Mask Must: ಮಾಸ್ಕ್ ಹಾಕೊಳ್ಳಿ, ದೂರ ನಿಂತ್ಕೊಳ್ಳಿ! ಮೇ 2ರಿಂದ ಬೆಂಗಳೂರಲ್ಲಿ 'ದಂಡಂ' ದಶಗುಣಂ!

ಈ ಬಾರಿ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಬಿಬಿಎಂಪಿ, ಮಾಸ್ಕ್ ಹಾಕದವರ ಮೇಲೆ ಮತ್ತೆ ದಂಡ ವಿಧಿಸಲು ನಿರ್ಧಾರ ಮಾಡಿದೆ. ಸೋಮವಾರದಿಂದಲೇ ಅಂದರೆ ಮೇ 2ರಿಂದಲೇ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮಾಸ್ಕ್ ಧರಿಸದೇ ಇದ್ದರೆ 25 ರೂಪಾಯಿ ದಂಡ ವಿಧಿಸಲಾಗುತ್ತದೆ.

ಮಾಸ್ಕ್ ತಪಾಸಣೆಯ ಸಂಗ್ರಹ ದೃಶ್ಯ

ಮಾಸ್ಕ್ ತಪಾಸಣೆಯ ಸಂಗ್ರಹ ದೃಶ್ಯ

  • Share this:
ಬೆಂಗಳೂರು:  ಕೋವಿಡ್ ಪ್ರಕರಣಗಳ (Covid Case) ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಚೀನಾ (China) ಸೇರಿದಂತೆ ಹಲವು ದೇಶಗಳಲ್ಲಿ ಮತ್ತೆ ನಿಧಾನಕ್ಕೆ ಲಾಕ್‌ ಡೌನ್ (Lockdown) ಘೋಷಣೆಯಾಗುತ್ತಿದೆ. ದೆಹಲಿ (Delhi), ಕೇರಳ (Kerala) ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ (Corona) ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಸಭೆ ನಡೆಸಿದ ಸಿಎಂ (CM) ಬಸವರಾಜ ಬೊಮ್ಮಾಯಿ (Basavaraj Bommai), ಮಾಸ್ಕ್ ಕಡ್ಡಾಯಗೊಳಿಸಿ (Mask Compulsory) ಆದೇಶಿಸಿದ್ದಾರೆ. ಇನ್ನು ಬೆಂಗಳೂರಲ್ಲಿ (Bengaluru) ಈ ಬಾರಿ ಮುಂಜಾಗ್ರತಾ ಕ್ರಮ (Precautionary measures) ಕೈಗೊಂಡಿರುವ ಬಿಬಿಎಂಪಿ (BBMP), ಸೋಮವಾರ ಅಂದರೆ ಮೇ 2ರಿಂದ ಮಾಸ್ಕ್ ಕಡ್ಡಾಯ  ಮಾಡಿದ್ದು, ಮಾಸ್ಕ್ ಹಾಕದೇ ಇದ್ದರೆ 250 ರೂಪಾಯಿ ದಂಡ (Fine) ವಿಧಿಸಲು ಆದೇಶಿಸಿದೆ.

ಮಾಸ್ಕ್ ಹಾಕದೇ ಇದ್ದರೆ 250 ರೂಪಾಯಿ ದಂಡ

ಪ್ರತಿ ಸಲ ಕೋವಿಡ್ ಸೋಂಕು ಉಲ್ಬಣವಾದಾಗ ಬೆಂಗಳೂರಲ್ಲಿ ಕಂಟ್ರೋಲ್ ತಪ್ಪುತ್ತದೆ. ಹೀಗಾಗಿ ಈ ಬಾರಿ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಬಿಬಿಎಂಪಿ, ಮಾಸ್ಕ್ ಹಾಕದವರ ಮೇಲೆ ಮತ್ತೆ ದಂಡ ವಿಧಿಸಲು ನಿರ್ಧಾರ ಮಾಡಿದೆ. ಸೋಮವಾರದಿಂದಲೇ ಅಂದರೆ ಮೇ 2ರಿಂದಲೇ ಮಾಸ್ಕ್ ಕಡ್ಡಾಯಗೊಳಿಸಿದ್ದು, ಮಾಸ್ಕ್ ಧರಿಸದೇ ಇದ್ದರೆ 25 ರೂಪಾಯಿ ದಂಡ ವಿಧಿಸಲಾಗುತ್ತದೆ.

 ವಿಶೇಷ ಆಯುಕ್ತರಿಂದ ಮಾಹಿತಿ

ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್‌ ಚಂದ್ರ, ನಗರದಲ್ಲಿ ಗಣನೀಯವಾಗಿ ಕೋವಿಡ್‌(Covid-19) ಸೋಂಕು ಏರಿಕೆಯಾಗುತ್ತಿದ್ದು, ಕಳೆದೊಂದು ವಾರದಿಂದ ನಗರದ ಸೋಂಕಿತರ ಪತ್ತೆ ಪ್ರಮಾಣ ಸರಾಸರಿ 90ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಮಾರ್ಷಲ್‌ಗಳು ಮಾರುಕಟ್ಟೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿ ಎಲ್ಲ ಜನನಿಬಿಡ ಸ್ಥಳದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮೇ 2 ರಿಂದ ಮಾಸ್ಕ್‌ ಧರಿಸದವರಿಗೆ ತಲಾ 250 ರು. ದಂಡ ವಿಧಿಸುವ ನಿಯಮ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 ಇದನ್ನೂ ಓದಿ: Booster Dose: ಕೋವಿಡ್ 4ನೇ ಅಲೆ ಆತಂಕದ ಮಧ್ಯೆ ಮತ್ತೊಂದು ಶಾಕ್, ಬೆಂಗಳೂರಿನಲ್ಲಿ ಸಿಗುತ್ತಿಲ್ಲ ಬೂಸ್ಟರ್ ಡೋಸ್!

 ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ

ಬೆಂಗಳೂರಿನ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಹೊರ ರಾಜ್ಯದಿಂದ ಬರುವ ವಾಹನ ಸವಾರರ ತಪಾಸಣೆ  ಜೊತೆಗೆ ಸಾಮಾಜಿಕ ಅಂತರದ ಬಗ್ಗೆ ಮನವರಿಕೆ  ಮಾಡಿಕೊಡಲಾಗುತ್ತದೆ. ಅದೇ ರೀತಿ ಕೈಗಾರಿಕಾ ಪ್ರದೇಶಗಳಲ್ಲಿ ರ್ಯಾಂಡಂ ಆಗಿ ಕರೋನಾ ಟೆಸ್ಟಿಂಗ್ ನಡೆಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸೂಚನೆ ನೀಡಿದ್ದಾರೆ.

ಟೆಸ್ಟಿಂಗ್ ಟ್ರೇಸಿಂಗ್ ಮೊರೆ ಹೋದ ಸರ್ಕಾರ

ಕೊರೊನಾ ನಾಲ್ಕನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಟೆಸ್ಟಿಂಗ್ ಟ್ರೇಸಿಂಗ್ ಟ್ರೀಟ್ಮೆಂಟ್ ಮೊರೆ ಹೋಗಿದೆ. ಬೆಂಗಳೂರು ನಗರದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಳ‌ ಮಾಡಲು ಸೂಚನೆ ನೀಡಲಾಗಿದೆ. ಒಂದನೇ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಟೆಸ್ಟ್ ಗಳನ್ನು ಮಾಡಲಾಗುತ್ತಿತ್ತು, ಆದರೆ ಮೂರನೆ ಅಲೆಯ ಕೇಸ್ ಗಳು ಕಡಿಮೆಯಾದ ಹಿನ್ನೆಲೆ ಟೆಸ್ಟಿಂಗ್ ಸಂಖ್ಯೆ ಕಡಿಮೆಗೊಳಿಸಲಾಗಿತ್ತು. ಇದೀಗ ಆದ್ರೀಗ ಮತ್ತೆ ರ್ಯಾಡಂ ಟೆಸ್ಟಿಂಗ್ ಮೊರೆ ಹೋಗಲಾಗಿದೆ.

ಎಲ್ಲೆಲ್ಲಿ ನಡೆಯಲಿದೆ ಟೆಸ್ಟಿಂಗ್?

ಬೆಂಗಳೂರು ನಗರ ಜಿಲ್ಲೆಯ 36 ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್ ನಡೆಸಲು ಸೂಚನೆ ನೀಡಲಾಗಿದೆ. ಮೂರು ತಾಲೂಕು ಆಸ್ಪತ್ರೆ, ಮೂರು ಪಿಹೆಚ್ ಸಿ ಗಳಲ್ಲಿಯೂ ಟೆಸ್ಟಿಂಗ್ ಹೆಚ್ಚಿಸಲು ಸೂಚನೆ  ನೀಡಲಾಗಿದ್ದು, ಬೇರೆ ರಾಜ್ಯಗಳಿಂದ ಬರುವವರ ಮೇಲೆ ಜಿಲ್ಲಾಡಳಿತದ ಕಣ್ಣಿಟ್ಟಿದೆ. ಇನ್ನು ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿಯೂ ರ್ಯಾಡಂ ಟೆಸ್ಟಿಂಗ್  ನಡೆಯಲಿದೆ. ಜೊತೆಗೆ ಪೀಣ್ಯ ಇಂಡಸ್ಟ್ರಿ, ಅತ್ತಿಬೆಲೆ ಇಂಡಸ್ಟ್ರಿ ಕಾರ್ಮಿಕರಿಗೆ ರ್ಯಾಡಂ ಕೋರೊನಾ  ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Covid Vaccine: ನೀವು ಲಸಿಕೆ ಹಾಕಿಸಿಕೊಂಡಿದ್ದೀರಿ, ಆದ್ರೆ ಪಕ್ಕದವನಿಗೆ ಇನ್ನೂ ವ್ಯಾಕ್ಸಿನೇಷನ್ ಆಗಿಲ್ಲ; ಹಾಗಿದ್ರೆ ನಿಮಗೇ ಅಪಾಯ!

 ನಿಯಮ ಪಾಲನೆ ಕಡ್ಡಾಯ

ಕೋವಿಡ್‌ ನಿಯಮಗಳಾದ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್‌ ಅಳವಡಿಕೆ ಹಾಗೂ ಥರ್ಮಲ್‌ ಸ್ಟ್ರೀನಿಂಗ್‌ ಮಾಡುವುದನ್ನು ನಿಲ್ಲಿಸುವಂತೆ ಪಾಲಿಕೆಯಿಂದ ಸೂಚಿಸಿಲ್ಲ. ನಗರದ ಎಲ್ಲ ಶಾಪಿಂಗ್‌ ಮಾಲ್‌ಗಳು, ಸೂಪರ್‌ ಮಾರ್ಕೆಟ್‌ಗಳು, ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ ಮತ್ತು ಎಲ್ಲ ಮಾರುಕಟ್ಟೆಗಳಲ್ಲಿ ಮಾಸ್‌್ಕ ಧರಿಸುವುದು ಪುನಃ ಕಡ್ಡಾಯಗೊಳಿಸಲಾಗುತ್ತದೆ. ಈಗಾಗಲೇ ಮಾರ್ಷಲ್‌ಗಳು ಎಲ್ಲೆಡೆ ಭೇಟಿ ನೀಡಿ ಸರ್ಕಾರದ ಆದೇಶವನ್ನು ತೋರಿಸಿ ಸೂಚನೆ ನೀಡುತ್ತಿದ್ದಾರೆ.
Published by:Annappa Achari
First published: