• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Accident: ಬಿಬಿಎಂಪಿ ಕಿಲ್ಲರ್​ ಕಸದ ಲಾರಿಗೆ ಮತ್ತೊಂದು ಬಲಿ; ಅಪಘಾತದಲ್ಲಿ ಡೆಲವರಿ ಬಾಯ್ ಸಾವು

Accident: ಬಿಬಿಎಂಪಿ ಕಿಲ್ಲರ್​ ಕಸದ ಲಾರಿಗೆ ಮತ್ತೊಂದು ಬಲಿ; ಅಪಘಾತದಲ್ಲಿ ಡೆಲವರಿ ಬಾಯ್ ಸಾವು

ಬಿಬಿಎಂಪಿ ಕಸದ ಲಾರಿ ಮತ್ತೊಂದು ಬಲಿ

ಬಿಬಿಎಂಪಿ ಕಸದ ಲಾರಿ ಮತ್ತೊಂದು ಬಲಿ

ಬೆಂಗಳೂರಲ್ಲಿ ಬಿಬಿಎಂಪಿ ಕಸದ ಲಾರಿ ಮತ್ತೊಂದು ಬಲಿ ಪಡೆದಿದೆ. ಯಮಸ್ವರೂಪಿ ಲಾರಿ ಹರಿದ ಪರಿಣಾಮ ಡೆಲವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

  • Share this:

ಬೆಂಗಳೂರು (ಮೇ 14): ಬಿಬಿಎಂಪಿ ಕಸದ ಲಾರಿ (BBMP Garbage Truck) ಮತ್ತೊಂದು ಬಲಿ ಪಡೆದಿದೆ. ಯಮಸ್ವರೂಪಿ ಲಾರಿ ಹರಿದ ಪರಿಣಾಮ ಡೆಲವರಿ ಬಾಯ್ (Delivery Boy) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಥಣಿಸಂದ್ರ (Thanisandra) ರೈಲ್ವೇ ಮೇಲ್ಸೇತುವೆ ಬಳಿ‌ ಘಟನೆ ನಡೆದಿದೆ. ಯಾದಗಿರಿಯ ಸುರಪುರ ಮೂಲದ 25 ವರ್ಷದ ದೇವಣ್ಣ ಮೃತ ದುರ್ದೈವಿಯಾಗಿದ್ದಾನೆ. ದೇವಣ್ಣ, ನಾಗವಾರದಿಂದ ಹೆಗ್ಗಡೆ ನಗರದ ಕಡೆಗೆ ಬರುತ್ತಿದ್ದ.ದೇವಣ್ಣ (Devanna) ಅವರ ಬೈಕ್​ಗೆ ಹಿಂಬದಿಯಿಂದ ಬಿಬಿಎಂಪಿ‌ ಕಸದ ಲಾರಿ ಡಿಕ್ಕಿ ಹೊಡೆದಿದೆ. ಈ ಸಂಬಂಧ ಆರೋಪಿ ಚಾಲಕ ದಿನೇಶ್ ನಾಯ್ಕ್ (40) ಎಂಬಾತನನ್ನು ಬಂಧಿಸಲಾಗಿದೆ. ಈ ಸಂಬಂಧ ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಿಬಿಎಂಪಿ ಕಸದ ಲಾರಿಗಳಿಗೆ ಇನ್ನೆಷ್ಟು ಬಲಿ ಬೇಕು ಎಂದು ಸಾರ್ವಜನಿಕರು ಹಿಡಿಶಾಪ ಹಾಕ್ತಿದ್ದಾರೆ.


2 ತಿಂಗಳಲ್ಲಿ ಕಸದ ಲಾರಿಗೆ 4 ಮಂದಿ ಬಲಿ 


ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಲ್ಲಿ ಕಿಲ್ಲರ್ ಲಾರಿಗೆ 4 ಮಂದಿ ಬಲಿಯಾಗಿದ್ದಾರೆ. ದೇವಣ್ಣ ನಾಲ್ಕನೆ ಅವ್ರು, ಈ  ಹಿಂದೆ ಮೂವರು ಕಸದ ಲಾರಿ ಅಪಘಾತದಲ್ಲೇ ಪ್ರಾಣ ಬಿಟ್ಟಿದ್ರು. ಮಾರ್ಚ್ 21 ರಂದು ಹೆಬ್ಬಾಳದ ಬಳಿ ಅಕ್ಷಯ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಅಂಡರ್ ಪಾಸ್ ನಲ್ಲಿ ನೀರು ನಿಂತಿದೆ ಅಂತ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಮೇಲೆ BBMP ಕಸದ ಲಾರಿ ಹರಿದಿತ್ತು.ಈ ವೇಳೆ ಕಸದ ಲಾರಿ ಹರಿದು ವಿದ್ಯಾರ್ಥಿನಿ ಅಕ್ಷಯ ಮೃತಪಟ್ಟಿದ್ದಳು. ಈ ಸಂಬಂಧ ಆರ್ ಟಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಇದನ್ನೂ ಓದಿ: SSLC Result: ಮುಂದಿನ ವಾರ ಹೊರಬೀಳಲಿದೆ SSLC ಫಲಿತಾಂಶ; ರಿಸಲ್ಟ್​ ನೋಡಲು ಹೀಗೆ ಮಾಡಿ


ವೃದ್ಧ , ಮಹಿಳೆ ಮೇಲೆ ಹರಿದ ಕಸದ ಲಾರಿ


ಮಾರ್ಚ್ 31 ರಂದು ಬಾಗಲೂರು ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ಕಸದ ಲಾರಿ ಮತ್ತೊಂದು ಬಲಿ ಪಡೆದಿತ್ತು. ರಾಮಯ್ಯ ಎಂಬ ವೃದ್ದನ ಮೇಲೆ  ಕಸದ ಲಾರಿ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಸಂಬಂಧ ಚಿಕ್ಕಜಾಲ ಸಂಚಾರಿ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಏಪ್ರಿಲ್ 18 ರಂದು ಪದ್ಮಿನಿ ಎಂಬ SBI ಬ್ಯಾಂಕ್​ ಉದ್ಯೋಗಿ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಕೂಡ ಸಾವನ್ನಪ್ಪಿದ್ರು. ನಾಯಂಡಹಳ್ಳಿ ಜಂಕ್ಷನ್ ಬಳಿ ಪದ್ಮಿನಿ ಮೇಲೆ ಹರಿದಿರುವ ಕಸದ ಲಾರಿ ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು.


ವಿಶ್ವನಾಥ್​ ಎಂಬುವವರಿಗೆ ಸೇರಿದ ಲಾರಿ


ಬಿಬಿಎಂಪಿ ಕಸದ ಲಾರಿಗೆ ಡೆಲಿವರಿ ಬಾಯ್ ಬಲಿ ಪ್ರಕರಣ ಸಂಬಂಧ ಬಿಬಿಎಂಪಿ ಕಸದ ಲಾರಿ ಹಾಗೂ ಡ್ರೈವರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಶ್ವನಾಥ್ ಎಂಬ ಕಾಂಟ್ರಾಕ್ಟರ್ ಗೆ ಸೇರಿದ ಕಸದ ಲಾರಿ ಇದಾಗಿದೆ. ಒಂದೂವರೆ ವರ್ಷಗಳಿಂದ ಮಹಾದೇವಪುರ ವಾರ್ಡ್ ಕಸದ ಟೆಂಡರ್ ಪಡೆದು‌ ಕೆಲಸ ಮಾಡುತ್ತಿದ್ದ ವಿಶ್ವನಾಥ್, ಮಹಾದೇವಪುರ ವಾರ್ಡ್ ನಲ್ಲಿ ಒಟ್ಟು ಐದು ಕಾಂಪ್ಯಾಕ್ಟರ್ ಗಳು ಪಾಲಿಕೆ ಸೇವೆಯಲ್ಲಿದೆ. ಆ ಪೈಕಿ KA 43 4956 ನಂಬರ್ ನ ಲಾರಿಯಿಂದ ಅಪಘಾತವಾಗಿದೆ.


ಇದನ್ನೂ ಓದಿ: Interim Injunction: ಪೀಠಾರೋಹಣಕ್ಕೆ ಕೋರ್ಟ್ ಬ್ರೇಕ್, ಅಡೆತಡೆಯಿಲ್ಲದೆ ಕಾರ್ಯಕ್ರಮ ನಡೆಯುತ್ತೆ-ಬಿ.ಜೆ ಪುಟ್ಟಸ್ವಾಮಿ


ಲಾರಿ ಚಾಲಕರ ಬಗ್ಗೆ  ಆರೋಪಗಳು ಕೇಳಿ ಬರ್ತಿವೆ


ಕಸದ ಲಾರಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಥಣಿಸಂದ್ರದಲ್ಲಿ ಪಾಲಿಕೆ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಆಗಿದೆ. ಘಟನೆ ಸಂಬಂಧ ಈಗಾಗಲೇ ಪೊಲೀಸರು ಡ್ರೈವರ್ ಹಾಗೂ ಕಾಂಟ್ರಾಕ್ಟ್ ಏಜೆನ್ಸಿ ಮೇಲೆ FIR ಮಾಡಿದೆ. ಡ್ರೈವರ್ ಅನ್ನು ಹಾಗೂ ಪಾಲಿಕೆ ಕಸದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಯಾರ ತಪ್ಪು ಅನ್ನೋದು ಬರಲ್ಲ, ಘಟನೆ ಬಗ್ಗೆ ಬೇಸರವಿದೆ. ಕಸದ ಲಾರಿ ಚಾಲಕರ ಬಗ್ಗೆ ಹಲವು ಆರೋಪಗಳು ಕೇಳಿ ಬರ್ತಿದೆ. ಈ ಬಗ್ಗೆ ಸಂಬಂಧ ಪಟ್ಟ ಎಲ್ಲಾ‌ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಹೇಳಿದ್ರು.

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು