BBMP Failure: ಜನರ ಮನೆ ಬಾಗಿಲಿಗೆ ಬರಬೇಕಿದ್ದ ವೈದ್ಯರು ನಾಪತ್ತೆ, ಎರಡೇ ವಾರಕ್ಕೆ ಹಳ್ಳ ಹಿಡಿದ ಬಿಬಿಎಂಪಿ ಯೋಜನೆ..ಮೂರನೇ ಅಲೆ ಬಂದ್ರೆ ಬೆಂಗ್ಳೂರಿಗರ ಗತಿ ಏನು?

Doctors at your Doorstep: ಈ ಯೋಜನೆಯ ಉದ್ದೇಶ ವೈದ್ಯರು  ಮನೆ ಬಾಗಿಲಿಗೆ ಹೋಗಿ ಜನರ ಕೊರೋನಾ ಮತ್ತು ಕೊರೋನೇತರ ಆರೋಗ್ಯದ ಮಾಹಿತಿಯನ್ನು ಕಲೆಹಾಕುವುದು. ಇದಕ್ಕಾಗಿ ತಂಡಗಳನ್ನು ರಚನೆ ಮಾಡಿದ್ದ ಬಿಬಿಎಂಪಿ ಪ್ರತಿ ವಾರ್ಡ್ ನಲ್ಲಿಯೂ ವೈದ್ಯರಿಂದ ರೌಂಡ್ಸ್ ಹೊಡೆಯುವಂತೆ ಸೂಚಿಸಿದ್ರು. ಈ ಒಂದು ತಂಡ ಕನಿಷ್ಟ ಅಂದರು 50 ಮನೆಗಳಿಗೆ ವಿಸಿಟ್ ಕೊಡಬೇಕು. ಕೊರೊನಾ ರೋಗ ಲಕ್ಷಣ ಇರುವ ಮನೆಗಳಲ್ಲಿನ ಜನರಿಗೆ ಟೆಸ್ಟ್ ಮಾಡಿ ವ್ಯಾಕ್ಸಿನ್ ಬಗ್ಗೆಯೂ ಮಾಹಿತಿ ಪಡೆಯಬೇಕು.

ಬಿಬಿಎಂಪಿ ಕೇಂದ್ರ ಕಚೇರಿ

ಬಿಬಿಎಂಪಿ ಕೇಂದ್ರ ಕಚೇರಿ

  • Share this:
BBMP in Covid Management: ಸಾರ್ವಜನಿಕರಿಗೆ ಅನುಕೂಲವಾಗ್ಲಿ ಅಂತ ಸರ್ಕಾರ ಒಂದಲ್ಲಾ ಒಂದು ಯೋಜನೆಗಳನ್ನ ಜಾರಿಗೆ ತರುತ್ತಲೇ ಇರುತ್ತೆ. ಆದ್ರೆ ಆ ಯೋಜನೆ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಅಂತ ಯಾರೂ ಗಮನ ಹರಿಸಲ್ಲ. ಅದ್ರಿಂದ ಕೆಲವೊಂದು ಯೋಜನೆಗಳು ಹಳ್ಳ ಹಿಡಿಯೋದು ಗ್ಯಾರಂಟಿ. ಸದ್ಯ ಹಳ್ಳ ಹಿಡಿಯುತ್ತಿರೋ ಯೋಜನೆ ಯಾವುದು ಅಂದ್ರೆ ಬಿಬಿಎಂಪಿ ಇತ್ತೀಚೆಗೆ ಕೈಗೊಂಡ ಮನೆ ಬಾಗಿಲಿಗೆ ಕಾರ್ಪೋರೇಷನ್ ವೈದ್ಯರ ನಡೆ (Doctors at your doorstep) ಎಂಬ ಯೋಜನೆ ಅಟ್ಟರ್ ಫ್ಲಾಪ್ ಆಗಿದೆ. ಕೊರೋನಾ ತಡೆಗಟ್ಟಲು ಬಿಬಿಎಂಪಿ ಕೈಗೊಂಡಿದ್ದ ವಿಶೇಷ ಯೋಜನೆ ಆಮೆ ನಡಿಗೆಯಲ್ಲಿ ಸಾಗಿದೆ. ಸಾರ್ವಜನಿಕರಿಗೆ  ಅನುಕೂಲವಾಗಲಿ ಅಂತ ಕಂದಾಯ ಸಚಿವ ಆರ್. ಅಶೋಕ್ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅನ್ನೋ ಯೋಜನೆಯನ್ನ ಜಾರಿಗೆ ತಂದ್ರು. ಅದಕ್ಕೆ ಅದ್ದೂರಿ ರೆಸ್ಪಾನ್ಸ್ ಸಿಕ್ಕಿ ಜನರಿಗೂ ಕೂಡಾ ಅನುಕೂಲವಾಗ್ತಿತ್ತು. ಆದರೆ, ಕೊರೋನಾ ನೆಪದಲ್ಲಿ ಕೇವಲ ಎರಡೇ ವಾರಕ್ಕೆ ಈ ಯೋಜನೆ ಶಾಶ್ವತವಾಗಿ ಮುಚ್ಚಿಹೋಗುಂತೆ ಆಯ್ತು.

ಅದಾದ ಬಳಿಕ ಇದೇ ಸಚಿವ ಅಶೋಕ್ ಗೆ ಬೆಂಗಳೂರು ಕೊರೋನಾ ಉಸ್ತುವಾರಿ ಜವಾಬ್ದಾರಿ ಯನ್ನ ನೀಡಲಾಯ್ತು. ಆಗಸ್ಟ್ 16 ರಂದು ಮನೆಬಾಗಿಲಿಗೆ ಕಾರ್ಪೋರೇಷನ್ ವೈದ್ಯರ ನಡೆ ಅನ್ನೋ ಯೋಜನೆಯನ್ನ ಜಾರಿಗೆ ತಂದರು. ಇದೂ ಕೂಡ ಬಹುತೇಕ ಹಳ್ಳ ಹಿಡಿದಂತಿದೆ.

ಈ ಯೋಜನೆಯ ಉದ್ದೇಶ ವೈದ್ಯರು  ಮನೆ ಬಾಗಿಲಿಗೆ ಹೋಗಿ ಜನರ ಕೊರೋನಾ ಮತ್ತು ಕೊರೋನೇತರ ಆರೋಗ್ಯದ ಮಾಹಿತಿಯನ್ನು ಕಲೆಹಾಕುವುದು. ಇದಕ್ಕಾಗಿ ತಂಡಗಳನ್ನು ರಚನೆ ಮಾಡಿದ್ದ ಬಿಬಿಎಂಪಿ ಪ್ರತಿ ವಾರ್ಡ್ ನಲ್ಲಿಯೂ ವೈದ್ಯರಿಂದ ರೌಂಡ್ಸ್ ಹೊಡೆಯುವಂತೆ ಸೂಚಿಸಿದ್ರು. ಈ ಒಂದು ತಂಡ ಕನಿಷ್ಟ ಅಂದರು 50 ಮನೆಗಳಿಗೆ ವಿಸಿಟ್ ಕೊಡಬೇಕು. ಕೊರೊನಾ ರೋಗ ಲಕ್ಷಣ ಇರುವ ಮನೆಗಳಲ್ಲಿನ ಜನರಿಗೆ ಟೆಸ್ಟ್ ಮಾಡಿ ವ್ಯಾಕ್ಸಿನ್ ಬಗ್ಗೆಯೂ ಮಾಹಿತಿ ಪಡೆಯಬೇಕು.

ಇದನ್ನೂ ಓದಿ: covid vaccine near me; ಕೋವಿಡ್ ಲಸಿಕೆ ಎಲ್ಲಿ ಸಿಗುತ್ತದೆ ಎಂದು ತಿಳಿಯಬೇಕೇ? ಹೀಗೆ ಸರ್ಚ್ ಮಾಡಿ!

ಪ್ರತೀ ತಂಡದಲ್ಲಿ ಒಬ್ಬ ವೈದ್ಯಾಧಿಕಾರಿ (ಎಂ.ಬಿ.ಬಿ.ಎಸ್ / ಬಿ.ಡಿ.ಎಸ್ /ಆಯುಷ್) ಮತ್ತು ಅರೆವೈದ್ಯಕೀಯ  ಸಿಬ್ಬಂದಿ ಇರಲಿದ್ದಾರೆ. ವಾಹನಗಳ ನಿಯೋಜನೆ  ಕೂಡಾ ಮಾಡಲಾಗಿದೆ. ಪ್ರತಿ ದಿನ 50 ಸಾವಿರ ಮನೆಗೆ ಭೇಟಿ ನೀಡೋ ಟಾರ್ಗೆಟ್ ಇತ್ತು. ಆದರೆ 15 ದಿನವಾದ್ರು ಕೇವಲ ಒಂದು ಲಕ್ಷ ಗುರಿ ಕೂಡಾ ದಾಟೋದಕ್ಕೆ ಸಾಧ್ಯವಾಗ್ತಿಲ್ಲ. ಸದ್ಯ ಪಾಲಿಕೆ‌ ಹೆಚ್ಚು ಕಮ್ಮಿ ಈ 15 ದಿನಗಳಲ್ಲಿ ಒಂದೂವರೆ ಲಕ್ಷ ಮನೆಗಳನ್ನಷ್ಟೇ ಭೇಟಿ ಮಾಡಿದೆ.

ಯೋಜನೆ ಯಶಸ್ವಿಯಾಗಿ ನಡೀತಿದೆ ಎನ್ನುತ್ತಿರುವ ಪಾಲಿಕೆ: ಆದರೆ ಈ ಬಗ್ಗೆ ಬಿಬಿಎಂಪಿಯನ್ನು ಕೇಳಿದರೆ ಅವರ ವರಸೆಯೇ ಬೇರೆ ಇದೆ. ಯೋಜನೆ ಗಳ್ಳ ಹಿಡಿದಿಲ್ಲ. ಕೇವಲ 15 ದಿನದಲ್ಲೇ ಪಾಲಿಕೆ ಸುಮಾರು‌ 4 ಲಕ್ಷ ಮನೆಗಳಿಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿದೆ ಅಂತಿದೆ. ಅಲ್ದೆ ಉಳಿದರುವ ಒಂದೂವರೆ ತಿಂಗಳಿನಲ್ಲಿ ನಿಗದಿ ಪಡಿಸಲಾದ 10 ಲಕ್ಷ ಮನೆಗಳಿಗೆ ಭೇಟಿಕೊಡುವ ಉದ್ದೇಶ ಈಡೇರಲಿದೆ ಅಂತಿದೆ.

ಕೊರೋನಾ ನಿಯಂತ್ರಣಕ್ಕೆ ತರಲು ಮತ್ತು ದೂರ ದೃಷ್ಟಿಯಿಂದ ಮುಂದೇನಾದರು ಇದೇ ಮಾದರಿಯ ಸೋಂಕು ಪ್ರಬಲವಾಗಿ ಹರಡುವ ಪರಿಸ್ಥಿತಿ ನಿರ್ಮಾಣವಾದರೆ ನಗರದ ಜನರ ಕುರಿತಾದ ಮಾಹಿತಿ ಒಂದ್ಕಡೆ ಸಿಗಲಿ ಎಂಬ ಕಾರಣಕ್ಕೆ ಈ ಯೋಜನೆಯನ್ನು ಮಾಡಲಾಗಿದೆ. ಆದರೆ ಯೋಜನೆ ಶುರುವಾದ 15 ದಿನಗಳಿಗೇ ಕಾರ್ಯಕ್ರಮ ಹಳ್ಳ ಹಿಡಿದು ಹೋಗಿದೆ. ಇದರ ಜೊತೆಗೆ ಮನೆ ಮನೆ ಭೇಟಿಯ ಸಮಯದಲ್ಲಿ ಕೊರೋನಾ ಸೋಂಕಿತರು ಪತ್ತೆಯಾದ್ರೆ.  ತಕ್ಷಣ  ಹೋಂ ಐಸೋಲೇಷನ್ ಕಿಟ್ ನೀಡಿ. ಅವರ ಆರೋಗ್ಯ ಕಡೆ ಗಮನ ಹರಿಸಿ ಸೋಂಕಿತರಿಗೆ ಬೇಕಾದ ವ್ಯವಸ್ಥೆಯನ್ನ ಸ್ಥಳದಲ್ಲೇ ಮಾಡುವುದು ಕೂಡ ಈ ಯೋಜನೆಯ ಉದ್ದೇಶವಾಗಿದೆ.
Published by:Soumya KN
First published: