ಬೆಂಗಳೂರು(ಸೆ.07): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಪಾಲಿಕೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಂತ-ಹಂತವಾಗಿ ಮುಷ್ಕರ ನಡೆಸಲು ಪಾಲಿಕೆ ನೌಕರರು ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲ ಹಂತವಾಗಿ ಇಂದು ಅಧಿಕಾರಿಗಳು ಹಾಗೂ ನೌಕರರು ಕಚೇರಿ ಕೆಲಸ ಬಹಿಷ್ಕರಿಸಿ ಪಾಲಿಕೆ ಆವರಣದಲ್ಲಿ ಮುಷ್ಕರ ಮಾಡುತ್ತಿದ್ದಾರೆ. ಎರಡನೇ ಹಂತವಾಗಿ ಆರೋಗ್ಯ ಸಿಬ್ಬಂದಿಗಳು ತಮ್ಮ ಕೆಲಸ ಬಹಿಷ್ಕರಿಸಿ ಮುಷ್ಕರ ಮಾಡಲಿದ್ದಾರೆ. ಬೇಡಿಕೆ ಈಡೇರದಿದ್ದರೆ ಎರಡನೇ ಹಂತವಾಗಿ ಆರೋಗ್ಯ ಸಿಬ್ಬಂದಿಗಳು ಮುಷ್ಕರ ಮಾಡಲು ಸಜ್ಜಾಗಿದ್ದಾರೆ. ಇದಕ್ಕೂ ಬೇಡಿಕೆ ಈಡೇರದಿದ್ದರೆ ಪೌರ ಕಾರ್ಮಿಕರು ತ್ಯಾಜ್ಯ ಎತ್ತದೆ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಮುಷ್ಕರ ಶುರುವಾಗಿದ್ದು, ಒಟ್ಟು 10 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
1. ಕೋವಿಡ್ನಿಂದ ಮೃತಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪ್ರಧಾನ್ ಮಂತ್ರಿ ಗರೀಬ್ ಯೋಜನೆಯಡಿ 30 ಲಕ್ಷ ಪರಿಹಾರ ಧನ.
2. ಪಾಲಿಕೆಯ ವಿವಿಧ ಅಭಿಯಂತರ ಹುದ್ದೆಗೆ ಅನಧಿಕೃತವಾಗಿ ನೇಮಕವಾದ 39 ಉನ್ನತ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು.
3. ಪಾಲಿಕೆ ವಾಹನ ನಿಲ್ದಾಣ ಮಾಡಲು ನಿರ್ಮಾಣ ಮಾಡಲಾಗಿದ್ದ ಸಿವಿಲ್ ಶೆಡ್ ಅನ್ನು ಅನಧಿಕೃತವಾಗಿ ಬೇರೆ ಕೆಲಸಗಳಿಗೆ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು.
4. ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ವಿವಿಧ ಹೆಚ್ಚುವರಿ ಹುದ್ದೆಗಳಿಗೆ ಬಾಕಿ ಇರುವ 5,219 ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
5. ಇದೇ ನಿಯಮದ ಪ್ರಕಾರ ತಿರಸ್ಕರಿಸಲಾದ 4,452 ಹುದ್ದೆಗಳನ್ನು ಪರಿಶೀಲನೆ ಮಾಡಿ ಹುದ್ದೆ ಮಂಜೂರಾತಿ ಮಾಡುವುದು.
6. ಪಾಲಿಕೆ ತೋಟಗಾರಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಅವರ ಶಿಕ್ಷಣಾರ್ಹತೆಯ ಮೇರೆಗೆ ಸೂಕ್ತ ಹುದ್ದೆ ನೀಡುವುದು.
7. ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಗಳನ್ನೂ ಗಾಳಿಗೆ ತೂರಿ ನೇಮಕ ಮಾಡಿರುವ AE, AEE, EE, CE ಅಧಿಕಾರಿಗಳನ್ನು ಕೂಡಲೇ ಮಾತೃ ಇಲಾಖೆಗೆ ಹಿಂದಿರುಗಿಸುವುದು.
8. ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಕಾನೂನು ಬಾಹಿರವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವಿರುದ್ಧ ಕ್ರಮ ಕೈಗೊಳ್ಳುವುದು.
9. ಪಾಲಿಕೆಯಲ್ಲಿ ಖಾಲಿ ಇರುವ ಎಲ್ಲಾ ವೃಂದದ ನೌಕರರಿಗೆ ಮುಂಬಡ್ತಿ ನೀಡಲು ಮನವಿ.
10. ಸರ್ಕಾರಕ್ಕೆ ಸಲ್ಲಿಸಲಾದ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತರಲಾದ ತಿದ್ದುಪಡಿಗಳ ಕರಡನ್ನು ಕೂಡಲೇ ಜಾರಿಯಾಗುವಂತೆ ಒತ್ತಾಸೆ.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಇವಿಷ್ಟು ಬೇಡಿಕೆಗಳನ್ನು ಈಡೇರಿಸುವಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಇಂದು ಪಾಲಿಕೆಯ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಪಾಲಿಕೆ ನೌಕರರು ಕರ್ತವ್ಯ ಬಹಿಷ್ಕರಿಸಿ ಮುಷ್ಕರ ಮಾಡುತ್ತಿದ್ದಾರೆ. ಕೇಂದ್ರ ಕಚೇರಿ ಸೇರಿ 198 ವಾರ್ಡ್ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಮೂವರ ಕೆಲಸ ಒಬ್ಬ ನೌಕರನ ಮೇಲೆ ಬಿದ್ದಿದೆ.
ನೇಮಕಾತಿ ಸಂಬಂಧ ಹಲವು ಬಾರಿ ಪ್ರಸ್ತಾವನೆ ಹೋಗಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಈಗಲಾದ್ರೂ 5219 ಹುದ್ದೆಗಳಿಗೆ ಮಂಜೂರು ನೀಡುವುದು, ಕೋವಿಡ್ನಿಂದ ಮೃತ ಪಟ್ಟ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ. ನಗರ ಯೋಜನೆ ವಿಭಾಗದಲ್ಲಿ 39 ಹುದ್ದೆ ಸೃಷ್ಟಿ ವಿರೋಧಿಸಿಯೂ ನೌಕರರು ಮುಷ್ಕರ ಮಾಡುತ್ತಿದ್ದಾರೆ. ಇಂದು ಕರ್ತವ್ಯಕ್ಕೆ ಹಾಜರಾಗದೇ ಧರಣಿ ನಡೆಸುತ್ತಿರುವ ನೌಕರರು ಹಂತ-ಹಂತವಾಗಿ ಹೋರಾಟದ ಕಾವು ಹೆಚ್ಚಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ನಾಳೆಯಿಂದ ವ್ಯಾಕ್ಸಿನೇಷನ್ ಕಾರ್ಯಕ್ರಮ ನಿಲ್ಲಿಸಿ ಧರಣಿ ಶುರು ಮಾಡಲಿದ್ದಾರೆ. ವ್ಯಾಕ್ಸಿನೇಷನ್ ಆರೋಗ್ಯ ಸಿಬ್ಬಂದಿಯಾದ್ರೂ ಬಿಬಿಎಂಪಿ ಆರೋಗ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಕೆಲಸ ಮಾಡುವುದು ಎಂಬ ಆಲೋಚನೆ ಇದೆ. ಆದರೆ ಜನರು ನಾಳೆಯಿಂದ ವ್ಯಾಕ್ಸಿನ್ ಕೊರತೆ ಎದುರಿಸುವುದು ಬಹುತೇಕ ಪಕ್ಕಾಆ ಗಿದೆ. ಮೂರನೇ ದಿನ ಕಸ ವಿಲೇವಾರಿ ನಿಲ್ಲಿಸಿ ಧರಣಿ ಮಾಡಲು ಲೆಕ್ಕಚಾರ ಹಾಕಲಾಗಿದೆ. ಕಸ ವಿಲೇವಾರಿ ಇಂಜಿನಿಯರ್ - ಹೆಲ್ತ್ ಇನ್ಸ್ ಪೆಕ್ಟರ್ ಮಾರ್ಗದರ್ಶನದಲ್ಲೇ ಮುಷ್ಕರ ನಡೆಯಲಿದೆ ಇಂದು ಬಹುತೇಕ ಎಲ್ಲ ಪಾಲಿಕೆ ಕಚೇರಿಗಳು ಮುಚ್ಚುವ ಸಾಧ್ಯತೆ ಇದೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ