Diwali Gift: ಮಾಜಿ ಶಾಸಕರಿಂದ ಉಡುಗೊರೆ ಪಡೆದ ಪೊಲೀಸರು, ಒಳ ಉಡುಪು, ಬಟ್ಟೆ ಹೊಲಿಸಲು ಹಣ ನೀಡಿದ ರವಿಕೃಷ್ಣಾ ರೆಡ್ಡಿ

Gift to Police: ಪ್ರತಿಭಟನೆ ವೇಳೆ KRS ಪಕ್ಷದವರು ಬಟ್ಟೆ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಬಗಲಗುಂಟೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಒಪ್ಪಿಸಲು ಯತ್ನಿಸುತ್ತಿರುವುದು ಕಂಡುಬಂತು. ಆದರೆ, ಪೊಲೀಸರು ಬಟ್ಟೆ ಸ್ವೀಕರಿಸಲು ನಿರಾಕರಿಸಿದರು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಪೊಲೀಸ್‌ ಸಿಬ್ಬಂದಿ ಮಾಜಿ ಶಾಸಕರಿಂದ (Ex MLA) ದೀಪಾವಳಿ ಉಡುಗೊರೆ (Diwali Gift) ಪಡೆದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಶಾನ್ಯ ಬೆಂಗಳೂರಿನ ಬಗಲಗುಂಟೆಯ ಪೊಲೀಸ್‌ ಸಿಬ್ಬಂದಿಯೊಬ್ಬರು ಬಿಜೆಪಿ ಮಾಜಿ ಎಂಎಲ್‌ಎ ಅವರಿಂದ ಬಟ್ಟೆಯ ಪೀಸ್‌ಗಳನ್ನು (Clothes) ಉಡುಗೊರೆಯನ್ನಾಗಿ ಪಡೆದಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹಾಗೂ ಪ್ರತಿಭಟನೆಗೆ ವ್ಯಕ್ತವಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ (Ravikrishna Reddy) ನೇತೃತ್ವದಲ್ಲಿ ವಿಶಿಷ್ಟವಾದ ಪ್ರತಿಭಟನೆ ನಡೆದಿದ್ದು, ಪೊಲೀಸ್‌ ಸಿಬ್ಬಂದಿಗೆ ಒಳ ಉಡುಪುಗಳನ್ನು ಹಾಗೂ ಉಡುಗೊರೆ ಪಡೆದ ಬಟ್ಟೆಯ ಪೀಸ್‌ಗಳಿಂದ ಬಟ್ಟೆ ಹೊಲಿಸಿಕೊಳ್ಳಲು (Stitching)  1,500 ರೂ. ಹಣ ನೀಡುತ್ತೇವೆ ಎಂದೂ ಹೇಳಿದ್ದಾರೆ. ಅಲ್ಲದೆ, KRS ಪಕ್ಷದಿಂದ ಖಂಡನೆ ವ್ಯಕ್ತವಾಗಿದೆ.

ಅಲ್ಲದೆ, ನಾವು ಕೊಡಲು ಪ್ರಯತ್ನಿಸಿದ ಒಳ ಉಡುಪುಗಳನ್ನು ಹಾಗೂ ಬಟ್ಟೆಗಳ ಹೊಲಿಗೆಗೆ 1,500 ರೂಪಾಯಿಗಳನ್ನು ತೆಗೆದುಕೊಳ್ಳಲು ಅವರು ನಿರಾಕರಿಸಿದರು’’ ಎಂದು KRS ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು, ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್‌ ಇಲಾಖೆ ಆಂತರಿಕ ತನಿಖೆ ನಡೆಸಿದ್ದು, ‘’ಈ ಘಟನೆ ದುರದೃಷ್ಟಕರ ಮತ್ತು ತನಗೆ ಅರಿವಿಲ್ಲದೆ ಇದು ಸಂಭವಿಸಿದೆ’’ ಎಂದು ಬಗಲಗುಂಟೆ ಪೊಲೀಸ್‌ ಠಾಣೆಯ ಸ್ಟೇಟನ್‌ ಹೌಸ್‌ ಅಧಿಕಾರಿ (SHO) ಸುನೀಲ್‌ ಹೇಳಿದ್ದಾರೆಂದು ಉಲ್ಲೇಖಿಸಲಾಗಿದೆ.

ಪೊಲೀಸರು ಉಡುಗೊರೆ ಸ್ವೀಕರಿಸಬಾರದು

ಪೊಲೀಸರ ನಿಯಮಗಳ ಪ್ರಕಾರ ಉಡುಗೊರೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ ಎಂದೂ ರವಿಕೃಷ್ಣಾ ರೆಡ್ಡಿ ಹೇಳಿದರು. ಅಲ್ಲದೆ, ಪೊಲೀಸರ ವಿರುದ್ಧ ತಕ್ಷಣದ ಕ್ರಮಕ್ಕಾಗಿ ಕರೆ ನೀಡಿದ ಅವರು, ನೀತಿ ಸಂಹಿತೆ ಬಗ್ಗೆ ಎಲ್ಲಾ ಪೊಲೀಸ್‌ ಕೇಂದ್ರಗಳಿಗೆ ಸಂದೇಶ ಕಳಿಸಲು ರಾಜ್ಯ ಸರ್ಕಾರಕ್ಕೆ ಕೇಳಿದರು.

ಇದನ್ನೂ ಓದಿ: 1 ವರ್ಷದಲ್ಲಿ 10 ಕೆಜಿ ತೂಕ ಇಳಿಸದಿದ್ರೆ ಪ್ರೊಮೋಶನ್, ಬೋನಸ್ ಎಲ್ಲಾ ಕಟ್: ಪೋಲೀಸರಿಗೆ ಸವಾಲು, 400 ಮಂದಿ ಪಾಸ್ !

"ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಹಿಡಿತದಿಂದ ಪೊಲೀಸರನ್ನು ಮುಕ್ತಗೊಳಿಸಲು ನಾವು ಬಯಸುತ್ತೇವೆ, ಇದರಿಂದಾಗಿ ಅವರು ಸಮರ್ಥ, ಸ್ವ-ಅವಲಂಬಿತ ಮತ್ತು ಸಮರ್ಪಿತರಾಗುತ್ತಾರೆ" ಎಂದು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಮನವಿ ಮಾಡಿಕೊಳ್ಳುವ ಬಗ್ಗೆಯೂ ರವಿಕೃಷ್ಣಾ ರೆಡ್ಡಿ ಹೇಳಿಕೊಂಡಿದ್ದಾರೆ.

ಘಟನೆಯ ವಿವರಗಳೇನು..?

"ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕರು ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿ ದೀಪಾವಳಿ ಹಬ್ಬದಂದು ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದರು. ಇದರ ಪ್ರತಿಯಾಗಿ, ಠಾಣಾಧಿಕಾರಿಯು ರಾಜಕಾರಣಿಗೆ ದೊಡ್ಡ ಹಾರ ಮತ್ತು ಮೈಸೂರು ಪೇಟಾ ನೀಡಿ ಸನ್ಮಾನ ಮಾಡಿದ್ದಾರೆ. ಅದನ್ನು ಅತಿಥಿಗಳಿಗೆ ಗೌರವ ಸೂಚಕವಾಗಿ ನೀಡಲಾಗುತ್ತದೆ’’ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.

ಅಲ್ಲದೆ, ಬಿಜೆಪಿಯ ಮಾಜಿ ಶಾಸಕರು ಪೊಲೀಸರಿಗೆ ನೀಡಿದ ಉಡುಗೊರೆಯಲ್ಲಿ ಒಳಉಡುಪುಗಳನ್ನು ಬಿಟ್ಟಿದ್ದಾರೆ, ಆದ್ದರಿಂದ ಕರ್ನಾಟಕ ರಾಷ್ಟ್ರ ಸಮಿತಿಯು ಪ್ರತಿಭಟನೆಯ ರೂಪದಲ್ಲಿ ಈ ಉಡುಗೊರೆಗಳನ್ನು ವಿತರಿಸಲಿದೆ ಎಂದೂ ನವೆಂಬರ್ 8ರಂದು ಹೇಳಿದ್ದರು.

ಪ್ರತಿಭಟನೆ ನಡೆಸಿದ ರವಿಕೃಷ್ಣಾರೆಡ್ಡಿ ಮತ್ತು ತಂಡ

ಪೊಲೀಸ್ ಇಲಾಖೆಯನ್ನು ರಾಜಕಾರಣಿಗಳ ಕಪಿಮುಷ್ಠಿಯಿಂದ ಹೊರತರಲು ಪಕ್ಷವು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. "ನಾವು ಪೊಲೀಸರನ್ನು ಭ್ರಷ್ಟ ರಾಜಕಾರಣಿಗಳ ಗುಲಾಮಗಿರಿಯಿಂದ ಹೊರತರಲು ಮತ್ತು ಅವರಲ್ಲಿ ಸ್ವಾಭಿಮಾನದ ಭಾವನೆ ಜಾಗೃತಗೊಳಿಸಲು ಬಯಸುತ್ತೇವೆ" ಎಂದು ರೆಡ್ಡಿ ಹೇಳಿದರು.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ನಲ್ಲಿ Crime Stories: India Detectives ಸರಣಿ ಮೂಲಕ ರೋಚಕ ಕಥೆ ಹೇಳುತ್ತಿರುವ ಬೆಂಗಳೂರು ಪೊಲೀಸರು

ಪ್ರತಿಭಟನೆ ವೇಳೆ KRS ಪಕ್ಷದವರು ಬಟ್ಟೆ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಬಗಲಗುಂಟೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಒಪ್ಪಿಸಲು ಯತ್ನಿಸುತ್ತಿರುವುದು ಕಂಡುಬಂತು. ಆದರೆ, ಪೊಲೀಸರು ಬಟ್ಟೆ ಸ್ವೀಕರಿಸಲು ನಿರಾಕರಿಸಿದರು. ಇನ್ನೊಂದೆಡೆ, ಬಿಜೆಪಿಯ ಮಾಜಿ ಶಾಸಕ ನೀಡಿದ ಉಡುಗೊರೆಗಳ ಬಗ್ಗೆ ಕೇಳಿದಾಗ, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published by:Soumya KN
First published: