property tax collection: ಬೆಂಗಳೂರಿನ ನಾಗರೀಕ ಸಂಸ್ಥೆಯಾಗಿರುವ ಬಿಬಿಎಂಪಿ ಕೆಲವು ವರ್ಷಗಳಿಂದೀಚೆಗೆ ಆಸ್ತಿ ತೆರಿಗೆ ಸಂಗ್ರಹದಲ್ಲಿ 170 ಕೋಟಿಯಷ್ಟನ್ನು ಗಳಿಸಿ 9% ದಷ್ಟು ಏರಿಕೆಯನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ದರವು 1,881 ಕೋಟಿಯಾಗಿದ್ದು, ಏಪ್ರಿಲ್ 1 ರಿಂದ ಆಗಸ್ಟ್ 31 ರವರೆಗೆ 2072 ಕೋಟಿ ಆದಾಯವನ್ನು ಗಳಿಸಿದೆ. ಪ್ರದೇಶಗಳ ಎಲ್ಲಾ ಎಂಟು ವಲಯಗಳು ತೆರಿಗೆ ಸಂಗ್ರಹದಲ್ಲಿ ಏರಿಕೆಯನ್ನು ಕಂಡಿದ್ದು ಯಲಹಂಕ ವಲಯವು 24% ಏರಿಕೆಯನ್ನು ಕಂಡಿದೆ. ಮಹಾದೇವಪುರ 3% ಇಳಿಕೆಯನ್ನು ದಾಖಲಿಸಿದೆ.
ಬಿಬಿಎಂಪಿಯ ಉನ್ನತ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಸಂಸ್ಥೆಯು ನಿಗದಿತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದರಿಂದಲೇ ಆದಾಯ ತೆರಿಗೆಯನ್ನು ಗಳಿಕೆ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ. ಬಿಬಿಎಂಪಿಯ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾರವರು ಖಾತಾ ಮೇಳಗಳಂತಹ ಯೋಜನೆಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದರು. ಈ ಯೋಜನೆಯ ಪ್ರಕಾರ ಹೊಸದಾಗಿ ನಿರ್ಮಿಸಿದ ಕಟ್ಟಡಗಳು ತೆರಿಗೆ ವ್ಯಾಪ್ತಿಗೆ ಬರುವಂತೆ ನಿರ್ದೇಶನ ನೀಡಲಾಗಿತ್ತು.
ಯಲಹಂಕದಲ್ಲಿ ಹೆಚ್ಚು ತೆರಿಗೆ ಸಂಗ್ರಹ
ಪ್ರದೇಶದ ಎಂಟು ವಲಯಗಳಲ್ಲಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಯಲಹಂಕ ವಲಯವು 24% ನಷ್ಟು ಹೆಚ್ಚಿನ ಏರಿಕೆಯನ್ನು ಕಂಡರೆ, ಮಹಾದೇವಪುರವು 3%ಕ್ಕಿಂತ ಕಡಿಮೆ ದಾಖಲಿಸಿವೆ. ಖಾತಾ ಮೇಳಗಳಂತಹನಿಗದಿತ ಕಾರ್ಯಕ್ರಮಗಳಿಂದಾಗಿ ಬಿಬಿಎಂಪಿಯು ಉತ್ತಮಆದಾಯ ತೆರಿಗೆ ಪಾವತಿಯನ್ನು ದಾಖಲಿಸಲು ಸಾಧ್ಯವಾಗಿದೆ.
ಯಲಹಂಕ ಜಂಟಿ ಆಯುಕ್ತರಾದ ಅಶೋಕ್ ಡಿಆರ್ ಅವರು ಟೈಮ್ಸ್ ಆಫ್ ಇಂಡಿಯಾಗೆ ಈ ಕುರಿತು ಮಾಹಿತಿ ನೀಡಿದ್ದು ತೆರಿಗೆ ಪಾವತಿಯ ಕುರಿತು ಜನರಿಗೆ ಜಾಗೃತಿ ಮೂಡಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ತಿಳಿಸಿದ್ದಾರೆ. ಸೈಟ್‌ನಲ್ಲಿ ಒಟ್ಟು 39,000 ಡೀಫಾಲ್ಟರ್‌ಗಳು ಪತ್ತೆಯಾಗಿದ್ದು 22,000 ನೋಟೀಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Petrol Diesel Cess Decrease: ತಮಿಳುನಾಡು ಮಾದರಿ ಪೆಟ್ರೋಲ್& ಡೀಸೆಲ್ ಸೆಸ್ ಕಡಿತದ ಸುಳಿವು ನೀಡಿದ ಸಿಎಂ
ತೆರಿಗೆ 1,122 ಕೋಟಿಗೆ ಏರಿಕೆ
TOI ಕಲೆಹಾಕಿದ ವಿವರಗಳ ಪ್ರಕಾರ, ಬ್ಯಾಂಕ್‌ಗಳಲ್ಲಿ ಚಲನ್ ಪಾವತಿಗಳಿಂತಲೂ ಹೆಚ್ಚಾಗಿ ಆನ್‌ಲೈನ್ ಪಾವತಿಗಳನ್ನು ಮಾಡಲಾಗಿದೆ ಎಂಬುದು ಕಂಡುಬಂದಿದೆ. ಕಳೆದ ವರ್ಷದ ಇಳುವರಿಗೆ ಹೋಲಿಕೆ ಮಾಡಿದಾಗ ಆನ್‌ಲೈನ್ ಬೆಲೆಗಳು ರೂ 968 ಕೋಟಿಯಿಂದ ರೂ 1,122 ಕೋಟಿಗೆ ಏರಿಕೆ ಕಂಡಿದೆ. ಇದು16% ಹೆಚ್ಚಳವನ್ನು ತೋರಿಸಿದೆ. ಚಾಲನ್ ಪಾವತಿಗಳು ರೂ 914 ಕೋಟಿಯಿಂದ ರೂ 930 ಕೋಟಿಗೆ ಏರಿಕೆ ಕಂಡಿದೆ. ಇದು 1.7% ಏರಿಕೆಯನ್ನು ಮೀರಿದೆ.
118 ಕೋಟಿ ಬಾಕಿ ವಸೂಲಿ
ಒಟ್ಟು 1.4 ಲಕ್ಷ ನೋಟೀಸ್‌ಗಳನ್ನು ನೀಡಲಾಗಿದೆ ಎಂದು ವಿಶೇಷ ಕಂದಾಯ ಆಯುಕ್ತರಾದ ಬಿ. ಬಸವರಾಜು ತಿಳಿಸಿದ್ದು ರೂ 118 ಕೋಟಿ ಬಾಕಿ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೋವಿಡ್-19 ಪರಿಸ್ಥಿತಿಯಲ್ಲೂ ಅಧಿಕಾರಿಗಳು ಅಪಾರ್ಟ್‌ಮೆಂಟ್ ಸಂಕೀರ್ಣಗಳಿಗೆ ತೆರಳಿ ಹೆಚ್ಚಿನ ಆದಾಯ ತೆರಿಗೆ ಹೆಚ್ಚಿಸಲು ಚಾಲನೆ ನೀಡಿದ್ದಾರೆ ಎಂದು ಸುದ್ದಿಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಬಿಬಿಎಂಪಿಯು ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಹೆಚ್ಚು ಆಸ್ತಿ ತೆರಿಗೆಯನ್ನು ಸಂಗ್ರಹಿಸಿದ್ದು ಇದು 9% ಹೆಚ್ಚಳ ಕಂಡುಬಂದಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ