Bengaluru: ನಿಮ್ಮ ಮನೆ ಬಾಗಿಲಿಗೆ ಬರ್ತಾರೆ ಡಾಕ್ಟರ್ಸ್, ಕೊರೋನಾ ಕಂಟ್ರೋಲ್​ಗೆ ಪಾಲಿಕೆ ಮಾಸ್ಟರ್ ಪ್ಲ್ಯಾನ್

ಮನೆ ಮನೆಗೆ ವೈದ್ಯರನ್ನ ಕಳುಹಿಸಿ ಕೊರೋನಾ ಪರಿಸ್ಥಿತಿ ಕಂಟ್ರೋಲ್​ಗೆ ತರಲು ಬಿಬಿಎಂಪಿ ಮುಂದಾಗಿದ್ದು, ಫಿಸಿಕಲ್ ಟ್ರಯಾಜಿಂಗ್ ಶುರು ಮಾಡ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಧಾನಿ ಬೆಂಗಳೂರು (Bengaluru) ಈಗ ಕೊರೋನಾ (Corona) ಹಾಟ್​ ಸ್ಪಾಟ್​ ಆಗಿದೆ. ರಾಜ್ಯದಲ್ಲಿ ಕೋವಿಡ್​ 19 ಮೂರನೇ ಅಲೆಯ (Covid 3rd wave) ಅಬ್ಬರ ದಿನೇ ದಿನೇ ಹೆಚ್ಚುತ್ತಲಿದೆ. ಅದರಲ್ಲೂ ಬೆಂಗಳೂರಲ್ಲಿ ನಿತ್ಯ ಅಧಿಕ ಕೊರೋನಾ ಪಾಸಿಟಿವ್​ ಕೇಸ್​ ದಾಖಲಾಗ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ವೀಕೆಂಡ್​ ಲಾಕ್​ಡೌನ್​ (Weekend lockdown) ರದ್ದಾಗಿದ್ದು, ಆದರೆ ನಗರದಲ್ಲಿ 50-50 ರೂಲ್ಸ್​ ಜಾರಿ ಮಾಡಲಾಗಿದೆ. ಹಲವು ನಗರಗಳು ಡೇಂಜರ್ ಹಂತದಲ್ಲಿದೆ. ಗಲ್ಲಿ, ಗಲ್ಲಿಗಳಲ್ಲೂ ಸೋಂಕು ಹರಡುತ್ತಿದ್ದು, ಅನೇಕ ವಾರ್ಡ್ ​(Wards) ಗಳು ಸೋಂಕಿತರಿಂದ ತುಂಬಿ ಹೋಗಿವೆ. 198 ವಾರ್ಡ್‍ಗಳಲ್ಲಿ ಫಿಜಿಕಲ್ ಟ್ರಯಾಜಿಂಗ್ (Physical Triaging) ನಡೆಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿದೆ.

ಫಿಜಿಕಲ್​ ಟ್ರಯಾಜಿಂಗ್​ ನಡೆಸಲು ಬಿಬಿಎಂಪಿ ಸಿದ್ಧತೆ

ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಬಿಬಿಎಂಪಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕೆಮ್ಮು, ಶೀತ, ಜ್ವರದಂತಹ ಲಕ್ಷಣಗಳಿರುವವರ ಮನೆ ಮನೆಗೆ ತೆರಳಿ ಪರೀಕ್ಷೆ ನಡೆಸಲು ಮುಂದಾಗಿದೆ. 198 ವಾರ್ಡ್‍ಗಳಲ್ಲಿ ಫಿಜಿಕಲ್ ಟ್ರಯಾಜಿಂಗ್ ನಡೆಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಿದೆ.

ಏನಿದು ಫಿಜಿಕಲ್ ಟ್ರಯಾಜಿಂಗ್​?

ಕೊರೋನಾ ಎರಡನೆ ಅಲೆ ತೀವ್ರತೆ ಸಂದರ್ಭದಲ್ಲಿ ಟ್ರಯಾಜಿಂಗ್ ಆರಂಭ ಮಾಡಲಾಗಿತ್ತು. ಆದರೆ, ಅಲೆಯ ತೀವ್ರತೆ ಕಡಿಮೆಯಾದಾಗ ಟ್ರಯಾಜಿಂಗ್ ಸ್ಥಗಿತಗೊಂಡಿತ್ತು. ಈಗ ನಗರದಲ್ಲಿ ಕೇಸ್‍ಗಳು ಹೆಚ್ಚಾದ ಹಿನ್ನೆಲೆಯಲ್ಲಿ ಫಿಜಿಕಲ್ ಟ್ರಯಾಜಿಂಗ್ ಮಾಡಲು ಆರಂಭಿಸಿದೆ. ಬೆಂಗಳೂರಲ್ಲಿ ಈಗಾಗಲೇ 1 ಲಕ್ಷಕ್ಕೂ ಅಧಿಕ ರೋಗಿಗಳು ಹೋಂ ಐಸೋಲೇಷನ್‌ನಲ್ಲಿದ್ದಾರೆ.

ಮನೆಯಲ್ಲಿರೋ ಕೊರೋನಾ ಸೋಂಕಿತರಿಂದ ಮನೆಯಲ್ಲಿದ್ದವರಿಗೆಲ್ಲಾ ಕೊರೋನಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತೆ. ಜೊತೆಗೆ ಹೋಂ ಐಸೋಲೇಷನ್ ಆಗಿರೋರಿಗೆ ಹೇಗೆ ಚಿಕಿತ್ಸೆ ಪಡೆಯಬೇಕು ಅನ್ನೋ ಅರಿವು ಇರಲ್ಲ. ಅವರ ಪರಿಸ್ಥಿತಿ ಹೇಗಿದೆ ಅನ್ನೋದು ಗೊತ್ತಾಗಲ್ಲ. ಹೀಗಾಗಿ ಮನೆ ಮನೆಗೆ ವೈದ್ಯರನ್ನ ಕಳುಹಿಸಿ ಪರಿಸ್ಥಿತಿ ಕಂಟ್ರೋಲ್​ಗೆ ತರಲು ಬಿಬಿಎಂಪಿ ಮುಂದಾಗಿದ್ದು, ಫಿಸಿಕಲ್ ಟ್ರಯಾಜಿಂಗ್ ಶುರು ಮಾಡ್ತಿದೆ.

ಇದನ್ನೂ ಓದಿ: ಮಕ್ಕಳಲ್ಲೂ ಬಹುಬೇಗ ಹರಡತ್ತೆ Covid​​; ಎಚ್ಚರ ಮಕ್ಕಳು ಸೂಪರ್ ಸ್ಪ್ರೆಡರ್‌ಗಳಾಗಿ ಬದಲಾಗುತ್ತಿದ್ದು ಯಾವುದೇ ವಿಶೇಷ ರೋಗ ಲಕ್ಷಣಗಳನ್ನು ತೋರ್ಪಡಿಸದ ಕಾರಣ ವೈರಸ್ ಅನ್ನು ಅವರಲ್ಲಿ ಗುರುತಿಸಲು ಸಾಧ್ಯವಾಗುತ್ತಿಲ್ಲ

ಫಿಜಿಕಲ್ ಟ್ರಯಾಜಿಂಗ್ ಸಿಬ್ಬಂದಿ ಏನು ಮಾಡ್ತಾರೆ?

ಈ ಫಿಸಿಕಲ್ ಟ್ರಯಾಜಿಂಗ್ ಅಂದ್ರೆ ತಂಡದ ಸಿಬ್ಬಂದಿ ಸ್ವತಃ ಕೊರೋನಾ ಸೋಂಕಿತರ ಮನೆಗೆ ತೆರಳಿ ರೋಗಿಗಳ ಆರೋಗ್ಯ ಹೇಗಿದೆ. ಅವರಿಗೆ ಹೆಚ್ಚು ರೋಗಲಕ್ಷಣಗಳು ಇದೆಯಾ? ಹೆಚ್ಚು ಲಕ್ಷಣಗಳು ಕಂಡು ಬಂದರೆ, ಅವ್ರನ್ನು ಆಸ್ಪತ್ರೆಗೆ ಸೇರಿಸಬೇಕಾ? ಹೀಗೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿ ವರದಿ ತಯಾರು ಮಾಡುತ್ತಾರೆ. ಇದಕ್ಕೆ ಫಿಸಿಕಲ್ ಟ್ರಯಾಜಿಂಗ್ ಅಂತ ಕರೆಯಲಾಗುತ್ತೆ. ನಿತ್ಯ ಮೂರು ಸಾವಿರಕ್ಕೂ ಅಧಿಕ ಮಂದಿಗೆ ಫಿಜಿಕಲ್​ ಟ್ರಯಾಜಿಂಗ್​ ಮಾಡೋ ಗುರಿ ಹೊಂದಿದ್ದು, ಹೆಚ್ಚು ಲಕ್ಷಣವಿರೋ  ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾಹಿತಿ ನೀಡಿದ್ದಾರೆ

ಇದನ್ನೂ ಓದಿ: Covid 19: ಮನೆಯಲ್ಲಿದ್ದುಕೊಂಡೆ ಕೊರೊನಾ ಓಡಿಸ್ತೀವಿ, ಆಸ್ಪತ್ರೆವಾಸ ಬೇಡ ಅಂತಿದ್ದಾರೆ ಬೆಂಗಳೂರಿಗರು!

101 ವಾರ್ಡ್​ಗಳಲ್ಲಿ ಕೊರೋನಾ ಸ್ಫೋಟ

ಇಡೀ‌ ಬೆಂಗಳೂರನ್ನ ಕೊರೋನಾ ಸೋಂಕು ಆವರಿಸಿಬಿಟ್ಟಿದೆ. 198 ವಾರ್ಡ್​ಗಳ ಪೈಕಿ 101 ವಾರ್ಡ್ ಡೇಂಜರ್ ಹಂತ ತಲುಪಿದೆ. 33 ವಾರ್ಡ್​ಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ನಿತ್ಯ ಈ 33 ವಾರ್ಡ್​ಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. 68 ವಾರ್ಡ್​ಗಳಲ್ಲಿ 500 ರಿಂದ 1000 ಕೊರೋನಾ  ಕೇಸ್ ದಾಖಲಾಗಿದೆ. 64 ವಾರ್ಡ್​ಗಳಲ್ಲಿ ನಿತ್ಯ 250 ರಿಂದ 500 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. 26 ವಾರ್ಡ್​ಗಳಲ್ಲಿ 100 ರಿಂದ‌ 250 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ 7 ವಾರ್ಡ್​ಗಳಲ್ಲಿ 1 ರಿಂದ 100 ಕೇಸ್ ದಾಖಲಾಗ್ತಿರೋದು ಬೆಂಗಳೂರಿಗರನ್ನ ಬೆಚ್ಚಿಬೀಳಿಸುವಂತೆ ಮಾಡಿದೆ.
Published by:Pavana HS
First published: