Omicron ಆತಂಕ: ಹೊಸ ವರ್ಷ ಆಚರಣೆಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಜಾರಿ ಸಾಧ್ಯತೆ

ಈ ಹಿನ್ನಲೆ ಈ ಬಾರಿ ಕೂಡ ಹೊಸ ವರ್ಷ ಸಂಭ್ರಮಕ್ಕೆ ತಡೆಯಾಗುವ ಸಾಧ್ಯತೆ ಹೆಚ್ಚಿದೆ.  ಈ ಸಂಬಂಧ  ತಾಂತ್ರಿಕ‌‌ ಸಲಹಾ ಸಮಿತಿ ಅನೇಕ ಸಲಹೆ ನೀಡಿದೆ.

ಬಿಬಿಎಂಪಿ

ಬಿಬಿಎಂಪಿ

  • Share this:
ಬೆಂಗಳೂರು (ಡಿ. 16):  ಕೋವಿಡ್​ (Covid- 19) ಆತಂಕ ಕಡಿಮೆಯಾಗುವ ಹೊತ್ತಿಗೆ ರಾಜ್ಯದಲ್ಲಿ ಒಮೈಕ್ರಾನ್ (Omicron)​ ಆತಂಕ ಎದುರಾಗಿದೆ. ರಾಜ್ಯದಲ್ಲಿ ಇಂದು ಮತ್ತೆ ಐದು ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಒಮೈಕ್ರಾನ್​ ಪ್ರಕರಣಗಳು ಆತಂಕ ಮೂಡಿಸುತ್ತಿರುವ ಹಿನ್ನಲೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಲಾಗುತ್ತಿದೆ. ಈ ನಡುವೆ ಕ್ರಿಸ್ ಮಸ್ (Chrismas), ಹೊಸ ವರ್ಷ  (New year) ಆಗಮಿಸುತ್ತಿದ್ದು,  ಒಮೈಕ್ರಾನ್ ಹರಡದಂತೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.  ಕೊರೋನಾದಿಂದಾಗಿ ಕಳೆದೆರಡು ವರ್ಷಗಳಿಂದ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್​ ಬಿದ್ದಿದ್ದು, ಈ ಬಾರಿ ಕೂಡ ಯಾವುದೇ ಸಂಭ್ರಮಾಚರಣೆ ನಡೆಸದಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದೆ. 

ಒಮೈಕ್ರಾನ್​ ಹೆಚ್ಚಿನ ಪ್ರಸರಣ ಹೊಂದಿರುವ ಹಿನ್ನಲೆ ಜನರ ಗುಂಪು ಹೆಚ್ಚಾಗದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಈ ಹಿನ್ನಲೆ ಈ ಬಾರಿ ಕೂಡ ಹೊಸ ವರ್ಷ ಸಂಭ್ರಮಕ್ಕೆ ತಡೆಯಾಗುವ ಸಾಧ್ಯತೆ ಹೆಚ್ಚಿದೆ.  ಈ ಸಂಬಂಧ  ತಾಂತ್ರಿಕ‌‌ ಸಲಹಾ ಸಮಿತಿ ಅನೇಕ ಸಲಹೆ ನೀಡಿದೆ. ನಿನ್ನೆ ನಡೆದ ಸಭೆಯಲ್ಲಿ ಈ ಕುರಿತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ಸಮಿತಿ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಈ ವೇಳೆ ಜನಸಂದಣಿಗೆ ಕಡಿವಾಣ ಹಾಕುವುದು ಒಳಿತು ಎಂಬುದು ತಜ್ಣರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಮಿಕ್ರಾನ್ ನಿಂದ ಬಚಾವ್ ಆಗೋಕೆ ಬಿಬಿಎಂಪಿ ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೊಸ ವರ್ಷ, ಕ್ರಿಸ್ ಮಸ್ ಗೂ ಈ ಬಾರಿ ಆಚರಣೆಗೆ ಬ್ರೇಕ್ ಬೀಳಬಹುದು. ಈ ಕುರಿತು ತಾಂತ್ರಿಕ ಸಲಹಾ ಸಮಿತಿಯಲ್ಲಿ ತಜ್ಞರು ಸಭೆಯಲ್ಲಿ ಡಿಸೆಂಬರ್ 22 ರಿಂದ ಜನವರಿ 2 ರವರೆಗೆ ಮಾರ್ಗಸೂಚಿ ‌ಬಿಡುಗಡೆ ಮಾಡಲು ಸಲಹೆ ನೀಡಿದ್ದಾರೆ. ಹೊಸ ವರ್ಷದ ಆಚರಣೆ ಹಾಗೂ ಕ್ರಿಸ್ ಮಸ್ ಗೆ ಮಾರ್ಗಸೂಚಿ ಮಾಡಬೇಕು. ಪ್ರಾರ್ಥನಾ ಮಂದಿರಗಳಿಗೂ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ. ಈ ಕುರಿತಂತೆ ರಾಜ್ಯಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯೂ ಪ್ರಸ್ತಾವನೆ ಸಲ್ಲಿಕೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗುತ್ತಿದೆ.

ಇದನ್ನು ಓದಿ: ಆತ್ಮಹತ್ಯೆಗೂ ಮುನ್ನ ಹೆತ್ತ ಮಗುವನ್ನೇ ನೀರಿನ ಬಕೆಟ್​ನಲ್ಲಿ ಮುಳುಗಿಸಿ ಕೊಲೆ ಮಾಡಿದ ತಾಯಿ; ನಂಜನಗೂಡಲ್ಲಿ ದಾರುಣ ಘಟನೆ

ಏನಿರಲಿದೆ ಪಾಲಿಕೆ ಪ್ರಸ್ತಾವನೆ?

  • ಡಿಸೆಂಬರ್ 22 ರಿಂದ ಜನವರಿ 02 ರವರೆಗೆ  ಜಾರಿಯಾಗಲಿರೋ ಕಠಿಣ ನಿಯಮ ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ.

  • ಹೊಸ ವರ್ಷದ ಆಚರಣೆ ಒಳಾಂಗಣ ಹಾಗೂ ಹೊರಾಂಗಣ ಸೆಲೆಬ್ರೇಷನ್ ಗೆ ಮಾರ್ಗಸೂಚಿ-

  • ದೇವಸ್ಥಾನ, ಚರ್ಚ್, ಮಸೀದಿಗೂ‌ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸಲಹೆ ನೀಡಲಾಗಿದೆ. ಜೊತೆಗೆ  ಹೆಚ್ಚು ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ ಎರಡು ವಾರ ಮಾರ್ಗಸೂಚಿ ಹೊರಡಿಸಲು ಸೂಚಿಸಲಾಗಿದೆ


ಇದನ್ನು ಓದಿ: ರಾಜ್ಯದಲ್ಲಿ ಮತ್ತೆ ಐದು ಹೊಸ omicron​ ಪ್ರಕರಣ ಪತ್ತೆ; ಸಚಿವ ಕೆ ಸುಧಾಕರ್​​

  • ದೇವಸ್ಥಾನಕ್ಕೆ ಆಗಮಿಸುವವರಿಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಮಾಡುವಂತೆ.  ಪಬ್ ಕ್ಲಬ್ ಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ

  • ಪಬ್ ಗೆ ಬರುವ ಗ್ರಾಹಕರು ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು

  • ಹೊರಾಂಗಣ ಪ್ರದೇಶದಲ್ಲಿ 3.5 ಚದರ ಮೀಟರ್ ನಲ್ಲಿ 200-300 ಜನರಿಗೆ ಸೀಮಿತಗೊಳಿಸುವುದು- ದೇಗುಲ, ಚರ್ಚ್, ಮಸೀದಿಗಳಲ್ಲಿ ಅಂತರ ಕಾಪಾಡಿಕೊಳ್ಳಲು ಮಾರ್ಷಲ್ ಗಳ ನಿಯೋಜನೆ

  • ಕ್ರಿಸ್ ಮಸ್ , ಹೊಸ ವರ್ಷಾಚರಣೆಗೆ ತಾಂತ್ರಿಕ ಸಲಹಾ ಸಮಿತಿ ಸಲಹೆ ಹಾಗೂ ಬಿಬಿಎಂಪಿ ಪ್ರಸ್ತಾವನೆ ನೀಡಿದೆ. ಇದಕ್ಕೆ ಸರ್ಕಾರ ಕೆಲವೊಂದು ಮಾರ್ಗಸೂಚಿ ಹೊರಡಿಸುವುದು ಬಹುತೇಕ ಖಚಿತ.


ಇನ್ನು ಈ ಸಲಹೆಗಳ ಅನುಸಾರ ಸರ್ಕಾರ ಶೀಘ್ರದಲ್ಲಿಯೇ ಹೊಸ ಮಾರ್ಗಸೂಚಿ ಅನುಸರಿಸಲಿದೆಯಾ ಕಾದು ನೋಡಬೇಕಿದೆ
Published by:Seema R
First published: