ಒಂದೆರಡು ತಿಂಗಳ ಹಿಂದೆ, ಕೆನಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ (ಸಿಐಎಸ್)ನ 11 ನೇ ತರಗತಿಯ ವಿದ್ಯಾರ್ಥಿ ರೋಹನ್ ಜಾಕೋಬ್ ತನ್ನ ತಾಯಿಯು ಮಲೇಷ್ಯಾದ ನಿರಾಶ್ರಿತರ ಕೇಂದ್ರಕ್ಕೆ ಆನ್ಲೈನ್ ಶಿಕ್ಷಕರಾಗಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುವುದನ್ನು ಗಮನಿಸಿದನು. ಸಮಾಜ ಸೇವೆ ವಿಚಾರದಲ್ಲಿ ತನ್ನ ತಾಯಿಯಿಂದ ಸ್ಫೂರ್ತಿ ಪಡೆದ ಜಾಕೋಬ್ ಕೂಡ ಶಾಲೆಯಲ್ಲಿ ಕಲಿತ ಗೂಗಲ್ ತರಗತಿಯನ್ನು ಬಳಸಲು ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಹಾಯ ಮಾಡಲು ಕೌಲಾಲಂಪುರದ ಜೋಟುಂಗ್ ನಿರಾಶ್ರಿತರ ಕ್ಯಾಥೋಲಿಕ್ ಕಲಿಕಾ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಸಹಿ ಹಾಕಿದರು.
"ನನ್ನ ಸ್ವಂತ ಶೈಕ್ಷಣಿಕ ಅನುಭವ ಮತ್ತು ಶಾಲೆಯಲ್ಲಿ ಗೂಗಲ್ ತರಗತಿಯ ಬಳಕೆಯ ಮೂಲಕ, ಮಲೇಷ್ಯಾದ ಕೇಂದ್ರದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಸುಗಮಗೊಳಿಸುವ ಗೂಗಲ್ ತರಗತಿಯನ್ನು ಬಳಸಬಹುದೆಂದು ನಾನು ಅರಿತುಕೊಂಡೆ. ನಾನು ಶಾಲೆಯಲ್ಲಿ ಕಲಿತ ನನ್ನ ಐಸಿಟಿ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಬಳಸಿಕೊಂಡು ಪಿಪಿಟಿಯನ್ನು ಬಳಸಿ ಮತ್ತು ನಿರಾಶ್ರಿತರ ಕೇಂದ್ರಕ್ಕೆ ಶೈಕ್ಷಣಿಕ ಅರಿವು ನೀಡಿದೆ.
ಶಿಕ್ಷಕರೆಲ್ಲಾ ಒಪ್ಪಿದ ಬಳಿಕ ನಾನು ಸಿಬ್ಬಂದಿಗೆ ಗೂಗಲ್ ಕ್ಲಾಸ್ರೂಮ್ ಬಳಸಲು ಸಹಾಯ ಮಾಡಿದೆ. ನಾನು ಜವಾಬ್ದಾರಿಯುತ ಗೇಮಿಂಗ್ ಕುರಿತು 12 ಮತ್ತು 13 ವರ್ಷ ವಯಸ್ಸಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಂಡೆ. ನಮಗೆ ಗೊತ್ತಿರುವ ಕೌಶಲ್ಯಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನನಗೆ ಅವಕಾಶ ಸಿಕ್ಕಿತು ಮತ್ತು ಈ ರೀತಿಯ ಕೆಲಸದಲ್ಲಿ ತೊಡಗುವುದನ್ನು ಬಹಳ ಆನಂದಿಸುತ್ತೇನೆ. ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡುವುದು ಮುಖ್ಯ ಎಂದು ನಾನು ನಂಬುತ್ತೇನೆ ಮತ್ತು ಈ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನನ್ನ ಕೈಲಾದ ಕೊಡುಗೆ ನೀಡುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳುತ್ತಾರೆ.
3ರಿಂದ 15 ವರ್ಷದೊಳಗಿನ ನಿರಾಶ್ರಿತ ಮಕ್ಕಳಿಗೆ ಸುರಕ್ಷಿತ ಕಲಿಕಾ ವಾತಾವರಣ ಒದಗಿಸುವುದು ಮತ್ತು ಅವರು ತಮ್ಮ ಹೊಸ ದೇಶದಲ್ಲಿ ನೆಲೆಯೂರಾಬೇಕಾದಾಗ ಮತ್ತು ಅವರಿಗೆ ಮಲೇಷ್ಯಾದಲ್ಲಿ ನೆಲೆಸಲು ಅವರಿಗೆ ಅನ್ವಯವಾಗುವ ಜೀವನ ಕೌಶಲ್ಯಗಳನ್ನು ಸಿದ್ಧಪಡಿಸುವುದು ಕೌಲಾಲಂಪುರ್ ಕೇಂದ್ರದ ಗುರಿಯಾಗಿದೆ.
ಜಾಕೋಬ್ ತನ್ನ ಬಿಡುವಿನ ಸಮಯವನ್ನು ಬೆಂಗಳೂರು ಮೂಲದ ಆಶಾ ಎಂಬ ಎನ್ಜಿಒ ಸಂಸ್ಥೆಗೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ತೀವ್ರ ಅಂಗವೈಕಲ್ಯ ಮತ್ತು ಆಟಿಸಂ ಹೊಂದಿರುವ ಮಕ್ಕಳಿಗೆ ಶಿಕ್ಷಣ ಮತ್ತು ಬೆಂಬಲ ಸಿಗುತ್ತಿದೆ. ಜಾಕೋಬ್ ತರಗತಿಯ ಟಿಪ್ಪಣಿಗಳನ್ನು ತಯಾರಿಸಲು ಸಹಾಯ ಮಾಡಿದರು ಮತ್ತು ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕೆ ಪೂರಕವಾಗಿ ಅವರನ್ನು ತಯಾರು ಮಾಡಿದರು.
ಎನ್ಜಿಒಗಳಲ್ಲಿ ಸ್ವಯಂಸೇವಕರಾಗಿ ಮುಂದುವರೆಯುತ್ತಿರುವ ಜಾಕೋಬ್ ಆಸಕ್ತಿಯ ಕುರಿತು ಪ್ರತಿಕ್ರಿಯಿಸಿದ ಶಾಲೆಯ ವ್ಯವಸ್ಥಾಪಕ ನಿರ್ದೇಶಕಿ ಶ್ವೇತಾ ಶಾಸ್ತ್ರಿ, " ಜಾಕೋಬ್ ಆನ್ಲೈನ್ನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಬೋಧನಾ ಕೌಶಲ್ಯದ ರೂಪದಲ್ಲಿ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಕ್ಕಾಗಿ ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಇದು ವಿಶೇಷವಾಗಿ ನಿರಾಶ್ರಿತ ಮಕ್ಕಳಿಗೆ ಹಾಗೂ ವಿಶೇಷ ಅಗತ್ಯತೆ ಹೊಂದಿರುವವರಿಗೆ ಸಹಾಯಕವಾಗಿದೆ. ಅಂತಹ ಕೌಶಲ್ಯದ ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಜಾಕೋಬ್ ಪ್ರಯತ್ನಕ್ಕೆ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಪ್ರಶಂಸೆಯ ಮಾತುಗಳನ್ನಾಡಿದರು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ