Bengaluru Theft: ಟ್ರಾಫಿಕ್ ಲೈಟ್​ಗಳ ಬ್ಯಾಟರಿ ಕದಿಯೋ ಬೆಂಗಳೂರಿನ ಖತರ್ನಾಕ್ ಜೋಡಿ!

ಸಿಲಿಕಾನ್ ಸಿಟಿಯಲ್ಲಿ ಜೋಡಿಯೊಂದು ಕಳ್ಳತನಕ್ಕೆ ಪ್ಲಾನ್ ಮಾಡಿದೆ. ಏನು ಪ್ಲಾನ್ ಅಂತೀರಾ ? ಬೆಂಗ್ಲೂರು ಟ್ರಾಫಿಕ್ ಬಗ್ಗೆ ನಿಮಗೆ ಗೊತ್ತೇ ಇದೆಯಲ್ಲಾ ? ಗಲ್ಲಿಗೊಂದು ಸಿಗ್ನಲ್. ಈ ಎಲ್ಲಾ ಸಿಗ್ನಲ್ ಲೈಟ್ಸ್​ಗಳ ಬ್ಯಾಟರಿ ಕದಿಯೋದೇ ಇವರ ಕೆಲಸ.

ಟ್ರಾಫಿಕ್ ಲೈಟ್

ಟ್ರಾಫಿಕ್ ಲೈಟ್

  • Share this:
ಕಳ್ಳರಿಗೆ ಕದಿಯೋಕೆ ನಿರ್ದಿಷ್ಟ ಕಾರಣ ಎಂದೇನೂ ಇಲ್ಲ. ಕದಿಯೋದು (Theft) ಒಂದು ಕಲೆ ಎಂದು ವಿಧ ವಿಧವಾಗಿ ಕಳ್ಳತನ ಮಾಡುವವರಿದ್ದಾರೆ. ಕಳ್ಳರ ಐಡಿಯ ಟೆಕ್ನಿಕ್​ಗಳನ್ನು ನೋಡಿ ಬಹಳಷ್ಟು ಪ್ರಕರಣಗಳಲ್ಲಿ ಪೊಲೀಸರೇ ಸುಸ್ತಾಗುತ್ತಾರೆ. ವಿಚಿತ್ರವಾಗಿರೋ ಐಡಿಯಾಗಳನ್ನು(Idea) ಮಾಡುತ್ತಾ, ಏನೇನೋ ಟಾರ್ಗೆಟ್ (Target) ಮಾಡಿ ಕಳ್ಳತನ ಮಾಡುತ್ತಾರೆ. ಇದರಿಂದ ದೊಡ್ಡ ಲಾಭ (Profit) ಆಗುತ್ತದೆ ಅಂತೇನೂ ಇಲ್ಲ. ಆದರೆ ಚಿಕ್ಕ ಪುಟ್ಟ ಕಳ್ಳತನಕ್ಕೂ ದೊಡ್ಡ ಐಡಿಯಾ, ದೊಡ್ಡ ಪ್ಲಾನಿಂಗ್ (Planning), ದೊಡ್ಡ ರಿಸ್ಕ್ ತಗೊಳ್ಳೋ ಕಳ್ಳರಿದ್ದಾರೆ. ಕಳ್ಳರು ಎಂದ ಮೇಲೆ ಏನು ಕದಿಯುತ್ತಾರೆ ? ಹಣ, ಚಿನ್ನ, ಮೊಬೈಲ್, ಬೈಕ್ (Bike) ಎಂದು ಕೊಂಡಿರಾ ? ಹಾಗಿದ್ರೆ ಈ ಕಳ್ಳರು ಸಿಕ್ಕಾಪಟ್ಟೆ ಡಿಫರೆಂಟ್ ಬಿಡಿ, ಇವರ ಟಾರ್ಗೆಟ್ ಏನೆಂದು ಗೊತ್ತಾದರೆ ಶಾಕ್ ಆಗೋದು ಪಕ್ಕಾ.

ಹೌದು, ಸಿಲಿಕಾನ್ ಸಿಟಿಯಲ್ಲಿ ಜೋಡಿಯೊಂದು ಕಳ್ಳತನಕ್ಕೆ ಪ್ಲಾನ್ (Plan) ಮಾಡಿದೆ. ಏನು ಪ್ಲಾನ್ ಅಂತೀರಾ ? ಬೆಂಗ್ಲೂರು ಟ್ರಾಫಿಕ್ ಬಗ್ಗೆ ನಿಮಗೆ ಗೊತ್ತೇ ಇದೆಯಲ್ಲಾ ? ಗಲ್ಲಿಗೊಂದು ಸಿಗ್ನಲ್. ಈ ಎಲ್ಲಾ ಸಿಗ್ನಲ್ ಲೈಟ್ಸ್​ಗಳ ಬ್ಯಾಟರಿ ಕದಿಯೋದೇ ಇವರ ಕೆಲಸ.

ಬ್ಯಾಟರಿಗಳೇ ಟಾರ್ಗೆಟ್

ಟ್ರಾಫಿಕ್ ಸಿಗ್ನಲ್‌ಗಳಿಂದ ಬ್ಯಾಟರಿಗಳನ್ನು ಕದಿಯುತ್ತಿದ್ದ ದಂಪತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ 68 ಟ್ರಾಫಿಕ್ ಜಂಕ್ಷನ್‌ಗಳಿಂದ ಕದ್ದ 230 ಬ್ಯಾಟರಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳನ್ನು ಚಲಾಯಿಸಲು ಈ ಬ್ಯಾಟರಿಗಳನ್ನು ಬಳಸಲಾಗುತ್ತದೆ.

ಇದನ್ನೂ ಓದಿ: Fraud Case: 892 ಕೋಟಿ ರೂ. ಹಗರಣದಲ್ಲಿ ಶ್ರೀ ಗುರುರಾಘವೇಂದ್ರ ಸೊಸೈಟಿ ಅಧ್ಯಕ್ಷ ಅರೆಸ್ಟ್, ಮುಂದೇನು?

ಲಾಕ್​ಡೌನ್ ಸಮಯದಲ್ಲಿ ಟೀ ಮಾರಾಟ ಕುಸಿತ

ಆರೋಪಿಗಳನ್ನು ಚಿಕ್ಕಬಾಣಾವರದ ನಿವಾಸಿಗಳಾದ ಎಸ್ ಸಿಕಂದರ್ (30) ಮತ್ತು ಅವರ ಪತ್ನಿ ನಜ್ಮಾ ಸಿಕಂದರ್ (29) ಎಂದು ಗುರುತಿಸಲಾಗಿದೆ. ಎಸ್ ಸಿಕಂದರ್ ಟೀ ಅಂಗಡಿಯನ್ನು ನಡೆಸುತ್ತಿದ್ದರು. ಆದರೆ ಲಾಕ್‌ಡೌನ್ (Lockdown) ಸಮಯದಲ್ಲಿ ಅದನ್ನು ಮುಚ್ಚಬೇಕಾಯಿತು ಎಂದು ಪೊಲೀಸ್ (Police) ಮೂಲಗಳು ತಿಳಿಸಿವೆ. ನಂತರ, ಅವರು ತಮ್ಮ ಸ್ಕೂಟರ್‌ನಲ್ಲಿ ಚಹಾ (Tea) ಮಾರಾಟ ಮಾಡಲು ಪ್ರಾರಂಭಿಸಿದರು.

ಚಹಾ ಫ್ಲಾಸ್ಕ್ ಒಡೆದಿದ್ದ ಪೊಲೀಸರು

ಆದರೆ ಹಲವಾರು ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸರು ಕಿರುಕುಳ (Torcher) ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ಸಂದರ್ಭದಲ್ಲಿ, ಅವರು ಅವನ ಫ್ಲಾಸ್ಕ್ ಅನ್ನು ಸಹ ಒಡೆದಿದ್ದಾರೆ. ಘಟನೆಯಿಂದ ಕೋಪಗೊಂಡ ಎಸ್ ಸಿಕಂದರ್ ಟ್ರಾಫಿಕ್ ಸಿಗ್ನಲ್‌ಗಳಲ್ಲಿ (Traffic Signal) ಅಳವಡಿಸಲಾದ ಬ್ಯಾಟರಿಗಳನ್ನು ಕದಿಯಲು ನಿರ್ಧರಿಸಿದರು.

ಇದನ್ನೂ ಓದಿ: Hijab Controversy: ಶಾಲಾ ಕಾಲೇಜುಗಳ ಸುತ್ತ ಮುಂದುವರೆದ ನಿಷೇಧಾಜ್ಞೆ, ನಿಲ್ಲದ ವಿದ್ಯಾರ್ಥಿನಿಯರ ಪರ-ವಿರೋಧ ನಿಲುವು

ಕಡಿಮೆ ಬೆಲೆಗೆ ಬ್ಯಾಟರಿ ಮಾರಾಟ

ಪೊಲೀಸ್ ಅಧಿಕಾರಿಯೊಬ್ಬರು, ಕೆಲವು ತಿಂಗಳ ಹಿಂದೆ ಟ್ರಾಫಿಕ್ ಸಿಗ್ನಲ್‌ಗಳಿಂದ ಬ್ಯಾಟರಿಗಳು ಕಾಣೆಯಾಗಲು ಪ್ರಾರಂಭಿಸಿದವು. ಬ್ಯಾಟರಿಗಳು ಕಣ್ಮರೆಯಾಗುವುದು ಬಹುತೇಕ ದೈನಂದಿನ ವ್ಯವಹಾರವಾಗಿದೆ. ಪೊಲೀಸ್ ತಂಡವು ಅಪರಾಧವನ್ನು ತನಿಖೆ ಮಾಡುವಾಗ 300 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳಿಂದ (CC Camera) ದೃಶ್ಯಗಳನ್ನು ಸ್ಕ್ಯಾನ್ ಮಾಡಿದೆ. ಎಸ್ ಸಿಕಂದರ್ ಮತ್ತು ಅವರ ಪತ್ನಿ 3 ರಿಂದ 5 ರವರೆಗೆ ಮಾತ್ರ ಕಾರ್ಯಾಚರಣೆ ನಡೆಸಿದರು. ಅವರು ಬ್ಯಾಟರಿಗಳನ್ನು ಅಶೋಕ್‌ನಗರದ ಅಂಗಡಿಯವ ಧನಶೇಖರ್‌ಗೆ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದರು ಎಂದು ತಿಳಿಸಿದ್ದಾರೆ.

ಡೌಟ್ ಬರದಂತೆ ಪತ್ನಿಯ ಜೊತೆ ಸವಾರಿ

ಎಸ್ ಸಿಕಂದರ್ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಟಿವಿಎಸ್ ಎನ್‌ಟಾರ್ಕ್ 125 ಸಿಸಿ ಗೇರ್‌ಲೆಸ್ ಸ್ಕೂಟರ್‌ನ ಬ್ಯಾಕ್‌ಲೈಟ್ ಅನ್ನು ನಿಷ್ಕ್ರಿಯಗೊಳಿಸಿದ್ದ. ಸಾಮಾನ್ಯವಾಗಿ ನಾವು ಬೆಳ್ಳಂಬೆಳಗ್ಗೆ ಮಹಿಳೆಯರಿರುವ ವಾಹನಗಳನ್ನು (Vehicles) ನಿಲ್ಲಿಸುವುದಿಲ್ಲ. ಹೀಗಾಗಿ, ಸಿಕಂದರ್ ಬ್ಯಾಟರಿ ಕದಿಯಲು ಹೊರಟಾಗ ಪತ್ನಿಯನ್ನು ಕರೆದುಕೊಂಡು ಹೋಗಿದ್ದ. ದಂಪತಿಗಳು ಬ್ಯಾಟರಿಗಳನ್ನು ಸಾಗಿಸಲು ತರಕಾರಿ ಚೀಲವನ್ನು ಬಳಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಗೊರಗುಂಟೆಪಾಳ್ಯ ರಸ್ತೆಯಲ್ಲಿ ಬ್ಯಾಟರಿಗಳನ್ನು ಕದಿಯಲು ಬಳಸುತ್ತಿದ್ದ ದ್ವಿಚಕ್ರ ವಾಹನದ ಸುಳಿವು ಸಿಕ್ಕಿದ್ದು, ಅಂತಿಮವಾಗಿ ಫೆ.9ರಂದು ಎಸ್ ಸಿಕಂದರ್ ಸಿಕ್ಕಿಬಿದ್ದಿದ್ದು, ಧನಶೇಖರ್ ಅವರನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Published by:Divya D
First published: