Kadlekai Parishe- ಬಿಬಿಎಂಪಿ ಜಾಗ, ಮುಜರಾಯಿ ಇಲಾಖೆಗೆ ಲಾಭ; ಕಡಲೆಕಾಯಿ ಪರಿಷೆ ಹೆಸರಲ್ಲಿ ಮುಸುಕಿನ ಗುದ್ದಾಟ

BBMP vs Mujrai Dept- ಇಂದು ಆರಂಭಗೊಂಡಿರುವ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ 3 ಸಾವಿರಕ್ಕೂ ಹೆಚ್ಚು ತಾತ್ಕಾಲಿಕ ಅಂಗಡಿಗಳು ತೆರೆದಿವೆ. ಜಾಗ ಬಿಬಿಎಂಪಿಯದ್ದು, ಆದರೆ, ಲಾಭ ಮಾತ್ರ ಇಲ್ಲ ಎನ್ನುವ ಸ್ಥಿತಿ ಇದೆ.

ಕಡಲೆಕಾಯಿ

ಕಡಲೆಕಾಯಿ

  • Share this:
ಬೆಂಗಳೂರು: ಇಷ್ಟು ದಿನ ಬಿಬಿಎಂಪಿ ಅಧಿಕಾರಿಗಳು ಎಲ್ಲರಿಗೂ ಉಂಡೆ ನಾಮ ಹಾಕುತ್ತಿದ್ರು. ಆದರೀಗ ಬಿಬಿಎಂಪಿಗೇ ಉಂಡೆನಾಮ ಹಾಕಿ ಲಕ್ಷಗಟ್ಲೆ ಹಣ ಜೇಬಿಗೆ ಇಳಿಸುತ್ತಿದೆ ಮುಜರಾಯಿ ಇಲಾಖೆ. ಹೌದು, ಬಸವನಗುಡಿ ಕಡಲೆಕಾಯಿ ಪರಿಷೆ ಹೆಸರಲ್ಲಿಇದೀಗ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ನಡುವೆ ಮುಸುಕಿನ ಗುದ್ದಾಟ ನಡೆದಿದೆ.

ಬೆಂಗಳೂರು ನಗರದ ಇತಿಹಾಸ ಪ್ರಸಿದ್ಧ ದೊಡ್ಡಗಣೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಡಲೆಕಾಯಿ ಪರಿಷೆ ಜಾತ್ರೆ ಮಾಹೋತ್ಸವ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು (ನಾಳೆ) ಅಧಿಕೃತ ಆರಂಭ ಆಗುತ್ತದೆ. ಆದರೆ ಇಂದು ಭಾನುವಾರ ಆದ್ದರಿಂದ ಇಂದೇ ಪರಿಷೆ ಪ್ರಾರಂಭವಾಗಿದೆ. ಈ ಪ್ರಸಿದ್ಧ ಪರಿಷೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಂತರ ಭಕ್ತರು ಪರಿಷೆಯಲ್ಲಿ ಭಾಗಿಯಾಗಿ ದೊಡ್ಡ ಗಣಪನ ದರ್ಶನ ಪಡೆಯುತ್ತಾರೆ. ಆದರೆ, ವಿಷಯ ಇದಲ್ಲ, ಪರಿಷೆ ಹೆಸರಲ್ಲಿ ಈಗ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ನಡುವೆ ಕಿತ್ತಾಟ ನಡೆಯುತ್ತಿದೆ.

ಐದು ಸಾವಿರಕ್ಕೂ ಹೆಚ್ಚು ಅಂಗಡಿ:

ಇತಿಹಾಸ ಪ್ರಸಿದ್ಧ ನೂರಾರೂ ವರ್ಷಗಳ ಇತಿಹಾಸ ಇರುವ ನಾಡ ಪ್ರಭು ಕೆಂಪೇಗೌಡ ನಿರ್ಮಾಣದ ದೊಡ್ಡ ಗಣಪತಿ ದೇವಸ್ಥಾನ ತನ್ನದೆ ಅದ ವೈಶಿಷ್ಟ್ಯತೆ ಹೊಂದಿದೆ. ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತೆ. ಪರಿಷೆಯಲ್ಲಿ 5 ಸಾವಿರಕ್ಕೂ ಅಧಿಕ ತಾತ್ಕಲಿಕ ಅಂಗಡಿಗಳು ನಿರ್ಮಾಣ ಮಾಡಿ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತೆ.

ಇದನ್ನೂ ಓದಿ: Hacker Sriki: ಜೈಲಿನಿಂದ ಬಿಡುಗಡೆಯಾದ ಬಳಿಕ ಹ್ಯಾಕರ್ ಶ್ರೀಕಿ ನಾಪತ್ತೆ, ವಿಚಾರಣೆಗೂ ಗೈರು, ಪೊಲೀಸರಿಗೆ ತಲೆನೋವು

ಪಾಲಿಕೆ, ಜಾಗ ಸೇರಿದಂತೆ ರಸ್ತೆಗಳನ್ನೂ ಬಂದ್ ಮಾಡಿ, ದೇವಸ್ಥಾನದ ಸುತ್ತಮುತ್ತ ಸುಮಾರು 2 ಕಿಮೀ ರಸ್ತೆಯಲ್ಲಿ ಅಂಗಡಿ ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತೆ. ರಾಜ್ಯ ಸೇರಿದಂತೆ ತಮಿಳುನಾಡಿನಿಂದ ವ್ಯಾಪಾರಸ್ಥರು ಕಡೆಲೆಕಾಯಿ, ಕಡ್ಲೆಪುರಿ, ವಿವಿಧ ಬಗೆಯ ಅಟಿಕೆ ವಸ್ತುಗಳನ್ನು ಇಲ್ಲಿ ವ್ಯಾಪಾರ ಮಾಡುತ್ತಾರೆ. ಈ ಜಾತ್ರೆಯಲ್ಲಿ ರಾಜ್ಯದ ನಾನ ಭಾಗಗಳಿಂದ ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸ್ತಾರೆ.

ಐದು ಕೋಟಿಗೂ ಹೆಚ್ಚು ವ್ಯಾಪಾರ:

ಮೂರು ದಿನಗಳ ಈ ಪರಿಷೆಯಾಲ್ಲಿ ಸುಮಾರು ಐದು ಕೋಟಿಗೂ ಅಧಿಕ ವ್ಯಾಪಾರ ವಹಿವಾಟು ಪ್ರತಿವರ್ಷ ನಡೆಯುತ್ತೆ. ಆದರೆ ಈ ವ್ಯಾಪಾರಕ್ಕೆ ಅಂತ ನಿರ್ಮಾಸಿದ ತಾತ್ಕಾಲಿಕ ಅಂಗಡಿಗಳ ತೆರಿಗೆ ಮಾತ್ರ ಮುಜರಾಯಿ ಇಲಾಖೆ ವಸೂಲಿ ಮಾಡಿಕೊಂಡು ಬಿಬಿಎಂಪಿಗೆ ಪಾಂಗನಾಮ ಹಾಕುತ್ತಿದೆ. ಈ ಬಗ್ಗೆ ಶಾಸಕರನ್ನೂ ಕೇಳಿದರೆ, ಈ ಬಾರಿ ಅಧಿವೇಶನದಲ್ಲಿ ಸಿಎಂ ಗಮನಕ್ಕೆ ತರ್ತಿನಿ, ಮುಂದಿನ ವರ್ಷ ಈ ರೀತಿ ಅಗದಂತೆ ಕ್ರಮ ಕೈಗೋಳ್ತಿವಿ ಅಂತ ಹೇಳ್ತಿದ್ದಾರೆ.

ಇದನ್ನೂ ಓದಿ: Coronavirus: ಆನೇಕಲ್ ತಾಲ್ಲೂಕಿನ 2 ಖಾಸಗಿ ಶಾಲೆಗಳಲ್ಲಿ ಕೊರೋನಾ ಸ್ಫೋಟ; 46 ಮಂದಿಯಲ್ಲಿ ಸೋಂಕು ಪತ್ತೆ!

ಪಾಲಿಕೆ ಜಾಗದಲ್ಲಿ ಅಂಗಡಿ... ಮುಜರಾಯಿ ಜೇಬಿಗೆ ಕಂದಾಯ!!

ಇನ್ನು, ಜಾತ್ರೆ ಅಂದ್ರೆ ರಾಜ್ಯದ ವಿವಿಧ ಭಾಗಗಳಿಂದ ರೈತರು ಬೆಳೆದಿದ್ದ ವಿವಿಧ ಬಗ್ಗೆಯ ಕಡ್ಲೆಕಾಯಿ, ಹಾಗೂ ಕಡ್ಲೆಪುರಿ ಅಂಗಡಿಗಳು ಸೇರಿದಂತೆ ಇತರೆ ಮಕ್ಕಳ ಅಟಿಕೆ ಸಾಮಾನುಗಳು, ಮನೆಯ ವಸ್ತುಗಳು ವ್ಯಾಪಾರ ಮಾಡಲಾಗುತ್ತೆ. ಆದರೆ ಇಲ್ಲಿ ಕಡಲೆ ಬೀಜ ಮುಜರಾಯಿ ಇಲಾಖೆಗೆ ಹಾಗೂ ಅದರ ಸಿಪ್ಪೆ ಮಾತ್ರ ಬಿಬಿಎಂಪಿಗೆ ಎನ್ನುವಂತಾಗಿದೆ. ಇಡೀ ಪರಿಷೆಯ ಜವಾಬ್ದಾರಿ ಹಾಗೂ ನಿರ್ವಹಣೆ ಜವಾಬ್ದಾರಿ ಪಾಲಿಕೆ ನಿರ್ವಹಿಸಿಕೊಂಡು, ಇದರಿಂದ ಬರುವ ಹಣ ಮಾತ್ರ ರಾಜ್ಯ ಮುಜರಾಯಿ ಇಲಾಖೆ ಪಡೆಯುತ್ತಿದೆ. ಇದಿರಂದ ಕಳೆದ ಸುಮಾರು ವರ್ಷಗಳಿಂದ ಬಿಬಿಎಂಪಿಗೆ ಕಸಿವಿಸಿ ಉಂಟಾಗಿದೆ.

ಕಾನೂನಿನ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ ಜಾಗಕ್ಕೆ ಬಿಬಿಎಂಪಿಯೇ ತೆರಿಗೆ ವಸೂಲಿ ಮಾಡಬೇಕು. ಅದರೆ ಇಲ್ಲಿ ಮುಜರಾಯಿ ಇಲಾಖೆ ಪಾಲಿಕೆ ಜಾಗದ ತೆರಿಗೆ ವಸೂಲಿ ಮಾಡ್ತಿರೋದು ಕಾನೂನು ವಿರುದ್ಧ ಎನ್ನುವು ಗಮನಾರ್ಹ ವಿಚಾರ. ಒಟ್ನಲ್ಲಿ ತೆರಿಗೆಯನ್ನೇ ನಂಬಿಕೊಂಡು ಅಡಳಿತ ಮಾಡುತ್ತಿರುವ ಪಾಲಿಕೆಯ ತೆರಿಗೆ ಹಣವನ್ನೂ ಕಂಡೋರು ಪಡೆದ್ರೆ ಅಧಿಕಾರ ನಡೆಸಲು ಪಾಲಿಕೆ ಪರದಾಡುವಂತಾಗಬೇಕಷ್ಟೆ. ಆದರೆ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಸೊಲ್ಲೆತ್ತದೆ ಸುಮ್ಮನೆ ಇರುವುದು ವಿಪರ್ಯಾಸದ ಜೊತೆಗೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.

ವರದಿ: ಆಶಿಕ್ ಮುಲ್ಕಿ
Published by:Vijayasarthy SN
First published: