ಬೆಂಗಳೂರು(ಆ.24): ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದ ಬಾಯ್ಲರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಸಚಿನ್ (40) ಹಾಗೂ ಧನಲಕ್ಷ್ಮೀ (45) ಎಂಬ ಇಬ್ಬರು ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮತ್ತೊಬ್ಬ ಗಾಯಾಳು ಶಾಂತಿ ಎಂಬಾಕೆಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ಮಧ್ಯಾಹ್ನ ಮಾಗಡಿ ರಸ್ತೆಯ ಗೋಪಾಲಪುರದಲ್ಲಿರುವ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ನಿನ್ನೆ ಸೌರವ್ ಮತ್ತು ಮನೀಶ್ ಎಂಬ ಇಬ್ಬರು ಸಾವನ್ನಪ್ಪಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಸಚಿನ್, ಶಾಂತಿ, ಧನಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದರು. ಇಂದು ರಾಜಸ್ಥಾನ ಮೂಲದ ಸಚಿನ್ ಹಾಗೂ ಸ್ಥಳೀಯರಾದ ಧನಲಕ್ಷ್ಮಿ ಚಿಕಿತ್ಸೆ ಫಲಕಾರಿಯಾದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶಾಂತಿ ಎಂಬುವರ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಗಾಯಗೊಂಡ ಮೂವರಿಗೂ ಶೇ. 45 ರಷ್ಟು ದೇಹ ಸುಟ್ಟಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಈ ಎಂಎಂ ಫುಡ್ ಕಂಪನಿ ಸುಮಾರು 5 ತಿಂಗಳಿಂದ ಶುರುವಾಗಿತ್ತು ಎಂದು ತಿಳಿದು ಬಂದಿದೆ. ರೆಸಿಡೆನ್ಸಿಯಲ್ ಏರಿಯಾದಲ್ಲಿರುವ ಈ ಫ್ಯಾಕ್ಟರಿಯಲ್ಲಿ ಕುರುಕಲು ತಿಂಡಿಗಳನ್ನು ತಯಾರು ಮಾಡಲಾಗುತ್ತಿತ್ತು. ಸುಮಾರು 10ಕ್ಕೂ ಹೆಚ್ಚು ಕಮರ್ಷಿಯಲ್ ಸಿಲಿಂಡರ್ಗಳನ್ನು ಬಳಸಿ ಫುಡ್ ಪ್ರಾಡಕ್ಟ್ಗಳನ್ನು ತಯಾರು ಮಾಡುತ್ತಿದ್ದರು. ಎರಡು ಬಾಯ್ಲರ್ಗಳಲ್ಲಿ ಪ್ರಾಡಕ್ಟ್ ತಯಾರಿಸಲಾಗುತ್ತಿತ್ತು. ಅದರಲ್ಲಿ ಒಂದು ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಉಳಿದವರು ಗಾಯಗೊಂಡಿದ್ದರು.
ಇದನ್ನೂ ಓದಿ:Karnataka Weather Today: ಆ.26ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆ; ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ
ಮಾಲೀಕ ವಿಜಯ್ ಮೆಹ್ತಾ ಜನವರಿಯಿಂದ ಶಾಲೆಯ ಜಾಗವನ್ನು ಬಾಡಿಗೆ ಪಡೆದು ಪುಡ್ ಕಂಪನಿಯನ್ನು ಶುರು ಮಾಡಿದ್ದ . ಈಗ ಮೆಹ್ತಾ ನಾಪತ್ತೆಯಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಕಟ್ಟಡದ ಮಾಲೀಕ ಹಾಗೂ ಎಂಎಂ ಫುಡ್ ಫ್ಯಾಕ್ಟರಿ ಶೇರ್ ಹೋಲ್ಡರ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಟ್ಟಡದ ಮಾಲೀಕ ನರೇಂದ್ರ, ಫ್ಯಾಕ್ಟರಿ ಮಾಲೀಕರು - ವಿಜಯ್ ಮೆಹ್ತಾ ಹಾಗೂ ಸಚಿನ್ ಎಂದು ತಿಳಿದು ಬಂದಿದೆ. ನಿರ್ಲಕ್ಷ್ಯತನ, ನಿರ್ಲಕ್ಷ್ಯತನದಿಂದ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ. ಗಾಯಾಳುಗಳ ಹೇಳಿಕೆ ಪಡೆದ ಬಳಿಕ ಹೆಚ್ಚುವರಿ ಸೆಕ್ಷನ್ ಸೇರ್ಪಡೆ ಮಾಡಲಾಗುತ್ತದೆ. ಪ್ರಾಥಮಿಕವಾಗಿ ಬಾಯ್ಲರ್ ಸ್ಪೋಟದಿಂದ ಘಟನೆ ನಡೆದಿರೋದು ಬೆಳಕಿಗೆ ಬಂದಿದೆ. ಏಳು ಸಿಲಿಂಡರ್ ಗಳು ಪಕ್ಕದಲ್ಲಿದ್ದು, ಅದೃಷ್ಟವಶಾತ್ ಸ್ಪೋಟವಾಗಿಲ್ಲ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಪೋಟ ನಡೆದ ಸ್ಥಳಕ್ಕೆ ಬಿಬಿಎಂಪಿ ಜಾಯಿಂಟ್ ಕಮೀಷನರ್ ಶಿವ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ:Gold Price Today: ಚಿನ್ನ ಕೊಳ್ಳುವವರಿಗೆ ಕಹಿ ಸುದ್ದಿ; ಇಂದು ಏರಿಕೆ ಕಂಡ ಬಂಗಾರದ ಬೆಲೆ
ಮಾಗಡಿ ರಸ್ತೆ ಇನ್ಸ್ಪೆಕ್ಟರ್ ಶ್ರೀನಿವಾಸ್ ಅಂಡ್ ಟೀಂನಿಂದ ಹುಡುಕಾಟ ನಡೆಯುತ್ತಿದೆ. ನಿನ್ನೆ ಘಟನೆ ಬಳಿಕ ಮನೀಶ್ ಹಾಗೂ ಸೌರವ್ ಸಜೀವ ದಹನರಾಗಿದ್ದರು. ಗಾಯಾಳುಗಳಿಗೆ ನೀರು ಚುಮುಕಿಸಿ ಗೋಣಿ ಚೀಲದಿಂದ ಮುಚ್ಚಿ ಬೆಂಕಿ ನಂದಿಸಿದ್ದರು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನೆ ಮಾಡಿದ್ದರು. ಆದ್ರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ಇದುವರೆಗೂ ನಾಲ್ವರು ಮೃತಪಟ್ಟಿದ್ದಾರೆ.
ವಿಜಯ್ ಮೆಹ್ತಾ ವಿರುದ್ದ ಮಾಗಡಿ ರಸ್ತೆ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ವಿಜಯ್ ಮೆಹ್ತಾ ನಾಪತ್ತೆಯಾಗಿದ್ದಾನೆ. ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ