HOME » NEWS » State » BENGALURU URBAN BBMP PLANNING TO MAKE MANDATORY COVID TEST FOR PEOPLE WHO RETURNING TO BANGLORE AFTER LOCKDOWN SHTV KVD

Bangalore Unlock: ಬೆಂಗಳೂರಿನತ್ತ ಜನ.. ಹೊರ ಜಿಲ್ಲೆಗಳಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ?

ಲಾಕ್​ಡೌನ್​ನಿಂದ ಬೆಂಗಳೂರು ತೊರೆದು ಊರುಗಳಿಗೆ ತೆರಳಿದ್ದ ಜನ ಅನ್​​ಲಾಕ್​​ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇದರಿಂದ ಮತ್ತೆ ಕೊರೊನಾ ಸ್ಫೋಟ ಆತಂಕ ಎದುರಾಗಿದೆ.


Updated:June 11, 2021, 8:20 PM IST
Bangalore Unlock: ಬೆಂಗಳೂರಿನತ್ತ ಜನ.. ಹೊರ ಜಿಲ್ಲೆಗಳಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು: ಕೊರೊನಾ ಕೇಸ್ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಿಂದ ಜನರು ತಮ್ಮೂರಿಗೆ ಹೋಗಿದ್ದರು‌. ಇದೀಗ ಕೇಸ್ ಕಡಿಮೆಯಾಗಿ ಅನ್ ಲಾಕ್ ಆಗುತ್ತಿದ್ದಂತೆ ಮತ್ತೆ ಮರು ವಲಸೆ ಶುರುವಾಗಿದೆ‌. ಇದರಿಂದ ಕೊರೊನಾ ಮತ್ತೆಲ್ಲಿ ಉಲ್ಭಣವಾಗುತ್ತೋ ಎಂಬ ಆತಂಕ ಶುರುವಾಗಿದೆ. ಜಿಲ್ಲೆಗಳಿಂದ ಬರುವವರಿಗೆ ಕೊರೊನಾ ಟೆಸ್ಟ್ ಮಾಡಲು ಬಿಬಿಎಂಪಿ ಗಂಭೀರವಾಗಿ ಯೋಚಿಸುತ್ತಿದೆ.ಕಳೆದೊಂದುವರೆ ತಿಂಗಳಿನಿಂದ ಕೊರೊನಾ ಎರಡನೇ ಅಲೆ ತನ್ನ ರುದ್ರನರ್ತನ ತೋರಿಸಿದೆ‌. ರಾಜಧಾನಿ ಬೆಂಗಳೂರಿನಲ್ಲಿ ಬೆಡ್ ಸಿಗದೆ, ಮೃತದೇಹ ಸುಡಲು ದಿನಗಟ್ಟಲೇ ಕಾಯಬೇಕಾದ ದುಸ್ಥಿತಿ ನೋಡಿದ್ದಾಗಿದೆ. ಇದೀಗ  ಬೆಂಗಳೂರಿನಲ್ಲಿ ಕೊರೊನಾ ಕೇಸ್ ಕಡಿಮೆಯಾಗಿ ಹತೋಟಿಗೆ ಬರುತ್ತಿದೆ. ಇಂಥ ಹೊತ್ತಿನಲ್ಲಿ‌ ರಾಜಧಾನಿಯಿಂದ ತಮ್ಮೂರಿಗೆ ತೆರಳಿದ ಜನರು ಮತ್ತೆ ಮರುವಲಸೆ ಮಾಡುತ್ತಿದ್ದಾರೆ.

ಕೊರೊನಾ ಕೇಸ್ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಮರು ವಲಸೆಯಿಂದ ಕೇಸ್ ಹೆಚ್ಚಳ‌ ಭೀತಿ ಎದುರಾಗಿದೆ. ಇದರಿಂದಾಗಿ ಮರುವಲಸಿಗರಿಗೆ ಕೊರೊನಾ ಪರೀಕ್ಷಾ‌ ಕಡ್ಡಾಯ ಮಾಡಲು ಬಿಬಿಎಂಪಿ ಚಿಂತಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಹೊಸ ಕ್ರಮ ಅಗತ್ಯ ಎಂದು ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿರುವ ಬಿಬಿಎಂಪಿ ಅನ್‌ಲಾಕ್‌ ಬಳಿಕ‌ ಬರುವವರಿಗೆ ಕೊರೊನಾ ಟೆಸ್ಟ್ ಮಾಡಲು ಚಿಂತಿಸುತ್ತಿದೆ.ಕೊರೊನಾ ಎರಡನೆ ಅಲೆ‌ ಲಾಕ್ ಡೌನ್ ಹಿನ್ನೆಲೆ ಬೆಂಗಳೂರಿನಿಂದ ತಮ್ಮೂರಿಗೆ ತೆರಳಿದ್ದ ಜನರು ಇದೀಗ ಜೂ.15ರಿಂದ ಲಾಕ್ ಡೌನ್ ಸಡಲಿಕೆ ವಿಷಯ ತಿಳಿದು ಕಳೆದೊಂದು ವಾರದಿಂದ ಖಾಸಗಿ ವಾಹನಗಳಲ್ಲಿ ದಿನನಿತ್ಯ ಸಾವಿರಾರು ಜನರು ವಾಪಾಸ್ ಆಗುತ್ತಿದ್ದಾರೆ.

ಇದನ್ನೂ ಓದಿ: Vaccine Magnetic Power: ಲಸಿಕೆ ಪಡೆದ ಬಳಿಕ ದೇಹಕ್ಕೆ ಅಂಟಿಕೊಳ್ಳುತ್ತಿವೆ ಪಾತ್ರೆಗಳು..ಏನಿದರ ಮರ್ಮ?

ವಿವಿಧ ಜಿಲ್ಲೆಗಳಿಂದ‌ ಬಂದವರಿಗೆ ಆರ್ ಟಿ ಪಿಎಸ್, ಆಂಟಿಜನ್ ಟೆಸ್ಟ್ ಮಾಡುವುದು ಒಳಿತು. ಬೆಂಗಳೂರಿಗೆ ಬರುತ್ತಿರುವ ಮರುವಲಸಿಗರಿಗೆ ಕೊರೊನಾ ಟೆಸ್ಟ್ ಮಾಡುವ ಯೋಚನೆ ಬಿಬಿಎಂಪಿ ಅಧಿಕಾರಿಗಳಿಗಿದೆ. ಸರ್ಕಾರಕ್ಕೆ ಈ ಬಗ್ಗೆ ಸಲಹೆ ನೀಡಿರುವ ಬಿಬಿಎಂಪಿ, ಕೊರೊನಾ ಕೇಸ್ ಹೆಚ್ಚಾಗದಂತೆ ಕಡಿಮೆ ಮಾಡಲು ಟೆಸ್ಟ್ ಮಾಡುವ ವಿಧಾನ ಸೂಕ್ತ ಎಂದು ಅಭಿಪ್ರಾಯಪಡಲಾಗಿದೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 78-80 ಸಾವಿರ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬರುವುದರಿಂದ ಟೆಸ್ಟ್ ಹೆಚ್ಚಳ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಈ ಕ್ರಮಕ್ಕೆ ಮುಂದಾಗಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಸರ್ಕಾರದ ನಿರ್ಧಾರಕ್ಕೆ ಕಾಯುತ್ತಿದ್ದೇವೆ ಎಂದು ಬಿಬಿಎಂಪಿ ಕಮಿಷಿನರ್ ಗೌರವ್ ಗುಪ್ತ ಹೇಳಿದ್ದಾರೆ.

ಕೊರೊನಾ ಕೇಸ್ ಹೆಚ್ಚಾಗುತ್ತಿದ್ದಂತೆ ಬೆಂಗಳೂರಿನಿಂದ 17 ಲಕ್ಷಕ್ಕೂ ಹೆಚ್ಚು ವಲಸೆ ಹೋಗಿದ್ದರು ಎಂಬ ಮಾಹಿತಿಯಿದೆ. ಇದೀಗ ಎಲ್ಲರೂ ಜನರು ವಾಪಾಸ್ ಬರುತ್ತಿದ್ದಾರೆ. ವಾಸ್ತವವಾಗಿ ಬೇರೆ ರಾಜ್ಯಗಳಿಂದ‌ ಬರುವವರಿಗೆ ಸಮರ್ಪಕವಾಗಿ ಕೊರೊನಾ ಟೆಸ್ಟ್ ಆಗುತ್ತಿಲ್ಲ. ಇನ್ನು ವಿವಿಧ ಜಿಲ್ಲೆಗಳಿಂದ‌ ಬರುವವರಿಗೆಲ್ಲ ಟೆಸ್ಟ್ ಮಾಡುವುದು ಕಷ್ಟಸಾಧ್ಯ. ಸರ್ಕಾರ ಈ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಕಾದು ನೋಡಬೇಕು.
Youtube Video

ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದು, ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈವರೆಗೂ ಕೇಂದ್ರದಿಂದ ರಾಜ್ಯಗಳಿಗೆ 25.60 ಕೋಟಿ ಡೋಸ್ ಹಂಚಿಕೆಯಾಗಿದೆ. ಈವರೆಗೂ 24.44 ಕೋಟಿ ಡೋಸ್ ಬಳಕೆಯಾಗಿದೆ. ರಾಜ್ಯಗಳಲ್ಲಿ ಸದ್ಯ 1.17 ಕೋಟಿ ಡೋಸ್ ಬಳಕೆಗೆ ಲಭ್ಯವಿದೆ. ಇನ್ನು ಮೂರು ದಿನಗಳಲ್ಲಿ 38 ಲಕ್ಷ ಡೋಸ್ ಹಂಚಿಕೆಯಾಗಕಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 11, 2021, 8:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories