Apartment Fire Accident : ರೂಲ್ಸ್ ಬ್ರೇಕ್ ಮಾಡಿದ್ದರಿಂದಲೇ ಅಗ್ನಿಅವಘಡ, ಈ ನಿಯಮ ಪಾಲಿಸಿದ್ರೆ 2 ಜೀವ ಉಳಿಯುತ್ತಿತ್ತು

Fire Accident Reason: ಪ್ರಾಥಮಿಕ ತನಿಖೆ ವೇಳೆ ಗ್ಯಾಸ್‍ನಿಂದ ಬೆಂಕಿ ಹೊತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಯುಪಿಎಸ್, ಮೊಬೈಲ್ ಚಾರ್ಜಿಂಗ್, ಮೇಲೆ ಅನುಮಾನ ವ್ಯಕ್ತವಾಗುತ್ತಿದೆ.

ಬೆಂಕಿ ಅವಘಡ ಸಂಭವಿಸಿದ ಕಟ್ಟಡ

ಬೆಂಕಿ ಅವಘಡ ಸಂಭವಿಸಿದ ಕಟ್ಟಡ

 • Share this:
  Bengaluru Apartment Fire: ನಿನ್ನೆ ಮಧ್ಯಾಹ್ನ ಬೆಂಗಳೂರಿನಲ್ಲಿ ಸಂಭವಿಸಿದ ಅಗ್ನಿದುರಂತಕ್ಕೆ ಸಿಲಿಕಾನ್ ಸಿಟಿ ಮಂದಿ ಆಘಾತಕ್ಕೆ ಒಳಗಾಗಿದ್ದಾರೆ. ಫ್ಲ್ಯಾಟ್​ನಲ್ಲಿ ಸಿಲಿಂಡರ್​ ಸ್ಫೋಟಿಸಿ ಅಗ್ನಿ ಅವಘಡ (Fire Accident) ಸಂಭವಿಸಿದ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಕ್ಕೆ ಒಂದು ಫ್ಲಾಟ್ ಧಗಧಗನೆ ಹೊತ್ತಿ ಉರಿದಿದೆ. ಬೆಂಗಳೂರು ನಗರದ ದೇವರಚಿಕ್ಕನಹಳ್ಳಿ ಬಳಿ ಘಟನೆ ನಡೆದಿದೆ. ಇಲ್ಲಿನ ಆಶ್ರಿತ್ ಅಪಾರ್ಟ್ಮೆಂಟ್​ನಲ್ಲಿ (Ashrith Apartment) ಸಿಲಿಂಡರ್ ಸ್ಫೋಟ (Cylinder Blast) ಆಗಿದೆ. ಅಗ್ನಿ ಅವಘಡ ದುರಂತದಲ್ಲಿ ಇಬ್ಬರು ಸಜೀವದಹನವಾಗಿದ್ದಾರೆ. ಫ್ಲ್ಯಾಟ್‌ನಲ್ಲಿದ್ದ ಮೂವರು ಹೊರಗೆ ಓಡಿ ಬಂದು ಪಾರಾಗಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಗ್ಯಾಸ್‍ನಿಂದ ಬೆಂಕಿ ಹೊತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಯುಪಿಎಸ್, ಮೊಬೈಲ್ ಚಾರ್ಜಿಂಗ್, ಮೇಲೆ ಅನುಮಾನ ವ್ಯಕ್ತವಾಗುತ್ತಿದೆ.

  ಇನ್ನು ಈ ಭೀಕರ ದುರಂತಕ್ಕೆ ಅಪಾರ್ಟ್ಮೆಂಟ್ ನ ನಿರ್ಲಕ್ಷವೇ ಕಾರಣವಾಯಿತಾ ಎಂಬ ಪ್ರಶ್ನೆ ಮೂಡಿದೆ. ಈ ಅಪಾರ್ಟ್ಮೆಂಟ್ ನಲ್ಲಿ ಯಾವುದೇ ಮುಂಜಾಗ್ರತ ಕ್ರಮ ತೆಗೆದುಕೊಂಡಿರಲಿಲ್ಲ. ಬಿಬಿಎಂಪಿ ಹಾಗೂ ಅಪಾರ್ಟ್ಮೆಂಟ್ ಮಾಲೀಕರ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ. ನಿರ್ಲಕ್ಷ್ಯಕ್ಕೆ ಕಣ್ಮುಂದೆಯೆ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಸೇಫ್ಟಿ ಮೆಶರ್ಸ್ ಇಲ್ಲದಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  ಅಗ್ನಿ ಸುರಕ್ಷತೆಗೆ ಸಂಬಂಧಿಸಿದ ರೂಲ್ಸ್ ಬ್ರೇಕ್ ಆಗಿದ್ದು ಹೇಗೆ?

  ರೂಲ್ಸ್ ಬ್ರೇಕ್ ನಂ.1

  - ಅಪಾರ್ಟ್ಮೆಂಟ್ ಗಳಲ್ಲಿ ಒಂದು ವೇಳೆ ಅಗ್ನಿ ಅವಘಡ ಸಂಭವಿಸಿದರೆ, ಬೆಂಕಿ ನಂದಿಸುವ ವಾಟರ್ ಲೈನ್ ವ್ಯವಸ್ಥೆ ಕಡ್ಡಾಯವಾಗಿರಬೇಕು.

  - ಆದರೆ ಈ ಅಪಾರ್ಟ್ಮೆಂಟ್ ನಲ್ಲಿ ಯಾವುದೇ ವಾಟರ್ ಲೈನ್ ವ್ಯವಸ್ಥೆ ಇರಲಿಲ್ಲ.

  ರೂಲ್ಸ್ ಬ್ರೇಕ್ ನಂ.2

  - ಅಪಾರ್ಟ್ಮೆಂಟ್ ನ ಪ್ರತಿ ಫ್ಲೋರ್ ನಲ್ಲೂ ರಾಸಾಯನಿಕ ಮಿಶ್ರಿತ ಬೆಂಕಿ ನಂದಿಸುವ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇರಬೇಕು.

  - ಈ ಅಪಾರ್ಟ್ಮೆಂಟ್ ನಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಇರಲಿಲ್ಲ.

  ರೂಲ್ಸ್ ಬ್ರೇಕ್ ನಂ. 3

  - ಅಪಾರ್ಟ್ಮೆಂಟ್ ನ ಯಾವುದೇ ಭಾಗದಲ್ಲೂ ಕಾಣಿಸಿಕೊಂಡ ತಕ್ಷಣ ಅಪಾರ್ಟ್ಮೆಂಟ್ ಜನರನ್ನ ಎಚ್ಚರಿಸಲು ಸೈರನ್ ವ್ಯವಸ್ಥೆ ಇರಬೇಕು.

  - ಆದರೆ ಈ ಅಪಾರ್ಟ್ಮೆಂಟ್ ನಲ್ಲಿ ಸೈರನ್ ವ್ಯವಸ್ಥೆಯೂ ಇರಲಿಲ್ಲ.

  ಇದನ್ನೂ ಓದಿ: fire Accident: ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್​​ನಲ್ಲಿ ಬೆಂಕಿ ಅನಾಹುತ; ಇಬ್ಬರ ಸಾವು

  ಈ ಎಲ್ಲಾ ಮುಂಜಾಗ್ರತ ನಿಯಮಗಳನ್ನ ಗಾಳಿಗೆ ತೂರಿರೋದ್ರಿಂದ ಎರಡು ಜೀವಗಳು ಬಲಿಯಾದ್ವಾ ಅನ್ನೋ ಅನುಮಾನ ಮೂಡಿದೆ. ಯಾರದ್ದೋ ತಪ್ಪಿಗೆ ಇನ್ಯಾರೋ ಬಲಿ ಎಂಬಂತೆ, ಬಿಬಿಎಂಪಿ ಹಾಗೂ ಅಪಾರ್ಟ್ಮೆಂಟ್ ಮಾಲೀಕನ ನಿರ್ಲಕ್ಷಕ್ಕೆ ತಾಯಿ-ಮಗಳ ಪ್ರಾಣಪಕ್ಷಿ ಹಾರಿಹೋಗಿದೆ. 82 ವರ್ಷದ ವೃದ್ಧೆ ಲಕ್ಷ್ಮೀದೇವಿ ಹಾಗೂ 51 ವರ್ಷದ ಭಾಗ್ಯರೇಖಾ ಎಂಬ ಮಹಿಳೆ ಬಲಿಯಾಗಿದ್ದಾರೆ.

  74 ಅಂತಸ್ತಿನ ದೊಡ್ಡ ಅಪಾರ್ಟ್ಮೆಂಟ್ ಇದು

  ಆಶ್ರಿತ್​​ ಅಪಾರ್ಟ್ಮೆಂಟ್ ನಲ್ಲಿ ಒಟ್ಟು ನಾಲ್ಕು ಅಂತಸ್ತುಗಳಿವೆ. ನಾಲ್ಕು ಅಂತಸ್ತಿನಲ್ಲಿ ಒಟ್ಟು 72 ಫ್ಲ್ಯಾಟ್‌ ಗಳನ್ನು ನಿರ್ಮಿಸಲಾಗಿತ್ತು. ಆಶ್ರಿತ್ ಶೆಲ್ಟರ್ಸ್ ಪ್ರೈವೆಟ್‌ ಲಿ. ಒಡೆತನದ ಅಪಾರ್ಟ್ಮೆಂಟ್ ಇದಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ನಿನ್ನೆ ಅಪಾರ್ಟ್ಮೆಂಟ್ ನಲ್ಲಿ ದುರ್ಘಟನೆ ಸಂಭವಿಸಿರುವುದರಿಂದ 60ಕ್ಕೂ ಹೆಚ್ಚು ನಿವಾಸಿಗಳಿಗೆ ಸಮೀಪದ ಅಪಾರ್ಟ್ಮೆಂಟ್ ಕ್ಲಬ್ ಹೌಸ್ ನಲ್ಲಿ ಆಶ್ರಯದ ವ್ಯವಸ್ಥೆ ಮಾಡಲಾಗಿದೆ. ಘಟನೆ ಬಗ್ಗೆ ಈಗಾಗಲೇ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಎರಡು ತನಿಖಾ ತಂಡಗಳು ಅಪಾರ್ಟ್ಮೆಂಟ್ ಗೆ ಭೇಟಿ ನೀಡಲಿದೆ. ಬೆಂಕಿಯ ಕಾರಣ ತಿಳಿಯಲು ಎಫ್‍ಎಸ್‍ಎಲ್, ಎಲೆಕ್ಟ್ರಿಕಲ್ ಎಂಜಿನಿಯರ್ ತಂಡದಿಂದ ಪರಿಶೀಲನೆ ನಡೆಯಲಿದೆ.

  ಸೆಕ್ಯುರಿಟಿ ಅವ್ರಿಗೆ ಬೆಂಕಿ ಬಿದ್ದಿದ್ದೇ ಗೊತ್ತಾಗಿಲ್ಲ

  ಆಸ್ಪೇರ್ ಅಪಾರ್ಟ್ಮೆಂಟ್ ನಲ್ಲಿ ಒಟ್ಟು 73 ಫ್ಲಾಟ್ ಗಳು ಇವೆ. ಅದ್ರಲ್ಲಿ 54 ಕುಟುಂಬಗಳು ಸದ್ಯಕ್ಕೆ ವಾಸವಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ಬೇರೆಡಗೆ ಶಿಫ್ಟ್ ಮಾಡಲಾಗಿದೆ. 40 ಕುಟುಂಬಗಳು ಸಂಬಂಧಿಕರು, ಪರಿಚಯಸ್ಥರ ಮನೆಗಳಿಗೆ ಹೋಗಿದ್ದಾರೆ. 10ಕ್ಕೂ ಹೆಚ್ಚು ಕುಟುಂಬಗಳು ಪಕ್ಕದ ಜಾನ್ಹವಿ ಎನ್ಕ್ಲೇವ್ ಅಪಾರ್ಟ್ಮೆಂಟ್ ನಲ್ಲಿ ಇದ್ದಾರೆ. ಅಪಾರ್ಟ್ಮೆಂಟ್ ಸುತ್ತವರಿಯಲು ಅಗ್ನಿ ಶಾಮಕ ವಾಹನ ಬರೋಕು ಜಾಗವಿಲ್ಲ, ಇಷ್ಟು ದೊಡ್ಡ ಅಪಾರ್ಟ್ಮೆಂಟ್ ನಲ್ಲಿ ಸೆಕ್ಯುರಿಟಿ ಇರೋದು ಬರೀ 7 ಜನ ಮಾತ್ರ. ಬೆಂಕಿ ಬಿದ್ದಿದ್ದೇ ಅಪಾರ್ಟ್ಮೆಂಟ್ ನಿವಾಸಿಗಳನ್ನು ಎಚ್ಚರಿಸೋ ಕೆಲಸ ಸಹ ಮಾಡಿಲ್ಲ.

  ಜನರ ಕೂಗಾಟ ಕೇಳಿದಾಗ ಬೆಂಕಿ ಬಿದ್ದಿರೋ ಬಗ್ಗೆ ಸೆಕ್ಯುರಿಟಿ ಗೆ ಗೊತ್ತಾಗಿದೆ. ಇಂದು 11 ಗಂಟೆ ಸುಮಾರಿಗೆ ಎಫ್ ಎಸ್ ಎಲ್ ಟೀಂ ಆಗಮಿಸಿ ಇಡೀ ಫ್ಲಾಟ್ ನ ಪರಿಶೀಲನೆ ಮಾಡ್ತಾರೆ. ಎಲೆಕ್ಟ್ರಿಕ್ ವಸ್ತುಗಳ ಬಳಿ ಮಾದರಿ ಸಂಗ್ರಹ ಮಾಡಲಿರೋ FSL ತಂಡ ಜೊತೆಗೆ ಟಿವಿ, ಫ್ರಿಡ್ಜ್, ಗ್ಯಾಸ್ ಗೀಜರ್, ವಾಷಿಂಗ್ ಮಿಷನ್, ಸಿಲಿಂಡರ್, ಬಳಿ ಸ್ಯಾಂಪಲ್ ಪಡೀತಾರೆ. ಅದ್ರಿಂದ ಏನಾದ್ರೂ ಬೆಂಕಿ ಬಿದ್ದಿದೆಯಾ ಅಂತ ಪತ್ತೆ ಮಾಡಲಿದ್ದಾರೆ.

  (ವಾಸುದೇವ್ ಎಂ)
  Published by:Soumya KN
  First published: