• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ganesha Festival: ಗಣಪತಿ ಹಬ್ಬಕ್ಕೆ ಬಿಬಿಎಂಪಿ ರೂಲ್ಸ್ ಬಿಡುಗಡೆ, ಎಷ್ಟು ಎತ್ತರದ ಗಣಪ, ಎಲ್ಲಿ ವಿಸರ್ಜನೆ...ಫುಲ್ ಡೀಟೆಲ್ಸ್

Ganesha Festival: ಗಣಪತಿ ಹಬ್ಬಕ್ಕೆ ಬಿಬಿಎಂಪಿ ರೂಲ್ಸ್ ಬಿಡುಗಡೆ, ಎಷ್ಟು ಎತ್ತರದ ಗಣಪ, ಎಲ್ಲಿ ವಿಸರ್ಜನೆ...ಫುಲ್ ಡೀಟೆಲ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

BBMP Guidelines For Festival: ಗಣೇಶ ಕೂರಿಸುವವರು ವ್ಯಾಕ್ಸಿನ್ ಪಡೆದಿರಬೇಕು ಅದನ್ನ ಬಿಬಿಎಂಪಿ ಸಿಬ್ಬಂದಿ  ಗಮನ ನೀಡಿ, ಮಾಹಿತಿ ಪಡೆಯುತ್ತಾರೆ. ಜೊತೆಗೆ ನೀರಿನ ಟ್ಯಾಂಕ್ ಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು.

  • Share this:

ಕೊರೊನಾ(Coronavirus) ಸೋಂಕಿನ ಕಾರಣದಿಂದ ಗಣೇಶ ಹಬ್ಬ ಆಚರಿಸಲು ಷರತ್ತು ಬದ್ಧ ಅನುಮತಿಯನ್ನು ಸರ್ಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಹಬ್ಬದ ಆಚರಣೆಯ ಮೇಲೆ ನಿಗಾವಹಿಸಲು ಮತ್ತು ಕೊರೊನಾ ನಿಯಮಗಳನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಬಿಬಿಎಂಪಿ(BBMP) ಮತ್ತು ಪೊಲೀಸ್ ಅಧಿಕಾರಿಗಳ ಸಭೆ ನಡೆದಿದ್ದು, ಹಬ್ಬದ ನಿಯಮಗಳ ಕುರಿತು ಚರ್ಚೆ ನಡೆದಿದೆ.


ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಬಿಬಿಎಂಪಿ ಕಮೀಷನರ್ ಗೌರವ್ ಗುಪ್ತ  ಪಾಲಿಕೆಯ ವಾರ್ಡ್ ಅಧಿಕಾರಿಗಳು ಸಾರ್ವಜನಿಕವಾಗಿ ಗಣಪತಿ ಇಡಲು ಅನುಮತಿ ಕುರಿತು  ಮತ್ತು ಸ್ವಚ್ಚತೆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ.  ಸಾರ್ವಜನಿಕವಾಗಿ ಮೂರು ದಿನ ಇಡಲು ಅವಕಾಶ ನೀಡಲಾಗಿದೆ. ಮೂರು ದಿನ ನಂತರ ಗಣೇಶ ವಿಸರ್ಜನೆ ಮಾಡಬೇಕು. ಮನೆಯಲ್ಲಿ ಇಡುವ ಮೂರ್ತಿಗಳನ್ನ ಮನೆಯಲ್ಲೆ ವಿಸರ್ಜನೆ ಮಾಡಬೇಕು.  ಇಲ್ಲವೇ ಮೊಬೈಲ್ ಟ್ಯಾಂಕ್ ನಲ್ಲಿ ವಿಸರ್ಜನೆ ಮಾಡಬೇಕು ಎಂದಿದ್ದಾರೆ.


ನಂತರ ಮಾತನಾಡಿದ ಕಮೀಷನರ್ ಕಮಲ್ ಪಂತ್ ಗಣೇಶ ಕೂರಿಸುವವರು ವ್ಯಾಕ್ಸಿನ್ ಪಡೆದಿರಬೇಕು ಅದನ್ನ ಬಿಬಿಎಂಪಿ ಸಿಬ್ಬಂದಿ  ಗಮನ ನೀಡಿ, ಮಾಹಿತಿ ಪಡೆಯುತ್ತಾರೆ. ಜೊತೆಗೆ ನೀರಿನ ಟ್ಯಾಂಕ್ ಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು. ಧಾರ್ಮಿಕ ನಂಬಿಕೆ ಒಂದು ಕಡೆ ಆದರೆ ಈ ಸಮಯದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯುವುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.


ಬೆಂಗಳೂರು ಮಹಾನಗರ ಪಾಲಿಕೆ ಗೈಡ್​ಲೈನ್ಸ್ ಬಿಡುಗಡೆ ಮಾಡಿದ್ದು, ಅದರಲ್ಲಿರುವ ಅಂಶಗಳು ಹೀಗಿದೆ.


ಬೆಂಗಳೂರಿನ 198 ವಾರ್ಡ್​ಗಳಲ್ಲಿ ಒಂದೊಂದು ವಾರ್ಡ್​ನಲ್ಲಿ ಕೇವಲ ಒಂದು ಗಣಪತಿಯನ್ನು ಮಾತ್ರ ಸ್ಥಾಪಿಸಲು ಅವಕಾಶ ನೀಡಲಾಗಿದ್ದು, ಈ ಸಂಬಂಧ ವಾರ್ಡ್​ ವ್ಯಾಪ್ತಿಯ ಪೊಲೀಸ್ ಅಧಿಕಾರಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ ಹಾಗೂ  ಸ್ಥಳವನ್ನು ಪಾಲಿಕೆ ನಿಗದಿ ಮಾಡುತ್ತದೆ.


ಸೆಪ್ಟೆಂಬರ್ 8ರ ಒಳಗಾಗಿ ಜಾಗ ನಿಗದಿಪಡಿಸಿ ವ್ಯವಸ್ಥೆ ಮಾಡಿಕೊಳ್ಳಲು ಆದೇಶ ನೀಡಲಾಗಿದೆ.


ಇದನ್ನೂ ಓದಿ: ಕರ್ನಾಟಕ ಬೆನ್ನಲ್ಲೇ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಮಿಳುನಾಡಿನಲ್ಲೂ ವಿನಾಯಿತಿ


ಸಾರ್ವಜನಿಕರ ವಾಹನಗಳಿಗೆ ಯಾವುದೇ ಅಡ್ಡಿಯಾಗದಂತೆ ಗಣೇಶ ಮೂರ್ತಿಯನ್ನು ಸ್ಥಾಪಿಸಬೇಕು. ಆಯಾ ವಿಭಾಗದ ಸಂಚಾರಿ ಪೊಲೀಸರು ಈ ಬಗ್ಗೆ ಕ್ರಮ ತೆಗದುಕೊಳ್ಳಬೇಕು.


ನಾಲ್ಕು ಅಡಿ ಎತ್ತರ ಮೀರಿ ಗಣೇಶ ಮೂರ್ತಿ ಕೂರಿಸುವಂತಿಲ್ಲ.ಕೆರೆಗಳಲ್ಲಿ ವಿಸರ್ಜನೆಗೆ ಅವಕಾಶ ಇಲ್ಲ.


ಯಾವುದೇ ಸಾರ್ವಜನಿಕ   ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ. ಕೇವಲ ಪೂಜೆ ಮಾಡಲು ಅವಕಾಶ ನೀಡಲಾಗಿದೆ‌.


ಸಾರ್ವಜನಿಕವಾಗಿ ಸ್ಥಾಪಿರುವ ಗಣಪತಿಯ ದರ್ಶನಕ್ಕೆ ಬರುವ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ‘


ದೇವಾಲಯ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ ಹಾಗೂ ಪ್ರತಿದಿನ ಸ್ಥಳವನ್ನು ಸ್ಯಾನಿಟೈಸೇಷನ್ ಮಾಡಬೇಕು.ಒಮ್ಮೆಲೆ ಕೇವಲ 20 ಜನ ಭಕ್ತಾದಿಗಳಿಗೆ ಮಾತ್ರ ಅವಕಾಶ ನೀಡಬೇಕು. ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು.


ಸಾರ್ವಜನಿಕವಾಗಿ ಗಣಪತಿ ಸ್ಥಾಪನೆ ಮಾಡುತ್ತಿರುವ ಆಯೋಜಕರು ಲಸಿಕೆ ಪ್ರಮಾಣ ಪತ್ರ ಹಾಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು. ಅಲ್ಲದೇ ಆ ಸ್ಥಳದಲ್ಲಿ ಲಸಿಕೆ ಅಭಿಯಾನವನ್ನು ಆರೋಗ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಹಮ್ಮಿಕೊಳ್ಳಬೇಕು.


ಗಣೇಶ ಮೂರ್ತಿ ವಿಸರ್ಜನೆ ಮಾಡುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೆಚ್ಚು ಜನರು ಸೇರಬಾರದು, ಮೆರವಣಿಗೆ ನಡೆಸಲು ಅನುಮತಿ ಇಲ್ಲ.


ನಿಯಮ ಉಲ್ಲಂಘಿಸುವವರ ವಿರುದ್ಧ ಕಾಯ್ದೆ 2005 ಹಾಗು IPC 188 ಅಡಿಯಲ್ಲಿ ಕ್ರಮ ತೆಗದುಕೊಳ್ಳಲಾಗುವುದು.


ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವಕ್ಕೆ ಓಕೆ ಎಂದ ಸರ್ಕಾರ; ಆದ್ರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು


POP(Plaster Of Paris) ಇಂದ ತಯರಾದ ಮೂರ್ತಿಗಳಿಗೆ ಅವಕಾಶ ಇಲ್ಲ. POP ಇಂದ ತಯಾರದ ಮೂರ್ತಿ ಬಳಸಿದರೆ ದಂಡ ವಿಧಿಸಲಾಗುತ್ತದೆ ಹಾಗೂ ಕಠಿಣ ಶಿಕ್ಷೆಯನ್ನು ಸಹ ನೀಡಲಾಗುತ್ತದೆ.

Published by:Sandhya M
First published: