ಬೆಂಗಳೂರು(ಆ.09): ಡಿಜೆ ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಮಜರ್ ಖಾನ್ ಕೊಲೆ ಪ್ರಕರಣದಲ್ಲಿ ಏಳು ಮಂದಿ ಬಂಧನವಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಮಹಿಳೆಯರು ಸೇರಿ 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಹಬಾಜ್, ಶಕೀಬ್, ಅಲೀಂ, ಫೈರೋಜ್, ರೇಷ್ಮಾ, ಸಮೀನಾ ಹಾಗೂ ಹಸೀನಾ ಬಂಧಿತ ಆರೋಪಿಗಳು. ಡಿ.ಜೆ.ಹಳ್ಳಿಯ ಶಿವರಾಜ್ ರಸ್ತೆಯಲ್ಲಿ ವಾಸವಾಗಿದ್ದ ಮೃತ ಮಜರ್ ಖಾನ್ ಆಲಿಯಾಸ್ ಭಟ್ಟಿ ಮಜರ್ ಹಾಗೂ ಆರೋಪಿಗಳೆಲ್ಲರೂ ಪರಸ್ಪರ ಸ್ನೇಹಿತರಾಗಿದ್ದರು. ಆರೋಪಿಗಳೆಲ್ಲರೂ ಅವಿಭಕ್ತ ಕುಟುಂಬದಲ್ಲಿ ವಾಸವಾಗಿದ್ದರು.
ಮಜರ್ ಎರಡನೇ ಮದುವೆಯಾಗಿದ್ದ. ಮೊದಲನೇ ಪತ್ನಿಗೆ 7 ಮಕ್ಕಳಿದ್ದರೆ, ಎರಡನೇ ಪತ್ನಿ ಒಂದು ಮಗುವಿದೆ. ಕುಡಿದ ನಶೆಯಲ್ಲಿ ಮನೆಯಲ್ಲಿ ಎರಡನೇ ಹೆಂಡತಿಯೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡುತ್ತಿದ್ದ. ಇದರಿಂದ ನೊಂದು ಅದೇ ಏರಿಯಾದಲ್ಲಿ ವಾಸವಾಗಿದ್ದ ಮೊಹಮ್ಮದ್ ಶಾಬಾಜ್ ಸ್ನೇಹಿತ ಸಾಕೀಬ್ ಬಂಗಾರ್ ಜೊತೆ 2017ರಲ್ಲಿ ಓಡಿ ಹೋಗಿದ್ದಳು. ಇದಕ್ಕೆ ಆರೋಪಿ ಶಹಬಾಜ್ ಸಹಕಾರ ನೀಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿ ಆಗಾಗ ಕುಡಿದು ಬಂದು ಮನೆ ಬಳಿ ಗಲಾಟೆ ಮಾಡುತ್ತಿದ್ದ.
ಮೊನ್ನೆ ಬೆಳಗ್ಗೆ ಸಹ ಆರೋಪಿಗಳ ಮನೆ ಮುಂದೆ ಹೋಗಿ ಮಜರ್ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದರಿಂದ ಕೆರಳಿದ ಆರೋಪಿಗಳು ಮನೆ ಮುಂದೆ ಚಾಕುವಿಂದ ತಿವಿದು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಡಿಜೆ ಹಳ್ಳಿ ಇನ್ಸ್ಪೆಕ್ಟರ್ ಕಿರಣ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದೆ ಎಂದ ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ:Petrol Price Today: ಬೆಂಗಳೂರು ಸೇರಿ ಇತರೆ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರ ಹೀಗಿದೆ..!
ಇತ್ತೀಚೆಗೆ ರೌಡಿ ಆಕ್ಟಿವಿಟೀಸ್ ಹೆಚ್ಚಾದ ಹಿನ್ನಲೆ ಖುದ್ದು ಡಿಸಿಪಿ ಶರಣಪ್ಪ ಮನೆಗೆ ಹೋಗಿ ಸರ್ಚ್ ಮಾಡಿ ವಾರ್ನಿಂಗ್ ಕೊಟ್ಟಿದ್ರು. ಈ ಮಧ್ಯೆ ಪಕ್ಕದ ಮನೆಯ ಯುವತಿಗೆ ಕಿರುಕುಳ ಕೊಟ್ಟಿದ್ದ ಎನ್ನಲಾಗಿದೆ. ಎಷ್ಟೇ ವಾರ್ನ್ ಮಾಡಿದ್ರೂ, ಮಜರ್ ಪುನರಾವರ್ತನೆ ಮಾಡ್ತಿದ್ದ.. ಹೀಗಾಗಿ ರಾತ್ರಿ ಯುವತಿ ಕುಟುಂಬ ಮತ್ತು ಮಜರ್ ನಡುವೆ ಗಲಾಟೆಯಾಗಿದೆ. ಮಜರ್ ದೌರ್ಜನ್ಯ ಜಾಸ್ತಿಯಾದ ಹಿನ್ನಲೆ ಪಕ್ಕದ ಮನೆಯ ಬತ್ತಿ ಫೈರೋಜ್ ಕುಟುಂಬ ಕೊಲೆಗೆ ಪ್ಲಾನ್ ಮಾಡಿತ್ತು. ಅದ್ರಂತೆ ಮೊನ್ನೆ ಬೆಳಗ್ಗೆ ಬತ್ತಿ ಪೈರೋಜ್ ಮತ್ತು ಕುಟುಂಬಸ್ಥರು ಕಾಂಪ್ರಮೈಸ್ ಗೆ ಮಜರ್ ನನ್ನು ಕರೆದಿದ್ದರು. ಈ ನಡುವೆ ಮಜರ್ ಮೇಲೆ ಮುಗಿಬಿದ್ದ ಕುಟುಂಬ ಮಾರಕಾಸ್ತ್ರಗಳಿಂದ ಕೊಚ್ಚಿತ್ತು.
ತೀವ್ರ ರಕ್ತಸ್ರಾವವಾದ ಹಿನ್ನಲೆ ಸ್ಥಳದಲ್ಲೇ ಮಜರ್ ಸಾವನ್ನಪ್ಪಿದ್ದ.. ಆದ್ರೆ ಫೈರೋಜ್ ಕುಟುಂಬಸ್ಥರ ಕೋಪ ಎಷ್ಟಿತ್ತು ಅಂದ್ರೆ, ಯಾವುದೇ ಭಯವಿಲ್ಲದೇ ಮೃತ ಮಜರ್ ದೇಹ ತಂದು ರಸ್ತೆಯಲ್ಲಿ ಬಿಸಾಡಿ ಮನೆಯೊಳಗೆ ಹೋಗಿದ್ರು. ಕೂಡಲೇ ಸ್ಥಳೀಯರು ಪೊಲೀಸ್ರಿಗೆ ಮಾಹಿತಿ ನೀಡಿದ್ರು. ಸದ್ಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೈರೋಜ್ ಕುಟುಂಬಸ್ಥರನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:Viral Video: ದಾರಿ ಮಧ್ಯೆ ಕೈಕೊಟ್ಟ ಜೀಪ್, ಕೆಸರುಮಯ ರಸ್ತೆಯಲ್ಲಿ ನಡೆದುಕೊಂಡೇ ಹೋಗಿ ಜನರ ಸಮಸ್ಯೆ ಕೇಳಿದ ಸಚಿವ ಎಸ್.ಅಂಗಾರ..!
ಅದೇನೇ ಇರಲಿ ಮೊನ್ನೆಯಷ್ಟೇ ಬಾಣಸವಾಡಿ ಪೊಲೀಸ್ ಠಾಣೆ ಸನಿಹದಲ್ಲೇ ಕೊಲೆ ಮಾಡಲಾಗಿತ್ತು. ಇದು ಕೂಡಾ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಕೊಲೆಯಾಗಿರೋದು ವಿಪರ್ಯಾಸ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ