Bengaluru Crime: ಬೆಚ್ಚಿ ಬೀಳಿಸುತ್ತೆ ರೌಡಿಶೀಟರ್ ಬಬ್ಲಿ ಮರ್ಡರ್; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಬಬ್ಲಿ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಬ್ಯಾಂಕ್ ಅವರಣದ ಮೂರ್ನಾಲ್ಕು ಕಡೆ ಓಡಿದ್ದಾರೆ. ದುಷ್ಕರ್ಮಿಗಳು ಬಬ್ಲಿ ಹಿಂದೆ ಬಿದ್ದಿದ್ದರಿಂದ ಬಬ್ಲಿ ಎದ್ದು ಬಿದ್ದು ಓಡುತ್ತಿದ್ದು, ಕೊನೆಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸರಿಯಾದ ಜಾಗ ಸಿಗದಿದ್ದರಿಂದ ನೇರವಾಗಿ ಬ್ಯಾಂಕ್ ಒಳಗೆ ನುಗ್ಗಿದ್ದಾನೆ.

ಕೊಲೆಯಾದ ರೌಡಿಶೀಟರ್ ಬಬ್ಲಿ

ಕೊಲೆಯಾದ ರೌಡಿಶೀಟರ್ ಬಬ್ಲಿ

  • Share this:
ಬೆಂಗಳೂರು(ಜು.22): ರೌಡಿಶೀಟರ್ ಬಬ್ಲಿ ಹತ್ಯೆ ಪ್ರಕರಣ ಸಿಲಿಕಾನ್ ಸಿಟಿ ಜನರನ್ನ ಬೆಚ್ಚಿ ಬೀಳುವಂತೆ ಮಾಡಿತ್ತು. ಆದ್ರೆ ಪತ್ನಿ ಮತ್ತು ಪುಟ್ಟ ಮಗುವಿನ ಜೊತೆಗೆ ಹೊರಟಿದ್ದ ಬಬ್ಲಿ ಮೇಲೆ ಪುಂಡರ ಗ್ಯಾಂಗ್ ದಾಳಿ ನಡೆಸಿದ್ದು ಎದೆ ಜಲ್ ಎನ್ನುವಂತೆ ಮಾಡಿದೆ. ಜು. 19 ರ ಸೋಮವಾರ ಕೋರಮಂಗಲದ ಬ್ಯಾಂಕ್ ವೊಂದರಲ್ಲಿ ನಡೆದ ರೌಡಿಶೀಟರ್ ಜೋಸೆಫ್ ಬಬ್ಲಿ ಹತ್ಯೆ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಸಿಸಿಟಿವಿ ದೃಶ್ಯಗಳನ್ನ ಸಂಗ್ರಹ ಮಾಡಿದ್ದಾರೆ.

ಇದೇ 19 ನೇ ತಾರೀಖು ಜೋಸೆಫ್ ಅಲಿಯಾಸ್ ಬಬ್ಲಿ ತನ್ನ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಬ್ಯಾಂಕ್ ಗೆ ಬಂದಿದ್ದಾನೆ. ಬ್ಯಾಂಕ್ ಬಳಿ ಬೈಕ್ ನಿಲ್ಲಿಸುತ್ತಿದ್ದಂತೆ. ಅಲ್ಲಿಗೆ ಎರಡ್ಮೂರು ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ವೊಂದು ನೋಡ ನೋಡುತ್ತಿದ್ದಂತೆ ಬಬ್ಲಿ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬಬ್ಲಿ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಬ್ಯಾಂಕ್ ಅವರಣದ ಮೂರ್ನಾಲ್ಕು ಕಡೆ ಓಡಿದ್ದಾರೆ. ದುಷ್ಕರ್ಮಿಗಳು ಬಬ್ಲಿ ಹಿಂದೆ ಬಿದ್ದಿದ್ದರಿಂದ ಬಬ್ಲಿ ಎದ್ದು ಬಿದ್ದು ಓಡುತ್ತಿದ್ದು, ಕೊನೆಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸರಿಯಾದ ಜಾಗ ಸಿಗದಿದ್ದರಿಂದ ನೇರವಾಗಿ ಬ್ಯಾಂಕ್ ಒಳಗೆ ನುಗ್ಗಿದ್ದಾನೆ.

ಇದನ್ನೂ ಓದಿ:Coronavirus: ದೇಶದಲ್ಲಿ ಈವರೆಗೆ ಕೊರೋನಾದಿಂದ ಸತ್ತಿದ್ದು 4 ಲಕ್ಷ ಅಲ್ಲ, 49 ಲಕ್ಷ ಜನ...! ಸರ್ಕಾರ ಹೇಳಿದ್ದೆಲ್ಲಾ ಸುಳ್ಳಾ?

ಬಬ್ಲಿ ಬ್ಯಾಂಕ್ ಒಳಗೆ ನುಗ್ಗಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಹ ದುಷ್ಕರ್ಮಿಗಳು ಬೆಂಬಿಡದೆ ಬೆನ್ನತ್ತಿ ಬ್ಯಾಂಕ್ ಒಳ ನುಗ್ಗಿ ಹತ್ಯೆಗೈದಿದ್ದಾರೆ. ಬಬ್ಲಿ ಮೇಲೆ ಅಟ್ಯಾಕ್ ಆದ ವೇಳೆ ಆತನ ಪತ್ನಿ ಸಹ ಬಬ್ಲಿ ರಕ್ಷಣೆಗೆ ಮುಂದಾಗಿದ್ದು ಸಾಕಷ್ಟು ಪ್ರಯತ್ನ ನಡೆಸಿದ್ದರು. ಇನ್ನು ಸಾರ್ವಜನಿಕರು ಸಹ ಅಲ್ಲಿ ಓಡಾಡುತ್ತಿರುವುದು ಕಂಡು ಬಂದಿತು.

ಆರೋಪಿಗಳು ಮಾರಾಕಾಸ್ತ್ರಗಳನ್ನ ಹಿಡಿದು ಓಡಾಡುತ್ತಾ ಅಲ್ಲಿದ್ದವರನ್ನ ಬೆದರಿಸಿದ್ದಾರೆ. ಏಳೆಂಟು ಜನ ದುಷ್ಕರ್ಮಿಗಳ ಗ್ಯಾಂಗ್ ಇದ್ದುದ್ದರಿಂದ ಜನರನ್ನ ಬೆದರಿಸುತ್ತಿರುವುದು ಸಹ ಕಂಡು ಬಂದಿದೆ. ಬ್ಯಾಂಕ್ ಒಳಗೆ ಬಬ್ಲಿ ಹತ್ಯೆಯಾದ ಬಳಿಕ ಆರೋಪಿಗಳು ಬೈಕ್ ನಲ್ಲಿ ಆಡುಗೋಡಿ ಕಡೆ ಹೊರಟಿದ್ದು, ದಾರಿಯಲ್ಲಿ ಲಾಂಗು, ಮಚ್ಚು ಹಿಡಿದು ಸಂಭ್ರಮಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದೇ..? ವೈದ್ಯರು ಕೊಟ್ಟಿರುವ ಸಲಹೆ ಇಲ್ಲಿದೆ

ಬಬ್ಲಿ ಹತ್ಯೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾರ್ವಜನಿಕರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ಬಾಬ್ಲಿ ಮೇಲಿನ ಅಟ್ಯಾಕ್ ಸಂಬಂಧ ಕೋರಮಂಗಲ ಪೊಲೀಸರು ರಸ್ತೆಯಲ್ಲಿನ ಸಿಸಿಟಿವಿಗಳು, ಬ್ಯಾಂಕ್ ಸೇರಿ ಹಲವು ಸಿಸಿಟಿವಿ ಪೂಟೇಜ್ ಸಂಗ್ರಹ ಮಾಡಿ ತನಿಖೆ ನಡೆಸಿದ್ದಾರೆ. ಬಾಬ್ಲಿ ಹತ್ಯೆಯಲ್ಲಿ ಏಳೆಂಟು ಜನರ ಗ್ಯಾಂಗ್ ಇದ್ದು ನಿನ್ನೆ ಇಬ್ಬರು ಪ್ರಮುಖ ಆರೋಪಿಗಳಾದ ಪ್ರದೀಪ್ ಮತ್ತು ರವಿಯನ್ನ ಗುಂಡು ಹಾರಿಸಿ ಬಂಧಿಸಿದ್ದರು. ಉಳಿದ ಹಂತಕರಿಗೆ ಪೊಲೀಸರು ಬಲೆ ಬೀಸಿದ್ದು ಎಲ್ಲೆಡೆ ವ್ಯಾಪಕ ಶೋಧ ನಡೆಸಿದ್ದಾರೆ.

ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದ ಜೋಸೆಫ್ ಬಬ್ಲಿ ಬ್ಯಾಂಕ್ ಕೆಲಸದ ಮೇಲೆ ಕೋರಮಂಗಲಕ್ಕೆ ಹೋಗಿದ್ದ. ಈ ವೇಳೆ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ದುಷ್ಕರ್ಮಿಗಳು ಬ್ಯಾಂಕ್ ಬಳಿ ಹತ್ಯೆ ಮಾಡಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Latha CG
First published: