ಪೊಲೀಸ್ ಕಸ್ಟಡಿಯಲ್ಲಿ ಆಫ್ರಿಕನ್ ಪ್ರಜೆ ಸಾವು ಪ್ರಕರಣ: ಸಿಐಡಿಯಿಂದ ತನಿಖೆ ಶುರು

ಬೆಂಗಳೂರು ಪೊಲೀಸರ ಕಸ್ಟಡಿಯಲ್ಲಿದ್ದಾಗ ಆಫ್ರಿಕನ್ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ಶುರು ಮಾಡಿದ್ದಾರೆ. ಇದರ ಜೊತೆಗೆ ನೈಜೀರಿಯನ್ ಮೂಲದ ವ್ಯಕ್ತಿಗಳು ಪೊಲೀಸರ ಮೇಲೆ ಹಲ್ಲೆ ಎಸಗಿದ ಘಟನೆಯ ತನಿಖೆಯೂ ನಡೆಯುತ್ತಿದೆ.

ಬೆಂಗಳೂರು ಪೊಲೀಸರ ಮೇಲೆ ಹಲ್ಲೆ ಎಸಗಿದ ಆಫ್ರಿಕಾ ಮೂಲದ ಒಬ್ಬ ವ್ಯಕ್ತಿ

ಬೆಂಗಳೂರು ಪೊಲೀಸರ ಮೇಲೆ ಹಲ್ಲೆ ಎಸಗಿದ ಆಫ್ರಿಕಾ ಮೂಲದ ಒಬ್ಬ ವ್ಯಕ್ತಿ

  • Share this:
ಬೆಂಗಳೂರು: ಆಫ್ರಿಕನ್ ಮೂಲದ ಕೆಲ ಪುಂಡರಿಂದ ಪೊಲೀಸರ ಮೇಲೆ ಹಲ್ಲೆ ನಡೆದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ನಡುವೆ ಪೊಲೀಸ್ ವಶದಲ್ಲಿ ಆರೋಪಿ ಸಾವಿಗೀಡಾದ ಬಗ್ಗೆಯೂ ಸಿಐಡಿ ವಿಚಾರಣೆ ಪ್ರಾರಂಭಿಸಿದೆ. ಹೀಗಿರುವಾಗಲೇ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಐವರ ಪೈಕಿ ಓರ್ವ ವ್ಯಕ್ತಿ ಡ್ರಗ್ಸ್ ಕನ್ಸೂಮರ್ ಎಂಬುದು ಪತ್ತೆಯಾಗಿದೆ. ಜೊತೆಗೆ ದಾಂದಲೆ ಮಾಡಿ ತಲೆಮರೆಸಿಕೊಂಡಿರೋ ಆತನ ಪತ್ತೆಗೆ ಹುಡುಕಾಟ ಮುಂದುವರೆದಿದೆ.

ಮೊನ್ನೆ ಜೆಸಿ ನಗರ ಪೊಲೀಸರ ವಶದಲ್ಲಿ ಆಫ್ರಿಕಾ ಪ್ರಜೆ ಜೋವಾನ್ ಮಲು ಎಂಬಾತ ಮೃತಪಟ್ಟಿದ್ದ. ಡ್ರಗ್ ಸಪ್ಲೈ ಹಿನ್ನೆಲೆ ಪೊಲೀಸರ ವಶದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟನೆಂಬುದು ಪೊಲೀಸರ ಹೇಳಿಕೆ. ಆದರೆ, ನೈಜಿಯರಿಯನ್ ಪ್ರಜೆಗಳು ಮಾತ್ರ ಆತನ ಸಾವಿಗೆ ಪೊಲೀಸರೇ ಕಾರಣ ಅಂತ ಮೊನ್ನೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದರು. ಆಗ ಪೊಲೀಸರು ನೈಜಿರಿಯನ್ ಪ್ರಜೆಗಳಿಗೆ ಲಾಠಿ ರುಚಿ ತೋರಿಸಿದರು.

ಇತ್ತ ಪುಂಡಾಟತನ ಪ್ರದರ್ಶಿಸಿದ್ದ ನೈಜಿರಿಯನ್ ಪ್ರಜೆಗಳ ವಿರುದ್ಧ ಜೆಸಿ ನಗರ ಠಾಣೆಯಲ್ಲಿ ಒಟ್ಟು ಮೂರು ಎಫ್ಐಆರ್ ದಾಖಲಾಗಿವೆ. ಪಿಎಸ್ ಐ ಲತಾ ಮೇಲೆ ಹಲ್ಲೆ, ಪಿಸಿ ಮಲ್ಲಿಕಾರ್ಜುನ ಮೇಲೆ ಹಲ್ಲೆ, ಹಾಗೂ ಪೊಲೀಸರ ಭಯದಲ್ಲಿ ಎಸ್ಕೇಪ್ ಆಗೋ ವೇಳೆ ರಸ್ತೆಯಲ್ಲಿ ಓರ್ವ ಬಾಲಕನನ್ನ ತಳ್ಳಿ ಗಾಯಗೊಳಿಸಿದ್ದಾರೆ. ಈ ಮೂರು ಆರೋಪಗಳಡಿ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ಪೊಲೀಸರು ರಮಾನ್ ಗ್ವಾಯ್, ಕ್ಲೆಮೆಂಟ್ ಬಾರ್ಕೆಮ್ಡಾ, ಯೂಸುಫ್ ಮಕೇಟಾ, ಜುವಾನೆ ಮುಕುಂಜು, ಗುಲೊರ್ಡ್ @ ಕಾಮುಲೆ ಅನ್ನೋ ಐದು ಜನ ನೈಜಿರಿಯನ್ ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: CP Yogeshwar- ಪಕ್ಷ ಸಂಘಟನೆ ಬಿಟ್ಟು ನಾಯಕರ ನಿಂದನೆಗೆ ನಿಂತಿದ್ದೇ ಯೋಗೇಶ್ವರ್​ಗೆ ಮುಳುವಾಯ್ತಾ?

ಜೆಸಿ ನಗರ ಠಾಣೆ ಎದುರು ಮೊನ್ನೆ ಪ್ರತಿಭಟನೆ ವೇಳೆ ನೈಜಿರಿಯನ್ಸ್ ಮಿತಿಮೀರಿ ವರ್ತಿಸಲು ಮಾದಕ ವಸ್ತುವಿನ ಅಮಲೇ ಕಾರಣ ಅನ್ನೋ ಶಂಕೆ ಇತ್ತು. ಹೀಗಾಗಿ ಬಂಧಿತ ನೈಜಿರಿಯನ್ ಮೂಲದ ಆರೋಪಿಗಳನ್ನು ಡೋಪ್ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಆಗ ಐದು ಜನ ಆರೋಪಿಗಳ ಯೂರಿನ್ ಸ್ಯಾಂಪಲ್ ಕಲೆಕ್ಟ್ ಮಾಡಿ ಪರೀಕ್ಷೆ ನಡೆಸಲಾಗಿತ್ತು. ಆಗ ಓರ್ವ ಬಂಧಿತ ಆರೋಪಿ ಗುಲೊರ್ಡ್ @ ಕಾಮುಲೆಯ ಡೋಪ್ ಟೆಸ್ಟ್ ಪಾಸಿಟಿವ್ ಬಂದಿದ್ದು, ಆತ ಮೊನ್ನೆ ಗಲಾಟೆ ವೇಳೆ ಮಾದಕ ವಸ್ತು ಸೇವನೆ ಮಾಡಿದ್ದ ಅನ್ನೋದು ದೃಢಪಟ್ಟಿದೆ.

ಇದನ್ನೂ ಓದಿ: Zameer Ahmed- 90 ಕೋಟಿ ಮೌಲ್ಯದ ನಿವೇಶನ ಕೇವಲ 9.38 ಕೋಟಿಗೆ ಮಾರಾಟ; ಇಡಿ ಕಣ್ಣಿಗೆ ಜಮೀರ್ ಬಿದ್ದದ್ದು ಹೀಗೆ

ಇತ್ತ ಬೌರಿಂಗ್ ಆಸ್ಪತ್ರೆಯಲ್ಲಿ ಮೃತ ಆಫ್ರಿಕಾ ಪ್ರಜೆ ಜೋವಾನ್ ಮಲು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಜೊತೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆತ ಮೃತಪಟ್ಟ ಹಿನ್ನೆಲೆ, ಸಿಐಡಿ ಅಧಿಕಾರಿಗಳು ಪ್ರತ್ಯೇಕ ತನಿಖೆ ಶುರುಮಾಡಿದ್ದಾರೆ. ಅಷ್ಟೇ ಅಲ್ಲ ಮೊನ್ನೆ ಗಲಾಟೆ ಬಳಿಕ ಎಸ್ಕೇಪ್ ಆಗಿರುವ ನೈಜಿರಿಯನ್ ಮೂಲದ ಆರೋಪಿಗಳು ಹಾಗೂ ಘಟನೆ ವೇಳೆ ಪ್ರಚೋದನೆ ನೀಡಿದ್ದ ಸ್ಥಳೀಯ ಮಹಿಳೆಯ ಪತ್ತೆಗೆ ವಿಶೇಷ ತಂಡಗಳ ಮೂಲಕ ತೀವ್ರ ಹುಡುಕಾಟ ನಡೆಸಲಾಗ್ತಿದೆ. ನೈಜೀರಿಯನ್ ಪ್ರಜೆಗಳು ಸಾಕಷ್ಟು ಪುಂಡಾಟ ಮಾಟಲು ಪ್ರಚೋದನೆ ಕೊಟ್ಟಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸ್ರಿಗೆ ಸಿಗುವ ಭಯಕ್ಕೆ ಬೆಂಗಳೂರು ತೊರೆದು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಈ ಆರೋಪಿಗಳು ಎಲ್ಲೆಲ್ಲಿ ವಾಸ್ತವ್ಯ ಮಾಡಿದ್ದರೋ ಆ ಜಾಗದಲ್ಲಿ ಬಾಡಿಗೆ ಕೊಟ್ಟ ಮಾಲೀಕರ ವಿಚಾರಣೆ ಮಾಡಲಾಗ್ತಿದೆ. ಜೊತೆಗೆ ಸ್ನೇಹಿತರನ್ನ ಸಹ ವಿಚಾರಣೆ ನಡೆಸ್ತಿದ್ದಾರೆ.

ವರದಿ: ಗಂಗಾಧರ ವಾಗಟ
Published by:Vijayasarthy SN
First published: