Bengaluru: ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ ಬರೋಬ್ಬರಿ 11 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ..!

ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ 1.25 ಕೆ ಜಿ ತೂಕದ ಕೊಕೇನ್ ಗುಳಿಗೆಗಳು ಪತ್ತೆಯಾಗಿದೆ. ಕೆಐಎಎಲ್ ಗುಪ್ತಚರ ಇಲಾಖೆಯ ಡಿಆರ್ ಐ ಅಧಿಕಾರಿಗಳು ನೈಜೀರಿಯಾ ಪ್ರಜೆಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ ಪತ್ತೆಯಾದ ಡ್ರಗ್ಸ್​

ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ ಪತ್ತೆಯಾದ ಡ್ರಗ್ಸ್​

  • Share this:
ಬೆಂಗಳೂರು(ಆ.22): ಸಿನಿಮಾ ಶೈಲಿಯಲ್ಲಿ ಹೊಟ್ಟೆಯೊಳಗೆ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನ ಏರ್ಪೋರ್ಟ್ ಗುಪ್ತಚರ ಇಲಾಖೆಯ ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ ಬರೋಬ್ಬರಿ 11ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(KIAL)  ವಿದೇಶಿ ಪ್ರಜೆ ಸಿಕ್ಕಿಬಿದ್ದಿದ್ದಾನೆ.

ವಿದೇಶಿ ಪ್ರಜೆಯ ಹೊಟ್ಟೆಯಲ್ಲಿ 1.25 ಕೆ ಜಿ ತೂಕದ ಕೊಕೇನ್ ಗುಳಿಗೆಗಳು ಪತ್ತೆಯಾಗಿದೆ. ಕೆಐಎಎಲ್ ಗುಪ್ತಚರ ಇಲಾಖೆಯ ಡಿಆರ್ ಐ ಅಧಿಕಾರಿಗಳು ನೈಜೀರಿಯಾ ಪ್ರಜೆಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿ ವಿದೇಶಿ ಪ್ರಜೆ ಆಗಸ್ಟ್ 19 ರಂದು ಜೋಹಾನ್ಸ್ ಬರ್ಗ್ ನಿಂದ ಬೆಂಗಳೂರಿಗೆ ಆಗಮಿಸಿದ್ದ. ಆತನ ಏರ್ ಟಿಕೆಟ್ ಪ್ಯಾಕೇಜ್ ನಲ್ಲಿ ಉಚಿತ ಆಹಾರ, ನೀರು, ಪಾನೀಯ ಸೌಲಭ್ಯ ಇತ್ತು. ಆದ್ರೆ ವಿಮಾನ ಪ್ರಯಾಣದ ವೇಳೆ ಆಹಾರ ಸೇರಿದಂತೆ ಪಾನೀಯವನ್ನು ಸಹ ಸ್ವೀಕರಿಸಲು ನಿರಾಕರಿಸಿದ್ದ ಎನ್ನಲಾಗಿದೆ.

ಅಲ್ಲದೇ ಆಫ್ರಿಕಾದಿಂದ ಬರುತ್ತಿದ್ದ ವಿಮಾನದಲ್ಲಿ ಡ್ರಗ್ಸ್ ಸರಬರಾಜು ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಗುಪ್ತಚರ ಇಲಾಖೆಯ ಡಿಆರ್ ಐ ಅಧಿಕಾರಿಗಳು, ಈ ಬಗ್ಗೆ ತೀವ್ರ ನಿಗಾ ವಹಿಸಿದ್ದರು.  ಕೆಐಎಎಲ್ ನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅನುಮಾನಾಸ್ಪದ ಪ್ರಯಾಣಿಕರ ತಪಾಸಣೆ ನಡೆಸಿದ್ದರು. ಈ ವೇಳೆ ನೈಜೀರಿಯಾ ಪ್ರಜೆ ಊಟ ಸಹ ಸೇವಿಸದೆ ಪ್ರಯಾಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಮುಂದುವರೆದ ವರುಣನ ಅಬ್ಬರ; ಇನ್ನೂ 2 ದಿನ ಗುಡುಗು ಸಹಿತ ಧಾರಾಕಾರ ಮಳೆ

ಕೂಡಲೇ ಸಮಯ ಪ್ರಜ್ಞೆ ಮೆರೆದ ಡಿಆರ್ ಐ ಅಧಿಕಾರಿಗಳು ವಿದೇಶಿ ಪ್ರಜೆಯನ್ನ ವಶಕ್ಕೆ ಪಡೆದು ಆತನ ಲಗೇಜ್ ಪರಿಶೀಲನೆ ನಡೆಸಿದ್ದಾರೆ. ಲಗೇಜ್​ನಲ್ಲಿ ಏನೂ ಪತ್ತೆಯಾಗದ ಕಾರಣ, ಪುನಃ ವಿದೇಶಿ ಪ್ರಜೆಯನ್ನ ಸ್ಕ್ಯಾನಿಂಗ್​ಗೆ ಒಳಪಡಿಸಿದ್ದಾರೆ.  ಸ್ಕ್ಯಾನಿಂಗ್ ವೇಳೆ ಆರೋಪಿ ಸಿನಿಮಾ ಶೈಲಿಯಲ್ಲಿ ಹೊಟ್ಟೆಯಲ್ಲಿ ಡ್ರಗ್ಸ್ ಹೊತ್ತು ತಂದಿರುವುದು ಬೆಳಕಿಗೆ ಬಂದಿದೆ.

ಕೂಡಲೇ ವಿದೇಶಿ ಪ್ರಜೆಯನ್ನ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ ಅಧಿಕಾರಿಗಳು, ವೈದ್ಯರ ನೆರವಿನಿಂದ ಹೊಟ್ಟೆಯಲ್ಲಿದ್ದ ಕೊಕೇನ್ ಗುಳಿಗೆಗಳನ್ನ ಹೊರತೆಗೆಸಿದ್ದಾರೆ. ಇನ್ನೂ ವಿದೇಶಿ ಪ್ರಜೆಯನ್ನ ವಶಕ್ಕೆ ಪಡೆದಿರೋ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬೆಂಗಳೂರಿನ ಅಪರಿಚಿತ ವ್ಯಕ್ತಿಗೆ ಡ್ರಗ್ಸ್ ನೀಡಲು ಬಂದಿದ್ದ ಎಂದು ತಿಳಿದು ಬಂದಿದೆ. ನಗರದಲ್ಲಿ ಹೋಟೆಲ್​​ವೊಂದರಲ್ಲಿ ರೂಂ ಬುಕ್ ಆಗಿದ್ದು, ಅಲ್ಲಿ ಅಪರಿಚಿತ ವ್ಯಕ್ತಿ ಭೇಟಿಯಾಗುತ್ತಿದ್ದ ಎಂದು ಆರೋಪಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:Weekly Horoscope: ಮಿಥುನ ರಾಶಿಯವರಿಗೆ ಕಂಕಣ ಭಾಗ್ಯ; ಈ ವಾರ ಉಳಿದ ರಾಶಿಗಳಿಗೆ ಯಾವ ಫಲ ಸಿಗಲಿದೆ?

ಅದ್ರೆ ಯಾರಿಗೆ ಡ್ರಗ್ಸ್ ನೀಡಲು ಬಂದಿದ್ದ, ಎಂಬುದು ಇನ್ನೂ ನಿಗೂಢವಾಗಿದ್ದು ಸದ್ಯ ವಿದೇಶಿ ಪ್ರಜೆಯನ್ನ ವಶಕ್ಕೆ ಪಡೆದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಡಿಆರ್ ಐ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಸಿಲಿಕಾನ್ ಸಿಟಿಗೆ ಸರಬರಾಜಾಗುತ್ತಿದ್ದ ಕೋಟ್ಯಂತರ ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ‌‌. ಡ್ರಗ್ಸ್ ಸರಬರಾಜು ಮಾಡಲು ಹಲವು ವಾಮಮಾರ್ಗಗಳನ್ನ ಕಂಡು ಕೊಂಡಿರೋ ಆರೋಪಿಗಳು ಕೆಜಿಗಟ್ಟಲೆ ಡ್ರಗ್ಸ್ ನ್ನು ಹೊಟ್ಟೆಯಲ್ಲಿ ಸಾಗಾಟ ಮಾಡಲು ಮುಂದಾಗಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: