Bengaluru: ರಸ್ತೆ ಪಕ್ಕದಲ್ಲೇ ಮಲಗಿದ್ದ ಬಾಲಕಿ ಮೇಲೆ ಹರಿದ ಟೆಂಪೋ; 7 ವರ್ಷದ ಬಾಲಕಿ ಸಾವು

ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ಬಾಲಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕತ್ತಲಲ್ಲಿ ಮಲಗಿದ್ದ ಬಾಲಕಿ ಮೇಲೆ ಟೆಂಪೊ ಹತ್ತಿಸಿಲಾಗಿದೆ. ಕೂಡಲೇ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾರೆ

ಕೆ.ಆರ್ ಮಾರ್ಕೆಟ್​

ಕೆ.ಆರ್ ಮಾರ್ಕೆಟ್​

  • Share this:
ಬೆಂಗಳೂರು (ಮಾ.29): ಮಲಗಿದ್ದ ಏಳು ವರ್ಷದ ಬಾಲಕಿ (7 Years Girl)  ಮೇಲೆ ಟೆಂಪೋ ಹರಿದು ಆಕೆ ಸಾವನ್ನಪ್ಪಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು (Tamil naadu) ಮೂಲದ ಶಿವನ್ಯ (Shivanya) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತ ಬಾಲಕಿ ಕುಟುಂಬ ಹಕ್ಕಿಪಿಕ್ಕಿ (Hakkipikki) ಜನಾಂಗದವರಾಗಿದ್ದು, ಕಿವಿಯೋಲೆ, ಸರ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹುಸ್ಕೂರು ಜಾತ್ರೆ ಬಂದಿದ್ದ ಇವರು, ಊರಿಗೆ ಹಿಂದಿರುಗಲು ಬಸ್​ ಸಿಗದೇ ಮಾರ್ಕೆಟ್​ಗೆ​​​​ ಬಂದಿದ್ದರು.

ನಿನ್ನೆ ರಾತ್ರಿ ಬಸ್ ಸಿಗದೇ ತೆಂಗಿನಕಾಯಿ ಮಂಡಿ ಬಳಿಯೇ ಮಕ್ಕಳ ಸಮೇತ ಮಹಿಳೆಯರು ಮಲಗಿದ್ದರು. ಈ ವೇಳೆ, ಬೊಲೋರೋ ಟೆಂಪೋದಲ್ಲಿ ಹೂ ಹಾಕಿಕೊಂಡು ಬಂದಿದ್ದ ಚಾಲಕ ಅನ್​​​ಲೋಡ್ ಮಾಡಿ ಹೊರಡಲು ಮುಂದಾಗಿದ್ದ.‌ ಆಗ ರಸ್ತೆ ಬದಿಯಲ್ಲಿ ಮಲಗಿದ್ದನ್ನು ಗಮನಿಸಿದೆ ಟೆಂಪೋ ರಿವರ್ಸ್ ಮಾಡುವಾಗ ಬಾಲಕಿ ಮೇಲೆ ಹತ್ತಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದನು.

ಬೆಂಗಳೂರಲ್ಲಿ ಕಳ್ಳತನವಾಗಿದ್ದ ಲಾರಿ ಮಂಡ್ಯದಲ್ಲಿ ಪತ್ತೆ

ಬೆಂಗಳೂರು : ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನೇ ಕದ್ದ ಖತರ್​ನಾಕ್ ಖದೀಮನನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯ ನಿವಾಸಿಯಾಗಿರುವ ಮಾರುತಿ ಎಂಬುವರು ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ಸಂಬಂಧ ಮಜರ್ ಅಹಮದ್ ಎಂಬಾತನನ್ನು ಬಂಧಿಸಿದ್ದಾರೆ. ಮಾರುತಿ ಅವರು ಮಾರ್ಚ್ 15ರಂದು ಮನೆ ಮುಂದೆ ಈಚರ್ ವಾಹನ ಪಾರ್ಕ್ ಮಾಡಿದ್ದರು. ಈ ಮಾಹಿತಿ ಅರಿತಿದ್ದ ಆರೋಪಿಯು ನಕಲಿ ಕೀ ಬಳಸಿ ಲಾರಿ ಕಳ್ಳತನ ಮಾಡಿದ್ದ.

ಇದನ್ನೂ ಓದಿ: Bengaluru To Mysuru: ಅಕ್ಟೋಬರ್ ‌ನಿಂದ ಕೇವಲ 75 ನಿಮಿಷಗಳಲ್ಲಿ ಬೆಂಗಳೂರಿಂದ ಮೈಸೂರಿಗೆ ತಲುಪಬಹುದು..!

ಬೆಳಗಾವಿಯಲ್ಲಿ ನೀರಿಗಾಗಿ ಪರದಾಟ

ಬೆಳಗಾವಿ : ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಪರಿಣಾಮ ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ರಾಕ್ಕಸಕೊಪ್ಪ ಜಲಾಶಯಶಗಳಲ್ಲಿ ನೀರಿನ ಸಂಗ್ರಹವಿದೆ. ಹೀಗಿದ್ದರೂ ಬೆಳಗಾವಿ ಮಹಾನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

10 ದಿನಗಳಿಂದ ನೀರು ಪೂರೈಕೆಯಾಗಿಲ್ಲ

ಬೆಳಗಾವಿ ನಗರದ ಅನೇಕ ಬಡಾವಣೆಯಲ್ಲಿ ಕಳೆದ ‌10 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಬೇಸಿಗೆ ಆರಂಭವಾಗಿದ್ದು, ನೀರು ಸಿಗದಿರುವುದಕ್ಕೆ ಜನರು ಕಂಗಾಲಾಗಿದ್ದಾರೆ. ಮಹಾನಗರ ಪಾಲಿಕೆಯಿಂದ ಟ್ಯಾಂಕರ್‌ ಮೂಲಕ ಕೆಲವು ಕಡೆ ನೀರು ಪೂರೈಕೆ ಮಾಡಲಾಗುತ್ತಿದೆ.ನಗರಕ್ಕೆ ರಾಕಸಕೊಪ್ಪ, ಹಿಡಕಲ್ ಜಲಾಶಯದಿಂದ ನೀರು ಪೂರೈಕೆ ಆಗುತ್ತದೆ. ಎರಡೂ ಜಲಾಶಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಹೀಗಿದ್ದರೂ ಜನರಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ. ನೀರಿನ ಟ್ಯಾಂಕರ್‌ಗಳು ಬಡಾವಣೆಗಳಿಗೆ ಬರ್ತಿದ್ದಂತೆ ಜನರು ತಳ್ಳಾಡಿಕೊಂಡು ನೀರು ಸಂಗ್ರಹಿಸುತ್ತಿದ್ದಾರೆ. ನೀರಿಗಾಗಿ ಜನರು ವಾಗ್ವಾದ ಮಾಡುತ್ತಿದ್ದಾರೆ.

ಇದನ್ನೂ ಓದಿ: Auto Driver: ಮುಂಬೈನಲ್ಲಿ ಉಪನ್ಯಾಸಕರು ಈಗ ಬೆಂಗಳೂರಲ್ಲಿ ಆಟೋ ಡ್ರೈವರ್, ಇವರ ನಿರರ್ಗಳ English ಮಾತಿಗೆ ಬೆರಗಾಗದವರಿಲ್ಲ

ಹೆಸ್ಕಾಂ ಯಡವಟ್ಟು ಜನರ ಆಕ್ರೋಶ

ಕಳೆದ 15 ದಿನಗಳಿಂದ ಹೆಸ್ಕಾಂ ನಗರದಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಪರಿಣಾಮ ನಗರದ ಹಲವು ನೀರು ಸಂಗ್ರಹ ಘಟಕಗಳ ಪಂಪ್ ಸೆಟ್‌ಗಳಿಗೆ ಹಾನಿಯಾಗಿವೆ. ಹೀಗಾಗಿ, ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇದರ ಜವಾಬ್ದಾರಿ ಎಲ್ ಆ್ಯಂಡ್ ಟಿ ಕಂಪನಿ ವಹಿಸಿಕೊಂಡಿದೆ. ಪಂಪ್ ಸೆಟ್ ದುರಸ್ತಿ ಮಾಡಿ ನೀರು ಪೂರೈಕೆ ಮಾಡಬೇಕಿದ್ದ ಎಲ್ ಆ್ಯಂಡ್ ಕಂಪನಿ ಕೂಡ ಬೇಜವಾದ್ಬಾರಿ ಪ್ರದರ್ಶಿಸುತ್ತಿದ್ದು, ಈ ಅವಾಂತರಕ್ಕೆ ಕಾರಣವಾಗಿದೆ. ತಕ್ಷಣವೇ ತಾಂತ್ರಿಕ ಸಮಸ್ಯೆ ಬಗೆಹರಿಸಿ ನಗರಕ್ಕೆ ನೀರು ಸರಬರಾಜು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Published by:Pavana HS
First published: