Omicron Virus: ಬಿಬಿಎಂಪಿ ಹೈ ಅಲರ್ಟ್; ಮೊಬೈಲ್ ಟೆಸ್ಟಿಂಗ್ ಸೆಂಟರ್ ಪುನಾರಂಭ; ಸದ್ಯ ಲಾಕ್​ಡೌನ್ ಇಲ್ಲ

Coronavirus Danger- ಕೋವಿಡ್ನ ಹೊಸ ತಳಿ ಒಮಿಕ್ರಾನ್ ವೈರಸ್ ದಿನೇ ದಿನೇ ತನ್ನ ಕಬಂಧಬಾಹುಗಳನ್ನ ಹೆಚ್ಚೆಚ್ಚು ಚಾಚತೊಡಗಿದೆ. ಒಟ್ಟು 14 ದೇಶಗಳಿಗೆ ಈಗಾಗಲೇ ವಕ್ಕರಿಸದ್ದು, ಇದೀಗ ಗಾರ್ಡನ್ ಸಿಟಿಗೆ ಕಂಟವಾಗಲಿದೆಯಾ ಅನ್ನೋ ಭೀತಿ ಶುರುವಾಗಿದೆ.

ಕೊರೊನಾ ವೈರಸ್ ಸಾಂದರ್ಭಿಕ ಚಿತ್ರ

ಕೊರೊನಾ ವೈರಸ್ ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು, ನ. 30: ಕೊರೋನಾದ ಹೊಸ ತಳಿ (New mutation of Coronavirus) ಇದೀಗ ಮತ್ತೆ ಬಲಾಢ್ಯ ರಾಷ್ಟಗಳನ್ನ ಗಢಗಢ ನಡುಗಿಸುವಂತೆ ಮಾಡಿದೆ. 14 ರಾಷ್ಟಗಳಿಗೆ ಒಮೈಕ್ರಾನ್ ವೈರಸ್ (Omicron virus) ವಕ್ಕರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಒಂದು ಕಡೆ ಚಿಂತೆಗೆ ಬಿದ್ದಿದ್ದರೆ ಇತ್ತ ಬಿಬಿಎಂಪಿ ಆಗಲೇ ಫಿಲ್ಡಿಗಿಳಿದು ಮೂರನೇ ಅಲೆ ಬರೆದಂತೆ ತಡೆಯಲು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ (Health Minister Dr. Sudhakar) ನಾಳೆ (Dec 1st) ಮಹತ್ವದ ಸಭೆಯನ್ನೂ ನಡೆಸಲಿದ್ದಾರೆ.

ಹೊಸ ಅವತಾರದಲ್ಲಿ ವಕ್ಕರಿಸಿದ ಕೊರೋನಾ.. ಒಮಿಕ್ರಾನ್ ಕಂಟಕ:

ದಕ್ಷಿಣ ಆಫ್ರಿಕಾದಿಂದ 95 ಪ್ರಯಾಣಿಕರು ರಾಜಧಾನಿಗೆ ಕಾಲಿರಿಸಿದ್ದು, ಅವರುಗಳಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಎಂದು ದೃಢವಾಗಿದೆ. ಈ ಮೂಲಕ ಸರ್ಕಾರಗಳಿಗೂ ತಲೆ ನೋವು ಶುರುವಾಗಿದೆ. ಪಾಸಿಟಿವ್ ಬಂದಿರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಸ್ಯಾಂಪಲ್​ಗಳನ್ನ ಜೆನೆಮಿಕ್ ಸೀಕ್ವೆನ್ಸಿಂಗ್​ಗೆ ಕಳಸಲಾಗಿದೆ. ಇನ್ನು, ಇವರ ಪ್ರೈಮರಿ, ಸೆಕೆಂಡರಿ ಕಾಂಟ್ಯಾಕ್ಟ್ ವ್ಯಕ್ತಿಗಳ ಸ್ಯಾಂಪಲ್ ಟೆಸ್ಟ್ ನೆಗೆಟಿವ್ ಬಂದಿದೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ತಜ್ಞರ ಜೊತೆ ಆರೋಗ್ಯ ಸಚಿವರು ಮಹತ್ವದ ಸಭೆ:

ಹೊಸ ತಳಿ ಬಗ್ಗೆ ತಲೆ ಕೆಡಿಸಿಕೊಂಡಿರೋ ರಾಜ್ಯ ಸರ್ಕಾರ ಇದನ್ನ ಹೇಗಾದರೂ ಮಾಡಿ ರಾಜ್ಯದ ಗಡಿಯಿಂದಾಚೆಗೆ ಇಡಬೇಕೆಂದು ಸರ್ಕಾರ ಕಸರತ್ತು ನಡೆಸುತ್ತಿದೆ. ಹೀಗಾಗಿ ಆರೋಗ್ಯ ಸಚಿವರು ತಾಂತ್ರಿಕ ಸಲಹಾ ಸಮಿತಿ ಜೊತೆ ನಾಳೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವರು, ನಾಳೆ ಅಧಿಕಾರಿಗಳ ಜೊತೆ ಸುಧಿರ್ಘವಾಗಿ ಚರ್ಚೆ ಮಾಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಮಾತನಾಡಿದ್ದಾರೆ. ಅವರನ್ನು ಕೂಡ ನಾಳೆ ಸಭೆಗೆ ಕರೆದಿದ್ದೇನೆ. ಜೊತೆಗೆ ಹೊಸ ತಳಿ ಹೇಗೆ ಕೆಲಸ ಮಾಡುತ್ತೆ ಅಂತ ಡಿಸೆಂಬರ್ 1ಕ್ಕೆ ಗೊತ್ತಾಗಲಿದೆ. ಅಲ್ದೆ ಅಂತರರಾಷ್ಟ್ರೀಯ ವಿಮಾನಗಳು ರಾಜ್ಯಕ್ಕೂ ಬರ್ತಿವೆ. ಬಹಳ ಎಚ್ಚರಿಕೆಯಿಂದ ಪರೀಕ್ಷೆ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: Auto Fare Hike: ಬೆಂಗಳೂರಲ್ಲಿ ಡಿ.1ರಿಂದ ಆಟೋ ಪ್ರಯಾಣ ದುಬಾರಿ; Minimum Meter Rate ಎಷ್ಟಾಗಿದೆ ನೋಡಿ!

ಇನ್ನುಳಿದಂತೆ, ಲಾಕ್​ಡೌನ್ ಬಗ್ಗೆ ಸರ್ಕಾರ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಈಗಾಗಲೇ ಜನ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಚೇತರಿಕೆ ಕಂಡಿಲ್ಲ. ಜೊತೆಗೆ ಉದ್ಯೋಗ ಕಳೆದುಕೊಂಡಿದ್ದು, ಇನ್ನೂ ಉದ್ಯೋಗ ಸಿಗದೆ ಪರದಾಟದಲ್ಲಿದ್ದಾರೆ. ಸದ್ಯಕ್ಕೆ ಲಾಕ್​ಡೌನ್ ಇಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದರು.

ಒಮಿಕ್ರಾನ್ ಬಡಿದೋಡಿಸಲು ಬಿಬಿಎಂಪಿ ಕಸರತ್ತು:

ಇನ್ನು ಈ ಡೆಡ್ಲಿ ಒಮಿಕ್ರಾನ್​ನ ಕೆಂಗಣ್ಣು ಬೆಂಗಳೂರಿನ ಮೇಲೆ ಬೀಳದಿರಲಿ ಎಂಬ ಆಶಯದಿಂದ ಬಿಬಿಎಂಪಿ ಈಗೀಂದೀಗಲೇ ಫೀಲ್ಡಿಗಿಳಿದಿದೆ. ಎರಡನೇ ಅಲೆಯಲ್ಲಿ ನಡೆಸುತ್ತಿದ್ದ ಎಲ್ಲಾ ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ.

ಇದನ್ನೂ ಓದಿ: Stomach flu: ಪೋಷಕರೇ ಎಚ್ಚರ.. ಬೆಂಗಳೂರಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ವಿಚಿತ್ರ ಹೊಟ್ಟೆ ಜ್ವರ!

* ಮೊಬೈಲ್ ಟೆಸ್ಟಿಂಗ್ ಸೆಂಟರ್ ಪುನರಾರಂಭ
* ಮೊಬೈಲ್ ಲಸಿಕಾ ಕೇಂದ್ರಗಳ ಹೆಚ್ಚಳ
* ಕೇರಳ ವಿದ್ಯಾರ್ಥಿಗಳಿರುವ ಹಾಸ್ಟೆಲ್, ಪಿಜಿಗಳ ಮೇಲೆ ನಿಗಾ
* ಬೆಂಗಳೂರು ಗಡಿಭಾಗದಲ್ಲಿ 24X7 ಕಟ್ಟೆಚ್ಚರ
* ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಷಲ್ಸ್ ನಿಯೋಜನೆ
* ಸೋಂಕು ಪತ್ತೆಯಾದ ಮನೆ ಹಾಗೂ ವಠಾರ ತಕ್ಷಣವೇ ಸ್ಯಾನಿಟೈಸ್
* ಮನೆ ಮನೆಗೆ ತೆರಳಿ ಲಸಿಕೆ ಅಭಿಯಾನ
* ಹೋಟೇಲು, ರೆಸ್ಟೋರೆಂಟ್​ಗಳು, ಚಿತ್ರಮಂದಿರಗಳ ಸಿಬ್ಬಂದಿಗಳ ಸಂಪೂರ್ಣ ಲಸಿಕೆ ಪಡೆದಿರುವ ಬಗ್ಗೆ ಖಚಿತ ಪಡಿಸುವುದು
* ನಗರದ ರೈಲ್ವೇ ನಿಲ್ದಾಣದಲ್ಲಿ ಬೀಡುಬಿಟ್ಟಿರುವ ಪಾಲಿಕೆ ಆರೋಗ್ಯ ಸಿಬ್ಬಂದಿ
* ವಾರ್ಡ್ ಮಟ್ಟದಲ್ಲಿ ಆಟೋಗಳಿಗೆ ಧ್ವನಿ ವರ್ಧಕ ಕಟ್ಟಿ ಒಮಿಕ್ರಾನ್ ಬಗ್ಗೆ ತಿಳುವಳಿಕೆ

ಒಟ್ಟಾರೆ ದಕ್ಷಿಣ ಆಫ್ರಿಕಾದ ಈ ವೈರಸ್ ಮತ್ತೆ ಎರಡು ವರ್ಷದ ಕಹಿ ಘಟನೆ ನೆನಪು ಮಾಡ್ತಿದ್ದು, ನೊಂದು ಬೆಂದ ಜನರಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ನಾಳೆ ಸಭೆ ಬಳಿಕ ಮತ್ತೆ ಒಮಿಕ್ರಾನ್ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡುವ ಸಾಧ್ಯತೆಯೂ ಇದೆ.

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: