KIAB: ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವ ಮಾನ್ಯತೆ, ಈ ಬಾರಿಯೂ 'ವಾಯ್ಸ್ ಆಫ್ ಕಸ್ಟಮರ್‘ ಹೆಗ್ಗಳಿಕೆ

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ​ "ವಾಯ್ಸ್​ ಆಫ್ ಕಸ್ಟಮರ್‌" ಜಾಗತಿಕ ಮಾನ್ಯತೆ ಲಭಿಸಿದೆ.

ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣ

  • Share this:
    ಬೆಂಗಳೂರು: ಕೊರೊನಾ (Corona) ಸಂದರ್ಭದಲ್ಲಿ ಗ್ರಾಹಕರ ಅವಶ್ಯಕತೆಯನ್ನು ಅರ್ಥ ಮಾಡಿಕೊಳ್ಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸತತವಾಗಿ ಪ್ರಯತ್ನಿಸಿದ್ದು, ಇದರಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAB) ಏರ್‌ಪೋರ್ಟ್ಸ್ ಕೌನ್ಸಿಲ್‌ ಇಂಟರ್‌ನ್ಯಾಷನಲ್‌ ವರ್ಲ್ಡ್​ "ವಾಯ್ಸ್​ ಆಫ್ ಕಸ್ಟಮರ್‌"(ಗ್ರಾಹಕರ ಧ್ವನಿ)‌ ಜಾಗತಿಕ ಮಾನ್ಯತೆ ಲಭಿಸಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸತತವಾಗಿ ಎರಡು ಬಾರಿ ಎಸಿಐನ `ವಾಯ್ಸ್ ಆಫ್ ದಿ ಕಸ್ಟಮರ್’ (‘Voice Of The Customer) ಮಾನ್ಯತೆ ಸಿಕ್ಕಿರೋದು ಹೆಮ್ಮೆಯ ವಿಚಾರ. ಕೊರೊನಾ ಸಮಯದಲ್ಲಿ ಗ್ರಾಹಕರಿಗೆ ಆದ್ಯತೆ ನೀಡಿದ ಹಾಗೂ ಅವರ ಧ್ವನಿಗೆ ಓಗೊಟ್ಟು ಸಹಾಯ ಮಾಡಿದ ವಿಮಾನ ನಿಲ್ದಾಣಗಳನ್ನು (Airport ) ಗುರುತಿಸುವ ಕಾರ್ಯವನ್ನುವಾಯ್ಸ ಆಫ್ ಕಸ್ಟಮರ್‌’ ಮಾಡುತ್ತಿದೆ.

    ಸತತ 2ನೇ ಬಾರಿ ವಾಯ್ಸ್​ ಆಫ್ ಕಸ್ಟಮರ್ ಮಾನ್ಯತೆ

    ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣಿಕರ ಅಗತ್ಯ ಮತ್ತು ಅವಶ್ಯಕತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪರಿಸ್ಥಿತಿ ನಿರ್ವಹಣೆ ಮಾಡಿದೆ . ಹೀಗಾಗಿ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್(ಬಿಐಎಎಲ್) ಇಂಟರ್ನ್ಯಾಷನಲ್ ವರ್ಲ್ಡ್​ ವಾಯ್ಸ್ ಆಫ್ ದಿ ಕಸ್ಟಮರ್ಉಪಕ್ರಮದ ಜಾಗತಿಕ ಮಾನ್ಯತೆ ಪಡೆದಿದೆಬೆಂಗಳೂರು ವಿಮಾನ ನಿಲ್ದಾಣವು ಎಸಿಐನ ಏರ್ಪೋರ್ಟ್ ಸರ್ವೀಸ್ ಕ್ವಾಲಿಟಿ (ಎಎಸ್ಕ್ಯೂ) ಕಾರ್ಯಕ್ರಮದಲ್ಲಿ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸುವಲ್ಲಿ ಗಮನಾರ್ಹ ಪ್ರಯತ್ನಗಳನ್ನು ನಡೆಸಿದೆ.

    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎಸಿಐ ವಾಯ್ಸ್​ ಆಫ್ ಕಸ್ಟಮರ್ ಮಾನ್ಯತೆ ಪಡೆದಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ಎಸಿಐ ವರ್ಲ್ಡ್​ ಡೈರೆಕ್ಟರ್ ಜನರಲ್ ಶ್ರೀ ಲೂಯಿ ಫೆಲಿಪ್ ಡಿ ಒಲಿವೇರಾ ಹೇಳಿದರು. ವಿಮಾನ ನಿಲ್ದಾಣಗಳಲ್ಲಿ ಗ್ರಾಹಕ ಆದ್ಯತೆ ತಿಳಿದು ಅವಶ್ಯಕತೆಗಳನ್ನು ಪೂರೈಸಿದೆ ಎಂದ್ರು. ಕಷ್ಟದ ಪರಿಸ್ಥಿತಿಯಲ್ಲಿ ಉತ್ತಮ ಗ್ರಾಹಕ ಅನುಭವ ನೀಡುವಲ್ಲಿ ಬಿಐಎಎಲ್‌ನ ಬದ್ಧತೆ ಪ್ರದರ್ಶಿಸಲು ಈ ಕ್ರಮ ನೆರವಾಗಿದೆ ಎಂದರು.

    ಇದನ್ನೂ ಓದಿ: Bengaluru Airport: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ!

    ‘ನಮ್ಮ ಸಿಬ್ಬಂದಿಗಳ ಕಠಿಣ ಪರಿಶ್ರಮವಿದೆ’

    ಸತತವಾಗಿ ಎರಡನೆಯ ವರ್ಷ ಮಾನ್ಯತೆ ಪಡೆಯುತ್ತಿರೋದು ಬಹಳ ಖುಷಿಯ ವಿಚಾರ ಎಂದು ಬಿಐಎಎಲ್ ಎಂ.ಡಿ. ಮತ್ತು ಸಿಇಒ ಶ್ರೀ ಹರಿ ಮರಾರ್ ಹೇಳಿದರು. ಈ ಮಾನ್ಯತೆ ನಮಗೆ ಸಿಗಲು ಅದರ ಹಿಂದೆ ಹಲವರ ಪರಿಶ್ರಮವಿದೆ. ಸದೃಢವಾದ ಪಾಲುದಾರರ ಸಹಯೋಗ, ಆವಿಷ್ಕಾರಕ ತಾಂತ್ರಿಕ ಅಳವಡಿಕೆಗಳು ಮತ್ತು ನಮ್ಮ ಸಿಬ್ಬಂದಿಯ ಕಠಿಣ ಪರಿಶ್ರಮ ಕಾರಣವಾಗಿದೆ.

    ಇದು ನಮ್ಮನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸತತವಾಗಿ ಪ್ರಯಾಣಿಕರ ಅನುಭವ ಸುಧಾರಿಸಲು ಮತ್ತಷ್ಟು ಉತ್ತೇಜಿಸಿದೆ. ಬಿಐಎಎಲ್ ಗೌರವಾನ್ವಿತ ಜಾಗತಿಕ ಮಾನ್ಯತೆ ಸ್ವೀಕರಿಸಲು ಹೆಮ್ಮೆ ಪಡುತ್ತಿದೆ. ಪ್ರಯಾಣಿಕರ ಅಗತ್ಯ ಅರ್ಥ ಮಾಡಿಕೊಳ್ಳಲು ನಮ್ಮ ತಂಡ ಕೈಗೊಂಡ ಅಪಾರ ಪ್ರಯತ್ನಗಳಿಗೆ ಗೌರವ ಸಾಕ್ಷಿಯಾಗಿದೆ ಎಂದರು.

    ಕೊರೊನಾ ಸಮಯದಲ್ಲಿ ಉತ್ತಮ ಸೇವೆ

    ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅತೀ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸಿ, ಜನರಿಗೆ ಅತ್ಯತ್ತಮ ಸೇವೆಯನ್ನುನೀಡುತ್ತದೆ. ಅಲ್ಲದೆ ಅಂತರಾಷ್ಟ್ರೀಯ ಮಟ್ಟದ ಸೇವೆಗಳನ್ನು ಜನಸಾಮಾನ್ಯರಿಗೆ ನೀಡುತ್ತಿದೆ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ವಿಮಾನಯಾನದಲ್ಲಿನ ಸುರಕ್ಷತೆ ಕಡೆಗೆ ಪ್ರಯಾಣಿಕರ ಗ್ರಹಿಕೆಯನ್ನು ಅರ್ಥ ಮಾಡಿಕೊಳ್ಳಲು “ವಾಯ್ಸ ಆಫ್ ಪ್ಯಾಕ್ಸ್‌’ ಸಮೀಕ್ಷೆಯನ್ನು ಹಂತ ಹಂತವಾಗಿ ಮಾಡಲಾಯ್ತು.

    ಇದನ್ನೂ ಓದಿ: Bengaluru Airportನಲ್ಲಿ ಪ್ರಯಾಣಿಕನ ಹೈಡ್ರಾಮಾ: ದುಬಾರಿ ವಾಚ್ ತಂದಿಡ್ತು ದೊಡ್ಡ ಪೀಕಲಾಟ..!

     ಸ್ವೀಕರಿಸಲಾದ ವಿವರ ಆಧರಿಸಿ, ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವ ಹಲವು ಅಭಿಯಾನ ಹಮ್ಮಿಕೊಳ್ಳಲಾಯಿತು. ನೂತನ ಸಂಪರ್ಕರಹಿತ ಪ್ರಯಾಣ, ವೈಯಕ್ತಿಕ ನೈರ್ಮಲ್ಯತೆ ಕಾಪಾಡಿಕೊಳ್ಳುವುದು, ಮುಂಚೂಣಿಯಲ್ಲಿರುವ ತಂಡದ ಪ್ರಯತ್ನ ಜೊತೆಗೆ ಕೋವಿಡ್‌ ಸಂದರ್ಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣವನ್ನು ಸುರಕ್ಷಿತವಾಗಿಸುವ ಕೆಲಸ ಮಾಡಿದೆ

    ವರದಿ: ಮನು ಕುಮಾರ್ ಹೆಚ್​.ಕೆ
    Published by:Pavana HS
    First published: