Crime News: ಬೆಂಗಳೂರಿನಲ್ಲಿ ಐವರ ಆತ್ಮಹತ್ಯೆ ಪ್ರಕರಣ; ಸಾವಿಗೆ ಕಾರಣ ಇದೇನಾ? 3 ವರ್ಷದ ಮಗು ಬದುಕುಳಿದಿದ್ದು ಹೇಗೆ?

ಸಾಯುವ ಮೊದಲು ಸಿಂಧೂರಾಣಿ ಮಗುವಿಗೆ ಹಾಲುಣಿಸಿದ್ದಾರೆ.  ಹಾಲುಣಿಸಿ ಮಗುವನ್ನ ಮಂಚದ ಮೇಲೆ ಮಲಗಿಸಿದ್ದರು. ಮತ್ತೊಂದು ಮಗು ಪ್ರೇಕ್ಷಾಳಿಗೆ (ಬದುಕುಳಿದಿರುವ ಮಗು) ಊಟ ತಿನ್ನಿಸಿ ಮಲಗಿಸಿದ್ದಾರೆ. ಮಕ್ಕಳು ಮಲಗಿದ ಮೇಲೆ ಅಮ್ಮ ಭಾರತಿ , ಮಕ್ಕಳಾದ ಸಿಂಚನ, ಸಿಂಧೂರಾಣಿ  ಹಾಗೂ ಮಧು ಸಾಗರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಶಂಕರ್​ (ಬಿಳಿ ಶರ್ಟ್​​) ಹೊರತುಪಡಿಸಿ ಚಿತ್ರದಲ್ಲಿರುವ ಎಲ್ಲರೂ ಸಾವನ್ನಪ್ಪಿದ್ದಾರೆ

ಶಂಕರ್​ (ಬಿಳಿ ಶರ್ಟ್​​) ಹೊರತುಪಡಿಸಿ ಚಿತ್ರದಲ್ಲಿರುವ ಎಲ್ಲರೂ ಸಾವನ್ನಪ್ಪಿದ್ದಾರೆ

 • Share this:
  ಬೆಂಗಳೂರು(ಸೆ.18): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ಒಂದೇ ಕುಟುಂಬದ ಐವರು ನೇಣುಬಿಗಿದುಕೊಂಡು ಆತ್ಮಹತ್ಯೆ(Suicide case) ಮಾಡಿಕೊಂಡಿರುವ ಪ್ರಕರಣ ಸಂಬಂಧ, ಇಂದು ಮೃತರ ಮರಣೋತ್ತರ ಪರೀಕ್ಷೆ ನಡೆಯಲಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ವೈದ್ಯರು ಮರಣೋತ್ತರ ಪರೀಕ್ಷೆ(Post-mortem) ಮಾಡಲಿದ್ದಾರೆ. ಬಳಿಕ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರ ಮಾಡಲಾಗುತ್ತದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐವರ ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದು, ಮನೆಯ ಯಜಮಾನ ಶಂಕರ್​​ನಿಂದ ಮಾಹಿತಿ ಪಡೆಯುತ್ತಿದ್ದಾರೆ.

  ಮೃತರನ್ನು ಭಾರತಿ (50), ಸಿಂಚನ (33), ಸಿಂಧೂರಾಣಿ (30), ಮಧುಸಾಗರ್​ (26) ಮತ್ತು ಒಂಭತ್ತು ತಿಂಗಳ ಮಗು ಎಂದು ಗುರುತಿಸಲಾಗಿದೆ. ಮನೆಯ ಹಾಲ್​ನಲ್ಲಿ ತಾಯಿ ಭಾರತಿ, ರೂಮಿನಲ್ಲಿ ಮಗಳು ಸಿಂಧೂರಾಣಿ ನೇಣು ಹಾಕಿಕೊಂಡಿದ್ದರು. ಘಟನೆ ನಡೆದಾಗ ಗಂಡ ಶಂಕರ್​ ಮನೆಯಲ್ಲಿ ಇರಲಿಲ್ಲ. ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಎಂದು ಹೇಳಲಾಗಿದೆ. ‘‘ನಿನ್ನೆ ಮನೆಗೆ ಬಂದು ನೋಡಿದಾಗ ಲಾಕ್​ ಆಗಿತ್ತು, ನಂತರ ಮನೆಯಲ್ಲಿ ಯಾರೂ ಇಲ್ಲವೆಂದು ತಿಳಿದು ವಾಪಸ್​ ಹೋಗಿದ್ದೆ. ಮತ್ತೆ ಇಂದು ಬಂದು ನೋಡಿದಾಗಲೂ ಯಾರೂ ಪ್ರತಿಕ್ರಿಯೆ ಕೊಡಲಿಲ್ಲ, ಇದರಿಂದ ಭಯಕ್ಕೀಡಾಗಿ ಬಾಗಿಲು ಒಡೆದಾಗ ಎಲ್ಲರೂ ಸಾವನ್ನಪ್ಪಿದ್ದರು‘‘ ಎಂದು ಗಂಡ ಶಂಕರ್​ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

  ಯಾವ ವಿಚಾರಕ್ಕೆ ಗಲಾಟೆ:

  ಇಬ್ಬರು ಹೆಣ್ಣು ಮಕ್ಕಳು ಗಂಡನ ಮನೆ ತೊರೆದು ತವರು ಮನೆ ಸೇರಿದ್ದರು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸೋಕೆ ತಂದೆ ಶಂಕರ್ ತುಂಬಾ ಪ್ರಯತ್ನ ಮಾಡಿದ್ದ. ಆತ್ಮಹತ್ಯೆ ಮಾಡಿಕೊಂಡ ದಿನವೂ ಮನೆಯಲ್ಲಿ ಗಲಾಟೆ ನಡೆದಿತ್ತು.  ಈ ಹಿಂದೆ ಮಗುವಿಗೆ ಕಿವಿ ಚುಚ್ಚುವ ವಿಚಾರವಾಗಿ ಕುಟುಂಬದ ನಡುವೆ ಜಗಳ ನಡೆದಿತ್ತು. ಸಿಂಧೂರಾಣಿ 9 ತಿಂಗಳ ಮಗುವಿನ ಕಿವಿ ಚುಚ್ಚುವ ಶಾಸ್ತ್ರ ಮತ್ತು ನಾಮಕರಣ ವಿಚಾರವಾಗಿ ಜಗಳ ಆಗಿತ್ತು. ಇನ್ನು, ಹಿರಿಯ ಮಗಳು ಸಿಂಚನ ಕೂಡ ಗಂಡನ ಜೊತೆ ಮುನಿಸಿಕೊಂಡು ತವರು ಮನೆ ಸೇರಿದ್ದಳು. ಕಳೆದ ಒಂದೂವರೆ ವರ್ಷದಿಂದ ತವರು ಮನೆಯಲ್ಲೇ ಇದ್ದಳು. ಇದೆಲ್ಲದರ ವಿಚಾರವಾಗಿ ಮನೆಯಲ್ಲಿ ಆಗ್ಗಾಗ್ಗೆ ಗಲಾಟೆಯಾಗ್ತಿತ್ತು ಎಂದು ತಿಳಿದು ಬಂದಿದೆ.

  ಇದನ್ನೂ ಓದಿ:CoronaVirus| ಭಾರತವನ್ನು ಕೆಂಪು ಪಟ್ಟಿಯಿಂದ ತೆಗೆದ ಇಂಗ್ಲೆಂಡ್; ಲಸಿಕೆ ಪಡೆದ ಪ್ರಯಾಣಿಕರಿಗೆ ನಿರ್ಬಂಧ ತೆರವು!

  3 ವರ್ಷದ ಮಗು ಬದುಕುಳಿದಿದ್ದು ಹೇಗೆ? 

  ಪವಾಡದ ರೀತಿ 3 ವರ್ಷದ ಮಗು ಪ್ರೇಕ್ಷಾ ಬದುಕುಳಿಯಲು ಕಾರಣ ಏನು ಗೊತ್ತಾ? ಮಗು ಪ್ರೇಕ್ಷಾ ಬದುಕುಳಿಯಲು ಕಾರಣವಾಗಿದ್ದೇ ಮಾವ ಮಧು ಸಾಗರ್.  ನಾಲ್ವರ ಸಾವಿನ ಬಳಿಕ ಮಧುಸಾಗರ್ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.  ಅಮ್ಮ ಹಾಗೂ ಅಕ್ಕಂದಿರ ಸಾವಿನ ಬಳಿಕ ಮಧು ಸಾಗರ್ ನೇಣು ಹಾಕಿಕೊಂಡಿದ್ದಾನೆ. ನಾಲ್ವರ ಮೃತದೇಹಕ್ಕಿಂತ ಮಧುಸಾಗರ್​ ಮೃತದೇಹ ಕಡಿಮೆ ಕೊಳೆತಿದೆ.  ಮೃತ ದೇಹಗಳನ್ನ ರವಾನೆ ಮಾಡುವ ವೇಳೆ ಈ ಅಂಶವನ್ನು ಪೊಲೀಸರು ಗಮನಿಸಿದ್ದಾರೆ. ಅಮ್ಮ, ಅಕ್ಕಂದಿರ ಸಾವಿನ ಎರಡು ದಿನದ ಬಳಿಕ ಮಧುಸಾಗರ್ ನೇಣಿಗೆ ಶರಣಾಗಿರುವ ಸಾಧ್ಯತೆ ಇದೆ. ಹೀಗಾಗಿ ಮಗು ಪ್ರೇಕ್ಷಾಳಿಗೆ ಮಧುಸಾಗರ್ ತಿಂಡಿ ತಿನಿಸು ನೀಡಿದ್ದಾನೆ ಎನ್ನಲಾಗಿದೆ. ಈ ಕಾರಣದಿಂದಾಗಿಯೇ 3 ವರ್ಷದ ಪ್ರೇಕ್ಷಾ ಬದುಕುಳಿದಿದ್ದಾಳೆ ಎನ್ನಲಾಗ್ತಿದೆ.

  ದೂರು ದಾಖಲಿಸಿದ ಯಜಮಾನ ಶಂಕರ್, ಪೊಲೀಸರ ಬಳಿ ಹೇಳಿದ್ದೇನು?

  ಪ್ರಕರಣದ ಬಳಿಕ ಮನೆಯ ಯಜಮಾನ ಶಂಕರ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಹಾಗಾದ್ರೆ ಶಂಕರ್ ನೀಡಿದ ದೂರಿನಲ್ಲಿ ಏನಿದೆ? ದೂರಿನಲ್ಲಿ ಶಂಕರ್ ಬರೆದಿರುವ ಮಾಹಿತಿ ನ್ಯೂಸ್ 18 ಗೆ ಲಭ್ಯವಾಗಿದೆ. ಇನ್ನೂ ಭಾನುವಾರದ ಜಗಳಕ್ಕೆ ಕಾರಣವಾದ ಅಂಶ ಕೂಡ ದೂರಿನಲ್ಲಿ ಉಲ್ಲೇಖ ಮಾಡಿದ್ದಾನೆ. ಅಷ್ಟಕ್ಕೂ ಆ ಕುಟುಂಬದಲ್ಲಿ ಭಾನುವಾರ ನಡೆದದ್ದಾದರು ಏನು? ಎಲ್ಲವನ್ನೂ ಶಂಕರ್ ಇಂಚಿಂಚಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

  ಶಂಕರ್ ಈ ಹಿಂದಿನಿಂದಲೂ ಪತ್ನಿ ಮತ್ತು ಮಗನ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ.  ಹೆಂಡತಿ‌ ಜೊತೆಗೆ ಹೆಣ್ಣುಮಕ್ಕಳ ವಿಚಾರವಾಗಿಯೂ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಹೆಣ್ಣು ಮಕ್ಳಳನ್ನು ಗಂಡನ ಮನೆಗೆ ಕಳುಹಿಸುವಂತೆ ಶಂಕರ್ ಹೇಳ್ತಿದ್ದ. ಆದರೆ ಕಳಿಸೋದಿಲ್ಲ ಎಂದು ಶಂಕರ್ ಜೊತೆ ಪತ್ನಿ ಭಾರತಿ ಜಗಳ ಮಾಡುತ್ತಿದ್ದಳು. ಈ ವೇಳೆ ಹೆಣ್ಣು ಮಕ್ಕಳ ಜೀವನ ಹಾಳು ಮಾಡ್ತಿದಿಯಾ ಎಂದು ಶಂಕರ್ ಕೆಂಡವಾಗಿದ್ದ.

  ಶಂಕರ್ ಮನೆ ಬಿಟ್ಟು ಹೋಗಲು ಕಾರಣವೇನು?

  ಹಣದ ವ್ಯವಹಾರದ ವಿಚಾರವಾಗಿ ಮಗನ ಜೊತೆಗೆ ಕೂಡ ಶಂಕರ್​ಗೆ ಭಿನ್ನಾಭಿಪ್ರಾಯ ಇತ್ತು. ಮಗ ಮಧುಸಾಗರ್ ಬಾರ್ ಓಪನ್ ಮಾಡಲು 20 ಲಕ್ಷ ಕೊಟ್ಟು ರಿಜಿಸ್ಟರ್ ಮಾಡಿಸಲು ರೆಡಿ ಮಾಡಿಕೊಂಡಿದ್ದ. ರಿಜಿಸ್ಟರ್ ಮಾಡಲು ಶಂಕರ್ ಸಹಿ ಬೇಕಾಗಿತ್ತು. ಆದರೆ ಸಹಿ ಮಾಡಲು ಶಂಕರ್ ನಿರಾಕರಿಸಿದ್ದ. ಈ ವಿಚಾರವಾಗಿ ಕೂಡ ಭಾನುವಾರ ಮನೆಯಲ್ಲಿ ಜಗಳ ಆಗಿತ್ತು.

  ‘‘ನನ್ನ ಎಲ್ಲಾ ಆಸ್ತಿ, ಹಣವನ್ನು ಹೆಂಡತಿ ಹಾಗೂ ಮಗನಿಗೆ ನೀಡಿದ್ದೆ. ನನಗೆ ಹಣ ಬೇಕಾದಾಗ ಅವರನ್ನೇ ಕೇಳಿ ಪಡೆಯಬೇಕಾಗಿತ್ತು‘‘ ಎಂದು ಶಂಕರ್ ಪೊಲೀಸರ ಬಳಿ ಹೇಳಿದ್ದಾನೆ. ಆಶ್ರಮ ಕಟ್ಟಿಸಲು ಶಂಕರ್ ತನ್ನ  ಹೆಂಡತಿ ಮಕ್ಕಳ ಬಳಿ 10 ಲಕ್ಷ ಹಣ ಕೇಳಿದ್ದ. ಈ ವೇಳೆ ಹಣ ನೀಡೋದಕ್ಕೆ ಪತ್ನಿ-ಮಗ ನಿರಾಕರಿಸಿದ್ದರು. ಈ ವಿಚಾರ ಕೂಡ ಭಾನುವಾರ ಜಗಳವಾಗಲು ಕಾರಣವಾಯಿತು. ಈ ಎಲ್ಲಾ ವಿಚಾರದಿಂದ ಜಗಳ ಮಾಡಿಕೊಂಡು ಶಂಕರ್ ಮನೆ ಬಿಟ್ಟುಹೋಗಿದ್ದ.

  ತಂದೆಗೆ ಮಗ ಕಳುಹಿಸಿದ್ದ ಮೆಸೇಜ್ ಏನು?

  ಭಾನುವಾರ ಸಂಜೆ 4.30‌ಕ್ಕೆ ತಂದೆ ಶಂಕರ್ ಗೆ ಮಗ ಮಧುಸಾಗರ್​ ವಾಟ್ಸ್ ಆ್ಯಪ್‌ ಮೆಸೆಜ್ ಮಾಡಿದ್ದ.  10 ಲಕ್ಷ ನೀಡುತ್ತೇನೆ ಮನೆಗೆ ಬಾ ಅಪ್ಪಾ ಎಂದು ಮೆಸೇಜ್ ಮಾಡಿದ್ದ .  ಇದಕ್ಕೆ  ಶಂಕರ್ ಯಾವುದೇ ರೆಸ್ಪಾನ್ಸ್ ನೀಡಿರಲಿಲ್ಲ. 16ನೇ ತಾರೀಖು ಅಂದರೆ ಗುರುವಾರ ಶಂಕರ್ ಮನೆ ಬಳಿ ಬಂದಿದ್ದ. ಆದರೆ ಮನೆ ಲಾಕ್​ ಆಗಿದ್ದ ಕಾರಣ ಮನೆಯಲ್ಲಿ ಯಾರು ಇಲ್ಲ ಎಂದು ಶಂಕರ್ ಭಾವಿಸಿದ್ದಾನೆ. ಎಲ್ಲಾದರು ಹೋಗಿರಬಹುದು ಎಂದು ಸ್ನೇಹಿತನ ಮನೆಯಲ್ಲಿ‌ ಉಳಿದುಕೊಂಡಿದ್ದಾನೆ. ನಿನ್ನೆ ಸಂಜೆ ಮನೆ ಬಳಿ ಮತ್ತೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

  ಇದನ್ನೂ ಓದಿ:Karnataka Weather Today: ಸೆಪ್ಟೆಂಬರ್ 21ರವರೆಗೆ ರಾಜ್ಯದಲ್ಲಿ ಧಾರಕಾರ ಮಳೆ ಸಾಧ್ಯತೆ - ಇಂದಿನ ಹವಾಮಾನ ವರದಿ ಹೀಗಿದೆ.

  ಆಶ್ರಮ ಕಟ್ಟಿಸಲು ಶಂಕರ್ ಮುಂದಾಗಿದ್ದೇಕೆ?

  ಮನೆ ಯಜಮಾನ ಶಂಕರ್​ ಕೌಟುಂಬಿಕ ಕಲಹದಿಂದ ಬೇಸತ್ತಿದ್ದ. ಪದೇ ಪದೇ ಕುಟಂಬದಲ್ಲಿ ನಡೆಯುತ್ತಿದ್ದ ಜಗಳದಿಂದ ಬಹಳ ಬೇಸರದಲ್ಲಿದ್ದ. ಮಕ್ಕಳ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟಿದ್ದರೂ ಕಲಹಗಳು ನಿಂತಿರಲಿಲ್ಲ. ಹೀಗಾಗಿ ಸಾಂಸಾರಿಕ ಸಮಸ್ಯೆಗಳಿಂದ ಹೊರ ಬರಲು ಆಶ್ರಮ ಕಟ್ಟಲು ಶಂಕರ್ ತೀರ್ಮಾನಿಸಿದ್ದ. ಆಶ್ರಮಕ್ಕಾಗಿ 5 ಎಕರೆ ಜಮೀನು‌ ಖರೀದಿ ಮಾಡಲು ಮುಂದಾಗಿದ್ದ. ತಮ್ಮ ಸ್ವಂತ ಊರಿನ ಬಳಿಯೇ 5 ಎಕರೆ ಜಮೀನು ಖರೀದಿಗೆ ಅಗ್ರಿಮೆಂಟ್ ಮಾಡಿಕೊಂಡಿದ್ದ. ಜಾಗದ ರಿಜಿಸ್ಟ್ರೇಷನ್ ಕೆಲಸ ಮಾತ್ರ ಬಾಕಿ ಉಳಿದಿತ್ತು.  ಹೆಣ್ಣು ಮಕ್ಕಳನ್ನ ಗಂಡನ ಮನೆಗೆ ಸೇರಿಸಿ, ಮಗನ ಮದುವೆ ಮಾಡಿ ಆಶ್ರಮ ಸೇರೋ ಆಲೋಚನೆ ಮಾಡಿಕೊಂಡಿದ್ದ. ಆದರೆ ಈಗ ಮನೆ ಮಂದಿಯೆಲ್ಲಾ ಯಮಲೋಕ ಸೇರಿದ್ದಾರೆ.

  ಬಿಕೋ ಎನ್ನುತ್ತಿದೆ ಬಂಗಲೆ

  ಮಕ್ಕಳು ಮೊಮ್ಮಕ್ಕಳಿಂದ ತುಂಬಿದ್ದ ಮನೆ ಈಗ ಈಗ ಖಾಲಿ ಖಾಲಿಯಾಗಿದೆ. ಮನೆಯಲ್ಲಿದ್ದ 7 ಜನರ ಪೈಕಿ ಐವರ ಸಾವನ್ನಪ್ಪಿದ್ದಾರೆ. ಶಂಕರ್ ಹಾಗೂ ಮೂರು ವರ್ಷದ ಮಗು ಪ್ರೇಕ್ಷಾ ಬಿಟ್ಟು ಉಳಿದೆಲ್ಲರೂ ಮೃತಪಟ್ಟಿದ್ದಾರೆ. ಪೊಲೀಸರು ತನಿಖೆ ದೃಷ್ಟಿಯಿಂದ ಐಷಾರಾಮಿ ಮನೆಗೆ ಬೀಗ ಹಾಕಿದ್ದಾರೆ. ಸದ್ಯ ಮನೆಯ ಯಜಮಾನ ಶಂಕರ್ ಹಲಗೇರಿ ಒಂಟಿಯಾಗಿದ್ದಾನೆ.

  ಹಸಿವು ತಾಳಲಾರದೇ ಪ್ರಾಣಬಿಟ್ಟಿದ್ದ ಹಸುಗೂಸು

  ಮಲಗಿದ್ದ ಮಂಚದ ಮೇಲೆಯೇ ಏನೂ ಅರಿಯದ 9 ತಿಂಗಳ ಗಂಡು ಮಗು ಪ್ರಾಣ ಬಿಟ್ಟಿದೆ. ಸಾಯುವ ಮೊದಲು ಸಿಂಧೂರಾಣಿ ಮಗುವಿಗೆ ಹಾಲುಣಿಸಿದ್ದಾರೆ.  ಹಾಲುಣಿಸಿ ಮಗುವನ್ನ ಮಂಚದ ಮೇಲೆ ಮಲಗಿಸಿದ್ದರು. ಮತ್ತೊಂದು ಮಗು ಪ್ರೇಕ್ಷಾಳಿಗೆ (ಬದುಕುಳಿದಿರುವ ಮಗು) ಊಟ ತಿನ್ನಿಸಿ ಮಲಗಿಸಿದ್ದಾರೆ. ಮಕ್ಕಳು ಮಲಗಿದ ಮೇಲೆ ಅಮ್ಮ ಭಾರತಿ , ಮಕ್ಕಳಾದ ಸಿಂಚನ, ಸಿಂಧೂರಾಣಿ  ಹಾಗೂ ಮಧು ಸಾಗರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಎಲ್ಲರೂ ಪ್ರತ್ಯೇಕ ರೂಮ್ ಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿದ್ದೆಯಿಂದ ಎದ್ದ ಒಂಭತ್ತು ತಿಂಗಳ ಗಂಡುಮಗು ಅಳುವುದಕ್ಕೆ ಶುರು ಮಾಡಿದೆ. ಹಸಿವಿನಿಂದ ಸಾಕಷ್ಟು ಹೊತ್ತು ಅತ್ತಿದೆ. ಮತ್ತೊಂದು ಮಗು ಪ್ರೇಕ್ಷ ಕೂಡ ನಿದ್ದೆಯಿಂದ ಎದ್ದು ಅಳುವುದಕ್ಕೆ ಶುರು ಮಾಡಿದೆ‌. ಬಂಗಲೆ ಸೌಂಡ್ ಫ್ರೂಫ್ ಇದ್ದ ಕಾರಣ ಮಕ್ಕಳ ಆಕ್ರಂದನ ಯಾರಿಗೂ ಕೇಳಿಸಿಲ್ಲ. 9 ತಿಂಗಳ ಹಸುಗೂಸು ಹಾಲಿಲ್ಲದೆ ಅತ್ತು ಅತ್ತು ಪ್ರಾಣ ಬಿಟ್ಟಿದೆ.

  5 ದಿನಗಳ ಹೋರಾಟ ನಡೆಸಿ ಬದುಕುಳಿದ ಪ್ರೇಕ್ಷಾ

  ಇತ್ತ ಮೂರು ವರ್ಷದ ಪ್ರೇಕ್ಷ ಪ್ರತಿಯೊಬ್ಬರ ರೂಂ ಬಳಿ ಹೋಗಿ ಅತ್ತಿದ್ದಾಳೆ. ಐದು ದಿ‌ನಗಳ ಕಾಲ ಅನ್ನ ನೀರಿಲ್ಲದೆ ಕಾಲ ಕಳೆದಿದ್ದಾಳೆ. ಕತ್ತಲಲ್ಲಿ ಎಲ್ಲರ ಮೃತದೇಹಗಳ ಬಳಿ ಹೋಗಿ ಹೋಗಿ ಅತ್ತಿದ್ದಾಳೆ. ಅಮ್ಮ ಸಿಂಚನಾಳ ಮೃತದೇಹದ ಬಳಿ ಕುಳಿತು ಅತ್ತಿದ್ದಾಳೆ. ಮೃತದೇಹಗಳಿಂದ ಹುಳುಗಳು ಹೊರಬಂದು ಕೆಟ್ಟ ವಾಸನೆ ಬರಲು ಆರಂಭಿಸಿದೆ. ಒಂದು ಕಡೆ ವಾಸನೆ , ಮತ್ತೊಂದು ಕಡೆ ಮೃತದೇಹದಿಂದ ಹೊರ ಬರ್ತಿರೊ ಹುಳುಗಳ ಮಧ್ಯೆ ಪ್ರೇಕ್ಷಳ 5 ದಿನದ ಜೀವನ ನಡೆದಿತ್ತು. ಹೊಟ್ಟೆ ಹಸಿವು, ಅನ್ನವಿಲ್ಲದೆ ನೀರಿಲ್ಲದೆ ಭಯದಲ್ಲೇ ಐದು ದಿನಗಳ ಕಾಲ ಹೋರಾಟ ನಡೆಸಿ ಪ್ರೇಕ್ಷ ಬದುಕುಳಿದ್ದಾಳೆ.
  Published by:Latha CG
  First published: