ಬೆಂಗಳೂರು(ಆ.31): ತಡರಾತ್ರಿ ಕೋರಮಂಗಲ 80 ಅಡಿ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಬಗ್ಗೆ ಪ್ರತ್ಯಕ್ಷದರ್ಶಿ ಸತೀಶ್ ಎಂಬಾತ ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾನೆ. ಪ್ರತ್ಯಕ್ಷದರ್ಶಿಯೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 304ಎ ಮತ್ತು 279 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತ್ಯಕ್ಷದರ್ಶಿ ಸತೀಶ್ ಎಂಬಾತ ಭೀಕರ ಅಪಘಾತದ ಬಗ್ಗೆ ದೂರು ನೀಡಿದ್ದಾನೆ. ಅಪಘಾತ ನಡೆದ ವೇಳೆ ಸತೀಶ್ ರಸ್ತೆ ಬದಿ ಕಾರು ಪಾರ್ಕ್ ಮಾಡಿ ನಿದ್ದೆಗೆ ಜಾರಿದ್ದ. ಈತ ಓಲಾದಲ್ಲಿ ಕ್ಯಾಬ್ ಓಡಿಸುತ್ತಿದ್ದ. ಆಫ್ ಲೈನ್ ಮಾಡಿ ರಸ್ತೆ ಬದಿ ಕಾರು ನಿಲ್ಲಿಸಿದ್ದ. ಸ್ವಲ್ಪ ಸಮಯದ ಬಳಿಕ ಇದ್ದಕ್ಕಿದ್ದಂತೆ ಜೋರಾದ ಶಬ್ದ ಕೇಳಿ ಕ್ಯಾಬ್ ಚಾಲಕ ಸತೀಶ್ ಎಚ್ಚರಗೊಂಡ. ಕೂಡಲೇ ಎದ್ದು ನೋಡಿದಾಗ ರಸ್ತೆಯಲ್ಲಿ ಕಾರಿನಿಂದ ದಟ್ಟ ಹೊಗೆ ಬರ್ತಿತ್ತು. ತಕ್ಷಣ ರಸ್ತೆಯಲ್ಲಿ ಬರ್ತಿದ್ದ ಕೆಲವು ವಾಹನಗಳನ್ನು ತಡೆದು ಕಾರಿನಲ್ಲಿ ಇದ್ದವರ ರಕ್ಷಣೆಗೆ ಯತ್ನಿಸಲಾಯಿತು. ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದರು.
ಫುಡ್ ಡೆಲಿವರಿ ಬಾಯ್ಸ್ ಜೊತೆಗೂಡಿ ಕಾರಿನಲ್ಲಿದ್ದ ಯುವಕ ಯುವತಿಯರ ರಕ್ಷಣೆಗೆ ಪ್ರಯತ್ನಿಸಲಾಯಿತು. ಈ ವೇಳೆ ಆರು ಜನರ ದಾರುಣ ಸಾವು ಕಂಡರು, ಓರ್ವನನ್ನ ಪೊಲೀಸರು ಆಸ್ಪತ್ರೆಗೆ ಸಾಗಿಸಿದರು. ಆದರೆ ಆತನೂ ಸಹ ಬದುಕುಳಿಯಲಿಲ್ಲ ಎಂದು ಘಟನೆ ಬಗ್ಗೆ ಕ್ಯಾಬ್ ಚಾಲಕ ಸತೀಶ್ ಪೊಲೀಸರ ಬಳಿ ಮಾಹಿತಿ ಬಿಚ್ಚಿಟ್ಟಿದ್ದಾನೆ.
ಇದನ್ನೂ ಓದಿ:Bengaluru Accident: ಆಕ್ಸಿಡೆಂಟ್ನಲ್ಲಿ ತಮಿಳುನಾಡು ಶಾಸಕರ ಮಗನೂ ಸಾವು; ಬೆಂಗಳೂರಿಗೆ ದೌಡಾಯಿಸಿದ ಕುಟುಂಬಸ್ಥರು
ಚಾಲಕ ಸತೀಶ್ ಆಡುಗೋಡಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಸತೀಶ್ ದೂರಿನ ಮೇರೆಗೆ ಆಡುಗೋಡಿ ಟ್ರಾಫಿಕ್ ಪೊಲೀಸರು ಎಫ್ಐಆರ್ ದಾಖಲು ಮಾಡುತ್ತಿದ್ದಾರೆ.
ಚಾಲಕ ಕರುಣಾ ಸಾಗರ್ ವಿರುದ್ಧ ಕೇಸ್ ದಾಖಲಾಗಿದೆ. ಭೀಕರ ಅಪಘಾತಕ್ಕೆ ಕಾರಣವಾದ ಹಿನ್ನಲೆಯಲ್ಲಿ ಕರುಣಾ ಸಾಗರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಯಾವುದೋ ಕಾರಣಕ್ಕೆ ವೇಗವಾಗಿ ಕಾರು ಚಲಾಯಿಸಿ ಫುಟ್ ಪಾತ್ ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಬ್ಯಾಂಕ್ನ ಕಟ್ಟಡಕ್ಕೆ ಡಿಕ್ಕಿ ಹೊಡೆದು ಹಾನಿ ಆಗಿದೆ. ಈ ವೇಳೆ ಅಪಘಾತದಲ್ಲಿ ಏಳು ಜನರು ಪ್ರಜ್ಞಾ ಹೀನಾ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಪಘಾತಕ್ಕೆ ಕಾರಣವಾದ ಚಾಲಕನ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಕ್ಯಾಬ್ ಚಾಲಕ ದೂರು ನೀಡಿದ್ದಾನೆ. ಸತೀಶ್ ದೂರಿನ ಆಧಾರದ ಮೇಲೆ ಆಡುಗೊಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರುಣಾ ಸಾಗರ್ ಮೆಡಿಸಿನ್ ಪಡೆಯಲು ಬೆಂಗಳೂರಿನ ಸಂಬಂಧಿಕರ ಮನೆಗೆ ಬಂದಿದ್ದ. ತನ್ನ ಸ್ನೇಹಿತ ಉತ್ಸವ್ ಜೊತೆ ಬೆಂಗಳೂರಿಗೆ ಬಂದಿದ್ದ. ಉಳಿದ ಐವರು ಪಿಜಿಯಲ್ಲಿ ವಾಸವಾಗಿದ್ದವರು. ರಾತ್ರಿ ಕರುಣಾ ಸಾಗರ್ ಕೋರಮಂಗಲ ಠಾಣೆ ಬಳಿಯ ಪಿಜಿ ಸ್ನೇಹಿತರ ಜೊತೆ ಹೊರ ಹೋಗಿದ್ದ. ಆದರೆ ಎಲ್ಲಿ ಹೋಗಿದ್ದರು, ಯಾಕೆ ಹೋಗಿದ್ದರು ಎಂಬುದು ಇನ್ನೂ ನಿಗೂಢ. ಮೃತ ಬಿಂದು ಮತ್ತು ಕರುಣಾ ಸಾಗರ್ಗೆ ಮದುವೆ ಮಾಡಲು ನಿರ್ಧಾರ ಮಾಡಲಾಗಿತ್ತು. ಬಿಂದು ಸೇರಿ ಐವರು ಸ್ನೇಹಿತರು ಕೋರಮಂಗಲ ಠಾಣೆ ಬಳಿಯ ಪಿಜಿಯಲ್ಲಿ ವಾಸ ಮಾಡುತ್ತಿದ್ದರು.
ಇದನ್ನೂ ಓದಿ:Accident in Bengaluru: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕಾರಿನಲ್ಲಿದ್ದ 7 ಮಂದಿ ದಾರುಣ ಸಾವು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ