Covid Vaccine- ವ್ಯಾಕ್ಸಿನ್ ಸಿಗುತ್ತಿಲ್ಲವೆನ್ನುವವರಿಗೆ ಗುಡ್ ನ್ಯೂಸ್; ಲಸಿಕೆ ಹಂಚಿಕೆ ಹೆಚ್ಚಿಸಲು ಬಿಬಿಎಂಪಿ ವಿವಿಧ ಕ್ರಮಗಳು

ನಿಗದಿತ ಆರೋಗ್ಯ ಕೇಂದ್ರದಲ್ಲಿ ದಿನಕ್ಕೆ 12 ತಾಸು ಲಸಿಕೆ ಕೊಡುವುದು, ಹಾಗೂ ಲಸಿಕಾ ಕೇಂದ್ರಗಳ ಸಂಖ್ಯೆ ಹೆಚ್ಚಿಸುವುದು ಇತ್ಯಾದಿ ಕ್ರಮಗಳಿಂದ ಬೆಂಗಳೂರಿನಲ್ಲಿ ಲಸಿಕಾ ಹಂಚಿಕೆ ಕಾರ್ಯಕ್ಕೆ ಪುಷ್ಟಿ ಕೊಡಲಾಗಿದೆ.

ಕೋವಿಡ್ ಲಸಿಕೆ ಸಾಂದರ್ಭಿಕ ಚಿತ್ರ

ಕೋವಿಡ್ ಲಸಿಕೆ ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಲಸಿಕೆ ಹಂಚಿಕೆ ಕಾರ್ಯವನ್ನು ಪರಿಣಾಮಕಾರಿ ಆಗಿಸಲು ಬೆಂಗಳೂರು ಮಹಾನಗರ ಪಾಲಿಕೆ ಪ್ಲ್ಯಾನ್‌ವೊಂದನ್ನು ಮಾಡಿಕೊಂಡಿದೆ. ಇಡೀ ದೇಶದಲ್ಲೇ ಲಸಿಕೆ ಹಂಚುವುದರಲ್ಲಿ ಮುಂಚೂಣಿಯಲ್ಲಿರುವ ಬಿಬಿಎಂಪಿ ದಿನಕ್ಕೆ ಒಂದು ಲಕ್ಷದ ಗಡಿ ಮೀರಿ ಲಸಿಕೆ ಹಂಚಿಕೆ ಮಾಡುತ್ತಿದೆ. ಇದೀಗ ಮತ್ತೊಂದು ಐಡಿಯಾ ಹೊತ್ತು ಪಾಲಿಕೆ ಬಂದಿದೆ. ಮೂರನೇ ಅಲೆ ಅಪ್ಪಳಿಸಿದರೂ ಸಾವು ನೋವಿನ ಪ್ರಮಾಣವನ್ನು ತಡೆಗಟ್ಟಲು ಪೂರ್ಣಪ್ರಮಾಣದ ಲಸಿಕೆ ಹಂಚಿಕೆಯನ್ನು ಮಾಡಿಮುಗಿಸುವ ಪಣತೊಟ್ಟಿದೆ. ಹೀಗಾಗಿ ಮತ್ತೊಂದು ಹೆಜ್ಜೆ ಮುಂದೆ ಬಂದಿರುವ ಬಿಬಿಎಂಪಿ ಲಸಿಕೆ ವಿತರಣೆಯ ಸಮಯವನ್ನು ವಿಸ್ತರಿಸಿದೆ. ಸದ್ಯ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಮಾತ್ರ ಪಾಲಿಕೆ ಸೆಂಟರ್​ಗಳಲ್ಲಿ ಲಸಿಕೆ ಹಂಚಿಕೆ ಮಾಡ್ತಿದೆ. ಆದರೆ ಇನ್ಮುಂದೆ ದಿನದ 12 ತಾಸು ಲಸಿಕೆ ವಿತರಣೆ ಮಾಡಲಿದೆ ಪಾಲಿಕೆ. ಹೌದು, ದೇಶದಲ್ಲೇ ಲಸಿಕೆ ಹಂಚಿಕೆಯಲ್ಲಿ ಮೂಂಚೂಣಿಯಲ್ಲಿರುವ ಬೆಂಗಳೂರಲ್ಲಿ ದಿನದ 12 ತಾಸು ಲಸಿಕೆ ನೀಡಲು ಪಾಲಿಕೆ ನಿರ್ಧಾರ ಮಾಡಿದೆ.

ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ ತಲಾ 2 ವ್ಯಾಕ್ಸಿನೇಷನ್ ಸೆಂಟರ್: ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಅಂದರೆ ದಿನದ 5 ತಾಸು ಮಾತ್ರ ಪಾಲಿಕೆ ಲಸಿಕೆ ಹಂಚಿಕೆ ಮಾಡ್ತಿತ್ತು. ಈ ಅವಧಿಯನ್ನು ವಿಸ್ತರಿಸಿ ದಿನದ 12 ತಾಸು ಲಸಿಕೆ ಹಂಚಿಕೆ ಮಾಡಿ ಬೇಗನೇ ಸಂಪೂರ್ಣವಾಗಿ ಲಸಿಕೆ ಹಂಚಿ ಮೂರ‌ನೇ ಅಲೆಯ ಹೊಡೆತದಿಂದ ನಗರವನ್ನು ಪಾರು ಮಾಡಲು ಪಾಲಿಕೆ ತಂತ್ರ ಹೂಡಿದೆ. ನಗರದ 28 ವಿಧಾನ ಸಭಾ ಕ್ಷೇತ್ರದಲ್ಲಿ ತಲಾ 2 ವ್ಯಾಕ್ಸಿನೇಷನ್ ಸೆಂಟರ್ ತೆರೆದು, 12 ತಾಸು ಲಸಿಕೆ ಇನ್ಮುಂದೆ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ. ಈ ಮೂಲಕ ಪ್ರತಿ ದಿನ‌ ಒಂದು ಲಕ್ಷ ಲಸಿಕೆ ಹಂಚಿಕೆ ಮಾಡಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಮುಂದಾಗಿದೆ ಬಿಬಿಎಂಪಿ.

ಇದನ್ನು ಓದಿ: ಕುಮಾರಸ್ವಾಮಿ ನೋಡಿ ಕಣ್ಣೊಡೆದ ಯೋಗೇಶ್ವರ್; ಸಿಪಿವೈ ಮಂತ್ರಿ ಆಗ್ತಾರೆ ಅಂದ ಡಿಕೆ ಸುರೇಶ್

ಇಡೀ ಬೆಂಗಳೂರಿಗೇ ಮೂರು ಮೆಗಾ ವ್ಯಾಕ್ಸಿನೇಷನ್‌ ಸೆಂಟರ್ ಓಪನ್ ಮಾಡಲಿರುವ ಬಿಬಿಎಂಪಿ.!!

ಇದರ ಹೊರತಾಗಿ ಇಡೀ ಬೆಂಗಳೂರಿಗೇ ಮೂರು ಮೆಗಾ ವ್ಯಾಕ್ಸಿನೇಷನ್‌ ಸೆಂಟರ್ ಅನ್ನು ಪಾಲಿಕೆ ಓಪನ್ ಮಾಡಲಿದೆ. ಬೃಹತ್ ಮೈದಾನದಲ್ಲಿ ಪೂರ್ಣ ಪ್ರಮಾಣದ ‌ಲಸಿಕೆ ಹಂಚಿಕೆ ಆಗುವವರಿಗೆ ಮೆಗಾ ಲಸಿಕಾ ಕೇಂದ್ರ ಓಪನ್ ಆಗಲಿದೆ. ಮಲ್ಲೇಶ್ವರದಲ್ಲಿರುವ ಮೈದಾನ, ಸಿವಿ ರಾಮನ್ ನಗರದ ಇಡಿಎಚ್ ಕ್ಯಾಂಪಸ್, ಯಲಹಂಕ ನ್ಯೂ ಟೌನ್‌ನ ಅಂಬೇಡ್ಕರ್ ಭವನ ಈ ಮೂರು ಸ್ಥಳಗಳಲ್ಲಿ ಬೃಹತ್ ಲಸಿಕಾ ಕೇಂದ್ರಗಳನ್ನು ತೆರೆಯಲಿರುವ ಮಹಾನಗರ ಪಾಲಿಕೆ ತೆರೆದು ದಿನದ 12 ತಾಸು ಬೃಹತ್ತಾಗಿ ಲಸಿಕೆ ಹಂಚಿಕೆ ಮಾಡುವ ನಿರ್ಧಾರಕ್ಕೆ ಬಂದಿದೆ.

ಲಸಿಕೆ ಪಡೆಯಲು ಬಂದು ಕೊನೆಗೆ ಸಿಗದೇ ಇದ್ದರೆ‌ ಅಂಥವರಿಗೆ ಕೂಪನ್ ವ್ಯವಸ್ಥೆ ಮಾಡಲಾಗಿದೆ. ಕೂಪನ್ ಪಡೆದುಕೊಂಡವರಿಗೆ ಮರು ದಿನ ಆದ್ಯತೆ ಮೇರೆಗೆ ಬರುವಾಗಲೇ ಲಸಿಕೆ ಸಿಗಲಿದೆ. ಈ ಮೂಲಕ ಕಾದು, ಸುಸ್ತಾಗುವ ಸಾರ್ವಜನಿಕರ ಅಸಮಾಧಾನಕ್ಕೆ ಬಿಬಿಎಂಪಿ ಬ್ರೇಕ್ ಹಾಕಲಿದೆ.

ಇದನ್ನೂ ಓದಿ: Times World University Rankings: ಸತತ ಮೂರನೇ ವರ್ಷ ಭಾರತದ ಅತ್ಯುನ್ನತ ವಿವಿ ಎಂಬ ಕೀರ್ತಿಗೆ ಪಾತ್ರವಾದ ಐಐಎಸ್‌ಸಿ ಬೆಂಗಳೂರು

ಒಟ್ಟಾರೆ, ಮೂರನೇ ಅಲೆ ಭೀತಿ ಇರುವ ಹೊತ್ತಲ್ಲೇ ಬಿಬಿಎಂಪಿ ತ್ವರಿತಗತಿಯಲ್ಲಿ ಲಸಿಕೆ ಹಂಚಿಕೆ ಮಾಡುತ್ತಿದೆ. ಸದ್ಯ ಲಸಿಕಾ ಮೇಳ ಕಾರ್ಯಕ್ರಮ ಜಾರಿಯಲ್ಲಿದ್ದು,‌ ದಾಖಲೆ ಮಟ್ಟದಲ್ಲಿ ಲಸಿಕೆ ವಿತರಣೆ ಮಾಡುತ್ತಿದೆ. ಇದರ ಜೊತೆಗೆ ದಿನದ 12 ತಾಸು ಲಸಿಕೆ ಹಂಚಿಕೆಯನ್ನು ಕಾರ್ಯಕ್ರಮ ಶೀಘ್ರವೇ ಅನುಷ್ಠಾನ ಮಾಡಿದರೆ ಲಸಿಕೆ ಪಡೆದವರ ಸಂಖ್ಯೆ ನೋಡನೋಡುತ್ತಲೇ ಏರಿಕೆಯಾಗಲಿದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: