Bengaluru: ಚಿಕ್ಕಪೇಟೆಯಲ್ಲಿ ಪಾಕ್‌ ಪರ ಗೂಢಚಾರಿ ಬಂಧನ; ಸೈನ್ಯದ ಯೂನಿಫಾರ್ಮ್ ಹಾಕೊಂಡು ಎಲ್ರನ್ನೂ ಯಾಮಾರಿಸಿಬಿಟ್ಟ!

"ತಾನು ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಸಿಂಗ್ ನಮಗೆ ಹೇಳಿದ್ದ. ಅವನ ಕತೆ ಸುಳ್ಳಾಗಿರಬಹುದು ಎಂದು ತಿಳಿದುಕೊಳ್ಳಲು ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ'' ಎಂದು ಒಬ್ಬ ನಿವಾಸಿ ಹೇಳಿದನು.

ಬಂಧಿತ ಗೂಢಾಚಾರಿ

ಬಂಧಿತ ಗೂಢಾಚಾರಿ

  • Share this:
ಬೆಂಗಳೂರಿನಲ್ಲಿ ಕಳೆದ ವಾರ ಜಿತೇಂದ್ರ ಸಿಂಗ್ ಎಂಬಾತನ ಬಂಧನವಾಗಿದ್ದು, ಆತನನ್ನು ಉಗ್ರ ಎಂದು ಶಂಕಿಸಲಾಗಿತ್ತು. ಅಲ್ಲದೆ, ವಿದೇಶಿ ಶಕ್ತಿಗಾಗಿ ಅಂದರೆ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಸುದ್ದಿ ಹೊರಬಿದ್ದ ಬಳಿಕ ಬೆಂಗಳೂರು ಸೇರಿ ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಇನ್ನು, ಬೆಂಗಳೂರಿನ ಚಿಕ್ಕಪೇಟೆ, ಕಾಟನ್‌ ಪೇಟೆ, ಜಾಲಿ ಮೊಹಲ್ಲಾದಲ್ಲಿ ಆತ ವಾಸಿಸುತ್ತಿದ್ದ, ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದ ಬಳಿಕ ಆ ಪ್ರದೇಶದ ನಿವಾಸಿಗಳು ಇನ್ನೂ ಹೆದರಿದ್ದಾರೆ. ಈಗ ಆ ಪ್ರದೇಶದ ಜನರು ಜಿತೇಂದ್ರ ಸಿಂಗ್‌ ಬಗ್ಗೆ ಏನು ಹೇಳಿದ್ದಾರೆ ಬನ್ನಿ ನೋಡೋಣ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಪರವಾಗಿ ವಿಚಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದ್ದಾಗಿ ಜಿತೇಂದ್ರ ಸಿಂಗ್ ಈಗಾಗಲೇ ಒಪ್ಪಿಕೊಂಡಿದ್ದು, ಜಾಲಿ ಮೊಹಲ್ಲಾದ ನಿವಾಸಿಗಳು ಮತ್ತು ಕಾಟನ್‌ಪೇಟೆ ವ್ಯಾಪಾರಿ ಸಮುದಾಯದ ಸದಸ್ಯರಿಗೆ, ಈ ಸುದ್ದಿ ಬರ ಸಿಡಿಲಿನಂತೆ ಬಂದು ಎರಗಿದೆ ಎಂದು ಮಿಲಿಟರಿ ಇಂಟೆಲಿಜೆನ್ಸ್ ಅಧಿಕಾರಿಗಳು ಡೆಕ್ಕನ್‌ ಹೆರಾಲ್ಡ್‌ಗೆ ಹೇಳಿದ್ದಾರೆ.

ಸಿಂಗ್ ತನ್ನ ಸೇನಾ ಸಮವಸ್ತ್ರದಲ್ಲಿ ಬೆಂಗಳೂರಿನ ತನ್ನ ಮನೆಯ ಸುತ್ತಮುತ್ತಲ ಪ್ರದೇಶದಲ್ಲಿ ಆಗಾಗ್ಗೆ ನಡೆಯುವುದನ್ನು ಕಾಣಬಹುದು ಎಂದು ನಿವಾಸಿಗಳು ಹೇಳಿದರು. "ತಾನು ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಸಿಂಗ್ ನಮಗೆ ಹೇಳಿದ್ದ. ಅವನ ಕತೆ ಸುಳ್ಳಾಗಿರಬಹುದು ಎಂದು ತಿಳಿದುಕೊಳ್ಳಲು ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ'' ಎಂದು ಒಬ್ಬ ನಿವಾಸಿ ಹೇಳಿದನು.

ಇದನ್ನೂ ಓದಿ:UPSC: 247 ಹುದ್ದೆಗಳು ಖಾಲಿ, ಎಂಜಿನಿಯರಿಂಗ್ ಸೇವಾ ಪರೀಕ್ಷೆಗೆ ದಿನಾಂಕ ಪ್ರಕಟ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಸಿಂಗ್‌ರನ್ನು ಸ್ನೇಹಪರ ಎಂದು ಹಲವರು ಸ್ಥಳೀಯರು ವಿವರಿಸಿದ್ದಾರೆ. ಇನ್ನೊಂದೆಡೆ, ಆತ ಕೆಲಸ ಮಾಡುತ್ತಿದ್ದ ಎಂದು ಹೇಳಲಾದ ಪೂರ್ವಿ ಪ್ಲಾಜಾದ ಅಧ್ಯಕ್ಷ ಸಂತೋಷ್‌ ಶಂಕರ್ ಆತನ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಮಂಗಳವಾರ ಬೆಳಗ್ಗೆ ಈ ವ್ಯಕ್ತಿಯ ಬಗ್ಗೆ ನನಗೆ ಹೇಳಲಾಯಿತು, ಆದರೆ ನಾನು ಅವರ ಫೋಟೋಗಳನ್ನು ನೋಡಿದಾಗ, ನಾನು ಅವನನ್ನು ಪ್ಲಾಜಾದಲ್ಲಿ ನೋಡಿದ ನೆನಪಿಲ್ಲ. ವಾಸ್ತವವಾಗಿ, ಪ್ಲಾಜಾದ ನೆಲ ಮಹಡಿಯಲ್ಲಿ ಆತ ಕೆಲಸ ಮಾಡಬೇಕಿದ್ದ ಅಂಗಡಿಯನ್ನು ಹಲವು ಕಾಲದಿಂದ ಮುಚ್ಚಲಾಗಿದೆ. ಆ ಅಂಗಡಿಯನ್ನು ಮುಚ್ಚಿದ್ದರೂ, ಅವನು ಯಾವ ವಹಿವಾಟುಗಳನ್ನು ಮಾಡಿದ್ದ ಎಂದು ನನಗೆ ಗೊತ್ತಿಲ್ಲ" ಎಂದು ಶಂಕರ್ ಹೇಳಿದರು.

ಇನ್ನು, ಪೂರ್ವಿ ಪ್ಲಾಜಾ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಕೇಂದ್ರ ಕಚೇರಿ ಹತ್ತಿರದ ರಸ್ತೆಯಲ್ಲೇ ಇದೆ. ಸಿಸಿಬಿ ಅಧಿಕಾರಿಗಳು ಶುಕ್ರವಾರ ಜಂಟಿಯಾಗಿ ಜಿತೇಂದ್ರ ಸಿಂಗ್‌ರನ್ನು ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ಅಧಿಕಾರಿಗಳೊಂದಿಗೆ ಬಂಧಿಸಿದರು. ಆತ ಬಟ್ಟೆ ಮತ್ತು ಫಿನೈಲ್‌ ವ್ಯವಹಾರ ಮಾಡುತ್ತಿದ್ದ ಎಂದು ನೆರೆಹೊರೆಯವರು ಹೇಳಿಕೊಂಡಿದ್ದಾರೆ. ಒಬ್ಬ ಸ್ಥಳೀಯ ವ್ಯಾಪಾರಿಯು ತಾನು ಚಿಕ್ಕಪೇಟೆ ಪ್ರದೇಶದಲ್ಲಿ ರಸ್ತೆಬದಿ ಮಾರಾಟಗಾರರಿಗೆ ರೆಡಿಮೇಡ್ ಟಿ-ಶರ್ಟ್‌ಗಳ ವಿತರಕರಾಗಿ ಸೇವೆ ಸಲ್ಲಿಸಿದ್ದಾಗಿ ಹೇಳಿದರು.

ಆದರೂ, ಸಿಂಗ್ ಹಲವು ತಿಂಗಳುಗಳ ಹಿಂದೆ ಬಿಟ್ಟುಹೋದ ಇನ್ನೊಬ್ಬ ವ್ಯಕ್ತಿಯೊಂದಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಈ ಸಮಯದಲ್ಲಿ ಆತನ ರೂಂಮೇಟ್ ಕೂಡ ಆತನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ನಾವು ಅನುಮಾನಿಸಲು ಯಾವುದೇ ಕಾರಣವಿಲ್ಲ'' ಎಂದು ಸೇನೆಯ ಮೂಲಗಳು ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿವೆ.

''ಪೂಜಾ ಜೀ'' ಎಂದು ಹೇಳಿಕೊಂಡ ಆ ಮಹಿಳೆಯೊಂದಿಗೆ ಅಂದರೆ ಪಾಕಿಸ್ತಾನದ ತನ್ನ ಹ್ಯಾಂಡ್ಲರ್‌ನೊಂದಿಗೆ ರಾಜಸ್ಥಾನ ಮೂಲದ ಜಿತೇಂದ್ರ ಸಿಂಗ್ ಹೇಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದನೆಂಬುದನ್ನು ತನಿಖಾ ಸಂಸ್ಥೆಗಳು ಮತ್ತಷ್ಟು ತನಿಖೆಯ ಮೂಲಕವೇ ಬೆಳಕು ಚೆಲ್ಲಬೇಕಿದೆ.

ಇದನ್ನೂ ಓದಿ:ಅಸ್ಸಾಂ: ಪೊಲೀಸ್​ ಗುಂಡಿಗೆ ಬಲಿಯಾಗಿದ್ದ ವ್ಯಕ್ತಿಯ ಮೇಲೆ ಅಮಾನವೀಯ ದಾಳಿ ನಡೆಸಿದ್ದ ಛಾಯಾಗ್ರಾಹಕ ಬಂಧನ!

"ಜಿತೇಂದ್ರ ಸಿಂಗ್ ಡೇಟಾ ಕಳುಹಿಸಲು WhatsApp ಬಳಸುತ್ತಿದ್ದರು. ಡೇಟಾ ಡೌನ್‌ಲೋಡ್ ಮಾಡಿದ ನಂತರ, ಆತ ಸಂದೇಶವನ್ನು ಡಿಲೀಟ್‌ ಮಾಡುತ್ತಿದ್ದ” ಎಂದು ಮಿಲಿಟರಿ ಇಂಟೆಲಿಜೆನ್ಸ್ ಮೂಲ ಹೇಳಿದೆ. ಡಿಲೀಟ್‌ ಮಾಡಿದ ಕಂಟೆಂಟ್‌ ಮರುಪಡೆಯಲು ಸೈಬರ್ ತಜ್ಞರು ಈಗ ಕೆಲಸ ಮಾಡುತ್ತಿದ್ದಾರೆ ಎಂದೂ ತಿಳಿದುಬಂದಿದೆ.
Published by:Latha CG
First published: