Acid Attack: ಸಂತ್ರಸ್ತೆಯ ಹೇಳಿಕೆ ದಾಖಲು; ಯುವತಿ ಪೊಲೀಸರ ಮುಂದೆ ಹೇಳಿದ್ದೇನು? ಇಲ್ಲಿದೆ Exclusive ಮಾಹಿತಿ

ಸದರಿ ನಾಗೇಶ್ ಈಗ್ಗೆ ಸುಮಾರು ಏಳು ವರ್ಷಗಳ ಹಿಂದೆ ನಮ್ಮ ದೊಡ್ಡಮ್ಮನ ಮನೆಯಲ್ಲಿ ಬಾಡಿಗೆಗೆ ಇದ್ದು, ಆತನು ನನ್ನನ್ನು ಪ್ರೀತಿ ಮಾಡುವಂತೆ ಹಿಂಸೆ ಮಾಡುತ್ತಿದ್ದನು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನಲ್ಲಿ (Bengaluru( ಆಸಿಡ್ ದಾಳಿಗೆ (Acid Attack Case) ಒಳಗಾದ ಸಂತ್ರಸ್ತ ಯುವತಿಯ (Victim) ಹೇಳಿಕೆಯನ್ನು  ಪೊಲೀಸರು ದಾಖಲಿಸಿದ್ದಾರೆ. ನಡೆ  ಘಟನೆಯ ಬಗ್ಗೆ ಯುವತಿ ಎರಡು ಪುಟಗಳ ತನ್ನ ಹೇಳಿಕೆಯನ್ನು (Statement) ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ (Accused) ಬಂಧನಕ್ಕೆ ವಿಶೇಷ ತಂಡ ರಚಿಸಿ ಬಲೆ ಬೀಸಿದ್ದಾರೆ. ಪ್ರೀತಿ ನಿರಾಕರಿಸಿದ್ದ 24 ವರ್ಷದ ಯುವತಿ ಮೇಲೆ ನಾಗೇಶ್ ಎಂಬಾತ ಆಸಿಡ್ ಎರಚಿದ್ದನು. ಯುವತಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಬಂದು ಆ್ಯಸಿಡ್ ಎರಚಿ, ಎಸ್ಕೇಪ್ ಆಗಿದ್ದಾನೆ. ಯುವತಿಯ  ಬೆಂಗಳೂರಿನ ಸುಂಕದ ಕಟ್ಟೆಯ ಮುತ್ತೂಟ್ ಫೈನಾನ್ಸ್‌ (Muthoot Finance) ನಲ್ಲಿ ಕೆಲಸ ಮಾಡಿಕೊಂಡಿದ್ದರು.

ಯುವತಿ ಪೊಲೀಸರ ಮುಂದೆ ದಾಖಲಿಸಿರುವ ಹೇಳಿಕೆಯ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಹಾಗಾದ್ರೆ ಯುವತಿ ಕೊಟ್ಟ ಸ್ಟೇಟ್ಮೆಂಟ್ ನಲ್ಲಿ ಏನಿದೆ ಎಂಬುದರ ಮಾಹಿತಿ ಹೀಗಿದೆ.

ಯುವತಿ ಹೇಳಿಕೆ ಹೀಗಿದೆ

ನಾನು ಈ ಮೇಲಿನ ವಿಳಾಸದ ಮನೆಯಲ್ಲಿ ತಂದೆ ತಾಯಿ ಹಾಗು ಸಹೋದರ, ಸಹೋದರಿಯೊಂದಿಗೆ ವಾಸವಾಗಿದ್ದುಕೊಂಡು, ಸುಂಕದಕಟ್ಟೆಯ ಮುತ್ತೂಟ್ ಮಿನಿ ಫೈನಾನ್ಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ನನ್ನ ತಂದೆ ರಾಜು ಮನೆಯ ಹತ್ತರ ತರಕಾರಿ ಅಂಗಡಿಯನ್ನ ಇಟ್ಟುಕೊಂಡಿರುತ್ತಾರೆ. ತಾಯಿ ಲಕ್ಷ್ಮಮ್ಮ ಇವರು ಗೃಹಿಣಿಯಾಗಿರುತ್ತಾರೆ.

ನಮ್ಮ ತಂದೆ ತಾಯಿಗೆ ನಾವುಗಳು ಮೂರು ಜನ ಮಕ್ಕಳು. ದೊಡ್ಡವಳು ಪ್ರೀತಿ ಈಕೆಯೂ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುತ್ತಾಳೆ, ನಾನು ಮಧ್ಯದವಳು. ಕೊನೆಯವನು ನನ್ನ ತಮ್ಮ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಮನೆಯಲ್ಲಿಯೇ ಇರುತ್ತಾನೆ.

ಇದನ್ನೂ ಓದಿ:  Crime News: ಅಲ್ಲಿ ಯುವತಿ ಮೇಲೆ ಅತ್ಯಾಚಾರ, ಇಲ್ಲಿ ಹುಡುಗಿ ಮೇಲೆ ಆ್ಯಸಿಡ್ ಅಟ್ಯಾಕ್! ಬೆಚ್ಚಿಬಿದ್ದ ರಾಜ್ಯದ ಜನ

ನನ್ನ ಕಚೇರಿಯ ಬಳಿ ಬಂದಿದ್ದ ನಾಗೇಶ್!

ಈ ದಿವಸ ಬೆಳಗ್ಗೆ 8.30 ಗಂಟೆಗೆ ನನ್ನ ತಂದೆ ನನ್ನನ್ನ ಸುಂಕದಕಟ್ಟೆಯ ಮುತ್ತೂಟ್ ಮಿನಿ‌ ಫೈನಾನ್ಸ್ ಕಚೇರಿಗೆ ಡ್ರಾಪ್ ಮಾಡಿದ್ದು, ನಾನು ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ, ಮೆಟ್ಟಿಲು ಹತ್ತಿಕೊಂಡು ಹೋಗಿ, ಕಚೇರಿಗೆ ಯಾರು ಬಾರದೆ ಇಲ್ಲದ್ದರಿಂದ ನಾನು ಕಚೇರಿ ಬಾಗಿಲ ಹತ್ತಿರ ನಿಂತುಕೊಂಡಿದ್ದೆ.

ಈ ವೇಳೆ ನಾಗೇಶ್ ಎಂಬುವನು ಬಂದು ಆತನ ಕೈಯಲ್ಲಿ, ಏನನ್ನೊ ಕವರ್ ನಲ್ಲಿ ಹಿಡಿದುಕೊಂಡು ಬಂದಿದ್ದು, ನಾನು ಆತನನ್ನು ನೋಡಿ ಅಲ್ಲಿ ಕೆಳಗೆ ಓಡಲು ಪ್ರಯತ್ನಿಸಿದೆ. ಕೂಡಲೇ ನಾಗೇಶ್ ನನ್ನನ್ನ ಹಿಂಬಾಲಿಸಿಕೊಂಡು ಬಂದು ತನ್ನ ಕೈಯಲ್ಲಿದ್ದ ಯಾವುದೋ ಆಸಿಡ್ ಅನ್ನು ನನ್ನ ಮೈ ಮೇಲೆ ಹಾಕಿ ಓಡಿ ಹೋಗಿರುತ್ತಾನೆ.

ಲಕ್ಷ್ಮಿ ಆಸ್ಪತ್ರೆಗೆ ದಾಖಲು

ಆಗ ನನ್ನ ಮುಂಭಾಗದ ಎದೆ, ಕೈಗಳು  ಹಾಗೂ ಬೆನ್ನಿಗೆ ಆಸಿಡ್ ಬಿದ್ದು ಗಾಯಗಳಾಗಿದ್ದು, ನಾನು ನಮ್ಮ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದೆ. ನಮ್ಮ ತಂದೆ ಸ್ಥಳಕ್ಕೆ ಬಂದು ನನ್ನನ್ನು ಆಂಬುಲೆನ್ಸ್ ನಲ್ಲಿ ಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಸದರಿ ನಾಗೇಶ್ ಈಗ್ಗೆ ಸುಮಾರು ಏಳು ವರ್ಷಗಳ ಹಿಂದೆ ನಮ್ಮ ದೊಡ್ಡಮ್ಮನ ಮನೆಯಲ್ಲಿ ಬಾಡಿಗೆಗೆ ಇದ್ದು, ಆತನು ನನ್ನನ್ನು ಪ್ರೀತಿ ಮಾಡುವಂತೆ ಹಿಂಸೆ ಮಾಡುತ್ತಿದ್ದನು.  ನಂತರ ನಾನು ಪ್ರೀತಿ ಮಾಡುವುದಿಲ್ಲ ಎಂದು ತಿಳಿಸಿದಾಗ ಆತನು ಸುಮ್ಮನಿದ್ದು, ಈಗ್ಗೆ ಒಂದು ವಾರದಿಂದ ನನ್ನನ್ನು ಮತ್ತೆ ಹಿಂಬಾಲಿಸಿಕೊಂಡು ಬಂದು, ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದನು.

ಮದುವೆ ಆಗುವಂತೆ ಬೆದರಿಕೆ ಹಾಕಿದ್ದ ನಾಗೇಶ್

ನಿನ್ನೆ ದಿನಾಂಕ 27-04-2022 ರಂದು ಬೆಳಗ್ಗೆ ಸುಮಾರು 9 ಗಂಟೆಗೆ ನಾಗೇಶ ನನ್ನ ಹಿಂಬಾಲಿಸಿಕೊಂಡು ಮುತ್ತೂಟ್ ಫೈನಾನ್ಸ್ ಗೆ ಬಂದಿದ್ದು, ನೀನು ನನ್ನ ಪ್ರೀತಿಸಿ ಮದುವೆಯಾಗಲೆಬೇಕು. ಇಲ್ಲದಿದ್ದ ಪಕ್ಷದಲ್ಲಿ ನೀನು ಯಾರಿಗೂ ಸಿಗದಂತೆ ಮಾಡುತ್ತೇನೆಂದು ಧಮ್ಕಿ ಹಾಕಿದ್ದನು.

ಇದನ್ನೂ ಓದಿ:  Shocking News: ಬಾಲಕಿಯರೊಂದಿಗೆ ಸಾವಿನ 'ಕಣ್ಣಾಮುಚ್ಚಾಲೆ' ಆಟ! ಐಸ್‌ ಕ್ರೀಮ್‌ ಬಾಕ್ಸ್ ಒಳಗೆ ಕುಳಿತಿದ್ದ ಜವರಾಯ!

ನಾಗೇಶ್ ಅಣ್ಣನಿಗೆ ವಿಚಾರ ತಿಳಿಸಿದ್ದ ಯುವತಿ ದೊಡ್ಡಮ್ಮ

ನಂತ್ರ ನಮ್ಮ ಫೈನಾನ್ಸ್ ನ ಮ್ಯಾನೇಜರ್ ರವರಿಗೆ, ಅವಳಿಗೆ ಏನು ಮಾಡುತ್ತೇನೆ ನೋಡಿ ಎಂದು ಹೇಳಿ ಹೋಗಿದ್ದನು. ನಾನು ಈ ವಿಚಾರವನ್ನು ನಾನು ನನ್ನ ದೊಡ್ಡಮ್ಮನಿಗೆ ತಿಳಿಸಿದ್ದು, ನಿನ್ನೆ ನನ್ನ ದೊಡ್ಡಮ್ಮ ನಾಗೇಶನ ಅಣ್ಣನನ್ನು ಕರೆಸಿ ವಿಚಾರವನ್ನು ತಿಳಿಸಿದ್ದು, ಅವರು ಆತನಿಗೆ ಬುದ್ದಿವಾದ ಹೇಳುತ್ತೇನೆಂದು ಕಳುಹಿಸಿದರು.

ಆದರೆ ಈ ದಿವಸ ನಾಗೇಶ್ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಆಸಿಡ್ ತೆಗೆದುಕೊಂಡು ಬಂದು ನನ್ನನ್ನು ಅಡ್ಡಗಟ್ಟಿ ಆಸಿಡ್ ದಾಳಿ ಮಾಡಿ, ಮಾರಣಾಂತಿಕ ಗಾಯವಾಗಿರುತ್ತದೆ. ಆದ್ದರಿಂದ ಸದರಿ ನಾಗೇಶನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಯುವತಿ ಹೇಳಿಕೆ ದಾಖಲಿಸಿದ್ದಾರೆ.
Published by:Mahmadrafik K
First published: