ಬೆಂಗಳೂರು: ನೂತನವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ (Basavaraja Bommai) ಅವರು ತಮಗೆ ಜಿರೋ ಟ್ರಾಫಿಕ್ (Zero Traffic) ವ್ಯವಸ್ಥೆ ಬೇಡ. ಸಿಗ್ನಲ್ ಫ್ರೀ ಮಾಡಿಕೊಟ್ಟರೆ ಸಾಕು ಎಂದು ಹೇಳಿದ್ದರು. ಇದರಿಂದಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Police) ಸ್ವಲ್ಪ ನಿರಾಳರಾಗಿದ್ದರು. ಆದರೆ, ಈಗ ಅವರಿಗೆ ಮತ್ತೊಂದು ರೀತಿಯ ಸಮಸ್ಯೆ ಎದುರಾಗಿದೆ. ಸಿಎಂ ಅವರು ಹೆಚ್ಚಾಗಿ ನಗರದಲ್ಲಿ ಸುತ್ತಾಡುತ್ತಿರುವುದರಿಂದ ಅವರಿಗೆ ಭದ್ರತೆ ಒದಗಿಸುವಲ್ಲಿ ಹೈರಾಣಾಗಿದ್ದಾರೆ.
ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಓಡಾಟ ಹಿನ್ನೆಲೆಯಲ್ಲಿ ಪೊಲೀಸರಿಗೆ ಟೆನ್ಸನ್ ಶುರುವಾಗಿದೆ. ಸಿಎಂ ಬೊಮ್ಮಾಯಿ ಅವರು ಎಲ್ಲಾ ಕಡೆ ಓಡಾಡುವ ಹಿನ್ನೆಲೆಯಲ್ಲಿ ಅವರು ಎಲ್ಲಿ ಹೋಗ್ತಾರೆ, ಹೇಗೆ ಭದ್ರತೆ ಮಾಡೋದು ಎಂಬ ಆತಂಕ ಎದುರಾಗಿದೆ.
ಆರ್ ಟಿ ನಗರ ನಿವಾಸ, ಗೃಹ ಕಚೇರಿ ಕೃಷ್ಣಾ, ಕೆ ಕೆ ಗೆಸ್ಟ್ ಹೌಸ್, ವಿಧಾನಸೌಧ ಸೇರಿದಂತೆ ಹಲವು ಕಡೆ ಸಿಎಂ ಬೊಮ್ಮಾಯಿ ಓಡಾಡುತ್ತಾರೆ. ತಾವು ಹೋಗುವ ಬಗ್ಗೆ ಮೊದಲೇ ಭದ್ರತಾ ಸಿಬ್ಬಂದಿ ಗೆ ಸಿಎಂ ಬೊಮ್ಮಾಯಿ ಅವರು ತಿಳಿಸುವುದಿಲ್ಲ. ಬದಲಾಗಿ ಕಾರು ಹತ್ತಿದ ಮೇಲೆ ಎಲ್ಲಿಗೆ ಎಂದು ತಿಳಿಸಲಿದ್ದಾರೆ. ಸಿಎಂ ತಕ್ಷಣ ಕೊಡುವ ಮಾಹಿತಿಯಿಂದ ಭದ್ರತೆ ನೀಡಲು ಸಿಬ್ಬಂದಿ ಒದ್ದಾಡುತ್ತಿದ್ದಾರೆ.
ಸಿಎಂ ಬೊಮ್ಮಾಯಿ ಝೀರೋ ಟ್ರಾಫಿಕ್ ಬೇಡ ಅಂದಿರೋದೆ ಪೊಲೀಸರಿಗೆ ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯರಂತೆ ಸಿಎಂ ವಾಹನಗಳ ಜೊತೆ ಓಡಾಡುವಾಗ ಸಿಎಂ ಕಾನ್ವೆಗೆ ಸಾರ್ವಜನಿಕ ವಾಹನಗಳು ಅಡ್ಡ ಬರುತ್ತವೆ. ಹೀಗಾಗಿ ಅವರಿಗೆ ಭದ್ರತೆ ಅಡ್ಡಿ ಆಗುವ ಆತಂಕ ಎದುರಾಗಿದೆ. ಇದರಿಂದ ವಾಹನಗಳನ್ನು ಕ್ಲಿಯರ್ ಮಾಡಿ, ಸಿಎಂಗೆ ಭದ್ರತೆ ನೀಡಿ ಕಳುಹಿಸೋದೆ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ನಿತ್ಯ ಇದೇ ಸವಾಲನ್ನು ಬೆಂಗಳೂರು ಸಂಚಾರ ಪೊಲೀಸರು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಸಿಎಂ ಜೊತೆಯಲ್ಲಿರುವ ಭದ್ರತಾ ಸಿಬ್ಬಂದಿಗಳಿಗೂ ಇದೇ ಆತಂಕ ಇದೆ.
ಸಿಎಂ ಯಾವಾಗ ಎಲ್ಲಿ ಹೋಗಿ ಬಿಡ್ತಾರೋ ಎಂದು ಸಿಬ್ಬಂದಿ ಸದಾ ಅವರ ಜೊತೆಯಲ್ಲೇ ಇರುತ್ತಾರೆ. ಬಸವರಾಜ್ ಬೊಮ್ಮಾಯಿ ಸಿಎಂ ಆದ ನಂತರ ಅವರ ಓಡಾಟ ಹೆಚ್ಚಾಗಿದೆ. ಮಧ್ಯಾಹ್ನ ಊಟಕ್ಕೂ ತಮ್ಮ ನಿವಾಸ ಆರ್ ಟಿ ನಗರಕ್ಕೆ ಹೋಗುತ್ತಾರೆ. ಹೀಗಾಗಿ ಹಲವು ಬಾರಿ ಸಿಎಂ ಓಡಾಟದಿಂದ ಪೊಲೀಸರಿಗೆ ಟೆನ್ಸನ್ ಜೊತೆಗೆ ಸಾರ್ವಜನಿಕರಿಗೂ ಸಮಸ್ಯೆ ಆಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ