ಬೆಂಗಳೂರು: ಸಾಂಕ್ರಾಮಿಕ ಪರಿಸ್ಥಿತಿಯಿಂದ ನಲುಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ವೈದ್ಯಕೀಯ ಮೂಲಸೌಕರ್ಯವನ್ನು ಅಭಿವೃದ್ಧಿ ಪಡಿಸಲು ಮಾಸ್ಟರ್ ಪ್ಲಾನ್ ಅನ್ನು ರೂಪಿಸಿದೆ. ಕೊರೋನಾ ಕಾಲದಲ್ಲಿ ಸೂಕ್ತ ವೈದ್ಯಕೀಯ ಸವಲತ್ತುಗಳಿಲ್ಲದೆ ಪರದಾಡಿ ಬೆಂಗಳೂರಿನಲ್ಲಿ ಹೊಸ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ತಲೆ ಎತ್ತಲಿದೆ. ಮೊದಲ ಮತ್ತು ಎರಡನೇ ಅಲೆಯ ಅವಧಿಯಲ್ಲಿ ಸಮರ್ಪಕ ವೈದ್ಯಕೀಯ ವ್ಯವಸ್ಥೆಗಳಿಲ್ಲದೆ ನಲುಗಿದ ಬೆಂಗಳೂರಿಗೆ ವೈದ್ಯಕೀಯ ಬಲ ತುಂಬಲು ಮುಂದಾಗಿದೆ ಬಿಬಿಎಂಪಿ. ನಗರದಲ್ಲಿ ಪ್ರತಿ ಬಾರಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವ ಪಾಲಿಕೆ ಇದೀಗ ತನ್ನದೇ ಅಧೀನದಲ್ಲಿ ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಯೋಚಿಸಿದೆ. ವೈದ್ಯಕೀಯ ಮೂಲಸೌಕರ್ಯವನ್ನು ಪುನರುಜ್ಜೀವನಗೊಳಿಸಲು ಪಾಲಿಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅನುಮೋದನೆಗಾಗಿ ಕಾಯುತ್ತಿದೆ. ಈ ಯೋಜನೆಗೆ ಸುಮಾರು 800 ಕೋಟಿ ವೆಚ್ಚವಾಗಲಿದೆ ಎಂದು ಪಾಲಿಕೆ ಅಂದಾಜಿಸಿದೆ.
ನಗರದ ವೈದ್ಯಕೀಯ ಸವಲತ್ತು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟ ಪಾಲಿಕೆ.!!
ಈ ಯೋಜನೆಯನ್ನು ಸುಮಾರು 800 ಕೋಟಿ ವೆಚ್ಚದಲ್ಲಿ ಮಾಡಲು ಪಾಲಿಕೆ ಮುಂದಾಗಿದೆ. ಸದ್ಯ ನಗರದಲ್ಲಿ ಬೌರಿಂಗ್ & ವಿಕ್ಟೋರಿಯಾ ಬಿಟ್ಟರೆ ಯಾವುದೇ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಲ್ಲ. ಈ ಎರಡು ಆಸ್ಪತ್ರೆಗಳನ್ನು ನವೀಕರಿಸುವುದರ ಜೊತೆಗೆ ಇನ್ನೂ ಐದು ಇದೇ ಮಾದರಿಯ ಆಸ್ಪತ್ರೆ ನಿರ್ಮಾಣ ಮಾಡಲಿದೆ ಪಾಲಿಕೆ. ಒಟ್ಟು ಏಳು ಆಸ್ಪತ್ರೆಗಳಲ್ಲಿ 2,750 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ನಗರದ 27 ಸೆಕೆಂಡರಿ ಆಸ್ಪತ್ರೆಗಳನ್ನೂ ಈ ಮೂಲಕ ನವೀಕರಿಸಲಿದೆ ಪಾಲಿಕೆ. ಒಟ್ಟಾರೆ 27 ಸೆಕೆಂಡರಿ ಆಸ್ಪತ್ರೆಗಳಲ್ಲಿ 3,500 ಹಾಸಿಗೆಯ ವ್ಯವಸ್ಥೆ ಮಾಡಲಿದೆ ಬಿಬಿಎಂಪಿ. ನಗರದ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳನ್ನು ನವೀಕರಿಸಲು ಈ ಮೂಲಕ ಬಿಬಿಎಂಪಿ ಚಿಂತನೆ ಮಾಡಿದೆ. ನವೀಕರಿಸುವುದರ ಜೊತೆಜೊತೆಯಲ್ಲೇ ನಗರದಲ್ಲಿ ಹೊಸದಾಗಿ 57 ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳ ಸ್ಥಪಾನೆಗೆ ಈ ಮೂಲಕ ಪ್ರಸ್ತಾವನೆ ಸರ್ಕಾರಕ್ಕೆ ಕೊಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ನ್ಯೂಸ್ 18ಗೆ ತಿಳಿಸಿದ್ದಾರೆ.
ಇದನ್ನೂ ಓದಿ: Coronavirus: ಕೋವಿಡ್ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಕ್ಷಯ ರೋಗ ಪತ್ತೆ..!
ಹೀಗೆ ಹಲವು ರೀತಿಯ ವೈದ್ಯಕೀಯ ಅಭಿವೃದ್ಧಿ ಮಾಡಲು ಹೊರಟಿರುವ ಬಿಬಿಎಂಪಿ ದೂರ ದೃಷ್ಟಿ ಇಟ್ಟುಕೊಂಡು ಈ ಯೋಜನೆಗೆ ಕೈ ಹಾಕಿದೆ. ಈಗಾಗಲೇ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕೊಟ್ಟಿದ್ದು ಸರ್ಕಾರಕ್ಕೆ ಇನ್ನೂ ಪಾಲಿಕೆಯ ಅಭೂತಪೂರ್ವ ಯೋಜನೆಗೆ ಅನುಮೋದನೆ ಕೊಟ್ಟಿಲ್ಲ. ಸರ್ಕಾರದಿಂದ ಈ ಬಗ್ಗೆ ಒಪ್ಪಿಗೆ ಬಂದ ಕೂಡಲೇ ಈ ಯೋಜನೆಗೆ ಕಾರ್ಯರೂಪಕ್ಕೆ ತರಲು ಪಾಲಿಕೆ ಮುಂದಾಗಲಿದೆ. ಕೊರೋನಾ ಕಾರಣಕ್ಕೆ ತೆರಿಗೆ ಸಂಗ್ರಹ ಕಾರ್ಯ ಕೂಡ ನೆನೆಗುದಿಗೆ ಬಿದ್ದಿದ್ದು, ಸರ್ಕಾರದಂತೆ ಪಾಲಿಕೆಯ ಖಜಾನೆಯೂ ಖಾಲಿ ಹೊಡೆಯುತ್ತಿದೆ. ಹೀಗಾಗಿ ಆಸ್ತಿ ತೆರಿಗೆ ಸಂಗ್ರಹ ಕೆಲಸ ಚುರುಕು ಮಾಡಿಕೊಂಡಿರುವ ಬಿಬಿಎಂಪಿ ಬಂದ ಹಣದಿಂದ ಈ ಯೋಜನೆಗೆ ಬಜೆಟ್ ಮೀಸಲಿಡಲಿದೆ. ಒಟ್ಟಾರೆ ನಗರದಲ್ಲಿ ಹೊಸ ಐದು ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ನಿರ್ಮಾಣವಾಗಲಿದೆ. ಶೀಘ್ರವೇ ಈ ಯೋಜನೆ ಕಾರ್ಯಗತವಾದರೆ ಜನ ಸಮಾನ್ಯರಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಒದಗುವ ನಿರೀಕ್ಷೆ ಇದೆ.
ವೈದ್ಯಕೀಯ ಮೂಲಸೌಕರ್ಯ ಬಲ ಪಡಿಸಲ ಮುಂದಾದ ಬಿಬಿಎಂಪಿ.!!
• 27 ಹೊಸ ಸೆಕೆಂಡರಿ ಆಸ್ಪತ್ರೆಗಳ ನವೀಕರಣ
• 27 ಸೆಕೆಂಡರಿ ಆಸ್ಪತ್ರೆಗಳಲ್ಲಿ 3,200 ಹಾಸಿಗೆಗಳ ವ್ಯವಸ್ಥೆ
• 2 ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನವೀಕರಣ
• 5 ಹೊಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ
• 7 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 2,750 ಹಾಸಿಗೆಗಳ ವ್ಯವಸ್ಥೆ
• 57 ಹೊಸ ಪ್ರಾರ್ಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ (PHC)
• ಒಟ್ಟಾರೆ 800 ಕೋಟಿ ಬಜೆಟ್ ಲೆಕ್ಕ ಹಾಕಿಕೊಂಡಿರುವ ಬಿಬಿಎಂಪಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ