Bengaluru: ಉದ್ಘಾಟನೆಯಾದ ಒಂದೇ ದಿನಕ್ಕೆ ಕಿತ್ತು ಬಂತು ಕಮರ್ಷಿಯಲ್ ಸ್ಟ್ರೀಟ್ ರಸ್ತೆ..!

ಸಿಎಂ ಚಾಲನೆ ನೀಡಿದ ಒಂದೇ ದಿನದಲ್ಲಿ ಪುಟ್ ಪಾತ್ ಗೆ ಅಳವಡಿಸಿದ ಇಂಟರ್ ಲಾಕ್ ಕಲ್ಲುಗಳು ಕಿತ್ತು ಬಂದಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕಳೆದ ಎರಡು ವರ್ಷಗಳಿಂದ ಕಮರ್ಷಿಯಲ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.

ಕಿತ್ತು ಬಂದಿರುವ ಕಮರ್ಷಿಯಲ್ ಸ್ಟ್ರೀಟ್ ರಸ್ತೆ

ಕಿತ್ತು ಬಂದಿರುವ ಕಮರ್ಷಿಯಲ್ ಸ್ಟ್ರೀಟ್ ರಸ್ತೆ

  • Share this:
ಬೆಂಗಳೂರು(ಜು.25): ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ರಸ್ತೆ ಉದ್ಘಾಟನೆಯಾದ ಕೇವಲ ಒಂದೇ ದಿನದಲ್ಲಿ ಕಿತ್ತು ಬಂದಿದೆ. ನಗರದ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು ಇನ್ನೂ ಕೆಲವು ಭಾಗದ ಕಾಮಗಾರಿಯಷ್ಟೆ ಬಾಕಿ ಉಳಿದಿತ್ತು. ಈ ನಡುವೆ ಕಳೆದ ಶುಕ್ರವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಂಗಳೂರು ಸಿಟಿ ರೌಂಡ್ಸ್ ಮಾಡಿ, ನಗರದ ಅಭಿವೃದ್ಧಿ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಸಿಎಂ ಯಡಿಯೂರಪ್ಪ ಕಮರ್ಷಿಯಲ್ ಸ್ಟ್ರೀಟ್ ರಸ್ತೆಗೆ ಚಾಲನೆ ನೀಡಿದರು.

ಸಿಎಂ ಚಾಲನೆ ನೀಡಿದ ಒಂದೇ ದಿನದಲ್ಲಿ ಪುಟ್ ಪಾತ್ ಗೆ ಅಳವಡಿಸಿದ ಇಂಟರ್ ಲಾಕ್ ಕಲ್ಲುಗಳು ಕಿತ್ತು ಬಂದಿವೆ. ನಿನ್ನೆ ಸುರಿದ ಭಾರಿ ಮಳೆ ಪರಿಣಾಮವಾಗಿ ರಸ್ತೆಯಲ್ಲಿ ನೀರು ಹರಿದಿದೆ ಹಾಗೂ ಮಳೆಯ ಪರಿಣಾಮ ಇಂಟರ್ ಲಾಕ್ ಕಲ್ಲುಗಳು ಸಹ ಕಿತ್ತು ಬಂದಿವೆ ಎನ್ನಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕಳೆದ ಎರಡು ವರ್ಷಗಳಿಂದ ಕಮರ್ಷಿಯಲ್ ಸ್ಟ್ರೀಟ್ ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. 5.40 ಕೋಟಿ ವೆಚ್ಚದಲ್ಲಿ 450ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಅದ್ರೆ ನಿನ್ನೆ ಸುರಿದ ಒಂದೇ ಮಳೆಗೆ ಅಲ್ಲಲ್ಲಿ ಹಳ್ಳಗಳು ಬಿದ್ದು ಇಂಟರ್ ಲಾಕ್ ಕಲ್ಲುಗಳು ಕುಸಿದು ಬಿದ್ದಿವೆ.

ಇದನ್ನೂ ಓದಿ:Yashika Aannand: ನಟಿ ಯಶಿಕಾ ಆನಂದ್​ಗೆ ಭೀಕರ ಅಪಘಾತ; ಸಾವು-ಬದುಕಿನ ನಡುವೆ ಹೋರಾಟ

ಇನ್ನೂ ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಈ ರಸ್ತೆ ದಿಢೀರ್ ಹಾಳಾಗಲು ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗಿದೆ. ರಸ್ತೆ ಬದಿ ಸರಿಯಾದ ರೀತಿಯಲ್ಲಿ ಡ್ರೈನೇಜ್ ವ್ಯವಸ್ಥೆ ಸಹ ಮಾಡಿಲ್ಲ. ರಸ್ತೆ ಬದಿ ಸೂಕ್ತ ರೀತಿಯಲ್ಲಿ ಡ್ರೈನೇಜ್ ಮಾಡಿ ನೀರು ಹೋಗಲು ವ್ಯವಸ್ಥೆ ಮಾಡಬೇಕಿತ್ತು. ನಿನ್ನೆ ಸುರಿದ ಮಳೆಯಿಂದಾಗಿ ತಳ ಮಹಡಿಯ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸುತ್ತಾರೆ.

ಇನ್ನೂ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಉದ್ಘಾಟನೆ ಮಾಡಲಾಗಿದೆ ಎನ್ನುವ ಆರೋಪವು ಕೇಳಿ ಬರುತ್ತಿದೆ. ಕಮರ್ಷಿಯಲ್ ಸ್ಟ್ರೀಟ್ ಎಂಟ್ರೇನ್ಸ್ ನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆಯ ಕೊನೆ ಭಾಗದಲ್ಲಿ ಇನ್ನೂ ಇಂಟರ್ ಲಾಕ್ ಕಲ್ಲುಗಳು ಹಾಗೂ ಕಾಂಕ್ರೀಟ್ ಹಾಕುವ ಕೆಲಸ ಬಾಕಿ ಇದೆ. ಅದ್ರೆ ಈ ನಡುವೆ ಸಿಎಂ ಯಡಿಯೂರಪ್ಪ ರಸ್ತೆ ಉದ್ಘಾಟನೆ ಮಾಡಿದ್ದು, ವಾಹನಗಳ ಓಡಾಟ ಸಹ ಶುರುವಾಗಿದೆ‌. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಚಾಲನೆ ನೀಡಿದ್ದರಿಂದ ರಸ್ತೆಯ ಕೆಲವು ಕಡೆ ಕುಸಿಯಲು ಕಾರಣ ಎನ್ನುವುದು ಸ್ಥಳೀಯರ ಆರೋಪ.

ಇದನ್ನೂ ಓದಿ:ಮುಂದಿನ ಹಣಕಾಸು ವರ್ಷದಲ್ಲಿ ಉದ್ಯೋಗಿಗಳ ಮಾಸಿಕ ವೇತನ ಶೇ. 8ರಷ್ಟು ಏರಿಕೆ!

ಸಾವಿರಾರು ಅಂಗಡಿ ಮುಂಗಟ್ಟುಗಳಿರುವ ಕಮರ್ಷಿಯಲ್ ಸ್ಟ್ರೀಟ್ ರಸ್ತೆಯಲ್ಲಿ ನಿತ್ಯ ಸಾವಿರಾರು ಜನ ಓಡಾಟ ನಡೆಸುತ್ತಾರೆ. ಬಣ್ಣ ಬಣ್ಣದ ಇಂಟರ್ ಲಾಕ್ ಕಲ್ಲುಗಳ ಅಳವಡಿಕೆಯಿಂದ ಕಮರ್ಷಿಯಲ್ ಸ್ಟ್ರೀಟ್ ರಸ್ತೆ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಆದ್ರೆ ಮಳೆಯ ಪರಿಣಾಮ ರಸ್ತೆ ಕಿತ್ತು ಬಂದಿದ್ದು ಕಾಮಗಾರಿಯ ಬಗ್ಗೆ ಅನುಮಾನ ಉಂಟಾಗುವಂತೆ ಮಾಡಿದೆ. ಇನ್ನಾದರೂ ಬಿಬಿಎಂಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾಮಗಾರಿ ಗುಣಮಟ್ಟ ಹೆಚ್ಚಿಸಬೇಕು  ಹಾಗೂ ಸಾರ್ವಜನಿಕ ಹಣ ಸುಖಾಸುಮ್ಮನೆ ಪೋಲಾಗುವುದನ್ನ ತಡೆಯಬೇಕು ಅನ್ನೋದು ಸಾರ್ವಜನಿಕರ ಮಾತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: