ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಒಂದಿಲ್ಲೊಂದು ಎಡವಟ್ಟು ಮಾಡ್ತಾನೇ ಇರ್ತಾರೆ. ಅದ್ರ ಸಾಲಿಗೆ ಈಗ ಕೊರೊನಾ ಸಾವಿನ ಲೆಕ್ಕವೂ ಸೇರಿಕೊಂಡಿದೆ. ಸಾವಿನಲ್ಲೂ ರಾಮನ ಲೆಕ್ಕ ಒಂದಾದ್ರೆ ಕೃಷ್ಣನ ಲೆಕ್ಕಾ ತೋರಿಸುತ್ತಿದೆಯಾ? ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆಗಳನ್ನೇ ಮುಚ್ಚಿಟ್ಟಿದೆ. ಈ ಕುರಿತು ವರದಿ ಇಲ್ಲಿದೆ. ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಲೆಕ್ಕವಿಲ್ಲದಷ್ಟು ಜನ ಮಹಾಮಾರಿಗೆ ಬಲಿಯಾಗಿದ್ದಾರೆ.
ನಗರದಲ್ಲಿರುವ ಒಂದೊಂದು ಚಿತಾಗಾರದಲ್ಲೂ ರಾಶಿ ರಾಶಿ ಹೆಣಗಳನ್ನು ಸುಡ್ತಾ ಇರೋ ದೃಶ್ಯಗಳು ನೋಡುಗರ ಕರುಳು ಚುರುಕ್ ಅನಿಸಿದ್ದಂತೂ ಸುಳ್ಳಲ್ಲ. ಸತ್ತ ಸೋಂಕಿತರ ಮುಖ ನೋಡದೇ ಗೋಳಾಡುತ್ತಿದ್ದ ಕುಟುಂಬಸ್ಥರ ಆಕ್ರಂದನ ಎಂತವರ ಕಣ್ಣಲ್ಲೂ ನೀರು ಬರುವಂತೆ ಮಾಡಿದ್ದಂತೂ ಸತ್ಯ. ಅತ್ತ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಕಾಲಕ್ಕೆ ಸಿಗದೇ ಇದ್ದುದ್ದು ಒಂದು ಕಡೆಯಾದ್ರೆ, ಇತ್ತ ನಿತ್ಯ ಎಷ್ಟು ಜನ ಕೊರೊನಾಗೆ ಬಲಿಯಾಗುತ್ತಿದ್ದಾರೆ ಎಂಬ ಸತ್ಯವನ್ನೇ ಮುಚ್ಚಿಟ್ಟಿದೆ ಸರ್ಕಾರ ಅನ್ನೋದನ್ನ ವಿಪಕ್ಷಗಳು ಸದಾ ಕಾಲ ಆರೋಪ ಮಾಡುತ್ತಲೇ ಇದ್ದರು.
ಆರೋಗ್ಯ ಸಚಿವ ಸುಧಾಕರ್ ಮಾತ್ರ ನಾವು ಯಾವ ಲೆಕ್ಕವನ್ನೂ ಮುಚ್ಚಿಟ್ಟಿಲ್ಲ ಎಂಬ ಹೇಳಿಕೆಯನ್ನ ದಿನಕ್ಕೊಂದು ಕಡೆಯಾದ್ರು ಜಪಿಸುತ್ತಿದ್ರು. ಆದ್ರೆ ಇದೀಗ ಆರ್ಟಿಐ ನಲ್ಲಿ ಸಿಕ್ಕ ಮಾಹಿತಿಯಂತೆ ಎಲ್ಲವೂ ರಾಮನಿಗೊಂದು ಲೆಕ್ಕ ಕೃಷ್ಣನಿಗೊಂದು ಲೆಕ್ಕ ಎಂಬ ಸತ್ಯ ಬಹಿರಂಗವಾಗಿದೆ. ಹಾಗಾದ್ರೆ ಯಾವ್ಯಾವ ವಾರ್ಡ್ ನಲ್ಲಿ ಎಷ್ಟೆಷ್ಟು ಸಾವಾಗಿತ್ತು ಅನ್ನೋದನ್ನ ನೋಡೋದಾದ್ರೆ.
ವಾರ್ಡ್ವಾರು ಕೋವಿಡ್ ಸಾವಿನ ಲೆಕ್ಕ
- ಜಯನಗರ- 230
- ಶಾಂತಲಾ ನಗರ -216
- HSR ಬಡಾವಣೆ - 209
- BTM ಬಡಾವಣೆ - 209
- ಆರ್.ಆರ್ ನಗರ - 194
- ಬೆಳ್ಳಂದೂರು - 183
- ವಿದ್ಯಾರಣ್ಯಪುರ - 177
- ಕೆಂಪೇಗೌಡ ವಾರ್ಡ್ - 168
- ಹೊರಮಾವು - 151
ಸೇರಿದಂತೆ ನಗರದ 198 ವಾರ್ಡ್ ನಲ್ಲಿ ಸಾವಿನ ಸಂಖ್ಯೆ ಸಂಪೂರ್ಣ ಆಧಾರ ದಾಖಲೆಗಳಲ್ಲೇ ಧೃಡವಾಗಿದೆ. ಈ ಎಲ್ಲಾ ದಾಖಲೆಗಳ ಆಧಾರದ ಪ್ರಕಾರ ಡೆತ್ ರೇಟ್ ನಲ್ಲಿ ಜಯನಗರ ಒಟ್ಟು 230 ಸಾವುಗಳೊಂದಿಗೆ ಮೊದಲ ಸ್ಐಆನದಲ್ಲಿ ಜನ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನು ಶಾಂತಲಾ ನಗರ 216 ಜನ, - ಹೆಚ್ಎಸ್ಆರ್ ಲೇಔಟ್ ಹಾಗೂ ಬಿಟಿಎಂ ಲೇಔಟ್ ನಲ್ಲಿ 209 ಜನರ ಸಾವಾಗಿದೆ. ಇದ್ರ ಆಧಾರವಾಗಿಟ್ಟುಕೊಂಡು ಬಿಬಿಎಂಪಿ ನಿತ್ಯದ ಬುಲಿಟಿನ್ ಪ್ರಕಾರ ಮಾರ್ಚ್ 1 2020 ರಿಂದ ಜುಲೈ 15, 2021ರವರೆಗೆ ಬೆಂಗಳೂರಿನಲ್ಲಿ 15,772 ಜನ ಸಾವನ್ನಪ್ಪಿದ್ದಾರೆ.
ಆದರೆ ಮಾಹಿತಿ ಹಕ್ಕು ಕಾಯ್ದೆಗೆ ನೀಡಿರುವ ಮಾಹಿತಿ ಪ್ರಕಾರ 13,933 ಜನ ಸಾವನ್ನಪ್ಪಿದ್ದಾರೆ. ಒಟ್ಟು 1839 ಜನರ ಸಾವಿನ ಲೆಕ್ಕದಲ್ಲಿ ವ್ಯತ್ಯಾಸವಾಗಿದೆ. ಸಾವಿನ ಲೆಕ್ಕವನ್ನೂ ಅಧಿಕಾರಿಗಳು ಸರಿಯಾಗಿ ನೀಡದೇ ಕಳ್ಳಾಟ ಮಾಡಿದ್ದಾರೆ ಅನ್ನೋದು ಇದರಿಂದ ಬಟಾ ಬಯಲಾಗಿದೆ. ಅಷ್ಟೆ ಅಲ್ಲ ನಾವಿನ ಲೆಕ್ಕದಲ್ಲಿ ಸುಳ್ಳು ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಇದಕ್ಕೆ ಬಿಬಿಎಂಪಿ ಕಮಿಷಿನರ್ ಕೊಡುವ ಸಮಜಾಯಿಷಿ ಬೇರೆ ಇದೆ.
ಇದನ್ನೂ ಓದಿ: Pulses Prices Rise: ಗ್ಯಾಸ್ ಬೆಲೆ ಏರಿಕೆ ಬೆನ್ನಲ್ಲೇ ಬೇಳೆ-ಕಾಳುಗಳು ಮತ್ತಷ್ಟು ದುಬಾರಿ.. ಯಾವುದು ಎಷ್ಟು ರೇಟು?
ಮಾಹಿತಿ ಆಧಾರದ ಮೇಲೆ ಸಾವಿನ ಸಂಖ್ಯೆ ದಾಖಲು ಮಾಡುವ ಸಂದರ್ಭದಲ್ಲಿ ವ್ಯತ್ಯಾಸವಾಗಿರಬಹುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಪ್ರತಿಕ್ರಿಯೆ ನೀಡುತ್ತಾರೆ.ಒಟ್ಟಿನಲ್ಲಿ ಪದೇ ಪದೇ ವಿರೋಧ ಪಕ್ಷಗಳು ಸಾವಿನ ಲೆಕ್ಕ ಸರ್ಕಾರ ಮುಚ್ಚಿಟ್ಟಿದೆ ಅಂತ ಆರೋಪ ಮಾಡುತ್ತಿದ್ದ ಬೆನ್ನಲ್ಲೇ ಇದೀಗ ಕೊರೊನಾ ಸಾವಿನ ಅಧಿಕೃತ ಲೆಕ್ಕ ಲಭ್ಯವಾಗಿದೆ. ಆದ್ರೆ ನಿತ್ಯದ ಬುಲಿಟಿನ್ಗೂ ಆರ್ಟಿಐ ಮಾಹಿತಿಗೂ ದೊಡ್ಡ ಮಟ್ಟದ ವ್ಯತ್ಯಾಸ ಕಂಡು ಬಂದಿರೋದು ಯಾಕೆ? ಇದ್ರಿಂದ ಪಾಲಿಕೆಗೆ ಏನು ಲಾಭ ಅನ್ನೋದು ಸದ್ಯ ಕಾಡ್ತಿರೋ ಪ್ರಶ್ನೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ