BDA ಮೇಲೆ ACB ದಾಳಿ; ಅಧ್ಯಕ್ಷನಾಗಿ ಭ್ರಷ್ಟಾಚಾರ ತಡೆಯಲು ಆಗಲಿಲ್ಲ ಎಂದು ಒಪ್ಪಿಕೊಂಡ S.R.Vishwanath

ನಾನು ಅಸಮರ್ಥ ಅಲ್ಲ, ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೂ ಇಲ್ಲ. ನಾನು ಬಂದ ಕೂಡಲೇ ಸಮಸ್ಯೆಗಳ ಸರಮಾಲೇಯೇ ನನ್ನ ಮುಂದೆ ಕೂತಿದ್ದವು. ಸ್ವಂತ ಕೆಲಸ ಬಿಟ್ಟು, ಬಿಡಿಎ ಕೆಲಸಕ್ಕೆ ಒತ್ತು ಕೊಟ್ಟಿದ್ದೇ‌ನೆ.

ಬಿಡಿಎ ಅಧ್ಯಕ್ಷ ಎಸ್​.ಆರ್​.ವಿಶ್ವನಾಥ್

ಬಿಡಿಎ ಅಧ್ಯಕ್ಷ ಎಸ್​.ಆರ್​.ವಿಶ್ವನಾಥ್

  • Share this:
ಬೆಂಗಳೂರು: ಬಿಡಿಎ (BDA) ಮೇಲೆ ಎಸಿಬಿ (ACB) ದಾಳಿ ವಿಚಾರವಾಗಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ (S.R.Vishwanath) ಮಾತನಾಡಿ ಸ್ವಚ್ಛ ಬಿಡಿಎ ಮಾಡೋದು ನನ್ನ ಉದ್ದೇಶ. ಬಿಡಿಎನಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ನಾನೇ ದೂರು ಕೊಟ್ಟಿದ್ದೆ ಎಂದರು. ಬಿಡಿಎ ಒಂದು ಕಾಲದಲ್ಲಿ ಜನ ಪರವಾದ ಸಂಸ್ಥೆ ಆಗಿತ್ತು. ಇತ್ತೀಚೆಗೆ ಬಿಡಿಎ ಮೇಲೆ ಭ್ರಷ್ಟಾಚಾರದ (Corruption) ಆರೋಪಗಳು ಬಂದಿವೆ. ನಾನು ಅಧಿಕಾರ ಸ್ವೀಕಾರ ಮಾಡಿ ಒಂದೂವರೆ ವರ್ಷ ಆಗಿದೆ. ಸ್ವಚ್ಛ ಬಿಡಿಎ ಮಾಡೋದು ನನ್ನ ಉದ್ದೇಶ, ಇದನ್ನು ಶಕ್ತಿ ಮೀರಿ ಕೆಲಸ ಮಾಡ್ತೇನೆ ಎಂದು ಹೇಳಿದ್ದೆ. ಬಿಡಿಎನಲ್ಲಿ ಕ್ಲಿಷ್ಟಕರ ಸಮಸ್ಯೆಗಳು ಇವೆ, ಇದನ್ನು ಸಮರ್ಥವಾಗಿ ನಿಭಾಯಿಸಬೇಕು. ಯಾರು ಯಾರು ಭ್ರಷ್ಟಾಚಾರ ದಲ್ಲಿ ತೊಡಗಿದ್ರು,ಈಗಾಗಲೇ ಅಧಿಕಾರಿಗಳನ್ನು ಸಸ್ಪೆಂಡ್ (Officers Suspended) ಮಾಡಿದ್ದೇವೆ. ಜಮೀನು, ಹಣಕಾಸಿನ ವ್ಯವಹಾರ ದಲ್ಲಿ ದುರುಪಯೋಗದ ಬಗ್ಗೆ ನಾನೇ ಎಸಿಬಿಗೆ ದೂರು ಕೊಟ್ಟಿದ್ದೇನೆ ಎಂದರು.

ಅಧ್ಯಕ್ಷನಾಗಿ ಭ್ರಷ್ಟಾಚಾರ ತಡೆಯಲು ಆಗಲಿಲ್ಲ

ಸಾಕಷ್ಟು ದೂರುಗಳ ಮೇಲೆ ನಿನ್ನೆ ಎಸಿಬಿ ದಾಳಿ ಮಾಡಿದ್ದಾರೆ. ಯಾವುದೇ ನಿಖರವಾದ ದೂರು ಅಂತಲ್ಲ, ಅಧಿಕಾರಿಗಳ ಜೊತೆಗೆ ನಾನು ಚರ್ಚೆ ಮಾಡಿದ್ದೇನೆ. ನಿಮಗೆ ಬೇಕಾದ ದಾಖಲೆಗಳನ್ನು ಕೊಡ್ತೇನೆ ಎಂದು ತಿಳಿಸಿದ್ದೇನೆ. ರೈತನ ಹೆಸರಲ್ಲಿ ನಕಲಿ ದಾಖಲಿ ಸೃಷ್ಠಿಸಿ, ನಿವೇಶನ ಪಡೆದಿರುವ ಬಗ್ಗೆ ತನಿಖೆ ಮಾಡಿದಾಗ ಕೋರ್ಟ್ ನಲ್ಲಿ ಸ್ಟೇ ತಗೊಂಡಿದ್ರು. ನಾನು‌ ನಿಜವಾಗಿಯೂ ಅವರ ದಾಳಿಯನ್ನು ಸ್ವಾಗತ ಮಾಡ್ತೇನೆ. ನಾನೊಬ್ಬ ಅಧ್ಯಕ್ಷನಾಗಿ ಕೆಲ ಭ್ರಷ್ಟಾಚಾರ ತಡೆಯಲು ಆಗಲಿಲ್ಲ. ನಿನ್ನೆ ದಾಳಿ ಮಾಡಿದಾಗ ಯಾವುದೇ ನಗದು ಸಿಕ್ಕಿಲ್ಲ. ಎಸಿಬಿ ತನಿಖೆ ಸಾಕಾಗಲ್ಲ, ಇದರ ಬಗ್ಗೆ ದೊಡ್ಡ ತನಿಖೆಯೇ ಆಗಬೇಕು . ಈಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ. ಎಸಿಬಿಗೆ ಕೊಡಬೇಕಾದ ಎಲ್ಲ ಸಹಕಾರ ಕೊಡ್ತೀವಿ ಎಂದರು.

ಹಿಂದಿನ ಆಯುಕ್ತರ ಅವಧಿಗಳಲ್ಲಿ ಅವ್ಯವಹಾರ ಆಗಿದೆ

ನಿನ್ನೆ ಜನ ಬಂದಿದ್ದಾಗ ದಾಳಿ ಆಗಿದೆ, ,ಬ್ರೋಕರ್ ಗಳು ಇದ್ದಾಗ ದಾಳಿ ನಡೆಯಬೇಕಿತ್ತು. ನಾನೂ ಸಹ ಸಿಎಂಗೆ ವಿವರಣೆ ನೀಡಿದ್ದೇನೆ. ಬಹಳ ದೊಡ್ಡ ಜಾಲ ಬಿಡಿಎನಲ್ಲಿದೆ. ಎಸಿಬಿ ತನಿಖೆಯೂ ಸಾಕಾಗಲ್ಲ,  50 ಸಾವಿರ ಕೋಟಿ ಬಿಡಿಎ ಆಸ್ತಿ ಇದೆ. ಸಾಕಷ್ಟು ದುರ್ಬಳಕೆ ಆಗಿದೆ. ಹಿಂದೆ ಅವ್ಯವಹಾರ ಮಾಡಿದವರ ವಿರುದ್ಧ ಸರಿಯಾದ ಶಿಕ್ಷೆ ಆಗಿಲ್ಲ. ವಿಶೇಷ ತನಿಖಾ ತಂಡದಿಂದ ಬಿಡಿಎ ಅಕ್ರಮಗಳ ತನಿಖೆ ಆಗಬೇಕು. ನನ್ನ ಅವಧಿಯಲ್ಲಿ ಭ್ರಷ್ಟಾಚಾರ, ಅವ್ಯವವಹಾರ ನಡೆಯಲು‌ ಬಿಟ್ಟಿಲ್ಲ. ಹಿಂದೆ ದೊಡ್ಡ ಅವ್ಯವಹಾರಗಳು ಆಗಿವೆ. ಹಿಂದಿನ ಆಯುಕ್ತರ ಅವಧಿಗಳಲ್ಲಿ ಸಾಕಷ್ಟು ಅವ್ಯವಹಾರ ಆಗಿರೋದೇ ಈಗನ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದರು. ಎಸಿಬಿ ತನಿಖೆ ವರದಿ ಆಧರಿಸಿ ಮುಂದಿನ ತನಿಖೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಯೂ ಚರ್ಚೆ ಮಾಡುತ್ತೇನೆ.

ಇದನ್ನೂ ಓದಿ: ಕುಮಾರಸ್ವಾಮಿ ರೀತಿ ದಿನಕ್ಕೆ ಎರಡು ಬಾರಿ ಕ್ಯಾಮೆರಾ ಮುಂದೆ ನಿಲ್ಲೋಕೆ ಆಗುತ್ತಾ? Araga Jnanendra ತಿರುಗೇಟು

ಕಮಿಷನ್ ದಂಧೆ ಶುರು ಮಾಡಿದ್ದೇ ಕಾಂಗ್ರೆಸ್​

ಕಮಿಷನ್ ದಂಧೆ ಕುರಿತು ಪ್ರಧಾನಿಗಳಿಗೆ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ , ಕಮಿಷನ್ ದಂಧೆ ಶುರು ಮಾಡಿದ್ದೇ ಕಾಂಗ್ರೆಸ್​ನವರು. ಅವರೆ ಬಹುಶಃ ಪ್ರಧಾನಿಗಳಿಗೆ ಪತ್ರ ಬರೆಸಿದ್ದಾರೆ. 20 ಪರ್ಸೆಂಟ್ ಫಲಾನುಭವಿಗಳಿಗೆ ಹೋಗ್ತಿತ್ತು. ಇನ್ನೂ 80 ಪರ್ಸೆಂಟ್ ಏಜೆನ್ಸಿಗಳಿಗೆ ಹೋಗ್ತಿತ್ತು. ನಾವು ಬಂದು ಒಳ್ಳೆ ಸಿಸ್ಟಮ್ ಮಾಡಿದ್ದೇವೆ. ಯಾವುದೇ ದಾಖಲೆ ಇಲ್ಲದೆ ಆರೋಪ ಸರಿಯಲ್ಲ. ದೂರಿಗೆ ತಕ್ಕಂತೆ ನಿಖರವಾದ ದಾಖಲೆ ಕೊಡಲಿ. ಸರ್ಕಾರ ಸೂಕ್ತ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸವಾಲೆಸೆದರು.

ನಾನು ಅಸಮರ್ಥ ಅಲ್ಲ

ನಾನು ಅಸಮರ್ಥ ಅಲ್ಲ, ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೂ ಇಲ್ಲ. ನಾನು ಬಂದ ಕೂಡಲೇ ಸಮಸ್ಯೆಗಳ ಸರಮಾಲೇಯೇ ನನ್ನ ಮುಂದೆ ಕೂತಿದ್ದವು. ಸ್ವಂತ ಕೆಲಸ ಬಿಟ್ಟು, ಬಿಡಿಎ ಕೆಲಸಕ್ಕೆ ಒತ್ತು ಕೊಟ್ಟಿದ್ದೇ‌ನೆ. ನಾನು ಜವಾಬ್ದಾರಿ ತೆಗೆದುಕೊಂಡು ನಂತರ ಸಾಕಷ್ಟು ಅಧಿಕಾರಿಗಳ ಮೇಲೆ ದಾಳಿ, ಮಾಡಿ ಜೈಲಿಗೆ ಕಳುಹಿಸಿದ್ದೇನೆ. ಭ್ರಷ್ಟಾಚಾರ ಮುಕ್ತ ಮಾಡೋದು ಒಂದು ವರ್ಷದಲ್ಲಿ ಮಾಡುವ ಕೆಲಸ ಅಲ್ಲ. ಇದೆಲ್ಲಾ ಹತ್ತಾರು ವರ್ಷಗಳ ಹಿಂದೆ ನಡೆದಿರೋದು, ಹೀಗಾಗಿ ಇದರಲ್ಲಿ ಯಾರೇ ಭಾಗಿಯಾಗಿದ್ರು ಅವರನ್ನು ಬಿಡುವುದಿಲ್ಲ. ಕೆಳಹಂತದ ಅಧಿಕಾರಿಗಳು ಯಾರ ಹಿಡಿತಕ್ಕೂ ಸಿಗೋದಿಲ್ಲ. ಯಾಕೆಂದರೆ ಅವರು ಜನರ ಜೊತೆ ಸಂಪರ್ಕ ಇರೋರು ಎಂದರು.
Published by:Kavya V
First published: