Bengaluru City University: ವಿದ್ಯಾರ್ಥಿಗಳೇ ಗಮನಿಸಿ, ಈ ಕಾರಣಕ್ಕೆ ಪರೀಕ್ಷೆಗಳನ್ನು ಮುಂದೂಡಲಾಗಿದೆ!

ಇದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಪರೀಕ್ಷೆಗೆ ಹಾಗೂ ಅದನ್ನು ಬರೆಯಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗಳಿಗೆ ಸಂಬಂಧಿಸಿದ ಸುದ್ದಿ. ಅದೇನಪ್ಪಾ ಅಂದ್ರೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ವಿವಿ ಅಧಿಕೃತ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ವಿಶ್ವವಿದ್ಯಾಲಯ

ಬೆಂಗಳೂರು ನಗರ ವಿಶ್ವವಿದ್ಯಾಲಯ

  • Share this:
ಬೆಂಗಳೂರು: ನೀವು ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ (Bengaluru University) ಓದುತ್ತಿದ್ದೀರಾ? ಪರೀಕ್ಷೆ (Exam) ಹತ್ತಿರ ಬಂತು ಅಂತ ಟೆನ್ಶನ್ (Tension) ಆಗಿದ್ದೀರಾ? ಹಾಗಿದ್ರೆ ಕೊಂಚ ಸಮಾಧಾನ ಮಾಡಿಕೊಂಡು ಈ ಸುದ್ದಿ ಓದಿ. ಯಾಕೆಂದರೆ ಇದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಪರೀಕ್ಷೆಗೆ ಹಾಗೂ ಅದನ್ನು ಬರೆಯಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗಳಿಗೆ (Students) ಸಂಬಂಧಿಸಿದ ಸುದ್ದಿ. ಅದೇನಪ್ಪಾ ಅಂದ್ರೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ (Postponed). ಈ ಬಗ್ಗೆ ವಿವಿ ಅಧಿಕೃತ ಆದೇಶ ಹೊರಡಿಸಿದೆ. 3, 5 ಮತ್ತು 7ನೇ ಸೆಮಿಸ್ಟರ್ (3rd, 5th and 7th Semester) ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಏಪ್ರಿಲ್ 13ರಿಂದ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಪರಿಷ್ಕೃತ ವೇಳಾಪಟ್ಟಿ ಶೀಘ್ರವೇ ಪ್ರಕಟಿಸುವುದಾಗಿ ವಿಶ್ವವಿದ್ಯಾಲಯ ತಿಳಿಸಿದೆ.

ಘಟಿಕೋತ್ಸವದ ಹಿನ್ನೆಲೆಯಲ್ಲಿ ಪರೀಕ್ಷೆಗಳು ಮುಂದೂಡಿಕೆ

ವಿವಿಯ ಘಟಿಕೋತ್ಸವ  ಹಿನ್ನೆಲೆ ಪರೀಕ್ಷೆ ಮುಂದೂಡಲಾಗಿದೆ ಎಂದು ವಿವಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದರಂತೆ, 3, 5 ಮತ್ತು 7ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಏಪ್ರಿಲ್ 6ರಿಂದ ನಡೆಯಬೇಕಿದ್ದ ಸ್ನಾತಕೋತ್ತರ ಪರೀಕ್ಷೆಗಳು ಏಪ್ರಿಲ್ 13ರಿಂದ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಶೀಘ್ರವೇ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಏಪ್ರಿಲ್ 11ರಂದು ಘಟಿಕೋತ್ಸವ

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ 1ನೇ ವಾರ್ಷಿಕ ಘಟಿಕೋತ್ಸವ ಇದೇ ಏಪ್ರಿಲ್‌ 11ರಂದು,ಸೋಮವಾರ ಬೆಳಿಗ್ಗೆ 11.30ಕ್ಕೆ ಆಯೋಜಿಸಲಾಗಿದೆ. ಬೆಂಗಳೂರು ನಗರದ ಅರಮನೆ ರಸ್ತೆ, ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರುಗಲಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಇದನ್ನೂ ಓದಿ: SSLC Exam: ಇಲ್ಲಿನ ಶಾಲೆಗಳಲ್ಲಿ ರಾತ್ರಿಯೂ ಪಾಠ, ಭಾನುವಾರವೂ ಕ್ಲಾಸ್! ಎಸ್ಎಸ್‌ಎಲ್‌ಸಿ ಎಕ್ಸಾಂಗೆ ಭರ್ಜರಿ ತಯಾರಿ

ಸಮಾರಂಭದಲ್ಲಿ ಪ್ರಮುಖರು ಭಾಗಿ

ಕುಲಾಧಿಪತಿಗಳು, ಬೆಂಗಳೂರು ನಗರ ವಿಶ್ವವಿದ್ಯಾನಿಲಯ ರವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ವಿಶ್ರಾಂತ ಅಧ್ಯಕ್ಷ ಪದ್ಮಭೂಷಣ ಡಾ. ಕೆ. ಕಸ್ತೂರಿರಂಗನ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇನ್ನು ಉತ್ತನ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಸೇರಿದಂತೆ ಪ್ರಮುಖರು ಉಪಸ್ಥಿತರಿರುತ್ತಾರೆ.

ಮಾರ್ಚ್‌ 28ರಿಂದ ಎಸ್ಎಸ್ಎಲ್‌ಸಿ ಎಕ್ಸಾಂ

ಪ್ರಸಕ್ತ ಸಾಲಿನ‌ ಎಸ್ ಎಸ್ ಎಲ್ ಸಿ ಪರೀಕ್ಷೆ ಇದೇ 28 ರಿಂದ ಏಪ್ರಿಲ್ 11 ರ ವರೆಗೆ ರಾಜ್ಯದ 3,444 ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ಈ ಬಾರಿ 4,52,732 ಬಾಲಕರು, 4,21,110 ಬಾಲಿಕಿಯರು ಮತ್ತು 4 ಮಂದಿ ತೃತೀಯ ಲಿಂಗಿಗಳೂ ಸೇರಿದಂತೆ 8,73,876 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. 5307 ವಿಶೇಷ ಚೇತನ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

5717 ಸರ್ಕಾರಿ ಶಾಲೆಗಳು, 3412 ಅನುದಾನಿತ ಶಾಲೆಗಳು, 6258 ಅನುದಾನ ರಹಿತ ಶಾಲೆಗಳೂ ಸೇರಿದಂತೆ ಒಟ್ಟು 15,387 ಶಾಲೆಗಳ 8,73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ‌. 3444 ಪರೀಕ್ಷಾ ಕೇಂದ್ರಗಳಲ್ಲಿ 3275 ಸಾಮಾನ್ಯ ಪರೀಕ್ಷಾ ಕೇಂದ್ರ ಮತ್ತು 169 ಖಾಸಗೀ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಇದನ್ನೂ ಓದಿ: ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ 'Robo Teacher'! ಹೊಸ 'ಶಿಕ್ಷಕ'ರ ಬಗ್ಗೆ ವಿದ್ಯಾರ್ಥಿಗಳು ಹೇಳಿದ್ದೇನು?

ಬಿಗಿ ಭದ್ರತೆ ನಡುವೆ ಪರೀಕ್ಷೆ

45,289 ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದ್ದು‌ 3,444 ಮುಖ್ಯ ಅಧೀಕ್ಷಕರು, 377 ಉಪ ಮುಖ್ಯ ಅಧೀಕ್ಷಕರು,48,817 ಕೊಠಡಿ ಮೇಲ್ವಿಚಾರಕರು, 3444 ಪ್ರಶ್ನೆ ಪತ್ರಿಕೆ ಅಭಿ ರಕ್ಷಕರು,3444 ಸ್ಥಾನಿಕ ಜಾಗೃತ ದಳದ‌‌ ಸಿಬ್ಬಂದಿಯನ್ನು ಪರೀಕ್ಷಾ ಬಂದೋ ಬಸ್ತ್ ಗಾಗಿ ನಿಯೋಜಿಸಲಾಗಿದೆ.
Published by:Annappa Achari
First published: