್ದಾನೆ.
ತೋಳು,ಕಾಲು,ತಲೆ ಭಾಗಕ್ಕೆ ಗಾಯಗಳಾಗಿವೆ. ವೆಂಕಟೇಶ್ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ. ಹಾಗಾಗಿ ಸಾವಿನ ಹಿಂದೆ ಹಲವು ಅನುಮಾನ ಮೂಡಿದೆ
ಬೆಂಗಳೂರು ನಗರ ಪೊಲೀಸರಿಂದ ಸ್ಪೆಷಲ್ ಡ್ರೈವ್
ಮಧ್ಯರಾತ್ರಿ ಹಾಗೂ ಬೆಳಗಿನ ಜಾವ ರಾಬರಿ ಹಾಗೂ ಹಲ್ಲೆ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಬೆಂಗಳೂರು ಸಿಟಿ ಪೊಲೀಸರು ಸ್ಪೆಷಲ್ ಡ್ರೈವ್ ಆರಂಭಿಸಿದ್ದಾರೆ. ಸ್ಮಶಾನ, ಪಾರ್ಕ್ ರೋಡ್ ಗಳು, ಸರ್ವಿಸ್ ರಸ್ತೆ, ಅಂಡರ್ ಪಾಸ್ ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಹೊಯ್ಸಳ ವಾಹನಗಳ ಗಸ್ತಿನ ಬಗ್ಗೆಯೂ ಹಿರಿಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ.
ಬೆಂಗಳೂರು ಸಿಟಿಯ 8 ವಿಭಾಗದ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಪೆಷಲ್ ಡ್ರೈವ್ ನಡೆಸಲಾಗುತ್ತಿದ್ದು, ಸ್ಟೇಷನ್ ಗಳ ಬಾರ್ಡರ್ ಹಾಗೂ ವಾಹನ ಸಂಚಾರ ಕಡಿಮೆ ಇರೋ ರಸ್ತೆಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ. ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಬೀಟ್ ಹೆಚ್ಚಳ ಮಾಡಲು ಸೂಚನೆ ಸಹ ನೀಡಲಾಗಿದೆ.
ಅನುಮಾನಸ್ಪದ ವಾಹನಗಳ ಪರಿಶೀಲನೆ
ಸಬ್ ಇನ್ಸ್ ಪೆಕ್ಟರ್ , ಇನ್ಸ್ ಪೆಕ್ಟರ್ ಗಳು ಸ್ಪೆಷಲ್ ಡ್ರೈವ್ ನಲ್ಲಿ ಭಾಗಿಯಾಗಿದ್ದು, ಅನುಮಾನಾಸ್ಪದವಾಗಿ ಸಂಚರಿಸೋ ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ, ಕೆಲವು ದಿನಗಳಿಂದ ದರೋಡೆ, ಕಳ್ಳತನ ,ವಾಹನ ಕಳವು ಪ್ರಕರಣ, ಕೊಲೆ, ಕೊಲೆಯತ್ನ ಪ್ರಕರಣಗಳು ಹೆಚ್ಚಾಗ್ತಿರೊ ಹಿನ್ನೆಲೆ ಸ್ಪೆಷಲ್ ಡ್ರೈವ್ ಆರಂಭಿಸಲಾಗುತ್ತಿದೆ.