ಬೆಂಗಳೂರು(ಸೆ.30): ಯಾಕೋ ಮಂತ್ರಿ ಮಾಲ್(Mantri Square Mall), ಪಾಲಿಕೆಯ ಬಾಯಿಮಾತಿಗೆ ಬಗ್ಗುವ ಹಾಗೆ ಕಾಣುತ್ತಿಲ್ಲ. ತೆರಿಗೆ ಹಣ ಪಾವತಿಸದೆ ಬಿಬಿಎಂಪಿ(BBMP) ಅವರನ್ನ ಸತಾಯಿಸುತ್ತಿದ್ದಾರೆ. ಎಷ್ಟೇ ನೋಟಿಸ್ ಕೊಟ್ಟರೂ ಮಂತ್ರಿ ಮಾಲ್ ಬುದ್ಧಿ ಕಲಿತರಲಿಲ್ಲ. 39 ಕೋಟಿ ತೆರಿಗೆ ಕಟ್ಟದೆ ಮಂತ್ರಿ ಮಾಲ್ ಮಾಲೀಕರು ಬಾಕಿ ಉಳಿಸಿಕೊಂಡಿದ್ದರು. ಆಸ್ತಿ ತೆರಿಗೆ ಪಾವತಿಸುವಂತೆ ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(Bruhath Bengaluru Mahanagara Paalike) ಹಲವು ಬಾರಿ ನೊಟೀಸ್ ನೀಡಿತ್ತು. ಆದರೆ ಮಂತ್ರಿ ಮಾಲ್ ಮಾಲೀಕರು ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಇದು ಕಠಿಣ ಕ್ರಮಕ್ಕೆ ಮುಂದಾಗಿದ್ದ ಪಾಲಿಕೆ ಮಾಲ್ ನ ಮುಖ್ಯ ದ್ವಾರಕ್ಕೆ ಬೀಗ ಜಡಿದು, ಕ್ಲೋಸ್ ಮಾಡಿಸಿತ್ತು. ಈ ಹಿಂದೆಯೂ ಇದೇ ರೀತಿ ಮಾಲ್ ಗೆ ಬೀಗ ಹಾಕಿತ್ತು. ಆಗ ಮಾಲ್ ಮಾಲೀಕರು ತೆರಿಗೆ ಪಾವತಿಸುವುದಾಗಿ ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದರು. ಮುಚ್ಚಳಿಕೆ ಪಡೆದ ನಂತರ ಪಾಲಿಕೆ ಮತ್ತೆ ಮಾಲ್ ತೆರೆಯಲು ಅವಕಾಶ ನೀಡಿತ್ತು.
ಇಂದು ಬೆಳಗ್ಗೆ ಸಿಬ್ಬಂದಿಯೊಂದಿಗೆ ಮಂತ್ರಿ ಮಾಲ್ ಗೆ ತೆರಳಿದ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ(BBMP Joint Commissioner Shivaswamy) ಮಾಲ್ ನ ಮುಖ್ಯ ದ್ವಾರಕ್ಕೆ ಬೀಗ ಜಡಿದಿದ್ದಾರೆ. ಬೆಳ್ಳಂಬೆಳಗ್ಗೆ ಮಾಲ್ ಗೆ ಆಗಮಿಸಿದ ಗ್ರಾಹಕರು ಮತ್ತೆ ಮನೆ ದಾರಿ ಹಿಡಿದಿದ್ದರು. ಬಿಬಿಎಂಪಿ (BBMP) ಪಶ್ಚಿಮ ವಲಯದಲ್ಲಿ ಅತೀ ದೊಡ್ಡ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮಂತ್ರಿ ಮಾಲ್ ಮೊದಲ ಸ್ಥಾನದಲ್ಲಿದೆ. ಈ ಹಿಂದೆ ಆಸ್ತಿ ತೆರಿಗೆ ಪಾವತಿಗೆ ಮಂತ್ರಿ ಮಾಲ್ ಆಡಳಿತ ಮಂಡಳಿ ಪಾಲಿಕೆಗೆ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮಂತ್ರಿ ಮಾಲ್ ಬಡ್ಡಿ ಸೇರಿ 39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಕಳೆದ ಬಾರಿ ಕೊಟ್ಟ ಚೆಕ ಬೌನ್ಸ್ ಆಗಿದ್ದರಿಂದ, ಐದು ಕೋಟಿ ರೂಪಾಯಿಯ ಡಿಡಿ ಕೊಡುವಂತೆ ಅಧಿಕಾರಿಗಳು ಮಂತ್ರಿ ಮಾಲ್ ಆಡಳಿತ ಮಂಡಳಿಗೆ ತಿಳಿಸಿತ್ತು.
ಇದನ್ನೂ ಓದಿ:Bengaluru: ಮೆಟ್ರೋ ಕಾಮಗಾರಿ ವೇಳೆ 30 ಅಡಿ ಮಣ್ಣು ಕುಸಿತ, ಸರಿಯಾಗಿ ಬಾವಿ ಮುಚ್ಚದಿದ್ದಕ್ಕೆ ಅವಘಡ..!
ಇದು ಮಂತ್ರಿ ಮಾಲ್ ಗೆ ಬೀಗ ಹಾಕುತ್ತಿದ್ದಂತೆ ಆಡಳಿತ ಮಂಡಳಿ 5 ಕೋಟೆಯ ಡಿಡಿಯನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದ್ದಾರೆ. ಡಿಡಿ ಪಡೆದ ಬಳಿಕ ಪಾಲಿಕೆಯು ಮಾಲ್ ಕಾರ್ಯನಿರ್ವಹಿಸಲು ಅನುಮತಿ ಮಾಡಿಕೊಟ್ಟಿದ್ದಾರೆ. ಇನ್ನುಳಿದ ತೆರಿಗೆ ಬಾಕಿಯನ್ನು ಅಕ್ಟೋಬರ್ ನಲ್ಲಿ ಪಾವತಿಸುವುದು ಮಂತ್ರಿ ಮಾಲ್ ಆಡಳಿತ ಮಂಡಳಿ ತಿಳಿಸಿದೆ.
ಅವರೂ ಕೊರೊನಾ ವೈರಸ್ ಕಾರಣದಿಂದ ಕಷ್ಟ ಎದುರಾಗಿದೆ ಎಂದು ಸಮಯ ಕೇಳಿದ್ದಾರೆ. ಮುಖ್ಯ ಆಯುಕ್ತರ ಸೂಚನೆ ಮೇರೆಗೆ ಮಾಲ್ ತೆರೆಯಲು ಅವಕಾಶ ನೀಡಲಾಗಿದೆ ಎಂದು ಶಿವಸ್ವಾಮಿ ತಿಳಿಸಿದ್ದಾರೆ.
2018-19, 2019-20, 2020-21ರ ಸಾಲಿನ ಆಸ್ತಿ ತೆರಿಗೆಯನ್ನು ಮಂತ್ರಿ ಸ್ಕ್ವೇರ್ ಮಾಲ್ ಬಾಕಿ ಉಳಿಸಿಕೊಂಡಿತ್ತು. ಚೆಕ್ ಮೂಲಕ ನೀಡಿದರೆ ಸ್ವೀಕರಿಸುವುದಿಲ್ಲ ಎಂದಿದ್ದರಿಂದ ಡಿಡಿ ಮೂಲಕ ಪಾವತಿ ಮಾಡಿದ್ದಾರೆ.
ಮಂತ್ರಿ ಮಾಲ್, 27 ಕೋಟಿ ಮೊತ್ತದ ತೆರಿಗೆ ಹಾಗೂ ಬಡ್ಡಿ ಸೇರಿ ಒಟ್ಟು 39 ಕೋಟಿ ರೂ ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಈ ಹಿಂದೆ ಮಂತ್ರಿ ಮಾಲ್ ಆಸ್ತಿ ತೆರಿಗೆ ಪಾವತಿಸಲು ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ